ಗೌಡ್ರನ್ನು ಜಾಲಾಡಿಸಿದ್ದ ಸಿದ್ದರಾಮಯ್ಯ ವಿಡಿಯೋ ವೈರಲ್: ಅದರಲ್ಲಿ ಅಂತದ್ದೇನಿದೆ?

Recommended Video

      ಎಚ್ ಡಿ ದೇವೇಗೌಡ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯನವರ ಹಳೆಯ ವಿಡಿಯೋ ವೈರಲ್ | Oneindia Kannada

      ರಾಜಕೀಯ ನಿಂತನೀರಲ್ಲ, ಇಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ ಎನ್ನುವುದಕ್ಕೆ ಇದೊಂದು ಒಳ್ಳೆಯ ಉದಾಹರಣೆಯಾಗಬಹುದು. ಸಮ್ಮಿಶ್ರ ಸರಕಾರ ಪತನಗೊಳ್ಳಬಹುದು ಎನ್ನುವ ಇಂದಿನ ರಾಜಕೀಯ ವಿದ್ಯಮಾನದ ಈ ಹೊತ್ತಿನಲ್ಲಿ ಕಾಕತಾಳೀಯ ಎನ್ನುವಂತೆ ವಿಡಿಯೋ ತುಣುಕೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

      ಕಲಾಪದಲ್ಲಿ ಗದ್ದಲ, ಚರ್ಚೆ, ಸಿಟ್ಟು, ನಗು ಹಲವು ಭಾವ ಚಿತ್ರಗಳಲ್ಲಿ

      ಈ ಹಿಂದೆ, ಸಾರ್ವಜನಿಕ ಸಭೆಯೊಂದರಲ್ಲಿ ಮಾಜಿ ಪ್ರಧಾನಿ, ತಮ್ಮ ಹಿಂದಿನ ರಾಜಕೀಯ ಗುರು ಎಚ್ ಡಿ ದೇವೇಗೌಡರನ್ನು ಎಕ್ಕಿಳಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಡಿಯೋ ಒಂದು ವೈರಲ್ ಆಗಿದೆ.

      ಈ ವಿಡಿಯೋದಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದೇವೇಗೌಡರು ಆಡಿದ ರಾಜಕೀಯವನ್ನೆಲ್ಲಾ ಸಿದ್ದರಾಮಯ್ಯ ಇಂಚಿಂಚಾಗಿ ಹೊರಹಾಕಿದ್ದಾರೆ. ಕಳೆದ ಅಸೆಂಬ್ಲಿ ಚುನಾವಣೆಗೂ ಮುನ್ನ ಅಪ್ಪಮಕ್ಕಳನ್ನು ಮನಸಾರೆ ಟೀಕಿಸಿದ್ದ ಸಿದ್ದರಾಮಯ್ಯ, ಬದಲಾದ ಪರಿಸ್ಥಿತಿಯಲ್ಲಿ ಅವರ ಜೊತೆ ಕೈಜೋಡಿಸಬೇಕಾಯಿತು.

      ಅವರ ಅಪ್ಪನಾಣೆಗೂ ಕುಮಾರಸ್ವಾಮಿ ಸಿಎಂ ಆಗುವುದಿಲ್ಲ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ, ಈಗ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರಿಯಲು ಬಹಿರಂಗವಾಗಿ (ಅಂತರಂಗದಲ್ಲಿ ಏನಿದೆಯೋ) ಇದ್ದಬದ್ದ ತಮ್ಮ ರಾಜಕೀಯ ಅನುಭವವನ್ನೆಲ್ಲಾ ಧಾರೆ ಎರೆಯುತ್ತಿದ್ದಾರೆ. ದೇವೇಗೌಡರ ವಿರುದ್ದ ಅಂದು ಸಿದ್ದರಾಮಯ್ಯ ಹರಿಹಾಯ್ದ ವಿಡಿಯೋ ತುಣುಕಿನ ಕೆಲವೊಂದು ಹೈಲೆಟ್ಸ್ ಇಂತಿದೆ:

      ರಾಜ್ಯದ ಜನರು ದೇವೇಗೌಡರು ಹಿಂದೆ ಆಡಿದ ಆಟವನ್ನು ಮರೆಯಲಾರರು

      ರಾಜ್ಯದ ಜನರು ದೇವೇಗೌಡರು ಹಿಂದೆ ಆಡಿದ ಆಟವನ್ನು ಮರೆಯಲಾರರು

      ರಾಜ್ಯದ ಜನರು ದೇವೇಗೌಡರು ಹಿಂದೆ ಆಡಿದ ಆಟವನ್ನು ಮರೆತಿದ್ದಾರೆ ಅಂದುಕೊಂಡಿದ್ದಾರೆ. ಬೊಮ್ಮಾಯಿ ಸರಕಾರವನ್ನು ಉರುಳಿಸಿದವರು ಯಾರು ಸನ್ಮಾನ್ಯ ದೇವೇಗೌಡರೇ..ಹದಿನೇಳು ಜನ ಶಾಸಕರನ್ನು ಎತ್ತಿಕಟ್ಟಿ, ರಾಜ್ಯಪಾಲರ ಬಳಿ ಕಳುಹಿಸಿ, ಬೊಮ್ಮಾಯಿ ಸರಕಾರವನ್ನು ನೀವು ಬೀಳಿಸಲಿಲ್ಲವೇ?

      ನಿಮಗೂ ಬೊಮ್ಮಾಯಿಗೂ ಸಿಎಂ ಹುದ್ದೆಗೆ ಸ್ಪರ್ಧೆ ನಡೆಯಿತು

      ನಿಮಗೂ ಬೊಮ್ಮಾಯಿಗೂ ಸಿಎಂ ಹುದ್ದೆಗೆ ಸ್ಪರ್ಧೆ ನಡೆಯಿತು

      ಆಗ ನೀವು ಯಾವ ಪಕ್ಷದಲ್ಲಿ ಇದ್ರಿ, ನಿಮಗೂ ಬೊಮ್ಮಾಯಿಗೂ ಸಿಎಂ ಹುದ್ದೆಗೆ ಸ್ಪರ್ಧೆ ನಡೆಯಿತು. ಆಗ ನಡೆದ ಚುನಾವಣೆಯಲ್ಲಿ ನೀವು ಸೋತ್ರಿ. ಬೊಮ್ಮಾಯಿ ಗೆದ್ದರು. ಅವತ್ತಿನಿಂದ ನೀವು, ಹೇಗಾದರೂ ಮಾಡಿ ಅವರನ್ನು ಸೋಲಿಸಲು ಸಂಚು ಹಾಕುತ್ತಿದ್ದೀರಿ, ಹೊಂಚು ಹಾಕಿ ಬೊಮ್ಮಾಯಿ ಸರಕಾರವನ್ನು ಬೀಳಿಸಿದ ಅಪಖ್ಯಾತಿ ನಿಮಗಿದೆ. ಆದರೆ, ಅಂತಹ ನೀಚ ರಾಜಕಾರಣವನ್ನು ನಾನು ಎಂದಿಗೂ ಮಾಡಿಲ್ಲ ಎನ್ನುವುದನ್ನು ಗೌಡ್ರಿಗೆ ತಿಳಿಸಲು ಬಯಸುತ್ತೇನೆ.

      ಬೇರೆಯವರ ಬಗ್ಗೆ ಮಾತನಾಡುವಾಗ ಇತಿಹಾಸವನ್ನೊಮ್ಮೆ ಅರಿತು ಮಾತಾಡಲಿ

      ಬೇರೆಯವರ ಬಗ್ಗೆ ಮಾತನಾಡುವಾಗ ಇತಿಹಾಸವನ್ನೊಮ್ಮೆ ಅರಿತು ಮಾತಾಡಲಿ

      ಬೇರೆಯವರ ಬಗ್ಗೆ ಮಾತನಾಡುವಾಗ ಇತಿಹಾಸವನ್ನೊಮ್ಮೆ ಅರಿತು ಮಾತಾಡಲಿ. ಗೌಡ್ರು ಸಜಾಪ (ಸಮಾಜವಾದಿ ಜನತಾ ಪಕ್ಷ) ಮಾಡಿಕೊಂಡು ಹೋದರು. ಭೈರೇಗೌಡ ಮತ್ತು ಪಿರಿಯಾಪಟ್ಟಣದ ವ್ಯಕ್ತಿಯೊಬ್ಬರು ಚುನಾವಣೆ ಗೆದ್ದಿದ್ದರು, ಖುದ್ದು ಗೌಡ್ರೂ ಸೋತಿದ್ದರು. ಆಮೇಲೆ ನೀವು ಜನತಾದಳಕ್ಕೆ ಬಂದ್ರಿ, ಅದಕ್ಕೆ ರಾಮಕೃಷ್ಣ ಹೆಗಡೆ ಕಾರಣ.

      ಪ್ರಧಾನಿಯಾದ ಮೇಲೆ ಹೆಗಡೆಯವನ್ನು ಪಕ್ಷದಿಂದ ಉಚ್ಚಾಟಿಸಿದ್ರಿ

      ಪ್ರಧಾನಿಯಾದ ಮೇಲೆ ಹೆಗಡೆಯವನ್ನು ಪಕ್ಷದಿಂದ ಉಚ್ಚಾಟಿಸಿದ್ರಿ

      ಕಾಂಗ್ರೆಸ್ಸಿನಿಂದ ಬೆಂಬಲದಿಂದ ನೀವು ಪ್ರಧಾನಿಯಾದ್ರಿ. ಪ್ರಧಾನಿಯಾದ ಮೇಲೆ ಹೆಗಡೆಯವನ್ನು ಪಕ್ಷದಿಂದ ಉಚ್ಚಾಟಿಸಿದ್ರಿ. ಇದಕ್ಕಿಂತ ನೀಚ ರಾಜಕಾರಣಕ್ಕೆ ಇನ್ನೊಂದು ಸಾಕ್ಷಿಬೇಕಾ? ಅಂದು ನೀವು ಸಿಎಂ ಆಗಲು ಹೆಗಡೆ, ನಾನು, ಬೊಮ್ಮಾಯಿ, ಜೆ ಎಚ್ ಪಟೇಲ್ ಕಾರಣ, ಸಿಎಂ ಆಗದೇ ಇದ್ದಲ್ಲಿ, ನೀವು ಪ್ರಧಾನಿಯಾಗುತ್ತಿದ್ದೀರಾ?

      ರಾಜಕೀಯ ವೃತ್ತಿ ಜೀವನದಲ್ಲಿ ಎಂದೂ ಇಂತಹ ಕೆಳಮಟ್ಟದ ರಾಜಕಾರಣ ಮಾಡಿದವನಲ್ಲ

      ರಾಜಕೀಯ ವೃತ್ತಿ ಜೀವನದಲ್ಲಿ ಎಂದೂ ಇಂತಹ ಕೆಳಮಟ್ಟದ ರಾಜಕಾರಣ ಮಾಡಿದವನಲ್ಲ

      ಇತಿಹಾಸವನ್ನು ತಿರುಚುವ ಕೆಲಸಕ್ಕೆ ಗೌಡ್ರು ಕೈಹಾಕಬಾರದು ಎಂದು ಹೇಳಲು ಬಯಸುತ್ತೇನೆ. ನಾನು ನನ್ನ ರಾಜಕೀಯ ವೃತ್ತಿ ಜೀವನದಲ್ಲಿ ಎಂದೂ ಇಂತಹ ಕೆಳಮಟ್ಟದ ರಾಜಕಾರಣ ಮಾಡಿದವನಲ್ಲ". ಇದು ಸಿದ್ದರಾಮಯ್ಯ, ಗೌಡ್ರ ವಿರುದ್ದ ವಾಗ್ದಾಳಿ ನಡೆಸಿದ ಪರಿ. ಇವರಿಬ್ಬರೂ ಕೈಜೋಡಿಸಿಕೊಂಡು ಹೋಗುತ್ತಿರುವ ಈ ಹೊತ್ತಿನಲ್ಲಿ ಇಬ್ಬರಿಗೂ ಇರಿಸುಮುರಿಸು ಉಂಟಾಗುವ ವಿಡಿಯೋ ಈಗ ವೈರಲ್ ಆಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+