BS Yediyurappa: ನಿಖಿಲ್ ಗೆಲ್ಲಿಸುವ ಮೂಲಕ ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸಿ: ಯಡಿಯೂರಪ್ಪ ಗುಡುಗು

ಚನ್ನಪಟ್ಟಣ, ನವೆಂಬರ್‌ 11: ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಮೂಲಕ ಸಿಎಂ ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದರು.

ಚನ್ನಪಟ್ಟಣದಲ್ಲಿ ನಡೆದ ನಿಖಿಲ್ ಪರ ಬೃಹತ್ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಯಡಿಯೂರಪ್ಪ ಅವರು, ಬೊಂಬೆಗಳನಾಡಲ್ಲಿ ಕಾಂಗ್ರೆಸ್ ಕೈಗೊಂಬೆ ಸಿಪಿ ಯೋಗೇಶ್ವರ್ ಅವರು ಗೆಲ್ಲುವುದರಿಂದ ಉಪಯೋಗವಿಲ್ಲ. ಒಂದು ರಸ್ತೆ ಗುಂಡಿ ಮುಚ್ಚುವ ಯೋಗ್ಯತೆಯೂ ಈ ಸರ್ಕಾರಕ್ಕೆ ಇಲ್ಲ ಎಂದು ಕಿಡಿಕಾರಿದರು.

Teach Siddaramaiah a Lesson by Ensuring Nikhil s Victory Yediyurappa

ಕರ್ನಾಟಕದಲ್ಲಿ ಭ್ರಷ್ಟಾಚಾರ ತಂಡವಾಡುತ್ತಿದೆ. ನಾನು ಭಾಗ್ಯಲಕ್ಷ್ಮಿ ಯೋಜನೆ ನಿಲ್ಲಿಸಿದ್ದಾರೆ. ಅನೇಕ ಜನಪರ ಯೋಜನೆಯನ್ನು ನಿಲ್ಲಿಸಿದ್ದಾರೆ. ಅವರಿಗೆ ಹಣ ಕೊಡುವ ಯೋಗ್ಯತೆ ಇಲ್ಲ ಈ ಸರ್ಕಾರ ದಿವಾಳಿ ಆಗಿದೆ. ಮುಂದಿನ ದಿನಗಳು ಒಳ್ಳೆಯದಿದೆ. ನಿಖಿಲ್ ಅವರ ಗೆಲುವಿಗೆ ಮನೆ ಮನೆಗೆ ಹೋಗಿ ಪ್ರಚಾರ ಮಾಡಿ. ಪ್ರಾಮಾಣಿಕ ಕೆಲಸ ಮಾಡಿದರೆ ನಿಖಿಲ್ ಅವರು 25 ಸಾವಿರ ಹೆಚ್ಚಿನ ಮತಗಳಿಂದ ನಿಖಿಲ್ ಗೆಲ್ಲುತ್ತಾರೆ ಎಂದು ಯಡಿಯೂರಪ್ಪ ಕರೆ ನೀಡಿದರು.

ಕಾಲ ಬದಲಾಗಿದೆ, ಜನ ಎಲ್ಲವನ್ನು ಯೋಚನೆ ಮಾಡುತ್ತಾರೆ. ಕೇಂದ್ರದಲ್ಲಿ ದೇವೇಗೌಡರಿಗೆ ಮತ್ತು ಮೋದಿ ಅವರಿಗೆ ಯಾವಾ ರೀತಿ ಇದೇ ಇಲ್ಲರಿಗೂ ಗೊತ್ತು. ಈ ಕ್ಷೇತ್ರವನ್ನು ಗೆಲ್ಲುವುದಾರ ಮೂಲಕ ಸಿದ್ದರಾಮಯ್ಯಗೆ ಪಾಠವನ್ನು ಕಲಿಸಬೇಕು. ನಾಳೆ ಒಂದು ದಿನ ಮನೆ ಮನೆಗೆ ಹೋಗಿ ನಿಖಿಲ್ ಪರ ಮತಯಾಚನೆ ಮಾಡಿ. ನಿಮ್ಮ ಸೇವೆ ಮಾಡುವುದಕ್ಕೆ ಅವಕಾಶ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಮನವಿ ಮಾಡಿದರು.

ಇನ್ನು ಈ ವೇಳೆ ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ಅವರು ಮಾತನಾಡಿ, ಎರಡು ಬಾರಿ ನಿಖಿಲ್ ಕುಮಾರಸ್ವಾಮಿ ಪೆಟ್ಟು ತಿಂದಿದ್ದಾರೆ. ಹಗಲು ದರೋಡೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ವಿರುದ್ಧ ಸ್ಪರ್ಧೆಗೆ ಎದೆಗಾರಿಕೆ ಬೇಕು. ಆ ಎದೆಗಾರಿಕೆ ಇರುವ ನಾಯಕ ಬೇಕು ಅಂತ ದೇವೆಗೌಡರು, ಮೋದಿ ಹಾಗೂ ಕುಮಾರಸ್ವಾಮಿ ಅವರನ್ನು ನಿಖಿಲ್ ಕುಮಾರಸ್ವಾಮಿ ಅವರನ್ನು ನಿಲ್ಲಿಸಿದ್ದಾರೆ ಎಂದು ಹೇಳಿದರು.

ಯೋಗೇಶ್ವರ್ ಜಂಪಿಗ್ ಸ್ಟಾರ್. ಒಳ ಒಪ್ಪಂದವನ್ನು ಮುರಿಯುತ್ತೇವೆ. ಒಳ ಒಪ್ಪಂದದ ವಿರುದ್ಧ ನಡೆಯುತ್ತಿರುವ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲಿಸಬೇಕು ನಿಮಗೆ ದೀರ್ಘ ದಂಡ ನಮಸ್ಕಾರ ಹಾಕಿ ಚನ್ನಪಟ್ಟಣ ಜನತೆಗೆ ಅವರು ಮನವಿ ಮಾಡಿದರು. ನಿಖಿಲ್ ಗೆದ್ದರೆ ನರೇಂದ್ರ ಮೋದಿ ಅವರಿಗೆ ಗೌರವ ಕೊಟ್ಟಂತೆ, ದೇವೇಗೌಡರು ಕಳೆದ ಒಂದು ವಾರದಿಂದ ನಿಖಿಲ್ ಕುಮಾರಸ್ವಾಮಿ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ನಮ್ಮ ಬೂತ್ ನಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ದೇವೇಗೌಡರನ್ನು ಗೆಲ್ಲಿಸ್ತೇವೆ, ಒಳ್ಳೆಯ ಲೀಡ್ ಕೊಡುತ್ತೇವೆ ಎಂದು ಹೇಳಿದರು.

ಎಲ್ಲಾ ಸಮಾಜದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡಿ. ಕಾಡುಗೊಲ್ಲ ಜನಾಂಗದವರನ್ನು ಎಸ್ ಟಿ ಸಮುದಾಯಕ್ಕೆ ಸೇರಸಲು ದೇವೇಗೌಡರು ಪ್ರಯತ್ನಸುತ್ತಿದ್ದಾರೆ. ಬೆಸ್ತರುಮತ್ತು ಗಂಗಾಮತ ಸಮಾಜದವರನ್ನ ಎಸ್ ಟಿ ಸೇರಿಸ್ತೇವೆ ಎಂದು ತಿಳಿಸಿದರು.

ಬೆಸ್ತ ಸಮಾಜದ ಎಲ್ಲಾ ಮತಗಳನ್ನು ಜೆಡಿಎಸ್ ನಿಖಿಲ್ ಕುಮಾರಸ್ವಾಮಿಗೆ ಹಾಕಬೇಕು. ದೇವೇಗೌಡರು ಎಲ್ಲಾ ಸಮುದಾಯವನ್ನ ಮೇಲೆತ್ತಿದವ್ರು. ಒಕ್ಕಲಿಗ ಸಮಾಜದವ್ರು ಮನಸ್ಸು ಮಾಡಿದ್ರೆ ಎಲ್ಲಾ ಸಮುದಾಯದವರನ್ನ ಒಟ್ಟಿಗೆ ಸೇರಿಸಿ NDA ಅಭ್ಯರ್ಥಿಯನ್ನ ಗೆಲ್ಲಿಸ ಬೇಕೆಂದು ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ಅವರು ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+