ಕುವೆಂಪು ಅವಹೇಳನ ಮಾಡಿದರೆ ಶಿಕ್ಷಾರ್ಹ ಅಪರಾಧ ಆಗುತ್ತೆ: ಹನುಮಂತರಾಯ
ಬೆಂಗಳೂರು, ಜೂ. 3: ಮಹಾಕವಿ ಕುವೆಂಪು, ನಾರಾಯಣಗುರು, ಬಸವಣ್ಣ ಅವರು ಕನ್ನಡಿಗರ ದೃಷ್ಟಿಯಲ್ಲಿ ದೈವಾಂಶ ಸಂಭೂತರು. ಅವರ ಬಗ್ಗೆ ಅವಹೇಳನ ಮಾಡುವುದು ಭಾರತೀಯ ದಂಡ ಸಂಹಿತೆ ಸೆಕ್ಷನ್ 505 ಪ್ರಕಾರ ಸಾರ್ವಜನಿಕ ಕಿಡಿಗೇಡಿತನ ಎಂದು ಹಿರಿಯ ವಕೀಲ ಸಿ.ಎಚ್. ಹನುಮಂತರಾಯಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಅವರ ಹೋರಾಟ ಸಮಿತಿ ಬೆಂಗಳೂರಿನ ವಿಜಯನಗರದ ಆದಿ ಚುಂಚನಗಿರಿ ಮಠದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಾನು ಒಂದು ವಾರದಿಂದ ಕಾನೂನು ಅಧ್ಯಯನ ಮಾಡಿದ್ದೇನೆ. ನನ್ನಾ ಎಲ್ಲಾ ಕೆಲಸಗಳನ್ನು ಬಿದಿಗಿಟ್ಟು ಕುವೆಂಪು ಅವರನ್ನು ಅವಹೇಳನ ಹಾಗೂ ಪಠ್ಯ ಪುಸ್ತಕದ ಸುತ್ತ ಮುತ್ತ ನಡೆಯುತ್ತಿರುವ ಬೆಳವಣಿಗಳನ್ನು ಗಮನಿಸಿ ಕಾನೂನು ದುಷ್ಠಿಕೋನದಲ್ಲಿ ಅಧ್ಯಯನ ನಡೆಸಿದ್ದೇನೆ. ಒಂದು ಸಮುದಾಯಕ್ಕೆ ಒಬ್ಬ ವ್ಯಕ್ತಿ ದೈವಾಂಶ ಸಂಭೂತ ಎನಿಸಿದರೆ, ಅವರನ್ನು ಒಂದು ಸಮುದಾಯ ಸರ್ವಸೇಷ್ಠ ಎಂಬ ನಂಬಿಕೆ ಇಟ್ಟುಕೊಂಡಿದ್ದರೆ, ಅಂತಹ ವ್ಯಕ್ತಿಯ ಬಗ್ಗೆ ಅವಾಚ್ಯ ಪದ ಬಳಿಸುವುದು ಐಪಿಸಿ ಸೆಕ್ಷನ್ 505 ಅಡಿ ಸಾರ್ವಜನಿಕ ಕಿಡಿಗೇಡಿತನ. ಆ ಕೃತ್ಯ ಎಸಗಿದವರು ನೋಡಲಿಕ್ಕೆ ಕಿಡಿಗೇಡಿಗಳು ಎಂದು ಹಿರಿಯ ವಕೀಲ ಸಿ.ಎಚ್. ಹನುಮಂತರಾಯಪ್ಪ ಹೇಳಿದ್ದಾರೆ.

ಯಾರೇ ಆಗಲಿರಿ, ದೈವಾಂಶ ಸಂಭೂತ ಎನಿಸಿದರೆ, ಆ ಸ್ಥಾನ ಗಳಿಸಿದ್ದರೆ, ಅವರ ಬಗ್ಗೆ ಯಾವುದೇ ಹೇಳಿಕೆ ನೀಡುವುದು, ವದಂತಿ ಹಬ್ಬಿಸುವುದು, ಪ್ರಚೋದನೆ ಕೊಡುವಂತಹ ವರದಿ ಮಾಡುವುದು, ವರದಿ ಪ್ರಸಾರ ಮಾಡುವುದು, ಪ್ರಚೋದಿಸುವ ಉದ್ದೇಶದಿಂದ ಹೇಳಿಕೆ ಕೊಡುವುದು ಕೂಡ ಕಾನೂನು ಅಡಿ ತಪ್ಪಾಗುತ್ತದೆ ಎಂದು ಪರೋಕ್ಷವಾಗಿ ರೋಹಿತ್ ಚಕ್ರತೀರ್ಥ ಕುವೆಂಪು ಅವರಿಗೆ ಎಸಗಿರುವ ಅವಮಾನ ಸಾರ್ವಜನಿಕ ಕಿಡಿಗೇಡಿತನ ಎಂದು ನುಡಿದರು.

ಎಸ್.ಎಲ್. ಭೈರಪ್ಪ ಅವರ ಮಾತುಗಳು ಕೇಳಿ ಗಾಬರಿ ಆಗುತ್ತದೆ. ಶಿಕ್ಷಣ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರ ಬಗ್ಗೆ ಉಲ್ಲೇಖಿಸಿ, ಶಿಕ್ಷಣ ಸಚಿವರನ್ನೇ ಮುಗಿಸಿ ಬಿಡುತ್ತಿದ್ದರು ಎಂಬ ದಾಟಿಯಲ್ಲಿ ಹೇಳಿಕೆ ನೀಡಿದ್ದಾರೆ. ಅಪಮಾನ ಮಾಡಿದವರನ್ನು ಸರ್ಕಾರ ರಕ್ಷಣೆ ನಿಂತರೆ, ಅಪಮಾನ ಮಾಡುವರನ್ನು ಉತ್ಸವ ಮೂರ್ತಿಗಳನ್ನು ಮಾಡುವ ಕೀಳು ಮಟ್ಟಕ್ಕೆ ಇಳಿಯವುದು ತೀರಾ ಅಪಾಯಕಾರಿ ಬೆಳವಣಿಗೆ ಎಂದು ಸಿ.ಎಚ್. ಹನುಮಂತರಾಯಪ್ಪ ಅಭಿಪ್ರಾಯಪಟ್ಟರು.












Click it and Unblock the Notifications