ಟಿಪ್ಪು ವೇದಿಕೆಯಲ್ಲೇ ಅರೆ ನಗ್ನ ಚಿತ್ರ ವೀಕ್ಷಿಸಿದ ತನ್ವೀರ್

Posted By:
Subscribe to Oneindia Kannada

ರಾಯಚೂರು, ನವೆಂಬರ್ 10: ಟಿಪ್ಪು ಜಯಂತಿ ಆಚರಣೆ ವೇದಿಯಲ್ಲಿ ಕುಳಿತು ಪ್ರಾಥಮಿಕ ಶಿಕ್ಷಣ ಸಚಿವ, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ಅರೆ ನಗ್ನ ಚಿತ್ರ ವೀಕ್ಷಿಸುತ್ತಿದ್ದ ತುಣುಕು ಸುದ್ದಿವಾಹಿನಿಯಲ್ಲಿ ಸೆರೆ ಹಿಡಿದಿದ್ದಾರೆ.

ಬಿಜೆಪಿ ಕಾರ್ಯಕರ್ತರ ಹತ್ಯೆ ಪ್ರಕರಣಗಳು ಕಾಂಗ್ರೆಸ್‌ ಬೆನ್ನು ಹಿಡಿದಿರುವಾಗ ತನ್ವೀರ್ ಅರೆ ನಗ್ನ ಚಿತ್ರ ವೀಕ್ಷಣೆ ಮತ್ತೊಂದು ಭಾರಿ ತಲೆನೋವಾಗಿ ಪರಿಣಮಿಸಿದೆ.

ಗುರುವಾರ ಮಧ್ಯಾಹ್ನ ಟಿಪ್ಪು ಜಯಂತಿಗೆ ಸಂಬಂಧ ಪಟ್ಟಂತೆ ಉಪನ್ಯಾಸ ಕಾರ್ಯಕ್ರಮ ನಡೆಯುತ್ತಿದ್ದು ವೇದಿಕೆಯಲ್ಲಿ ಕುಳಿತು ತನ್ವೀರ್ ಸೇಠ್ ಅವರು ಅರೆ ನಗ್ನ ಚಿತ್ರವನ್ನು ವೀಕ್ಷಿಸುತ್ತಿದ್ದು, ಹಿಂದಿನಿಂದ ಸುದ್ದಿವಾಹಿನಿಯ ಕ್ಯಾಮೆರಾ ಪರ್ಸನ್ ನಗ್ನ ಚಿತ್ರ ವೀಕ್ಷಿಸುತ್ತಿರುವ ತನ್ವೀರ್ ಸೇಠ್ ಅವರನ್ನು ನೋಡಿದ್ದಾರೆ.[ವಿಡಿಯೋ ನೋಡಿದ್ದು ನಿಜ, ಅದರಲ್ಲಿ 'ಅಂಥದ್ದು' ಏನಿರಲಿಲ್ಲ!]

Tanveer sait have been accused of watching Semi-nude video

ಈ ಬಗ್ಗೆ ತನೀರ್ ಸೇಠ್ ಅವರನ್ನು ಕೇಳಿದಾಗ ಹಾಗೇನು ಆಗಿಲ್ಲ ನಾವು ಅದಕ್ಕೆಲ್ಲಾ ಪುರುಸೊತ್ತೇ ಇಲ್ಲ ಮನೆಬಿಟ್ಟು ಮೂರು ತಿಂಗಳಾಗಿದೆ ಎಂದು ಹೇಳಿದ್ದಾರೆ. ಆದರೆ ತುಣುಕು ವೀಕ್ಷಣೆಗೆ ಎಲ್ಲೆಡೆ ಆರೋಪಕ್ಕೆ ಕಾರಣವಾಗಿದೆ.

ಇನ್ನು ಇದರಿಂದ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡರು ರಾಜಿನಾಮೆ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಜಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ ಯುಡಿಯೂರಪ್ಪ, ಬಿಜೆಪಿಯ ಶೋಭಾ ಕರಂದ್ಲಾಜೆ ಅನೇಕರು ಒತ್ತಾಯಿಸಿದ್ದಾರೆ[ಹುಬ್ಬಳ್ಳಿಯಲ್ಲಿ ಟಿಪ್ಪು ಜಯಂತಿ: ಬಿಜೆಪಿಯಿಂದ ಕರಾಳ ದಿನಾಚರಣೆ]

ಇನ್ನು ಈ ಬಗ್ಗೆ ಸಿಎಂ ಪ್ರತಿಕ್ರಿಯಿಸಿದ್ದು ಹಾಗೆಲ್ಲಾ ರಾಜಿನಾಮೆ ಕೇಳಲಾಗುವುದಿಲ್ಲ ಸರಿಯಾದ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡರು ಪ್ರಕರಣವನ್ನು ತಳ್ಳಿಹಾಕಲು ಮುಂದಾಗಿದ್ದಾರೆ. ಕೆಲವೆಡೆ ಈ ಸಂಬಂಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿವೆ.

ಬಿಜೆಪಿ ಮುಖಂಡರು ಸದನದಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದರು ಎಂಬ ಕಾರಣಕ್ಕೆ ಕಾಂಗ್ರೆಸಿಗರು ಭಾರಿ ಪ್ರಮಾಣದ ಪ್ರತಿಭಟನೆಯನ್ನು ಮಾಡಿ ಕೆಲವರಿಗೆ ರಾಜಿನಾಮೆಯನ್ನು ಕೊಡಿಸಿದ್ದರು.

ಈಗ ಬಿಜೆಪಿ ಸರದಿಯಾಗಿದ್ದು ಬೇಡ ಎಂದರೂ ಟಿಪ್ಪು ಜಯಂತಿಯನ್ನು ಆಚರಿಸುತ್ತಿರುವ ಕಾಂಗ್ರೆಸ್‌ ಸರ್ಕಾರ ಅದೇ ಟಿಪ್ಪು ಜಯಂತಿಯಲ್ಲಿ ಸಚಿವನೊಬ್ಬ ಅರೆ ನಗ್ನ ಚಿತ್ರ ಗಳನ್ನು ವೀಕ್ಷಿಸುತ್ತಿರುವುದಕ್ಕೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಎಲ್ಲ ನಾಗರಿಕರ ಪ್ರಶ್ನೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tanveer sait have been accused of watching Semi-nude video on stage Tipu jayanti programe in Raichuru. Have replied i don't seen enybody of video in programe.
Please Wait while comments are loading...