"ಗುಂಡಿ ಮುಚ್ಚೋದಕ್ಕೆ ಯೋಗ್ಯತೆ ಇಲ್ಲ, ಇನ್ನು ಟನಲ್ ರೋಡ್ 50 ತಿಂಗಳಲ್ಲಿ ಮಾಡ್ತಾರಾ?"
ಬೆಂಗಳೂರು, ನವೆಂಬರ್ 06: GBA ಚುನಾವಣೆಯಿಂದ ಬೆಂಗಳೂರು ನಗರದಲ್ಲಿ ಇಲ್ಲಿವರೆಗೆ 70% ಆದಾಯ ರೆವಿನ್ಯೂ ಕಲೆಕ್ಟ್ ಆಗ್ತಿದೆ. ಆದರೆ, ಬೆಂಗಳೂರು ನಗರಕ್ಕೆ ವಾಪಸ್ ಏನ್ ಕೊಟ್ಟಿದ್ದೀರಾ.? ರಸ್ತೆ ಗುಂಡಿಗಳಿಂದ ಹಲವಾರು ಸಾವು ನೋವಾಗಿದೆ. ಆದರೆ ಎಷ್ಟು ಗುಂಡಿಗಳನ್ನ ಮುಚ್ಚಿದ್ದಿರಾ.? ರಸ್ತೆ ಗುಂಡಿ ಮುಚ್ಚುವ ಯೋಗ್ಯತೆ ಇಲ್ಲ, ಇನ್ನೂ ಟನಲ್ ರೋಡ್ 50 ತಿಂಗಳಲ್ಲಿ ಮಾಡ್ತಾರಾ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದರು
ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಉಸ್ತುವಾರಿ ಸಮಿತಿ ಸಭೆಯ ನಂತರ ಮಾಧ್ಯಮಗಳ ಜತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ, ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು ಕೊಟ್ಟಿದ್ದ ಗಡುವು ಮುಗಿದಿದೆ. ಬಿಬಿಎಂಪಿನೇ ಬೆಂಗಳೂರಿನಲ್ಲಿ ಹದಿನೈದು ಸಾವಿರ ರಸ್ತೆ ಗುಂಡಿ ಇದೆ ಅಂತ. ಈಗ ಟನಲ್ ಅಂತ ಕುತ್ತಿದ್ದೀರಾ? ಟನಲ್ ರೋಡ್ ಗೆ ಎಷ್ಟು ಬಜೆಟ್ ಬೇಕು, ಅಲ್ಲಿ ಓಡಾಡೋರು ಯಾರು.? ಬರೀ ಕಾರಿನಲ್ಲಿ ಹೋಗೊಕೆ ಬರೋಕೆ 300 ಕೊಡಬೇಕು. ಸಾರ್ವಜನಿಕ ಸಾರಿಗೆಗೆ ಮನ್ನಣೆ ಕೊಡಿ ಎಂದು ವಾಗ್ದಾಳಿ ನಡೆಸಿದರು.

ಮೆಟ್ರೊದ ದರವನ್ನ ಹೆಚ್ಚಿಗೆ ಮಾಡಿದ್ದಿರಾ.? ಪ್ರತಿದಿನ ವಿದ್ಯಾರ್ಥಿಗಳು, ದಿನಗೂಲಿ ಕೆಲಸ ಮಾಡುವವರು ಸಂಚಾರ ಮಾಡ್ತಾರೆ. ಎಲ್ಲಾತರದ ವರ್ಗದ ಜನರು ಸಂಚಾರ ಮಾಡ್ತಾರೆ.ಮೊದಲು ಆದ್ರ ದರ ಕಡಿಮೆ ಮಾಡಿ. ಸಾರ್ವಜನಿಕರಿಗೆ ಅನುಕೂಲ ಮಾಡಿ. ಯಾವ ಪುರುಷಾರ್ಥಕ್ಕೆ ಟನಲ್ ರೋಡ್ ಮಾಡ್ತಿದ್ದೀರಿ ಎಂದು ತೀವ್ರ ವಾಗ್ದಾಳಿ ನಡೆಸಿದರು. ಈ ಟನಲ್ ರಸ್ತೆ ಯಾರಿಗಾಗಿ ಮಾಡಲಾಗುತ್ತಿದೆ, ಟನಲ್ ನಿರ್ಮಾಣ ಅವೈಜ್ಞಾನಿಕ ಯೋಜನೆ, ಮೊದಲು ಸಾರ್ವಜನಿಕರಿಗೆ ಉತ್ತಮ ರಸ್ತೆಗಳನ್ನು ಕಲ್ಪಿಸಿ. ಈ ಟನಲ್ ರೋಡ್ ನನ್ನು ನಮ್ಮ ಪಕ್ಷ ಸಂಪೂರ್ಣವಾಗಿ ವಿರೋಧಿಸುತ್ತೇನೆ. ಮೊದಲು ರಸ್ತೆ ಗುಂಡಿ ಮುಚ್ಚಿ ಎಂದು ಸರ್ಕಾರ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದರು.
ಅನ್ನ ನೀಡುವ ರೈತನನ್ನೇ ಕಾಪಾಡದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಇದ್ದು ಏನು ಪ್ರಯೋಜನ ?ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದರು. ಬೆಳಗಾವಿಯಲ್ಲಿ ರೈತರು ಏಳು ದಿನದಿಂದ ಹೋರಾಟ ಮಾಡ್ತಿದ್ದಾರೆ, ಸಿಎಂ, ಉಸ್ತುವಾರಿ ಸಚಿವರು ಇದರ ಬಗ್ಗೆ ಚಕಾರ ಎತ್ತಿಲ್ಲಾ. ಅನ್ನ ಕೊಡುವ ರೈತನನ್ನೇ ಕಾಪಾಡದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಇದ್ದು ಪ್ರಯೋಜನ ಏನು.? ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳೇ ಸಕ್ಕರೆ ಕಾರ್ಖಾನೆ ಮಾಲೀಕರ ಲಾಬಿಗೆ ಮಣಿದು ಕಬ್ಬು ಬೆಳೆಯುವ ರೈತರನ್ನು ಬಲಿಪಶು ಮಾಡಬೇಡಿ. ಕಬ್ಬು ಬೆಳೆಗಾರರು ವಿಚಾರದಲ್ಲಿ ರಾಜಕಾರಣ ಮಾಡದೇ, ರೈತರ ಬೆನ್ನೆಲುಬಾಗಿ ನಿಲ್ಲುವ ಕೆಲಸ ಮಾಡಬೇಕು.ನಾವು ಕೂಡ ಶೀಘ್ರವಾಗಿ ಕಬ್ಬು ಬೆಳೆಗಾರನ್ನು ಭೇಟಿಯಾಗಿ, ಅವರ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಭರವಸೆ ನೀಡಿದರು.
ಇನ್ನೂ ಬಿಜೆಪಿ ಜೊತೆ ಜೆಡಿಎಸ್ ವೀಲಿನ ಆಗಿದೆ ಎಂಬ ವಿಚಾರಕ್ಕೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ನಮಗೆ ಸಿಕ್ಕಿದ ಬೆಂಬಲ ನೋಡಿ ಕಾಂಗ್ರೆಸ್ ನವರು ಬೆಚ್ಚಿಬಿದ್ದಿದ್ದಾರೆ. ಆಗಾಗಿ ಈ ರೀತಿ ಮಾತಾಡ್ತಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಕಿಡಿ ಕಾರಿದರು.
-
ಕನ್ನಡಿಗರಿಗಿಂತ ಕೇರಳದವರೇ ಅದೃಷ್ಟವಂತರು: ವಯನಾಡಿಗೆ ಸಿದ್ದರಾಮಯ್ಯರಿಂದ 10 ಕೊಟಿ ರೂ ಅನುದಾನ: ಆಕ್ರೋಶ -
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ -
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ











Click it and Unblock the Notifications