Get Updates
Get notified of breaking news, exclusive insights, and must-see stories!

ಬೇಕರಿ ತೆರೆಯಲು ಕೇಂದ್ರದ ಅನುಮತಿ; ತೆರುವಾಗುತ್ತಾ ಲಾಕ್‌ಡೌನ್?

ಬೆಂಗಳೂರು, ಏ. 06: ಮಾರಕ ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಲಾಕ್‌ಡೌನ್ ಜಾರಿಗೆ ಬಂದು 10 ದಿನಗಳಾಗುತ್ತ ಬಂದಿವೆ. ಏಕಾಏಕಿ ಲಾಕ್‌ಡೌನ್ ಮಾಡಿದ್ದರಿಂದ ಕೊಟ್ಯಂತರ ಜನರಿಗೆ ತೊಂದರೆ ಆಗಿದೆ. ಆದರೆ ಕೊರೊನಾ ವೈರಸ್ ಮಾಡಿರುವ ಅನಾಹುತಕ್ಕೆ ಜಗತ್ತಿನ ಸೂಪರ್ ಪವರ್, ದೊಡ್ಡಣ್ಣ ಎನಿಸಿಕೊಂಡಿದ್ದ ಅಮೆರಿಕ ಸೇರಿದಂತೆ ಮುಂದುವರೆದ ರಾಷ್ಟ್ರಗಳೇ ಕೈಚೆಲ್ಲಿವೆ. ಇಂಥ ಪರಿಸ್ಥಿತಿಯಲ್ಲಿ ಜನಸಂಖ್ಯೆಯಲ್ಲಿ ಜಗತ್ತಿನ ಎರಡನೇ ದೊಡ್ಡ ದೇಶವಾಗಿರುವ ಭಾರತಕ್ಕೆ ಲಾಕ್‌ಡೌನ್ ಒಪ್ಪದೆ ಬೇರೆ ದಾರಿ ಇರಲಿಲ್ಲ.

ಹೀಗಾಗಿ ಎಷ್ಟೇ ಕಷ್ಟವಾದರೂ ಜನರು ಕೂಡ ಸರ್ಕಾರ ಘೋಷಣೆ ಮಾಡಿರುವ ಲಾಕ್‌ಡೌನ್ ಪಾಲನೆ ಮಾಡುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಮಕ್ಕಳಿಗೆ, ವಯೋವೃದ್ಧರು, ರೋಗಿಗಳಿಗೆ ಆಗಿರುವ ತೊಂದರೆ ಹಿನ್ನೆಲೆಯಲ್ಲಿ ಏಪ್ರಿಲ್ 14ರ ವರೆಗೆ ಜಾರಿಯಲ್ಲಿರುವ ಲಾಕ್‌ಡೌನ್ ಕುರಿತು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ ಏಪ್ರಿಲ್ 14ಕ್ಕೆ ದೇಶಾದ್ಯಂತ ಇರುವ ಲಾಕ್‌ಡೌನ್ ಕೊನೆಯಾಗುತ್ತಾ ಎಂಬ ಕುತೂಹಲ ಮೂಡಿದೆ.

ಮಾರ್ಚ್‌ 21 ರಿಂದ ಏಪ್ರಿಲ್ 14ರವರೆಗೆ ದೇಶಾದ್ಯಂತ ಲಾಕ್‌ಡೌನ್

ಮಾರ್ಚ್‌ 21 ರಿಂದ ಏಪ್ರಿಲ್ 14ರವರೆಗೆ ದೇಶಾದ್ಯಂತ ಲಾಕ್‌ಡೌನ್

ಕೊರೊನಾ ವೈರಸ್ ಹರಡದಂತೆ ತಡೆಯುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ 21 ರಿಂದ ಏಪ್ರಿಲ್ 14ರವರೆಗೆ ದೇಶಾದ್ಯಂತ ಲಾಕ್‌ಡೌನ್ ಜಾರಿಗೆ ತಂದಿದ್ದಾರೆ. ಆದರೆ ಹಲವು ಅಗತ್ಯ ಸೇವೆಗಳಿಗೆ ರಿಯಾಯತಿ ಕೊಡಲಾಗಿದೆ. ಇದೀಗ ಕೊರೊನಾ ವೈರಸ್ ಸಮದಾಯಕ್ಕೆ ಹರಡುತ್ತಿದೆ ಎಂದು ಮಾಹಿತಿಯನ್ನು ಏಮ್ಸ್‌ ಕೊಟ್ಟಿದೆ. ಆದರೂ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಕೇಂದ್ರ ಸರ್ಕಾರ ಲಾಕ್‌ಡೌನ್‌ನ್ನು ಮತ್ತಷ್ಟು ಸಡಿಲಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ರಾಜ್ಯ ಸರ್ಕಾರಕ್ಕೆ ನಿರ್ದೇಶನವನ್ನು ಕೊಟ್ಟಿದೆ.

ಬೇಕರಿ ತೆರೆಯಲು ಕೇಂದ್ರದ ಅನುಮತಿ

ಬೇಕರಿ ತೆರೆಯಲು ಕೇಂದ್ರದ ಅನುಮತಿ

ರಾಜ್ಯದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಇದರಿಂದ ಮಕ್ಕಳು, ವೃದ್ಧರು, ರೋಗಿಗಳು ಹಾಗೂ ಜನಸಾಮಾನ್ಯರಿಗೆ ತೊಂದರೆ ಆಗಿದೆ. ಹೀಗಾಗಿ ರಾಜ್ಯದಲ್ಲಿ ಬೇಕರಿ ಉತ್ಪನ್ನಗಳನ್ನು ತಯಾರಿಸಲು ಹಾಗೂ ಮಾರಾಟ ಮಾಡಲು ಅನುಮತಿ ಕೊಡಲಾಗಿದೆ. ಬೇಕರಿ, ಬಿಸ್ಕೆಟ್ಟು, ಕ್ಯಾಂಡಿಮೆಂಟ್ಸ್‌, ಮಿಠಾಯಿ ಹಾಗೂ ಸಿಹಿತಿಂಡಿಗಳನ್ನು ತಯಾರಿಸಿ ಮಾರಾಟ ಮಾಡಲು ಅನುಮತಿ ಕೊಡಲಾಗಿದೆ ಎಂದು ಅಗತ್ಯ ವಸ್ತುಗಳ ಮತ್ತು ಪೂರೈಕೆ ಸರಪಳಿ ನಿರ್ವಹಣೆಯ ರಾಜ್ಯ ನೋಡೆಲ್ ಅಧಿಕಾರಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಕೇಂದ್ರ ಸರ್ಕಾರದ ಸೂಚನೆಯಂತೆ ಆದೇಶ ಹೊರಡಿಸಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಳಿಸಿದ್ದಾರೆ. ಅಗತ್ಯ ವಸ್ತುಗಳ ನಿರ್ವಹಣೆಯಡಿ ಬೇಕರಿ ಹಾಗೂ ಚಿಲ್ಲರೆ ಅಂಗಡಿಗಳು ತೆರೆಯಲಿವೆ.

ತಯಾರಿಕೆ ಸಿಬ್ಬಂದಿಗೆ ನಿಬಂಧನೆಗಳು

ತಯಾರಿಕೆ ಸಿಬ್ಬಂದಿಗೆ ನಿಬಂಧನೆಗಳು

ಆದರೆ ಸಂಪೂರ್ಣ ಮುಂಜಾಗ್ರತೆಯೊಂದಿಗೆ ಬೇಕರಿ ಉತ್ಪನ್ನಗಳನ್ನು ತಯಾರಿಸಬೇಕೆಂದು ಆದೇಶ ಮಾಡಲಾಗಿದೆ. ಸಿಹಿ ತಿಂಡಿ, ಬಿಸ್ಕೆಟ್ಟು ತಯಾರಿಸಲು ಅತ್ಯಂಕ ಕಡಿಮೆ ಸಿಬ್ಬಂದಿ ಬಳಸಿಕೊಳ್ಳಬೇಕು, ಆರೋಗ್ಯವಂತರು ಉತ್ಪನ್ನಗಳ ತಯಾರಿಕೆ ಮಾಡಬೇಕು, ಅತ್ಯಂತ ಹೆಚ್ಚಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಉತ್ಪಾದನೆ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ.


ಜೊತೆಗೆ ಯಾವುದೇ ಕಾರಣಕ್ಕೂ ಬೇಕರಿ ಎದುರು ಅಥವಾ ಬೇಕರಿಯಲ್ಲಿ ತಿನ್ನಲು ಅಥವಾ ಸರಬರಾಜು ಮಾಡಲು ಅವಕಾಶವಿಲ್ಲ. ಬೇಕರಿಯಿಂದ ಪಾರ್ಸೆಲ್ ಕೊಡಲು ಮಾತ್ರ ಅನುಮತಿಯಿದೆ ಎಂದು ತಿಳಿಸಲಾಗಿದೆ.

ಲಾಕ್‌ಡೌನ್ ಮುಕ್ತಾಯವಾಗುತ್ತಾ? ಅಥವಾ ಹೆಚ್ಚು ರಿಯಾಯತಿ?

ಲಾಕ್‌ಡೌನ್ ಮುಕ್ತಾಯವಾಗುತ್ತಾ? ಅಥವಾ ಹೆಚ್ಚು ರಿಯಾಯತಿ?

ಇದೀಗ ಕೇಂದ್ರ ಸರ್ಕಾರ ಕೊಟ್ಟಿರುವ ರಿಯಾಯತಿಯಿಂದ ಏಪ್ರಿಲ್ 14ಕ್ಕೆ ಲಾಕ್‌ಡೌನ್ ಕೊನೆಯಾಗುತ್ತದೆಯಾ ಎಂಬ ಭಾವನೆಗಳು ಬಂದಿವೆ. ಬೇಕರಿ ತೆರೆಯಲು ಅವಕಾಶ ಕೊಟ್ಟಿರುವಂತೆ ಇನ್ನೂ ಹಲವು ಸೇವೆಗಳಿಗೆ ಲಾಕ್‌ಡೌನ್ ಅವಧಿಯ ಬಳಿಕ ಕೊಡುವ ಸಾಧ್ಯತೆಗಳಿವೆ. ಆದರೆ ಇದೀಗ ಸಮುದಾಯದ ಹಂತಕ್ಕೆ ಕೊರೊನಾ ವೈರಸ್ ಹರಡುತ್ತಿರುವುದರಿಂದ ಸಂಪೂರ್ಣವಾಗಿ ಲಾಕ್‌ಡೌನ್‌ನನ್ನು ಕೇಂದ್ರ ಸರ್ಕಾರ ತೆರವುಗೊಳಿಸುವ ಸಾಧ್ಯತೆಗಳು ತೀರಾ ಕಡಿಮೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+