ಭಿನ್ನಮತೀಯರ ಜೊತೆ ಮಾತುಕತೆ, ಬಾಗಿಲು ಮುಚ್ಚಿದ ಎಚ್ಡಿಕೆ

Posted By:
Subscribe to Oneindia Kannada

ಬೆಂಗಳೂರು, ಜೂನ್ 10 : ಜೆಡಿಎಸ್ ಪಕ್ಷದ ಭಿನ್ನಮತ ಅಂತಿಮ ಘಟಕ್ಕೆ ಬಂದು ತಲುಪಿರುವ ಸೂಚನೆ ಸಿಕ್ಕಿದೆ. 'ಭಿನ್ನಮತೀಯ ಶಾಸಕರ ಜೊತೆ ಮಾತುಕತೆ ನಡೆಸುವುದು ಮುಗಿದ ಅಧ್ಯಾಯ' ಎಂದು ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, 'ಮಾಗಡಿ ಶಾಸಕ ಬಾಲಕೃಷ್ಣ ಅವರು ತಮ್ಮ ಜೊತೆ ಮಾತಿನ ಚಕಮಕಿ ನಡೆಸಿಲ್ಲ. ಪಕ್ಷದ ನಾಯಕತ್ವದ ವಿರುದ್ಧವಾಗಿ ಮಾತನಾಡಿರುವ ಶಾಸಕರ ಜೊತೆ ಮಾತುಕತೆ ನಡೆಸುವುದು ಮುಗಿದ ಅಧ್ಯಾಯ' ಎಂದು ಸ್ಪಷ್ಪಪಡಿಸಿದರು. [ಶಾಸಕಾಂಗ ಸಭೆಗೆ ಭಿನ್ನಮತೀಯರು ಗೈರು]

kumaraswamy

'ಗುರುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಾಲಕೃಷ್ಣ ಮತ್ತು ತಮ್ಮ ನಡುವೆ ಮಾತಿನ ಚಕಮಕಿ ನಡೆದಿಲ್ಲ. ಅವರ ಜೊತೆ ನಡೆಸಿದ ಮಾತುಕತೆ ವಿಫಲವಾಗಿದೆ. ಸಭೆಯಲ್ಲಿ ಅವರು ತಮ್ಮ ಕಥೆ ಹೇಳಿಕೊಂಡಿದ್ದಾರೆ' ಎಂದರು. ['ಜಮೀರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ದಿನ ಹತ್ತಿರ ಬಂದಿದೆ']

'ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರದಲ್ಲಿ ಶಾಸಕರ ಸಲಹೆ ಪರಿಗಣಿಸಿಲ್ಲ ಎಂಬ ಆರೋಪ ಸರಿಯಲ್ಲ. ಎಲ್ಲಾ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಮೂರ್ನಾಲ್ಕು ಶಾಸಕರು ಕೈಗೆ ಸಿಗದೆ ಓಡಾಡಿಕೊಂಡಿದ್ದರು. ಅವರ ಅಭಿಪ್ರಾಯವನ್ನು ಕೇಳಿಲ್ಲ' ಎಂದು ಕುಮಾರಸ್ವಾಮಿ ಹೇಳಿದರು. [ದೇವೇಗೌಡರೇ ಹಾಸನ ಬಿಟ್ಟು ಕೊಡಿ ಅಂದ್ರು ಜಮೀರ್]

'ತಾವು ಮುಸ್ಲಿಂಮರ ಪರವಾಗಿದ್ದೇವೆ ಎಂದು ಎಚ್.ಡಿ.ದೇವೇಗೌಡರು ನಾಟಕವಾಡುತ್ತಿದ್ದಾರೆ. ಕುಮಾರಸ್ವಾಮಿ ಮತ್ತು ಬಿ.ಎಂ.ಫಾರೂಕ್ ಅವರ ನಡುವೆ ವ್ಯವಹಾರವಿದೆ. ಆದ್ದರಿಂದ, ಅವರಿಗೆ ಟಿಕೆಟ್ ನೀಡಲಾಗಿದೆ' ಎಂದು ಜಮೀರ್ ಅಹಮದ್ ಕಳೆದ ವಾರ ಆರೋಪಿಸಿದ್ದರು.

ಭಿನ್ನಮತೀಯರು ಯಾರು? : ಶಾಸಕರಾದ ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ), ಎನ್. ಚೆಲುವರಾಯಸ್ವಾಮಿ (ನಾಗಮಂಗಲ), ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ), ಇಕ್ಬಾಲ್‌ ಅನ್ಸಾರಿ (ಗಂಗಾವತಿ) ಅವರು ಜೆಡಿಎಸ್‌ ಪಕ್ಷದ ಭಿನ್ನಮತೀಯ ನಾಯಕರೆಂದು ಗುರುತಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಮಾಗಡಿ ಶಾಸಕ ಬಾಲಕೃಷ್ಣ ಅವರೂ ಇದ್ದರು. ಆದರೆ, ಗುರುವಾರ ನಡೆದ ಶಾಸಕಾಂಗ ಸಭೆಗೆ ಅವರು ಹಾಜರಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
JDS state president HD Kumaraswamy on Friday said, talk with rebel MLA's closed chapter. More than three leaders who openly challenged the party leadership.
Please Wait while comments are loading...