ದೇಶದಲ್ಲಿ ಹಿಂದೂಗಳ ಪ್ರಮಾಣ ಇಳಿಕೆ: ಬೆಚ್ಚಿಬಿಳಿಸಿದ ವರದಿ- ಪ್ರಲ್ಹಾದ್ ಜೋಶಿ ಏನಂದ್ರು?
ಹುಬ್ಬಳ್ಳಿ, ಮೇ 10: ದೇಶದಲ್ಲಿ ಹಿಂದೂಗಳ ಪ್ರಮಾಣ ಇಳಿಕೆ ವರದಿ ಬಹಿರಂಗ ಅತ್ಯಂತ ಆತಂಕಕಾರಿ ವಿಷಯ. ಇದನ್ನು ಸಮಾಜ ಮತ್ತು ಸರ್ಕಾರಗಳು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಳವಳ ವ್ಯಕ್ತಪಡಿಸಿದರು.
ಈ ಕುರಿತು ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹಿಂದೂಗಳ ಪ್ರಮಾಣ ಇಳಿಕೆ ವರದಿ ಬಹಿರಂಗ ಅತ್ಯಂತ ಆತಂಕಾರಿ. ಪರ್ಯಾಯ ಕ್ರಮಗಳ ಬಗ್ಗೆ ಯೋಚನೆ ಮಾಡಬೇಕಾಗಿದ್ದು, ಯಾವ ದಿನ ದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಆಗುತ್ತೆ ಅಂದು ದೇಶದಲ್ಲಿ ಡೆಮಾಕ್ರಫಿ ಬದಲಾವಣೆ ಆಗುತ್ತದೆ.

ದೇಶ ಸೆಕ್ಯೂಲರ್ ಆಗಿ ಉಳಿಯುವುದಿಲ್ಲ. ಜಗತ್ತಿನಲ್ಲಿ ಪಕ್ಕಾ ಮತ್ತು ಏಕೈಕ ಸೆಕ್ಯೂಲರ್ ದೇಶ ಅಂದರೆ ಭಾರತ, ಸೆಕ್ಯೂಲರ್ ದೇಶ ಜನರ ಸ್ವಭಾವ ರಕ್ತದಲ್ಲಿದಿದ್ದು, ನಾವು ಹಲವಾರು ದೇವತೆಗಳನ್ನು ಪೂಜೆ ಮಾಡುತ್ತವೆ. ವಿವಿಧ ಸಂಸ್ಕೃತಿಗಳ ಒಂದಾಗಿರುವ ಏಕೈಕ ಧರ್ಮ, ದೇಶ ಎಂದರೆ ಭಾರತ. ಯಾರ ಬಂದರೂ ವಿಚಾರ ಕೇಳಿದ್ದೆವೆ, ಮಾನ್ಯತೆ ನೀಡಿದ್ದೆವೆ, ಹಿಂದೂ ಜೀವನ ಪದ್ಧತಿ ಮುಂದುವರಿಬೇಕು ಅಂದರೆ ಈ ವರದಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಂಬಾನಿ, ಅದಾನಿಗೆ ದುಡ್ಡು ಆರೋಪದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಎಐಸಿಸಿ ವರಿಷ್ಠ. ರಾಹುಲ್ ಗಾಂಧಿ ಅವರು ಟೆಂಪೋದಲ್ಲಿ ದುಡ್ಡು ತೆಗೆದುಕೊಂಡಿದ್ದಿರಾ?.ಕಪ್ಪು ಹಣ ತೆಗೆದುಕೊಂಡಿದ್ದಿರಾ?.
ಕಪ್ಪು ಹಣ ಲೆಕ್ಕ ಕೊಟ್ಟಿಲ್ಲ? ಎಂದು ಪ್ರಶ್ನಿಸಿದ ಅವರು, ನಾವು ಪಾರದರ್ಶಕತೆ ತಂದಿರುವುದು ಕಾಂಗ್ರೆಸ್ ಸಹಿಸಲಾಗುತ್ತಿಲ್ಲ ಇದು ಬಹಳ ದುರ್ದೈವ ಎಂದರು.
ಸ್ಯಾಮ್ ಪಿತ್ರೋಡಾ ಹೇಳಿಕೆ ವಿಚಾರವಾಗಿ ಮಾತನಾಡಿ, ದೇಶವನ್ನು ಹೊಡೆಯುವ ಹುನ್ನಾರ ಆಗಿದೆ ದೇಶ ಒಂದಾಗಿಲ್ಲ ಎನ್ನುವ ಸಂದೇಶ ನೀಡುವ ಪ್ರಯತ್ನ. ಬಣ್ಣ, ಚರ್ಮದ ಬಣ್ಣದಲ್ಲಿ ದೇಶ ಒಂದಾಗಿಲ್ಲ ಎನ್ನುವುದನ್ನು ತಿಳಿಸುವ ಪ್ರಯತ್ನ ಆಗಿದೆ. ಇದು ದೇಶ ಹೊಡೆಯುವ ಹುನ್ನಾರ ಸಾಂಸ್ಕೃತಿಕವಾಗಿ ತಲೆತಲಾಂತರದಿಂದಲೂ ಒಂದಾಗಿದೆ ಮುಂದೆಯೂ ಇರುತ್ತದೆ. ಈ ಹಿಂದೆ ಡಿಕೆ ಶಿಕೆ ಸುರೇಶ್ ದಕ್ಷಿಣ ಭಾರತ ಭಾಗವಾಗಬೇಕು ಅಂದಿದ್ರು ಎಂದರು
ಇನ್ನೂ ಹಾಸನ ಹಾಲಿ ಸಂಸದ ಹಾಗೂ ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಪೆನ್ ಡ್ರೈವ್ ವಿಚಾರ ಈ ವಿಚಾರವಾಗಿ ಯಾಕೆ ಎಫ್ ಐ ಆರ್ ತಡವಾಯಿತು? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೈತಿಕ ಧೈರ್ಯ ಇದ್ದರೆ ಉತ್ತರ ಕೊಡನಿಮಗೆ ತನಿಖೆಗಿಂತ ರಾಜಕೀಯದಲ್ಲಿ ಆಸಕ್ತಿ ಇದೆ. ನ್ಯಾಯಕ್ಕಿಂತ ಹೆಚ್ಚಾಗಿ ಕ್ಷುಲ್ಲಕ ರಾಜಕೀಯದಲ್ಲಿ ಆಸಕ್ತಿಯಿದೆ ಇದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications