ಚಿಕ್ಕಬಳ್ಳಾಪುರದ ವೈಚಕೂರಹಳ್ಳಿ ದೇಶದ ಮೊದಲ ಹೊಗೆ ರಹಿತ ಗ್ರಾಮ

Posted By:
Subscribe to Oneindia Kannada

ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 08 : ಚಿಕ್ಕಬಳ್ಳಾಪುರ ಜಿಲ್ಲೆಯ ವೈಚಕೂರಹಳ್ಳಿ 2017ನೇ ಸಾಲಿನ 'ದೇಶದ ಮೊದಲ ಹೊಗೆರಹಿತ ಗ್ರಾಮ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಧಾನ ಮಂತ್ರಿ "ಉಜ್ವಲ" ಯೋಜನೆ ಎಂದರೇನು?

ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ವೈಚಕೂರಹಳ್ಳಿ ಗ್ರಾಮದ ಎಲ್ಲ ಮನೆಗಳಲ್ಲೂ ಅಡುಗೆ ಅನಿಲ (ಎಲ್‌ ಪಿಜಿ) ಬಳಸುವ ಮೂಲಕ ಹೊಗೆ ರಹಿತ ಗ್ರಾಮವಾಗಿ ಗುರುತಿಸಿಕೊಂಡಿದ್ದು, ಲಿಮ್ಕಾ ದಾಖಲೆಗೆ ಸೇರ್ಪಡೆಯಾಗಿದೆ.

The India's first smokeless village Vyachakurahalli in Chikkaballapur district

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿಯಲ್ಲಿ ಶೇ. 100ರಷ್ಟು ಎಲ್‌ ಪಿಜಿ ಅಡುಗೆ ಅನಿಲವನ್ನು ವೈಚಕೂರಹಳ್ಳಿ ಬಳಕೆ ಮಾಡುವ ಮೂಲಕ ಲಿಮ್ಕಾ ದಾಖಲೆ ನಿರ್ಮಿಸಿದೆ ಎಂದು ಇಂಡಿಯನ್‌ ಆಯಿಲ್ ಸಂಸ್ಥೆ ತಿಳಿಸಿದೆ.

'ಗ್ರಾಮೀಣ ಪ್ರದೇಶದ ಜನರ ಜೀವನಮಟ್ಟ ಸುಧಾರಣೆಗೆ ಈ ದಾಖಲೆ ನಮಗೆ ಮತ್ತಷ್ಟು ಪ್ರೇರಣೆಯಾಗಲಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ರಾಜ್ಯದಲ್ಲಿ ಈ ವರೆಗೆ 7 ಲಕ್ಷ ಅಡುಗೆ ಅನಿಲ ಸಿಲಿಂಡರ್‌ಗಳಿಗೆ ಅನುಮತಿ ನೀಡಲಾಗಿದೆ.

ಅದರಲ್ಲಿ 5.5 ಲಕ್ಷ ಸಿಲಿಂಡರ್‌ಗಳಿಗೆ ಸಂಪರ್ಕ ಕಲ್ಪಿಸಲಾಗಿದೆ' ಎಂದು ಇಂಡಿಯನ್‌ ಆಯಿಲ್ ಸಂಸ್ಥೆಯ ರಾಜ್ಯ ಸಂಯೋಜಕ ಎಸ್‌. ವರದಾಚಾರಿ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The country's first smokeless village Vyachakurahalli in Chikkaballapur district in PM Narendra Modi's Ujjwala yojana. Vyachakurahalli village entered into the Limca Book of Records-2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ