ಕರ್ನಾಟಕ ಧನವಿನಿಯೋಗ ವಿಧೇಯಕ-2022ಗೆ ವಿಧಾನ ಪರಿಷತ್ತನಲ್ಲೂ ಅಂಗೀಕಾರ
ಬೆಳಗಾವಿ, ಡಿಸೆಂಬರ್ 30: ಡಿಸೆಂಬರ್ 29 ರಂದು ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಕರ್ನಾಟಕ ಧನವಿನಿಯೋಗ ವಿಧೇಯಕ-2022ಗೆ ವಿಧಾನ ಪರಿಷತ್ತಿನಲ್ಲಿಯು ಸಹ ಅಂಗೀಕಾರ ಸಿಕ್ಕಿತು.
ಈ ಕುರಿತು ಗುರುವಾರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 2022-23ನೇ ಸಾಲಿನ ಪೂರಕ ಅಂದಾಜುಗಳ ಎರಡನೇ ಕಂತಿನ 8001.13 ಕೋಟಿ ರೂ.ಗಳ ಬೇಡಿಕೆಗಳ ಪ್ರಸ್ತಾವನೆಗೆ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದ್ದು, ಪರಿಷತ್ ಕೂಡ ಅನುಮೋದನೆ ನೀಡಬೇಕು ಎಂದು ಕೋರಿದರು.
ಇದರಿಂದಾಗಿ ರಾಜ್ಯದ ಪ್ರಗತಿಗೆ ಯಾವುದೇ ರೀತಿಯ ತೊಂದರೆಯಾಗದAತೆ ಎಚ್ಚರಿಕೆ ವಹಿಸಲಾಗಿದೆ. ಯಾವುದೇ ಜನಪ್ರಿಯ ಯೋಜನೆಗಳಿಗೆ ಅನುದಾನ ಮೀಸಲಿರಿಸದೇ ಅಗತ್ಯ ಯೋಜನೆಗಳಿಗೆ ಮಾತ್ರ ಅನುದಾನ ರೂಪಿಸಿದ್ದೇವೆ. ಇದು ಪ್ರಸಕ್ತ ಸಾಲಿನ ಆಯವ್ಯಯ ಗಾತ್ರದ ಶೇ.8.38 ರಷ್ಟಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು. ಬಳಿಕ ಸಭಾಪತಿಗಳು ವಿಧೇಯಕ ಸರ್ವಾನುಮತದಿಂದ ಅಂಗೀಕಾರವಾಗಿದೆ ಎಂದು ಪ್ರಕಟಿಸಿದರು.
ಧನವಿನಿಯೋಗ ವಿಧೇಯಕ-2022 ಬಗ್ಗೆ ಪರ್ಯಾಲೋಚಿಸುವ ಚರ್ಚೆಯಲ್ಲಿ ಪರಿಷತ್ತಿನ ವಿರೋಧಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ್, ವಿರೋಧಪಕ್ಷದ ಮುಖ್ಯ ಸಚೇತಕರಾದ ಪ್ರಕಾಶ ಕೆ. ರಾಥೋಡ್, ಸದಸ್ಯರಾದ ಮರಿತಿಬ್ಬೇಗೌಡ, ತಿಪ್ಪೇಸ್ವಾಮಿ ಹಾಗೂ ಇತರರು ಮಾತನಾಡಿದರು.

ಜೇಷ್ಠತೆಯ ಆಧಾರದ ಮೇಲೆ ಪರಿವರ್ತಕ ಒದಗಿಸಿ ವಿದ್ಯುತ್ ಸಂಪರ್ಕ: ಸುನೀಲ್ ಕುಮಾರ್
ರಾಜ್ಯದಲ್ಲಿ 2014 ವಿದ್ಯುತ್ ಪರಿವರ್ತಕಗಳನ್ನು ಒದಗಿಸುವುದು ಬಾಕಿ ಇದ್ದು, ಜೇಷ್ಠತೆ ಆಧಾರದ ಮೇರೆಗೆ ಪೂರೈಸಲು ಕ್ರಮ ವಹಿಸಲಾಗುವುದು ಎಂದು ಇಂಧನ ಸಚಿವ ಸುನೀಲಕುಮಾರ್ ಅವರು ತಿಳಿಸಿದರು.
ವಿಧಾನಸಭೆಯಲ್ಲಿ ಗುರುವಾರ ಮಧುಗಿರಿ ಕ್ಷೇತ್ರದ ಶಾಸಕ ಎಂ.ವಿ.ವೀರಭದ್ರಯ್ಯ ಅವರ ಪ್ರಶ್ನೆಗೆ ಅವರು ಉತ್ತರಿಸಿದ ಅವರು, ರೈತರಿಗೆ ವಿದ್ಯುತ್ ಪರಿವರ್ತಕ ಒದಗಿಸಲು ರೈತರು 10 ಸಾವಿರ ವಂತಿಗೆ ತುಂಬಿದರೆ ಸರ್ಕಾರ 1.5 ಲಕ್ಷ ಭರಿಸಲಿದೆ ಎಂದು ಸಚಿವ ಸುನೀಲಕುಮಾರ್ ವಿವರಿಸಿದರು.
ಮಧುಗಿರಿಕ್ಷೇತ್ರ ವ್ಯಾಪ್ತಿಯಲ್ಲಿ ತತ್ಕಾಲ್ ಯೋಜನೆಯಡಿ ಜುಲೈ 2014 ರಿಂದ ನವೆಂಬರ್ 2022 ರವರೆಗೆರೈತರ ಪಂಪ್ ಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅರ್ಜಿ ಸಲ್ಲಿಸಿದ 666 ಪೈಕಿ 532 ರೈತರ ಪಂಪ್ ಸೆಟ್‍ಗಳಿಗೆ ಸಂಪರ್ಕ ಕಲ್ಪಿಸಲಾಗಿದ್ದು ಬಾಕಿ ಉಳಿದಿರುವ 134 ರೈತ ಫಲಾನುಭವಿಗಳು ಮೂಲಸೌಕರ್ಯ ರಚಿಸಿಕೊಂಡ ನಂತರ ಜೇಷ್ಠತೆಯ ಆಧಾರದ ಮೇಲೆ ಪರಿವರ್ತಕ ಒದಗಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದರು.
ಸೆಪ್ಟಂಬರ್ ಅಂತ್ಯದ ವರಗೆ 71115 ಜನ ಅರ್ಜಿ ಸಲ್ಲಿಸಿದ್ದು, ಅವರಲ್ಲಿ 68 ಸಾವಿರಜನ 10 ಸಾವಿರ ವಂತಿಗೆ ಪಾವತಿಸಿದ್ದಾರೆ; ಹಾಗಾಗಿ ಹಂತ ಹಂತವಾಗಿ ಉಳಿಕೆ ವಿದ್ಯುತ್ ಪರಿವರ್ತಕಗಳನ್ನು ಪೂರೈಸಲಾಗುವುದು.ಅವುಗಳಲ್ಲಿ ಮಧುಗಿರಿಯ ಬಾಕಿ ವಿದ್ಯುತ್ ಪರಿವರ್ತಕಗಳನ್ನು ಪೂರೈಸಲು ಕ್ರಮ ವಹಿಸಲಾಗುವುದು ಎಂದರು.

ಕಳೆದ 5 ವರ್ಷಗಳಲ್ಲಿ 18618 ಕಟ್ಟಡಗಳ ದುರಸ್ಥಿ: ಸಚಿವ ಬಿ.ಸಿ.ನಾಗೇಶ್
ಕಳೆದ ಐದು ವರ್ಷಗಳಲ್ಲಿ 36117 ಹೊಸ ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗಿದ್ದು,18618 ಕಟ್ಟಡಗಳನ್ನು ದುರಸ್ಥಿ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ವಿಧಾನಸಭೆಯಲ್ಲಿ ಗುರುವಾರ ಶಾಸಕ ಪ್ರಿಯಾಂಕ್ ಖರ್ಗೆಯವರ ಪ್ರಶ್ನೆಗೆ ಅವರು ಉತ್ತರಿಸಿದ ಅವರು, ಹಿಂದಿನ ಸರ್ಕಾರ ಕಾಲ ಕಾಲಕ್ಕೆ ತಕ್ಕಂತೆ ಶಾಲಾ ಕಟ್ಟಡಗಳ ನಿರ್ಮಾಣ ಹಾಗೂ ದುರಸ್ಥಿಕಾರ್ಯ ಮಾಡದ ಹಿನ್ನೆಲೆ ನಮ್ಮ ಸರ್ಕಾರ ಇಷ್ಟೊಂದು ಪ್ರಮಾಣದ ಕಟ್ಟಡಗಳ ನಿರ್ಮಾಣ ಹಾಗೂ ದುರಸ್ಥಿಗೆ ದೊಡ್ಡ ಮೊತ್ತದ ಅನುದಾನ ಬಳಸಬೇಕಾಗಿದೆ ಎಂದು ತಿಳಿಸಿದರು.
2013ರಿಂದ 18ರವರೆಗೆ ಶಾಲಾಕಟ್ಟಡಗಳ ದುರಸ್ಥಿ ಆಗಿರುವುದಿಲ್ಲ ಹಾಗಾಗಿ ನಮ್ಮ ಸರ್ಕಾರz ಅವಧಿಯಲ್ಲಿ ದುರಸ್ಥಿ ಕಾರ್ಯ ಹೆಚ್ಚಾಗಿದೆ, ಪ್ರತಿವರ್ಷ 3 ಸಾವಿರ ಕೊಠಡಿಗಳ ದುರಸ್ಥಿ ಆಗುತ್ತಿದೆ ಮತ್ತು ಪಠ್ಯಪುಸ್ತಕಗಳ ಸುಳ್ಳು ಇತಿಹಾಸ ತೆಗೆದು ಸತ್ಯವನ್ನಷ್ಟೇ ಹೇಳಲಾಗುತ್ತಿದೆ ಎಂದರು.
2022-23 ನೇ ಸಾಲಿನ ಯುಸೈಡ್/ ಸ್ಯಾಟ್ಸ್ ಅಂಕಿ ಅಂಶಗಳ ಪ್ರಕಾರ 75,675 ಸರ್ಕಾರಿ ಶಾಲಾ ಕೊಠಡಿಗಳಿಗೆ ದುರಸ್ಥಿ ಅವಶ್ಯಕತೆಇರುತ್ತದೆ.ಈ ಪೈಕಿ 36,724 ಕೊಠಡಿಗಳಿಗೆ ಸಣ್ಣ ಪ್ರಮಾಣದ ಅವಶ್ಯಕತೆ ಇರುತ್ತದೆ. ಪ್ರತಿ ಕೊಠಡಿಗಳಿಗೆ ರೂ.2 ಲಕ್ಷಗಳಂತೆ ಒಟ್ಟು ರೂ.73448 ಲಕ್ಷಗಳ ಅವಶ್ಯಕತೆ ಇರುತ್ತದೆ.38,951 ಕೊಠಡಿಗಳಿಗೆ ದೊಡ್ಡ ಪ್ರಮಾಣದ ದುರಸ್ಥಿಯ ಅವಶ್ಯಕತೆಇದ್ದು, ಪ್ರತಿ ಕೊಠಡಿಗೆ ಐದು ಲಕ್ಷಗಳಂತೆ ಒಟ್ಟು ರೂ.194755 ಲಕ್ಷಗಳ ಅವಶ್ಯಕತೆ ಇರುತ್ತದೆ. ಒಟ್ಟು 75.675 ಕೊಠಡಿಗಳ ದುರಸ್ತಿಗೆ 2682 ಕೋಟಿಗಳ ಅವಶ್ಯಕತೆ ಇರುತ್ತದೆ ಎಂದರು.

ಅಂತರ್ಜಲ ಹೆಚ್ಚಿಸಲು ಮಳೆ ನೀರನ್ನು ಸಂಗ್ರಹಿಸಲು ಬ್ಯಾರೇಜ್ ಮತ್ತು ಚೆಕ್ ಡ್ಯಾಂ ನಿರ್ಮಾಣ: ಮಾಧುಸ್ವಾಮಿ
ಅಂತರ್ಜಲ ಅತಿ ಬಳಕೆ ಆಗುತ್ತಿರುವ ರಾಜ್ಯದ 41 ತಾಲೂಕುಗಳ ಗ್ರಾಮಗಳಲ್ಲಿ ಅಂತರ್ಜಲದ ಮಿತ ಬಳಕೆ ಮತ್ತು ಅಂತರ್ಜಲ ವೃದ್ಧಿಪಡಿಸಲು ಅಟಲ್ ಭೂಜಲ ಯೋಜನೆ ಜಾರಿ ತರಲಾಗಿದೆ. ಇದರ ಜೊತೆಗೆ ಅತಿವೃಷ್ಠಿ ಸಂದರ್ಭದಲ್ಲಿ ನೀರಿನ ಸಂಗ್ರಹಣೆಗೆ ಸಮಾನಂತರ ಜಲಾಶಯಗಳನ್ನು ನಿರ್ಮಿಸುವ ಚಿಂತನೆಯಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಗುರುವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಶಾಸಕರಾದ ಭಾರತಿ ಶೆಟ್ಟಿ ಹಾಗೂ ಎಂ.ನಾಗರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆ ಅವರು ಉತ್ತರಿಸಿದ ಅವರು, ರಾಜ್ಯದಲ್ಲಿ ಅಂತರ್ಜಲ ಬಳಕೆಯನ್ನು ನಿಯಂತ್ರಿಸಲು ಹಾಗೂ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಅಂತರ್ಜಲ ಅಭಿವೃದ್ದಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ ಅಧಿನಿಯಮ 2011 ಜಾರಿಗೊಳಿಸಿ 2012ರಲ್ಲಿ ನಿಯಮಗಳನ್ನು ಜಾರಿಗೆ ತರಲಾಗಿದೆ.
ರಾಜ್ಯದಲ್ಲಿ ಅತಿವೃಷ್ಠಿ ಸಂದರ್ಭದಲ್ಲಿ ನೀರು ಹೆಚ್ಚಾಗಿ ಹರಿದು ಅವಾಂತರಗಳಿಗೆ ಕಾರಣವಾಗುತ್ತದೆ. ಮತ್ತು ನೀರು ವ್ಯರ್ಥವಾಗಿ ನದಿಗಳ ಮೂಲಕ ಸಮುದ್ರ ಸೇರುತ್ತದೆ. ಇದನ್ನು ತಪ್ಪಿಸಿ ಪ್ರವಾಹದ ಸಂದರ್ಭದ ನೀರನ್ನು ಸಮಾನಂತರ ಜಲಾಶಯಗಳಲ್ಲಿ ಸಂಗ್ರಹಿಸಲು ಯೋಜನೆ ರೂಪಿಸಲಾಗುವುದು.
ಕೇಂದ್ರ ಸರ್ಕಾರದ ಪ್ರಯೋಜಕತ್ವದಲ್ಲಿ ಜಲ ಜೀವನ್ ಮಿಷನ್ ಜಾರಿಗೊಳಿಸಲಾಗಿದೆ. ಇದರ ಅಡಿ ಕೊಳವೆ ಬಾವಿಗಳ ಬದಲಾಗಿ, ಭೂ ಮೇಲ್ಮೈ ಮೇಲಿನ ನೀರನ್ನು ಶುದ್ಧೀಕರಿಸಿ ಸಾರ್ವಜನಿಕರಿಗೆ ಕುಡಿಯಲು ಸಬರಾಜು ಮಾಡಲಾಗುವುದು. ರಾಜ್ಯದಲ್ಲಿ 1000 ಚದರು ಅಡಿಗಿಂತಲೂ ಹೆಚ್ಚಿನ ನಿರ್ಮಾಣಗಳಿಗೆ ಮಳೆಕೊಯ್ಲ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದರು.
2030ರ ವೇಳೆಗೆ 1591 ಟಿಎಂಸಿ ನೀರಿನ ಬೇಡಿಕೆ: ಕೃಷಿ ಚಟುವಟಿಕೆ ಮತ್ತು ಹೆಚ್ಚುತ್ತಿರುವ ಜನಸಂಖ್ಯೆ ಅನುಗುಣವಾಗಿ 2030ರ ವೇಳೆಗೆ ರಾಜ್ಯದ ನೀರಿನ ಬೇಡಿಕೆ 1591 ಟಿ.ಎಂ.ಸಿ ಗಳಾಗಬಹುದು ಎಂದು 2022ರ ಜಲ ನೀತಿಯಲ್ಲಿ ನಿರೀಕ್ಷಿಸಲಾಗಿದೆ. ಇದಕ್ಕಾಗಿ ನಗರ ಪ್ರದೇಶಗಳ ತ್ಯಾಜ್ಯ ನೀರನ್ನು ಕೊಳಚೆ ನೀರು ಶುದ್ಧೀಕರಣ ಘಟಕಗಳ ಮೂಲಕ ಶುದ್ಧೀಕರಿಸಿ ಕೆರೆಗಳನ್ನು ತುಂಬಿಸಲಾಗುವುದು. ಇದೇ ರೀತಿ ಕೈಗಾರಿಕೆ ಹಾಗೂ ಉಷ್ಣ ಸ್ಥಾವರ ಯೋಜನೆಯ ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರು ಬಳಕೆ ಮಾಡಲು ಉದ್ದೇಶಿಸಲಾಗಿದೆ.
ವೈಜ್ಞಾನಿಕ ಪದ್ದತಿಗಳ ಮೂಲಕ ಕೃಷಿಯಲ್ಲಿ ನೀರಿನ ಬಳಕೆಯನ್ನು ತಗ್ಗಿಸುವುದು. ಬೆಳೆ ಆವರ್ತನಾ ಪದ್ದತಿಗೆ ಉತ್ತೇನಜ ನೀಡಲಾಗುತ್ತಿದೆ. ಹನಿ ನೀರಾವರಿ ಪದ್ದತಿಗೆ ಆದ್ಯತೆ, ಅಂತರ್ಜಲ ಹೆಚ್ಚಿಸಲು ಮಳೆ ನೀರನ್ನು ಸಂಗ್ರಹಿಸಲು ಬ್ಯಾರೇಜ್ ಮತ್ತು ಚೆಕ್ ಡ್ಯಾಂ ನಿರ್ಮಾಣ ಮಾಡಲಾಗುವುದು ಎಂದರು.

ಪರಿಷತ್ತಿನಲ್ಲಿ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ ಅಂಗೀಕಾರ
ರಾಜ್ಯದ 189 ಕೈಗಾರಿಕಾ ಪ್ರದೇಶಗಳ ಪೈಕಿ 16 ಕೈಗಾರಿಕಾ ಪ್ರದೇಶಗಳನ್ನು ವಿಶೇಷ ಹೂಡಿಕೆ ಪ್ರದೇಶಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ಹೇಳಿದರು.
ಗುರುವಾರ ವಿಧಾನ ಸಭೆಯಿಂದ ಅಂಗೀಕೃತವಾದ 2022ನೇ ಸಾಲಿನ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕವನ್ನು ವಿಧಾನ ಪರಿಷತ್ತಿನಲ್ಲಿ ಪ್ರರ್ಯಾಲೋಚಸಲು ಪ್ರಸ್ತಾಪಿಸಿ ಮಾತನಾಡಿದ ಅವರು, ಕಾನೂನು ತಜ್ಞನರೊಂದಿಗೆ ಸಮಾಲೋಚಿಸಿ ಕಾನೂನು ಹಾಗೂ ಸಂಸದೀಯ ಸಚಿವರ ಅನುಮೋದನೆ ಪಡೆದು ವಿಧೇಯಕವನ್ನು ರೂಪಿಸಲಾಗಿದೆ.
ಸಂವಿಧಾನ ವಿಧಿ 243ರ ಕ್ಯೂ ಅಡಿಯಲ್ಲಿ ವಿಧೇಯಕನ್ನು ಜಾರಿಗೆ ತರಲಾಗುತ್ತಿದೆ. ಇದರಿಂದ ಯಾವುದೇ ಸ್ಥಳೀಯ ಸಂಸ್ಥೆಗಳ ಕಾರ್ಯಚರಣೆ ಅಡ್ಡಿಯಿಲ್ಲ. ಕೈಗಾರಿಕಾ ಪ್ರದೇಶದಲ್ಲಿ ಸಂಗ್ರಹಿಸಿದ ಸುಂಕದಲ್ಲಿ 70:30 ಅನುಪಾತದಲ್ಲಿ ಹಣವನ್ನು ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗುವುದು. ಖಾಸಗಿ ಹಾಗೂ ಸರ್ಕಾರಿ ಸಹಭಾಗಿತ್ವದಲ್ಲೂ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೊಳಿಸಲಾಗುವುದು. ಕೆಐಡಿಬಿ(ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ) ಅಧಿನಿಯಮದಡಿ ವಿಶೇಷ ಹೂಡಿಕೆ ಪ್ರದೇಶದ ಅಗ್ರ ಪ್ರಾಧಿಕಾರವಾಗಿರಲಿದೆ. ಪ್ರಾದೇಶಿಕ ಅಭಿವೃದ್ದಿ ಪ್ರಾಧಿಕಾರವನ್ನು ರಚನೆ ಮಾಡಲಾಗುವುದು ಎಂದರು.
ರಾಜ್ಯವು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಿಂದಲೂ ಬಂಡವಾಳ ಸ್ನೇಹಿ ರಾಜ್ಯವಾಗಿದೆ. ಸರ್.ಎಂ.ವಿಶ್ವೇಶ್ವರಯ್ಯನವರು ಕೈಗಾರಿಕೆ ಅಭಿವೃದ್ದಿಯಿಂದ ಮಾತ್ರ ರಾಜ್ಯ ಅಭಿವೃದ್ದಿ ಸಾಧ್ಯ ಎಂದು ನಂಬಿದ್ದರು. ದೇಶದ ರಪ್ತು ಸಾಮಥ್ರ್ಯ ಹೆಚ್ಚಬೇಕು. ಆದಷ್ಟು ಕಡಿಮೆ ಪ್ರಮಾಣದಲ್ಲಿ ಆಮದು ಇರಬೇಕು. ಆಗ ದೇಶ ಅಭಿವೃದ್ಧಿ ಹೊಂದಿದೆ ಎಂದು ತಿಳಿಯಬಹುದು. ಕಚ್ಚಾ ತೈಲವನ್ನು ಶೇ.100 ರಷ್ಟು ಇಂದು ರಾಷ್ಟ್ರದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದೆ. ಇದನ್ನು ಕಡಿಮೆ ಮಾಡಿ ಸುಸ್ಥಿರ ಅಭಿವೃದ್ದಿಗಾಗಿ ಇತರೆ ತೈಲಗಳ ಬಳಕೆಗೆ ಕೇಂದ್ರ ಸರ್ಕಾರ ಒತ್ತು ನೀಡಲಿದೆ ಎಂದರು
ವಿಧೇಯಕದ ಬಗ್ಗೆ ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರು ಸುಧೀರ್ಘ ಮಾತನಾಡಿದ ಬಳಿಕ ಪರಿಷತ್ತಿನ ಮುಂದೆ ವಿಧೇಯಕ ಅಂಗೀಕಾರಕ್ಕೆ ಸಭಾಪತಿ ಬಸವರಾಜ ಎಸ್ ಹೊರಟ್ಟಿ ತಂದರು. ವಿಧೇಯಕ ಪರಿಷತ್ತಿನಲ್ಲಿ ಅಂಗೀಕಾರವಾಯಿತು
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications