"ನೀರು ಕೇಳಿದವರ ರಕ್ತ ಬಸಿದ ನಿಮಗೆ ನಾಚಿಕೆಯಾಗಲ್ವಾ"?

Subscribe to Oneindia Kannada

ಬೆಂಗಳೂರು, ಮಾರ್ಚ್, 04: "ಅಲ್ಲಾ ಸ್ವಾಮಿ ನಮ್ಮ ರೈತರು ಕೇಳಿದ್ದಾದರೂ ಏನು.. ಇದೇನು ಮೊದಲ ಹೋರಾಟವೇ, ನಿಮಗೆ ತಿಳಿದಿರಲಿಲ್ಲವೇ ಇಲ್ಲಿನ ಜನರ ಗೋಳು. ಹಳ್ಳಿಯಿಂದ ದೆಹಲಿಯವರೆಗೂ ಹೋಗಿ ಬಂದಿದ್ರೂ ಇನ್ನೂ ನಿಮಗೆ ಜ್ಞಾನೋದಯವಾಗಲಿಲ್ವಲ್ಲಾ. ನೀರು ಕೇಳಿದವರ ರಕ್ತ ಕುಡಿದರಲ್ಲಾ

ನಿಮ್ಮನ್ನು ಯಾವ ಯಾವ ಭಾಗದಿಂದ ಜನನಾಯಕರು ಎಂದು ಕರೆಯೋಣ ಥೂ.. ನಿಮ್ಮ ಜನ್ಮಕ್ಕೆ... ಇದು ಇನ್ನೂ ಆರಂಭ, ಮುಂದೈತೆ ಮಾರಿ ಹಬ್ಬ..." ಇದು ರೈತ ಪರ ಹೋರಾಟಗಾರರೊಬ್ಬರು ಫೇಸ್ ಬುಕ್ ನಲ್ಲಿ ಆಕ್ರೋಶ ತೋಡಿಕೊಂಡಿರುವ ಬಗೆ.[ಕಣ್ಣಲ್ಲಿ ನೀರು ತರಿಸುವ ಲಾಠಿ ಚಾರ್ಜ್ ಚಿತ್ರಗಳು]

ರೈತರ ಮೇಲಿನ ಲಾಠಿ ಚಾರ್ಜ್ ಪ್ರಕರಣ ಕಂಡಾಗ ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶ ನೆನಪಾಗುತ್ತದೆ. ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸರ್ಕಾರ ತೆಗೆದುಕೊಂಡ ಮುಂಜಾಗೃತಾ ಕ್ರಮಗಳನ್ನು ಸುಮ್ಮನೆ ನೋಡಿಕೊಂಡು ಬರೋಣ.[ರೈತರಿಗೆ ಲಾಠಿ ರುಚಿ ತೋರಿಸಿದ ಸರ್ಕಾರಕ್ಕೆ ಪ್ರತಿಪಕ್ಷಗಳ ಚಾರ್ಜ್]

ಬಸ್ ಗಳಿಗೂ ನಗರ ಪ್ರವೇಶ ನೀಡಿದರೆ ಟ್ರಾಫಿಕ್ ಜಾಮ್ ಆಗುತ್ತದೆ ಎಂದ ಸರ್ಕಾರ ಜನರಿಂದ ಛೀಮಾರಿ ಹಾಕಿಸಿಕೊಂಡಿತ್ತು. ಉದ್ಯಮಿಗಳಿಗೆ ರತ್ನಗಂಬಳಿ ಸ್ವಾಗತ, ಸ್ವತಃ ಸಚಿವ ಸಂಪುಟದ ಪ್ರಮುಖ ಸಚಿವರಿಂದಲೇ ಬರಮಾಡಿಕೊಳ್ಳುವಿಕೆ.

ಉದ್ಯಮಿಗಳು ಆಗಮಿಸುವ ರಸ್ತೆಗೆ ಡಾಂಬರು, ಪೊಲೀಸ್ ಭದ್ರತೆ, ಟ್ರಾಫಿಕ್ ನಿಯಂತ್ರಣ ಎಲ್ಲವನ್ನು ಸುಸೂತ್ರವಾಗಿ ಮಾಡಿದ್ದ ಸರ್ಕಾರಕ್ಕೆ, ಗೃಹ ಇಲಾಖೆಗೆ ರೈತರನ್ನು ಮಾತ್ರ ನಿಯಂತ್ರಿಸಲು ಸಾಧ್ಯವಾಗಲಿಲ್ಲವಂತೆ! ನಗರದ ಶಾಂತಿ ಕದಡುತ್ತದೆ ಎಂದು ಲಾಠಿ ಚಾರ್ಜ್ ಮಾಡಿದರಂತೆ!...[ಎತ್ತಿನ ಹೊಳೆ ಯೋಜನೆ ಬಗ್ಗೆ ತಿಳಿಯಿರಿ]

ಉದ್ಯಮಿಗಳಿಗೆ ಮಣೆ ಹಾಕಿದ್ದು ತಪ್ಪಲ್ಲ, ಅಭಿವೃದ್ಧಿಯಲ್ಲಿ ಕೈಗಾರಿಕೆಗಳ ಪಾತ್ರವೂ ಇರುತ್ತದೆ.. ಆದರೆ ಕುಡಿಯುವ ನೀರು ಕೇಳಲು ಬಂದ ರೈತರಿಗೆ ಪರಿಹಾರ ನೀಡಬೇಕಾದ ಸರ್ಕಾರ, ಸಾಂತ್ವನ ಹೇಳಬೇಕಾದ ಸರ್ಕಾರ ನೀಡಿದ್ದು ಮಾತ್ರ ಲಾಠಿ ಏಟು.. ಮತ್ತಷ್ಟು ನೋವು.. ಇಡೀ ಗುರುವಾರ ಬೆಂಗಳೂರು ಅನ್ನದಾತನ, ಆಕ್ರೋಶ, ಕಣ್ಣಿರಿಗೆ ಸಾಕ್ಷಿಯಾಯಿತು..

185 ದಿನದ ಪ್ರತಿಭಟನೆ

185 ದಿನದ ಪ್ರತಿಭಟನೆ

ಬಯಲು ಸೀಮೆಗೆ ಶಾಶ್ವತ ನೀರಾವರಿ ಕಲ್ಪಿಸುವ೦ತೆ ಆಗ್ರಹಿಸಿ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆ೦ಗಳೂರು ಗ್ರಾಮಾ೦ತರ ಮತ್ತು ಚಿತ್ರದುಗ೯ಗಳಲ್ಲಿ ರೈತರು ಕಳೆದ 185 ದಿನಗಳಿ೦ದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಮಾತ್ರ ಯಾವ ಸ್ಪಂದನೆಯನ್ನು ನೀಡಿಲ್ಲ.

 ಬೆಳಗ್ಗೆಯೇ ಹೊರಟಿದ್ದರು

ಬೆಳಗ್ಗೆಯೇ ಹೊರಟಿದ್ದರು

ಬೇಸತ್ತ ರೈತರು ಟ್ರ್ಯಾಕ್ಟರ್ ಏರಿ ಬೆಂಗಳೂರ ಕಡೆ ಹೊರಟಿದ್ದರು. ಕೋಲಾರ, ಶ್ರೀನಿವಾಸಪುರ, ಮಾಲೂರು ಮತ್ತು ಮುಳಬಾಗಿಲು ರೈತರು ಬೆಳಗ್ಗೆ 6 ಗ೦ಟೆಗೆ ಬೆ೦ಗಳೂರು ಪ್ರವೇಶಿಸುತ್ತಿದ್ದ೦ತೆಯೇ ಅವರನ್ನು ಕೆಆರ್ ಪುರದಲ್ಲಿ ತಡೆಯಲಾಗಿತ್ತು.

 ಚಿಕ್ಕಬಳ್ಳಾಪುರ ರೈತರಿಗೆ ತಡೆ

ಚಿಕ್ಕಬಳ್ಳಾಪುರ ರೈತರಿಗೆ ತಡೆ

ಬಳ್ಳಾರಿ ರಸ್ತೆ ಮಾಗ೯ವಾಗಿ ಹೊರಟ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಶಿಡ್ಲಘಟ್ಟ, ಬಾಗೇಪಲ್ಲಿ, ಗುಡಿಬ೦ಡೆ, ಚಿ೦ತಾಮಣಿ ಮತ್ತು ಗೌರಿಬಿದನೂರು ದೇವನಹಳ್ಳಿಯಲ್ಲಿ ತಡೆಯಲಾಗಿತ್ತು. ಆಕ್ರೋಶಗೊ೦ಡ ರೈತರು ಪ್ರತಿಭಟನೆಗಿಳಿದ ಪರಿಣಾಮ ಪೊಲೀಸರ ಜತೆ ಘಷ೯ಣೆ ಆರಂಭವಾಯಿತು.

ಬ್ಯಾರಿಕೇಡ್ ಮುರಿದರು

ಬ್ಯಾರಿಕೇಡ್ ಮುರಿದರು

ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್ ಗಳನ್ನು ಮುರಿದು ರೈತರು ಮುಂದೆ ನುಗ್ಗಿದರು. ಆದರೆ ಪೊಲೀಸರು ಈ ವೇಳೆ ರೈತರನ್ನು ತಡೆಯುವ ಯಾವ ಯತ್ನವನ್ನು ಮಾಡಲಿಲ್ಲ.

ಕಾವೇರಿ ಜಂಕ್ಷನ್ ರಣಾಂಗಣ

ಕಾವೇರಿ ಜಂಕ್ಷನ್ ರಣಾಂಗಣ

ಬೆಂಗಳೂರ ಕಡೆ ನುಗ್ಗುತ್ತಿದ್ದ ರೈತರಿಗೆ ಬೆಂಗಳೂರಿನ ಕಾವೇರಿ ಜಂಕ್ಷನ್ ನಲ್ಲಿ ಮತ್ತೆ ಪೊಲೀಸ್ ಕೋಟೆ ಎದುರಾಯಿತು. ಇಲ್ಲಿಯೂ ಘರ್ಷಣೆ ಸಂಭವಿಸಿ ಅಂತಿಮವಾಗಿ ಪೊಲೀಸರು ರೈತರ ಮೇಲೆ ಲಾಠಿ ಪ್ರಹಾರ ಮಾಡಿ ಪರಿಸ್ಥಿತಿ ಹತೋಟಿಗೆ ತಂದರು.

ಮಾರ್ಚ್ 6ಕ್ಕೆ ಸಭೆ ಇತ್ತು

ಮಾರ್ಚ್ 6ಕ್ಕೆ ಸಭೆ ಇತ್ತು

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಎತ್ತಿನಹೊಳೆ ಯೋಜನೆ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ ಮಾ. 6 ರಂದು ಸಭೆ ಕರೆಯಲಾಗಿದೆ. ಸಭೆಗೆ ರೈತ ಮುಖಂಡರನ್ನು ಆಹ್ವಾನಿಸಲಾಗಿತ್ತು. ಅಷ್ಟರಲ್ಲಿ ರೈತರು ಯಾಕೆ ಹೊರಾಟ ಮಾಡಬೇಕಿತ್ತು? ಎಂಬ ಪ್ರಶ್ನೆ ಸರ್ಕಾರದ್ದು.

 ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ದರ್ಪ

ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ದರ್ಪ

ಕಬ್ಬು ಬೆಳೆ ಬಾಕಿ ಕೇಳಲು ಬಂದ ರೈತರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಖಂಡನೀಯ. ಪ್ರತಿಭಟನೆ ಮುಗಿಸಿ ಕೇಂದ್ರ ರೈಲ್ವೆ ನಿಲ್ದಾಣದ ಮೂಲಕ ಮನೆಗೆ ತೆರಳುತ್ತಿದ್ದ ರೈತರ ಮೇಲೂ ಪೊಲೀಸರು ದರ್ಪ ತೋರಿಸಿದರು.

ನಾವು ಮುತ್ತಿಗೆ ಹಾಕುತ್ತಿರಲಿಲ್ಲ

ನಾವು ಮುತ್ತಿಗೆ ಹಾಕುತ್ತಿರಲಿಲ್ಲ

ನಾವು ಮುಖ್ಯಮಂತ್ರಿ ಮನೆಗೆ ಕಲ್ಲು ಹೊಡೆಯುವುದಾಗಲಿ, ವಿಧಾಣ ಸೌಧಕ್ಕೆ ಮುತ್ತಿಗೆ ಹಾಕುವುದಾಗಲಿ ಮಾಡುತ್ತಿರಲಿಲ್ಲ. ನೇರವಾಗಿ ಫ್ರೀಢಂ ಪಾರ್ಕ್ ಗೆ ತೆರಳಿ ಸಮಾವೇಶ ಮಾಡ ಬೇಕು ಎಂಬ ತೀರ್ಮಾನದಲ್ಲಿದ್ದೇವು. ಅಷ್ಟರಲ್ಲಿ ಪೊಲೀಸರು ದರ್ಪ ತೋರಿಸಿದರು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ.

ಗೃಹ ಇಲಾಖೆಗೆ ಗೊತ್ತಿರಲಿಲ್ಲವೇ?

ಗೃಹ ಇಲಾಖೆಗೆ ಗೊತ್ತಿರಲಿಲ್ಲವೇ?

ಇಂತಿಷ್ಟು ರೈತರು ಆಗಮಿಸುತ್ತಾರೆ ಎಂಬ ಸಂಗತಿ ಗೃಹ ಇಲಾಖೆಗೆ ಗೊತ್ತಿರಲಿಲ್ಲವೇ? ಎಂಬ ಪ್ರಶ್ನೆ ಸಾಮಾನ್ಯ ನಾಗರಿಕನದ್ದು ಮಾತು ಕತೆಯ ಮೂಲಕ ಅಂತ್ಯ ಕಾಣಬೇಕಿದ್ದ ಪ್ರಕರಣದಲ್ಲಿ ರೈತರು ಲಾಠಿ ಏಟು ತಿನ್ನುವಂತಾದದ್ದು ರಾಜ್ಯದ ದುರ್ದೈವ..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru Police on Thursday March 3, lathicharged a large group of farmers in Bengaluru when they tried to move towards Vidhana Soudha to press the government for a solution to water problems in drought-hit districts. When Invest Karnataka global business meet 2016 happned in Bengaluru state government did same job?
Please Wait while comments are loading...