'ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸರ್ವನಾಶ'

ಮಂಡ್ಯ, ಸೆಪ್ಟೆಂಬರ್‌ 12: ರಾಜ್ಯದಲ್ಲಿ ಹಿಂದೂಗಳ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಸಿ ಅಂಗಡಿಗಳಿಗೆ ಬೆಂಕಿ ಹಚ್ಚಿ ಬೈಕ್‌ಗಳನ್ನು ಸುಟ್ಟು ಹಾಕುವುದು ಮುಂದುವರಿದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಸರ್ವನಾಶವಾಗುತ್ತದೆ ಎಂದು ಪಕ್ಷ ನಾಯಕ ಆರ್.ಅಶೋಕ್ ಗುಡುಗಿದರು.

ಗಣೇಶ ಮೆರವಣಿಗೆ ಸಮಯದಲ್ಲಿ ಎರಡು ಕೋವಿನ ನಡುವೆ ಉಂಟಾದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣಕ್ಕೆ ಗುರುವಾರ ಸಂಜೆ ಬಿಜೆಪಿ ಪಕ್ಷದ ನಾಯಕರೊಂದಿಗೆ ಭೇಟಿಕೊಟ್ಟು ಸ್ಥಳ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲೀಂ ಓಲೈಕೆ ರಾಜಕಾರಣ ಮಾಡಿದರೆ ಮುಂದಿನ ದಿನಗಳಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ. ಅಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಠೇವಣಿಯೂ ಸಿಗುವುದಿಲ್ಲ. ಗಲಭೆಯಲ್ಲಿ ಆಗಿರುವ ಎಲ್ಲಾ ನಷ್ಟವನ್ನು ಅಧಿಕಾರಿಗಳು ಭರಿಸಿಕೊಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

The Congress Government In The State Will be destroyed Said R Ashok

ನಾಗಮಂಗಲ ಪಟ್ಟಣದಲ್ಲಿ ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ ಹಾಕಿರುವುದು ರಾಜ್ಯದ ಗೃಹ ಸಚಿವರಿಗೆ ಸಣ್ಣ ಘಟನೆಯಂತೆ. ರಾಕೇಟ್‌ಗಳು ಬಂದು ಬಿದ್ದಿದ್ದರೆ ದೊಡ್ಡ ಘಟನೆ ಎನ್ನುತ್ತಿದ್ದರೇನೋ ಎಂದು ಲೇವಡಿ ಮಾಡಿದ ಅವರು, ಆಡಳಿತ ನಡೆಸುವವರು ಒಂದು ಕೋಮಿನ ಪರವಾಗಿದ್ದಾರೆ. ಎಲ್ಲ ರೀತಿಯಲ್ಲೂ ಪ್ಲಾನ್ ಮಾಡಿಕೊಂಡೇ ಪೆಟ್ರೋಲ್ ಬಾಂಬ್ ಹಾಕಿರುವ ದುಷ್ಟರು ಇಲ್ಲಿ ದಲಿತರು, ಒಕ್ಕಲಿಗರು, "ಂದುಳಿದವರನ್ನೂ ಬಿಟ್ಟಿಲ್ಲ. ಹಿಂದೆಮುಂದೆ ನೋಡದೆ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂದು ದೂರಿದರು.

ಕಳೆದ ಬಾರಿಯೂ ಸಹ ಇದೇ ಸ್ಥಳದಲ್ಲಿ ಗಲಾಟೆ ಮಾಡಿರುವ ಅವರಿಗೆ ಈಬಾರಿಯೂ ಮೆರವಣಿಗೆ ಬರುತ್ತದೆಂಬ ಮುನ್ಸೂಚನೆ ಸಿಕ್ಕಿರಬಹುದು. ಹಾಗಾಗಿ ಇಡೀ ಜಿಲ್ಲೆಯಲ್ಲಿ ಯಾರೂ ಸಹ ಮುಂದೆ ಗಣಪತಿ ಹಬ್ಬ ಮೆರವಣಿಗೆ ಮಾಡಬಾರದೆಂದು ತಲವಾರ್, ಲಾಂಗ್ ಹಿಡಿದು ಪೆಟ್ರೋಲ್‌ಬಾಂಬ್ ಹಾಕಿ ಬೆದರಿಕೆ ಹಾಕುವ ಸಂದೇಶ ನೀಡಲು ಪೂರ್ವನಿಯೋಜಿತ ಕೃತ್ಯ ಎಸಗಿದ್ದಾರೆಂದು ಆರೋಪಿಸಿದರು.

ಹಿಂದೂಗಳ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಸಿ ಅಂಗಡಿಗಳಿಗೆ ಬೆಂಕಿ ಹಚ್ಚಿ ಬೈಕ್‌ಗಳನ್ನು ಸುಟ್ಟು ಹಾಕಿರುವವರು ರೌಡಿಗಳು ಟೆರರಿಸ್ಟ್‌ಗಳು ಪೊಲೀಸರು ಅವರನ್ನು ಬಂಧಿಸಬೇಕಿತ್ತು. ಆದರೆ ಅಮಾಯಕರನ್ನು ಬಂಧಿಸಿದ್ದಾರೆ. ಕಾನೂನು ರೀತಿಯಲ್ಲಿ ನಿರ್ಧಾಕ್ಷೀಣ್ಯ ಕ್ರಮ ಕೈಗೊಂಡಿದ್ದರೆ ನಾವು ಇಲ್ಲಿಗೆ ಬರುವ ಅವಶ್ಯಕತೆ ಇರಲಿಲ್ಲ. ಕಾಂಗ್ರೆಸ್ ಸರ್ಕಾರದ ಮೇಲೆ ಹಿಂದೂಗಳಿಗೆ ನಂಬಿಕೆುಲ್ಲ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಗಣೇಶ ಮೂರ್ತಿ ಮೆರವಣಿಗೆ ಸಮಯದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಕಲ್ಲು ಬಾಟಲ್ ತೂರಿ ಪೆಟ್ರೋಲ್‌ಬಾಂಬ್ ಎಸೆದಿರುವುದು, ತಲವಾರ್‌ಗಳನ್ನು ತಂದು ರಸ್ತೆಯಲ್ಲಿ ಹಲ್ಲೆ ನಡೆಸಲು ಯತ್ನ ನಡೆಸಿರುವುದು ದೇಶದ್ರೋಹಿಗಳ ಪೂರ್ವನಿಯೋಜಿತ ಕೃತ್ಯ. ಇಷ್ಟಾದರೂ ಕೂಡ ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಪೊಲೀಸರು ಮೂಕ ಪ್ರೇಕ್ಷಕರಾಗಿ ಕೈಕಟ್ಟಿಕೊಂಡು ಎಲ್ಲವನ್ನೂ ನೋಡುತ್ತಿದ್ದಾರೆಂದರೆ ಇದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.

ಈ ಹಿಂದೆ ಜಿಲ್ಲೆಯ ಕೆರಗೋಡಿನಲ್ಲಿ ಹನುಮ ಧ್ವಜ ಇಳಿಸುವ ಕೆಲಸ ಮಾಡಿದರು. ರಾಜ್ಯದಲ್ಲಿರುವ ಹಿಂದೂ ವಿರೋಧಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನಡವಳಿಕೆಯ ಪರಿಣಾಮವಾಗಿ ದೇಶದ್ರೋ"ಗಳು ಇಂತಹ ಅಟ್ಟಹಾಸಕ್ಕೆ ಕೈ ಹಾಕುತ್ತಿದ್ದಾರೆ. ರೈತರ ಹೋರಾಟಕ್ಕೆ ದೇಶಾದ್ಯಂತ ಹೆಸರಾಗಿರುವ ಮಂಡ್ಯ ಜಿಲ್ಲೆ ಕೋಮು ಗಲಭೆ "ಚಾರದಲ್ಲಿ ರಾಷ್ಟ್ರದೆಲ್ಲೆಡೆ ಚರ್ಚೆಯಾಗುತ್ತಿರುವುದು ದುರಾದೃಷ್ಟ. ಆಡಳಿತ ಕಾಂಗ್ರೆಸ್ ಪಕ್ಷದ ಕುಮ್ಮಕ್ಕಿನಿಂದ ಈರೀತಿ ಚಟುವಟಿಕೆಗಳು ಹೆಚ್ಚಾಗಿ ದೇಶದ್ರೋಹಿಗಳು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ. ಗಲಭೆಯಲ್ಲಿ ನಷ್ಟವಾಗಿರುವ ಆಸ್ತಿ ಪಾಸ್ತಿಗಳ ಸಂಪೂರ್ಣ ವೆಚ್ಚದ ಪರಿಹಾರವನ್ನು ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಭರಿಸಿಕೊಡಬೇಕೆಂದು ಆಗ್ರಸಿದರು.

ಲಾಂಗ್ ಮಚ್ಚು "ಡಿದು ಇಂದು ರಸ್ತೆಯಲ್ಲಿ ಓಡಾಡಿರುವ ಕಿಡಿಗೇಡಿಗಳು ಕಾಂಗ್ರೆಸ್ ಪಕ್ಷದ ಶಾಸಕರ ಮಂತ್ರಿಗಳ ಮನೆಗಳಿಗೂ ನುಗ್ಗುವ ಕಾಲ ದೂರವಿಲ್ಲ. ನಿಮ್ಮ 420 ರಾಜಕಾರಣ ಬಿಟ್ಟು ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ದೌರ್ಜನ್ಯ ಮಾಡಿರುವ ದೇಶದ್ರೋಹಿಗಳನ್ನು ಮಟ್ಟಹಾಕಬೇಕು. ವಶಕ್ಕೆ ಪಡೆದಿರುವ ಹಿಂದೂ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ಕೋಮು ಗಲಭೆಗೆ ಕುಮ್ಮಕ್ಕು ನೀಡುವ ಮೂಲಕ ಹಿಂದಿನಿಂದ ಬೆನ್ನು ತಟ್ಟುವ ಕೆಲಸ ಮಾಡುತ್ತಿದೆ. ಇದರ ಪರಿಣಾಮವೇ ರಾಜ್ಯದಲ್ಲಿ ಇಂತಹ ಅ"ತಕರ ಘಟನೆಗಳು ಹೆಚ್ಚು ನಡೆಯುತ್ತಿವೆ ಎಂದರು.

ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ಶೇ.90ರಷ್ಟು ಹಿಂದೂಗಳೇ ಇರುವ ನಾಗಮಂಗಲದಲ್ಲಿ ಇಂತಹ ಸಂಕಷ್ಟ ಬರುತ್ತೆ ಎಂದರೆ ನಾವು ಎಲ್ಲಿದ್ದೇವೆಂಬ ಪ್ರಶ್ನೆ ಉದ್ಭವಗಾಗುತ್ತದೆ. ಪೆಟ್ರೋಲ್ ಬಾಂಬ್ ಹಾಕಿ ಅಂಗಡಿಗಳನ್ನು ಸುಟ್ಟು ಕೋಟ್ಯಂತರ ನಷ್ಟ ಮಾಡುವುದು, ಗಣಪತಿ ಮೆರವಣಿಗೆ ಮೇಲೆ ಕಲ್ಲು ಚಪ್ಪಲಿ ತೂರುವುದು. ಬೆಳ್ಳೂರಿನಲ್ಲಿ ಕೆಲ ದಿನಗಳ ಹಿಂದೆ ಗಾಣಿಗ ಸಮಾಜದ ದೇವಿ ಉತ್ಸವದ ವೇಳೆ ಗಲಾಟೆ ಮಾಡಿರುವುದು ಸಣ್ಣ ಘಟನೆಯೇ. ನಾವು ಏನು ಮಾಡಿದರೂ ಸರ್ಕಾರ ನಮ್ಮ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಅವರಿಗೆ ಗೊತ್ತಿದೆ. ಸರ್ಕಾರ ಮತಾಂಧರಿಗೆ ಬೆಂಬಲ ಕೊಡುವ ಕೆಲಸ ಮಾಡುತ್ತಿರುವುದರಿಂದಲೇ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.

ಗಣಪತಿ ಪ್ರತಿಷ್ಠಾಪಿಸಿದವರ ಮೇಲೆಯೇ ಎಫ್‌ಐಆರ್ ಹಾಕುತ್ತಾರೆಂದರೆ ಈ ಸರ್ಕಾರದ ಮೇಲೆ ಯಾರು ವಿಶ್ವಾಸ ಇಡುತ್ತಾರೆ. ಗೃಹ ಸಚಿವರ ಮನೆಗೆ ಬೆಂಕಿಹಾಕಿ ಸುಟ್ಟಿದ್ದರೆ ದೊಡ್ಡ ಘಟನೆಯಾಗುತ್ತಿತ್ತು. ಇದು ಆಕಸ್ಮಿಕ ಘಟನೆಯಲ್ಲ ಮಸೀದಿಯಲ್ಲಿ ಕಲ್ಲುಗಳನ್ನು ದಾಸ್ತಾನಿಟ್ಟುಕೊಂಡು, ಬೀಗ ಹಾಕಿದ್ದ ಅಂಗಡಿಗಳನ್ನು ಮುರಿದು ಪೆಟ್ರೋಲ್‌ಬಾಂಬ್ ಎಸೆದು ಬೆಂಕಿ ಹಚ್ಚಿದ್ದಾರೆಂದರೆ ಪೂರ್ವನಿಯೋಜಿತ ಸಂಚಲ್ಲವೇ. ಹಾಗಾಗಿ ಈ ಪ್ರಕರಣದ ಸಮಗ್ರ ತನಿಖೆಯಾಗಬೇಕು. ಇಲ್ಲದಿದ್ದರೆ ಜನರೇ ಕಾನೂನು ಕೆಗೆತ್ತಿಕೊಳ್ಳುತ್ತಾರೆ. ಆಗ ರಕ್ಷಣೆ ಮಾಡುವವರಾರು ಯಾರು ಎಂದು ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+