ಹಿಜಾಬ್ ತೀರ್ಪು: ಆರ್ಟಿಕಲ್ 30(ಎ) ಕುರಿತು ಧ್ವನಿ ಎತ್ತಿದ ಬೈಜಯಂತ್ ಪಾಂಡ
ಬೆಂಗಳೂರು ಮಾರ್ಚ್ 15: ಕರ್ನಾಟಕ ಹೈಕೋರ್ಟ್ ಇಂದು ಬೆಳಿಗ್ಗೆ 10.30ಕ್ಕೆ ತನ್ನ ತೀರ್ಪಿನಲ್ಲಿ ಹಿಜಾಬ್ ನಿರ್ಬಂಧ ವಿಚಾರದಲ್ಲಿ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ. ಕಾಲೇಜಿನಲ್ಲಿ ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದೆ.
ಹೈಕೋರ್ಟ್ ತೀರ್ಪಿನ ವಿರುದ್ಧ ಸಾಕಷ್ಟು ಪರ ಹಾಗೂ ವಿರೋಧಗಳು ವ್ಯಕ್ತವಾಗಿವೆ. ಕೆಲವರು ಕೋರ್ಟ್ ತೀರ್ಪನ್ನು ಸ್ವಾಗತಿಸಿದರೆ ಇನ್ನೂ ಕೆಲವರು ತೀರ್ಪನ್ನು ಅಲ್ಲಗಳಿದಿದ್ದಾರೆ. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಹಿಜಾಬ್ ತೀರ್ಪು ಕುರಿತು ಹರ್ಷ ವ್ಯಕ್ತಪಡಿಸುವ ಮೂಲಕ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡ ಆರ್ಟಿಕಲ್ 30(ಎ) ಕುರಿತು ಧ್ವನಿ ಎತ್ತಿದ್ದಾರೆ. ಸಂವಿಧಾನದ ತತ್ವಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎನ್ನುವ ಕರ್ನಾಟಕ ಹೈಕೋರ್ಟ್ ತೀರ್ಪು ಕೇಳಿ ಖುಷಿಯಾಗಿದೆ. ಇದೇ ರೀತಿ ಪರಂಪರೆಯನ್ನು ದುರ್ಬಲಗೊಳಿಸುವ ಸಂವಿಧಾನದಲ್ಲಿರುವ ಕೆಲವು ವೈಪರೀತ್ಯಗಳ ಬಗ್ಗೆಯೂ ಸ್ಪಷ್ಟನೆ ನೀಡಬೇಕಿದೆ. ಉದಾಹರಣೆಗೆ ಹಿಂದೂಗಳು ತಮ್ಮದೇ ಆದ ಧಾರ್ಮಿಕ ಕೇಂದ್ರವನ್ನು ನಿರ್ವಹಿಸುವುದು ಮತ್ತು ಶಿಕ್ಷಣ ಸಂಸ್ಥೆಗಳ ಸ್ಥಾಪಿಸುವುದು ಎಂದು ಕೂ ಮಾಡಿದ್ದಾರೆ.
Koo AppHeartening to see the Karnataka HC #HijabRow ruling follow strict constitutional principles. Similar clarity must follow on legacy anomalies undermining the constitution, eg discrimination against Hindus managing their own places of worship & establishing educational institutions - Baijayant ’Jay’ Panda (@pandajay) 15 Mar 2022
ಇನ್ನೂ ಈ ಬಗ್ಗೆ ಡಿಕೆ ಶಿವಕುಮಾರ್ 'ಕೂ' ಮಾಡಿದ್ದಾರೆ. ಪ್ರಬುದ್ಧ ನಾಯಕತ್ವವನ್ನು ಪ್ರದರ್ಶಿಸಲು ನಾನು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದಿದ್ದಾರೆ.
1) ಶಾಲಾ-ಕಾಲೇಜುಗಳಲ್ಲಿ ಅದರ ಸುತ್ತಮುತ್ತ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸಲಾಗುತ್ತದೆ.
2) ಧರ್ಮ ಮತ್ತು ಲಿಂಗ ಭೇದವಿಲ್ಲದೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳೋಣ
3) ಕೋಮು ಸೌಹಾರ್ದತೆ ಇದೆ ಎಂದು 'ಕೂ' ಮಾಡಿದ್ದಾರೆ.
Koo AppI appeal to the Government of Karnataka to show mature leadership and ensure: 1) That law and order is maintained in and around schools and colleges. 2) That the education of students is not hampered, regardless of religion and gender. 3) That there is communal harmony. 2/2 - D K Shivakumar (@dkshivakumar_official) 15 Mar 2022
ಹಿಜಾಬ್ ನಿರ್ಬಂಧ ಪ್ರಶ್ನಿಸಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಿದ್ದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ಪೂರ್ಣ ಪೀಠ, ಹಿಜಾಬ್ ಧಾರಣೆ ಇಸ್ಲಾಂನ ಅಗತ್ಯ ಧಾರ್ಮಿಕ ಪದ್ದತಿಯಲ್ಲ, ಸರಕಾರಕ್ಕೆ ಸಮವಸ್ತ್ರ ನಿಗದಿ ಮಾಡುವ ಅಧಿಕಾರವಿದೆ ಎಂದು ಆದೇಶಿಸಿದೆ.












Click it and Unblock the Notifications