ಪ್ರಭು ಶ್ರೀರಾಮನನ್ನು ವಿರೋಧಿಸಿ ಬಹಿಷ್ಕಾರ ಹಾಕಿರುವ ಕಾಂಗ್ರೆಸ್ ಮತ್ತು ಅದರ ಎಡಬಿಡಂಗಿಗಳ ಕೃತ್ಯಗಳು: ಬಿಜೆಪಿ
ಬೆಂಗಳೂರು, ಜನವರಿ 24: ಶ್ರೀರಾಮನನ್ನು ವಿರೋಧಿಸಿದ ಕಾಂಗ್ರೆಸ್ಸಿಗರು ಮಂದಿರವನ್ನೂ ದ್ವೇಷಿಸಿದರು. ರಾಮಭಕ್ತರಲ್ಲಿ ಭಯ ಹುಟ್ಟಿಸಲು ಗೋಧ್ರಾ ಘಟನೆಯ ಬೆದರಿಕೆ ಇಟ್ಟರು. ಆದರೂ ಅಧಿಕಾರಕ್ಕೆ ಬಂದರೆ ಮಂದಿರ ನೆಲಸಮ ಮಾಡುವ ಹುನ್ನಾರ ಹಾಕಿಕೊಂಡು ಹಗಲುಗನಸು ಕಾಣುತ್ತಿದೆ ವಿದ್ರೋಹಿ ಕಾಂಗ್ರೆಸ್ ಎಂದು ಕರ್ನಾಟಕ ಬಿಜೆಪಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಬುಧವಾರ ಸಾಮಾಜಿಕ ಜಾಲತಾಣದ ಮೂಲಕ ರಾಜ್ಯ ಬಿಜೆಪಿ ಕಿಡಿಕಾರಿದ್ದು, ಪ್ರಭು ಶ್ರೀರಾಮನನ್ನು ವಿರೋಧಿಸಿ ಬಹಿಷ್ಕಾರ ಹಾಕಿರುವ ಕಾಂಗ್ರೆಸ್ ಮತ್ತು ಅದರ ಎಡಬಿಡಂಗಿಗಳ ಕೃತ್ಯಗಳ ಕುರಿತು ಪಟ್ಟಿ ಬಿಡುಗಡೆ ಮಾಡಿದೆ.

▪️ರಾಮ ಸೇತು ಕೇವಲ ಕಾಲ್ಪನಿಕ ಎಂದು ಮೊಂಡುವಾದ
▪️ರಾಮ ಮಂದಿರಕ್ಕೆ ತಡೆಕೋರಿ ಕೋರ್ಟ್‌ಗೆ ಅರ್ಜಿ
▪️ರಾಮ ಮಂದಿರ ತೀರ್ಪು ಕಾಯ್ದಿರಿಸಲು ಷಡ್ಯಂತ್ರ
▪️ರಾಮ ಪ್ರಾಣ ಪ್ರತಿಷ್ಠಾಪನೆಗೆ ಬಹಿಷ್ಕಾರ
▪️ರಾಜ್ಯದಲ್ಲಿ ದೊರೆತ ಬಾಲರಾಮನ ಶಿಲೆಗೂ "ಕೈ" ದಂಡ
▪️ಹೊರ ರಾಜ್ಯಗಳಲ್ಲಿ ರಜೆ ಘೋಷಣೆಯಾದರೂ ಕರ್ನಾಟಕದಲ್ಲಿಲ್ಲ ರಜೆ
▪️ರಾಮ ಪ್ರತಿಷ್ಠಾ ಪ್ರಸಾರಕ್ಕೆ ತಮಿಳುನಾಡಿನಲ್ಲಿ ತಡೆ
▪️ಸಿಎಂ ತವರಲ್ಲಿ ರಾಮನಿಗೆ ಅಗರಬತ್ತಿ ಹಚ್ಚಲು ನಿರ್ಬಂಧ
▪️ಮೈಸೂರಿನಲ್ಲಿ ಲಕ್ಷ ದೀಪೋತ್ಸವಕ್ಕೆ ಅನುಮತಿ ನೀಡಿ ನಂತರ ರದ್ದು
▪️ತುಮಕೂರಿನ ನಾಮ ಚಿಲುಮೆಯಲ್ಲಿ ಪೂಜೆಗೆ ನಿಷೇಧ
▪️ರಾಜ್ಯದಲ್ಲಿ ಅರ್ಚಕರಿಂದ ಸಂಬಳ ವಾಪಸ್‌ಗೆ ನೋಟಿಸ್
ಪ್ರಭು ಶ್ರೀರಾಮನನ್ನು ವಿರೋಧಿಸಿ ಬಹಿಷ್ಕಾರ ಹಾಕಿರುವ @INCIndia, @INCKarnataka ಮತ್ತು ಅದರ ಎಡಬಿಡಂಗಿಗಳ ಕೃತ್ಯಗಳು:
— BJP Karnataka (@BJP4Karnataka) January 23, 2024
▪️ರಾಮ ಸೇತು ಕೇವಲ ಕಾಲ್ಪನಿಕ ಎಂದು ಮೊಂಡುವಾದ
▪️ರಾಮ ಮಂದಿರಕ್ಕೆ ತಡೆಕೋರಿ ಕೋರ್ಟ್‌ಗೆ ಅರ್ಜಿ
▪️ರಾಮ ಮಂದಿರ ತೀರ್ಪು ಕಾಯ್ದಿರಿಸಲು ಷಡ್ಯಂತ್ರ
▪️ರಾಮ ಪ್ರಾಣ ಪ್ರತಿಷ್ಠಾಪನೆಗೆ ಬಹಿಷ್ಕಾರ
▪️ರಾಜ್ಯದಲ್ಲಿ ದೊರೆತ… pic.twitter.com/GekEgeboPx
ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಬಿಜೆಪಿ, ಬಡವರು-ರೈತರು-ಶ್ರಮಿಕರಿಗೆ ಹೊರೆಯಾಗಿದ್ದ ಕಾಂಗ್ರೆಸ್ ಸರ್ಕಾರ, ಈಗ ವೃದ್ಧರ ತುತ್ತು ಅನ್ನಕ್ಕೂ ಸಹ ಕನ್ನ ಹಾಕುತ್ತಿದೆ. ಹಿರಿಯ ನಾಗರಿಕರಿಗೆ, ವೃದ್ಧರಿಗೆ ಜೀವನೋಪಾಯಕ್ಕಾಗಿ ನೀಡುತ್ತಿದ್ದ ಸಂಧ್ಯಾ ಸುರಕ್ಷಾ ಸೇರಿದಂತೆ ಇತರ ಪಿಂಚಣಿಗಳಿಗೆ ಇನ್ನಿಲ್ಲದ ಕಟ್ಟುಪಾಡು ಹೇರಿ, ಪಿಂಚಣಿ ಹಣಕ್ಕೆ ಕುತ್ತು ತರಲು ಸಂಚು ನಡೆಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ನೀಡುವ ನಿಮ್ಮ ಸರ್ಕಾರಕ್ಕೆ, ವೃದ್ಧರಿಗೆ ಪಿಂಚಣಿ ನೀಡಲು ಹಣವಿಲ್ಲವೇ..? ವೃದ್ಧರ ಪಿಂಚಣಿ ಹಣಕ್ಕೂ ನಿಮ್ಮ #ATMSarkara ಕುತ್ತು ತಂದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಕರ್ನಾಟಕ ಬಿಜೆಪಿ ಹೇಳಿದೆ.












Click it and Unblock the Notifications