ಪಾಂಡವಪುರದಲ್ಲಿ ಹೈಡ್ರಾಮಾ; RSS ಕಚೇರಿಗೆ ನುಗ್ಗಿದ ಪೊಲೀಸರು: ವಿಜಯೇಂದ್ರ ಏನಂದ್ರು?

ಬೆಂಗಳೂರು, ಸೆಪ್ಟೆಂಬರ್‌ 16: ನಾಗಮಂಗಲದಲ್ಲಿ ನಡೆದ ಗಣೇಶೋತ್ಸವ ಗಲಾಟೆ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ರಚನೆಯಾಗಿರುವ ಬಿಜೆಪಿ ನೇತೃತ್ವದ ಸತ್ಯಾ ಶೋಧನ ಸಮಿತಿ ಇಂದು ಮಂಡ್ಯದ ನಾಗಮಂಗಲಕ್ಕೆ ಭೇಟಿ ಕೊಡ್ತಿದೆ. ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ನೇತೃತ್ವ ನಿಯೋಗ ಭೇಟಿ ನೀಡಲಿದೆ. ಘಟನೆಯ ಬಗ್ಗೆ ಪರಿಶೀಲಿಸಿ ಸಮಗ್ರ ವರದಿಯನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರರಿಗೆ ಸಲ್ಲಿಕೆ ಮಾಡಲಿದ್ದಾರೆ.

ಇದರ ನಡುವೆ ನಾಗಮಂಗಲಕ್ಕೆ ಭೇಟಿ ನೀಡುತ್ತಿದ್ದ ಆರ್ ಎಸ್ ಎಸ್ ಮುಖಂಡರ ವಶಕ್ಕೆ ಪಡೆದುಕೊಳ್ಳಲಾಗಿದೆ. ಆರ್ಎಸ್ಎಸ್ ಮುಖಂಡರ ಬಂಧನ ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಮಂಡ್ಯದ ಪಾಂಡವಪುರದ RS ಬಳಿ ಹಿಂದುಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. RSS ಕಚೇರಿ ಒಳಪ್ರವೇಶ ಮಾಡಿ ಮುಖಂಡರನ್ನ ವಶಕ್ಕೆ ಪಡೆದ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದಾರೆ.

The incident of police raiding the RSS office in Pandavapura is highly condemnable Says BY Vijayendra

ಮೊನ್ನೆ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟದ ಘಟನೆ ಸೃಷ್ಠಿಸಿದ ದುಗುಡದ ವಾತಾವರಣ ಇನ್ನೂ ಸಹಜ ಸ್ಥಿತಿಯತ್ತ ಮರಳುತ್ತಿಲ್ಲ ಈ ನಡುವೆ ಬೆಂಕಿಗೆ ತುಪ್ಪ ಸುರಿದಂತೆ ಪೋಲಿಸರು ನಿನ್ನೆ ರಾತ್ರಿ ಪಾಂಡವಪುರದ ಆರ್.ಎಸ್.ಎಸ್ ಕಚೇರಿಗೆ ನುಗ್ಗಿ ಅನುಚಿತ ವರ್ತನೆ ತೋರಿದ್ದಾರೆ, ಪೊಲೀಸರ ಮೂಲಕ ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸುವ ದಾಟಿಯಲ್ಲಿ ವರ್ತಿಸುತ್ತಿದೆ.

ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆಯೋ ಅಥವಾ ಹಿಂದೂ ಮನಸ್ಥಿತಿಯ ವಿರೋಧಿ ಸರ್ಕಾರದ ನೆರಳಿನಲ್ಲಿದ್ದೇವೆಯೋ ಎಂಬ ಆತಂಕ ಹಿಂದೂ ಸಮಾಜವನ್ನು ಕಾಡುತ್ತಿದೆ. ನೈಜ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಭಾರತೀಯ ಸಮಾಜ ಕಟ್ಟುವ ಉದಾತ್ತ ಉದ್ದೇಶದಿಂದ ಜನ್ಮತಳೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿರ್ಬಂಧಿಸಲು ಕಾಂಗ್ರೆಸ್ ನೆಹರು ಕಾಲದಿಂದಲೂ ಯತ್ನಿಸುತ್ತಲೇ ಇದೆ.

ಆದರೆ ಸಮರ್ಪಣೆಯ ಬದ್ಧತೆ, ತ್ಯಾಗದ ಪರಿಪೂರ್ಣತೆಯನ್ನು ಮೈಗೂಡಿಸಿಕೊಂಡಿರುವ ಕೋಟ್ಯಾಂತರ ಸ್ವಯಂಸೇವಕರ ಮಹಾಪಡೆಯನ್ನು ಹೊಂದಿರುವ RSS, ದಬ್ಬಾಳಿಕೆ ಎದುರಾದಷ್ಟು ಹೆಮ್ಮರವಾಗಿ ಬೆಳೆಯುತ್ತಲೇ ಇರುತ್ತದೆ, ಇದನ್ನು ಮಾನ್ಯ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅರಿತು ನಡೆದರೆ ಒಳಿತು.

ಪಾಂಡವಪುರದ RSS ಕಚೇರಿಗೆ ಪೋಲಿಸರು ನುಗ್ಗಿದ ಘಟನೆ ಅತ್ಯಂತ ಖಂಡನೀಯ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಂವಿಧಾನ ವಿರೋಧಿ ಕ್ರಮ, ಹಿಂದೂ ಸಮಾಜವನ್ನು ಪ್ರಚೋದಿಸುವ ನಡವಳಿಕೆ, ಸರ್ಕಾರ ಈ ಕೂಡಲೇ ಘಟನೆಯ ಕುರಿತು ಕ್ಷಮೆಯಾಚಿಸಲಿ ಪೊಲೀಸ್ ದರ್ಪ ಮೆರೆದ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡಲಿ ಎಂದು ಒತ್ತಾಯಿಸುವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+