ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆ; ಕೀ ಉತ್ತರ ಬಿಡುಗಡೆ

ಬೆಂಗಳೂರು, ಜೂನ್ 5: ಶಿಕ್ಷಕ ನೇಮಕಾತಿಯ ಸಿಇಟಿ ಪರೀಕ್ಷೆಗಳು ಮುಗಿದಿದೆ. ಶಿಕ್ಷಣ ಇಲಾಖೆ ಕೀ ಉತ್ತರವನ್ನು ಬಿಡುಗಡೆ ಮಾಡಿದೆ. 15000 ಶಿಕ್ಷಕರು ಅಧಿಕೃತವಾಗಿ ಕೀ ಉತ್ತರಗಳು ಪ್ರಕಟವಾಗಿದೆ. ತಮ್ಮ ಒಎಂಆರ್ ಕಾಪಿಗಳನ್ನು 15000 ಅಭ್ಯರ್ಥಿಗಳು ಪರಿಶೀಲಿಸಿಕೊಳ್ಳಬಹುದು. ಶಿಕ್ಷಣ ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ. ಕೀ ಉತ್ತರಗಳನ್ನು ಪರಿಶೀಲಿಸಲು ಶಿಕ್ಷಣ ಇಲಾಖೆ ಸೂಚನೆಯನ್ನು ಸಹ ನೀಡಿದ್ದು ಆಕ್ಷೇಪಣೆಯನ್ನು ಸಲ್ಲಿಸಲು ಜೂನ್ 10ರ ತನಕ ಕಾಲಾವಕಾಶವನ್ನು ಸಹ ನೀಡಿದೆ.

ಶಿಕ್ಷಕರ ಹುದ್ದೆ ನೇಮಕಾತಿ 2022ರ ಪರೀಕ್ಷೆಯು ಮೇ 21 ಮತ್ತು ಮೇ 22 ನಡೆದಿದೆ. ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಅಭ್ಯರ್ಥಿಗಳು ಬರೆದಿದ್ದಾರೆ. ಕರ್ನಾಟಕ ಶಿಕ್ಷಕರ ನೇಮಕಾತಿ ಹುದ್ದೆ 2022ರ ಪರೀಕ್ಷೆಗೆ 1,06,083 ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದರು.

ಈ ಪೈಕಿ ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿದ್ದವರು 31,967 ಅಭ್ಯರ್ಥಿಗಳು. ಶಿಕ್ಷಕ ಹುದ್ದೆಗೆ ಅರ್ಜಿಗಳ ಪರಿಗಣನೆ ಆಗಿರುವುದು 74,116 ಮಂದಿ ಅಭ್ಯರ್ಥಿಗಳದ್ದು. ಪರೀಕ್ಷೆಗೆ ಹಾಜರಾದವರ ಸಂಖ್ಯೆ 69,159 ಅಭ್ಯರ್ಥಿಗಳು. ಪರೀಕ್ಷೆಗೆ ಗೈರು ಹಾಜರಾದವರು 4957 ಅಭ್ಯರ್ಥಿಗಳು ಅಂದರೆ 93% ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೇ 7% ಅಭ್ಯರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಎರಡನೇ ಪತ್ರಿಕೆಯನ್ನು ಬರೆಯುವಾಗಲೂ ಕೆಲ ಅಭ್ಯರ್ಥಿಗಳು ಗೈರು ಹಾಜರಾಗಿದ್ದಾರೆ.

6 ರಿಂದ 8 ನೇ ತರಗತಿಗೆ ಪದವೀಧರ ಶಿಕ್ಷಕರ ನೇಮಕಾತಿ

6 ರಿಂದ 8 ನೇ ತರಗತಿಗೆ ಪದವೀಧರ ಶಿಕ್ಷಕರ ನೇಮಕಾತಿ

ಯಾವ ವೇಯ್ಟೇಜ್‌ನಲ್ಲಿ ಮೆರಿಟ್ ನಿರ್ಧಾರ 6 ರಿಂದ 8 ನೇ ತರಗತಿಗೆ ಪದವೀಧರ ಶಿಕ್ಷಕರ ನೇಮಕಾತಿಗಾಗಿ ಆಯ್ಕೆ ಪ್ರಾಧಿಕಾರವು ವಿಷಯವಾರು ಮತ್ತು ಮಾಧ್ಯಮವಾರು ಪ್ರವರ್ಗವಾರು ಅಧಿಸೂಚನೆಯಂತೆ ಸ್ಪರ್ಧಾತ್ಮಕ ಪರೀಕ್ಷೆ, ಶಿಕ್ಷಕರ ಅರ್ಹತಾ ಪರೀಕ್ಷೆ (TET), ಪದವಿ ಶಿಕ್ಷಣ (degree) ಮತ್ತು ಬಿ.ಇಡ್ ಕೋರ್ಸ್‌ಗಳಲ್ಲಿ ಪಡೆದಿರುವ ಶೇಕಡವಾರು ಅಂಕಗಳನ್ನು ಪರಿಗಣಿಸಿ ವೆಯ್ಟೇಜ್ (weightage) ಉಪಯೋಗಿಸಿ ಲೆಕ್ಕಹಾಗಿ divided percentage ಲೆಕ್ಕಹಾಕಿ ಅದರ ಆಧಾರದಲ್ಲಿ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ.

ಶೇಕಡವಾರು ಲೆಕ್ಕಾಚಾರದ ವಿವರ

ಶೇಕಡವಾರು ಲೆಕ್ಕಾಚಾರದ ವಿವರ

ಶಿಕ್ಷಕರ ಕೋರ್ಸ್‌ನಲ್ಲಿ ಎರಡು ವರ್ಷ ವ್ಯಾಸಂಗದ ಆಯ್ಕೆ ಮಾದರಿ. 4 ವರ್ಷದ ಕೋರ್ಸ್ ಮಾಡಿದವರ ಆಯ್ಕೆ ಮಾದರಿ ಹೇಗೆ? ಶಿಕ್ಷಕರ ಕೋರ್ಸ್ ಎರಡು ವರ್ಷ ವ್ಯಾಸಂಗ ಮಾಡಿದ್ದರೆ ಅವರ ಆಯ್ಕೆಯ ಹೀಗೆ ಮಾಡುತ್ತಾರೆ.

* ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕ 50%

* ಟಿಇಟಿಯಲ್ಲಿ ಪಡೆದ ಅಂಕ 20%

* ಪದವಿಯಲ್ಲಿ ಪಡೆದದ ಅಂಕ 20%

* ಶಿಕ್ಷಕರ ಕೋರ್ಸ್‌ನಲ್ಲಿ ಪಡೆದ ಅಂಕ 10%, ಎಲ್ಲಾ ಶೇಕಡವಾರು ಅಂಕಗಳನ್ನು ಪರಿಗಣಿಸಿ 100% ಗೆ ಲೆಕ್ಕಹಾಕಿ ಆಯ್ಕೆ ಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಲಿದೆ.

ಶೇಕಡವಾರು ಲೆಕ್ಕಾಚಾರದ ವಿವರ

ಶೇಕಡವಾರು ಲೆಕ್ಕಾಚಾರದ ವಿವರ

ಇನ್ನು ವಿಶೇಷವಾಗಿ ನಾಲ್ಕು ವರ್ಷದ ಕೋರ್ಸ್ ಮಾಡಿರುವ ಅಭ್ಯರ್ಥಿಗಳು ಶಿಕ್ಷಕರ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ್ದರೇ ಅವರ ಆಯ್ಕೆ ಹೀಗೆ ನಿರ್ಧರಿಸುತ್ತಾರೆ.

* ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕ 50%

* ಟಿಇಟಿಯಲ್ಲಿ ಪಡೆದ ಅಂಕ 20%

* ನಾಲ್ಕು ವರ್ಷದ ಶಿಕ್ಷಣ ಕೋರ್ಸ್ ಮಾಡಿದವರು 30% ಹೀಗೆ ಅಭ್ಯರ್ಥಿಗಳ ಶೇಕಡಾವಾರು ಅಂಕಗಳನ್ನು ಲೆಕ್ಕಹಾಕಿ 100% ಆಗಿ ಪರಿಗಣಿಸಿ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ.

ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಶಿಕ್ಷಣ ಇಲಾಖೆ ಸಿಇಟಿಯ ಕೀ ಉತ್ತರ ಬಿಡುಗಡೆಗೊಳಿಸಿದ ಬಳಿ ಉತ್ತರವನ್ನು ತಾಳೆಹಾಕಿ ಗಳಿಸಿದ ಅಂಕದ ಶೇ 50 ಅನ್ನು ಪರಿಗಣಿಸಿ, ಟಿಇಟಿ, ಪದವಿ, ಶಿಕ್ಷಕರ ಕೋರ್ಸ್‌ನಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಿ ಲೆಕ್ಕಹಾಕಬೇಕು. ಆ ನಂತರವೇ ಶಿಕ್ಷಣ ಇಲಾಖೆ ಕಟ್ ಆಫ್(cut off) ಶೇಖಡವಾರು ಮತ್ತು ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡುವ ವೇಳೆ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪಂಗಡ, ವರ್ಗ, ಒಬಿಸಿಗಳಿಗೆ ಅನುಗುಣವಾಗಿ ಆಯ್ಕೆ ಪಟ್ಟಿ ಬಿಡುಗಡೆಯಾಗಲಿದೆ. ಇನ್ನು ಕೀ ಉತ್ತರವನ್ನು https://www.schooleducation.kar.nic.in ನಲ್ಲಿ ಲಭ್ಯವಾಗಲಿದೆ. ಇನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಕೀ ಉತ್ತರದಲ್ಲಿ ಲೋಪದೋಷಗಳು ಕಂಡು ಬಂದರೇ ಆಕ್ಷೇಪೆಯನ್ನು ಸಲ್ಲಿಸಬಹುದು. ಜೂನ್ 10ವರೆಗೂ ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶವನ್ನು ನೀಡಿದ್ದು ಅಭ್ಯರ್ಥಿಗಳು ಆಕ್ಷೇಪಣೆಯನ್ನು ಸಲ್ಲಿಸಬಹುದು.

Recommended Video

    ಅಂದು ಗಂಭೀರ್ ಬಗ್ಗೆ ಟೀಕೆ ಮಾಡಿದವ್ರು ಇಂದು ಶಹಬ್ಬಾಸ್ ಹೇಳುತ್ತಿರೋದು ಯಾಕೆ? | OneIndia Kannada
    ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದೇನು

    ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದೇನು

    "15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಪ್ರಕ್ರಿಯೆ ಚಾಲ್ತಿಯಲ್ಲಿದೆ. ನೇಮಕಾತಿ ಪರೀಕ್ಷೆ ಮುಗಿದು, ಈಗಾಗಲೇ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ಸೇವೆ ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಶಾಲೆ ಆರಂಭದ ದಿನಗಳಲ್ಲೇ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಹೀಗಾಗಿ, ಈ ವರ್ಷ ಶಿಕ್ಷಕರ ಕೊರತೆ ಎದುರಾಗುವುದಿಲ್ಲ'' ಎಂದು ಸಚಿವರು ಹೇಳಿದರು.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+