ಕರ್ನಾಟಕದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇದೆ
ಬೆಂಗಳೂರು, ನವೆಂಬರ್ 18: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವರ್ಗಾವಣೆ ದಂದೆ ಸೇರಿದಂತೆ ಭ್ರಷ್ಟಚಾರ ವಿಚಾರವಾಗಿ ಆಡಳಿತ ಪಕ್ಷದ ವಿರುದ್ದ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸರಣಿ ಆರೋಪಗಳನ್ನ ಮಾಡುತ್ತಿದ್ದು, ಇದೀಗ ಕರ್ನಾಟಕದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇದೆ ಎಂದು ರಾಜ್ಯ ಬಿಜೆಪಿ ಹೇಳಿದೆ.
ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪ, ನಾಮಕಾವಸ್ಥೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವೇ ನಿರುಪಯುಕ್ತ ಸಿಎಂ ಎನ್ನುವುದನ್ನು ಒಪ್ಪಿಕೊಂಡು ಜವಾಬ್ದಾರಿಗಳನ್ನು ಹರಿದು ಹಂಚಿದ್ದಾರೆ ಎಂದು ರಾಜ್ಯ ಬಿಜೆಪಿ ಪಟ್ಟಿ ಬಿಡುಗಡೆ ಮಾಡಿದೆ.

▪️ವರುಣಾ ಕ್ಷೇತ್ರ : ಯತೀಂದ್ರ
▪️ಸಿಎಂ ಕುರ್ಚಿ : ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ
▪️ಕಾವೇರಿ ಉಸ್ತುವಾರಿ : ಎಂ. ಕೆ. ಸ್ಟಾಲಿನ್
▪️ಕಲೆಕ್ಷನ್ ಸಂಗ್ರಹ : ಗುತ್ತಿಗೆದಾರರು
▪️ಎಲೆಕ್ಷನ್‌ಗೆ ಹಣ ಸಾಗಾಟ : ಡಿ. ಕೆ. ಶಿವಕುಮಾರ್
ನಾಮಕಾವಸ್ಥೆ ಸಿಎಂ @siddaramaiah ಅವರು ತಾವೇ ನಿರುಪಯುಕ್ತ ಸಿಎಂ ಎನ್ನುವುದನ್ನು ಒಪ್ಪಿಕೊಂಡು ಜವಾಬ್ದಾರಿಗಳನ್ನು ಹರಿದು ಹಂಚಿದ್ದಾರೆ.
— BJP Karnataka (@BJP4Karnataka) November 18, 2023
▪️ವರುಣಾ ಕ್ಷೇತ್ರ : ಯತೀಂದ್ರ
▪️ಸಿಎಂ ಕುರ್ಚಿ : ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ
▪️ಕಾವೇರಿ ಉಸ್ತುವಾರಿ : ಎಂ. ಕೆ. ಸ್ಟಾಲಿನ್
▪️ಕಲೆಕ್ಷನ್ ಸಂಗ್ರಹ : ಗುತ್ತಿಗೆದಾರರು
▪️ಎಲೆಕ್ಷನ್‌ಗೆ ಹಣ…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಒಂದು ಸುಳ್ಳನ್ನು ಸತ್ಯದ ರೀತಿಯಲ್ಲಿ ಹೇಳುವ ನಿಮ್ಮಂತಹ ನಿರ್ಲಜ್ಜ ಮುಖ್ಯಮಂತ್ರಿ ಕರ್ನಾಟಕಕ್ಕೆ ದೊರಕಿರುವುದು, ಕರ್ನಾಟಕದ ದುರ್ದೈವ. "ಹಲೋ ಅಪ್ಪಾ" ಪ್ರಕರಣದಲ್ಲಿ ಕೇಳಿ ಬಂದ ವಿವೇಕಾನಂದರನ್ನು ತತ್‌ಕ್ಷಣವೇ ಟ್ರಾನ್ಸ್‌ಫರ್ ಮಾಡಿದ್ದು ಏಕೆ..?? ಎಂದು ಟ್ವೀಟ್ ಮೂಲಕ ಬಿಜೆಪಿ ಪ್ರಶ್ನಿಸಿದೆ.

ಅಲ್ಲಿಗೆ ಶ್ಯಾಡೋ ಸಿಎಂ ನಿಮಗೆ ಫೋನ್‌ನಲ್ಲಿ ನಾನು ಕೊಟ್ಟ 05 ಜನರದ್ದು ಮಾತ್ರ ಮಾಡಬೇಕು ಎಂದು ಹೇಳಿದ್ದು ವರ್ಗಾವಣೆ ದಂಧೆಗೆ ಸಂಬಂಧಿಸಿದ್ದು ಎಂಬುದು ರುಜುವಾತಾಯಿತು ಅಲ್ಲವೇ..?? ರಾಜ್ಯದಲ್ಲಿ ವರ್ಗಾವಣೆ ದಂಧೆ ತಾಂಡವವಾಡುತ್ತಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಎಂದು ಕಾಂಗ್ರೆಸ್ ಸರ್ಕಾರವನ್ನ ಬಿಜೆಪಿ ಟ್ವೀಟ್ ಮೂಲಕ ಪ್ರಶ್ನೆ ಮಾಡಿದೆ.












Click it and Unblock the Notifications