ಹಿಂದೂ ಸಂಘಟನೆಗಳ ಪ್ರತಿಭಟನೆ : ಉತ್ತರ ಕನ್ನಡ ಉದ್ವಿಗ್ನ
Recommended Video

ಕುಮಟಾ, ಡಿಸೆಂಬರ್. 11 : ಹೊನ್ನಾವರ ತಾಲೂಕಿನ ಪರೇಶ್ ಮೇಸ್ತ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರಕ್ಷಬ್ಧ ವಾತಾವರಣ ನಿರ್ಮಾಣವಾಗಿದೆ.
ಸೋಮವಾರ ಕಾರವಾರ, ಹೊನ್ನಾವರ, ಕುಮಟಾ, ಮುಂಡಗೋಡದಲ್ಲಿ ಹಿಂದೂ ಸಂಘಟನೆಗಳು ಬಂದ್ ಆಚರಣೆ ಮಾಡಲಾಗುತ್ತಿವೆ. ಕುಮಟಾದಲ್ಲಿ ಬಂದ್ ವೇಳೆ ಹಿಂಸಾಚಾರ ಸಂಭವಿಸಿದೆ.

ಕಾರವಾರದಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ನಗರದಾದ್ಯಂತ ಮೆರವಣಿಗೆ ನಡೆಸಿದ ಹಿಂದೂಪರ ಸಂಘಟನೆಗಳು ಸುಮಾರು ಮೂರು ತಾಸು ಹೆದ್ದಾರಿ ಸಂಚಾರ ಬಂದ್ ಮಾಡಿಸಿದ್ದರು.
ಸ್ವಯಂಪ್ರೇರಿತ ಬಂದ್ ಎಂದಿದ್ದ ಬಿಜೆಪಿಯವರು ತಾವೇ ಬೆಳಗ್ಗೆಯಿಂದಲೇ ಅಂಗಡಿ, ಬಸ್ಸು, ಟೆಂಪೋಗಳವರಿಗೆ ಬಂದ್ ಆಚರಿಸಲು ಒತ್ತಾಯಿಸಿದರು. ಕಿಡಿಗೇಡಿಗಳ ಗುಂಪೊಂದು ಅಗ್ನಿಶಾಮಕ ದಳದ ವಾಹನದ ಮೇಲೆ ಕಲ್ಲು ತೂರಾಟ ನಡೆಸಿತು.
ಕುಮಟಾದಲ್ಲಿ ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರ ಕಾರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. 2 ಪೊಲೀಸ್ ವಾಹನಗಳನ್ನು ಜಖಂಗೊಳಿಸಿದ್ದಾರೆ. 4 ಬಸ್‌ಗಳು ಜಖಂಗೊಂಡಿದೆ. 30 ಪೊಲೀಸರು ಕಲ್ಲು ತೂರಾಟದಿಂದಾಗಿ ಗಾಯಗೊಂಡಿದ್ದಾರೆ.
ಪ್ರತಿಭಟನಾನಿರತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಉದ್ರಿಕ್ತ ಗುಂಪನ್ನು ಚದುರಿಸಲು ಅಶ್ರುವಾಯು ಸಿಡಿಸಿದರು.












Click it and Unblock the Notifications