ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನಿಂದ ಮಾಧ್ಯಮಗಳ ಮೇಲೆ ದರ್ಪ?
ಬೆಂಗಳೂರು: ಕರ್ನಾಟಕದಲ್ಲಿ ಮೊದಲ ಬಾರಿಗೆ ಸಚಿವ ಸ್ಥಾನ ಪಡೆದ ಲಕ್ಷ್ಮೀ ಹೆಬ್ಬಾಳ್ಕರ್‌ರ ಸಹೋದರನ ಮಾತಿನಿಂದ ವಿಧಾನಸೌಧದಲ್ಲಿ ದೊಡ್ಡ ಕಿರಿಕ್ ನಡೆದು ಹೋಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಚೇರಿಯಲ್ಲಿ ಮಾಧ್ಯಮದ ಪ್ರತಿನಿಧಿಗಳ ಮೇಲೆ ದರ್ಪ ತೋರಿಸಿರುವ ಆರೋಪ ಕೇಳಿಬಂದಿದ್ದು, ಆ ಬಗ್ಗೆ ಮಾಹಿತಿ ಇಲ್ಲಿದೆ.
ಅಂದಹಾಗೆ ರಾಜ್ಯ ಸರ್ಕಾರದ ಮಹತ್ವದ ಗ್ಯಾರಂಟಿಗಳ ಪೈಕಿ ಒಂದಾದ 'ಗೃಹಲಕ್ಷ್ಮೀ'ಯ ಗೊಂದಲಗಳ ಬಗ್ಗೆ ಚರ್ಚಿಸಲು ಮಾಧ್ಯಮ ಸಿಬ್ಬಂದಿ ತೆರಳಿದ್ದರು. ಇದೇ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಚೇರಿಯಲ್ಲಿ ಅವರ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಚೆನ್ನರಾಜ್ ಹಟ್ಟಿಹೊಳಿ ಇದ್ದರು. ಆಗ ಮಾಧ್ಯಮ ಪ್ರತಿನಿಧಿಗಳು ಹಾಗೂ ಸಚಿವರ ಸಹೋದರನ ನಡುವೆ ಕಿರಿಕ್ ಆಗಿದೆ. ಆಗ ವಿಧಾನ ಪರಿಷತ್ ಸದಸ್ಯ ಚೆನ್ನರಾಜ್ ಹಟ್ಟಿಹೊಳಿ ಮಾಧ್ಯಮ ಪ್ರತಿನಿಧಿಗಳ ಮೇಲೆ ದರ್ಪ ತೋರಿರುವ ಆರೋಪ ಕೇಳಿಬಂದಿದೆ. ಅಲ್ಲದೆ ಈ ವಿಚಾರ ಈಗ ದೊಡ್ಡ ಸದ್ದು ಮಾಡುತ್ತಿದೆ. ಆ ಬಗ್ಗೆ ಸಂಪೂರ್ಣ ವರದಿ ಇಲ್ಲಿ ತಿಳಿಯಿರಿ.

ಸಚಿವರ ಸಹೋದರನ ಕಿರಿಕ್ ಏನು?
ಇನ್ನೊಂದು ಕಡೆ ಸಚಿವರ ಕಚೇರಿ ಒಳಗೆ ಹೋದ ಮಾಧ್ಯಮ ಪ್ರತಿನಿಧಿಗಳಿಗೆ, ಚೆನ್ನರಾಜ್ ಹಟ್ಟಿಹೊಳಿ ದರ್ಪದಿಂದ ಮಾತನಾಡಿದ್ದು ಅಲ್ದೆ. ಏನೂ ಉತ್ತರ ಕೊಡೋಕೆ ಆಗಲ್ಲ ನಡೀರಿ ಇಲ್ಲಿಂದ ಎಂದು ಆವಾಜ್ ಬೇರೆ ಹಾಕಿದ್ದಾರಂತೆ. ಅಂದಹಾಗೆ ಗ್ಯಾರಂಟಿ ಯೋಜನೆ ಕುರಿತಾಗಿ ಅನುಮಾನ ಬಗೆಹರಿಸಿಕೊಳ್ಳಲು ಮಾಧ್ಯಮ ಪ್ರತಿನಿಧಿಗಳು ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಕಚೇರಿಗೆ ತೆರಳಿದ್ದಾಗ ಘಟನೆ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಈ ಘಟನೆ ನಡೆಯುವಾಗ ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಥಳದಲ್ಲೇ ಇದ್ದರು ಎನ್ನಲಾಗಿದೆ.
ತಮ್ಮನ ಪರವಾಗಿ ಸಚಿವರ ಎಂಟ್ರಿ?
ಇಷ್ಟೆಲ್ಲದರ ನಡುವೆ ಸಂಧಾನ ಮಾಡಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯಪ್ರವೇಶ ಮಾಡಿ ಮಾತುಕತೆ ನಡೆಸಿದ್ದಾರೆ. ಆದ್ರೆ ಆಗಲೂ ತಮ್ಮ ಸಹೋದರನ ಪರವಾಗಿ ಮಾತನಾಡಿದ್ದಾರೆ ಅನ್ನೋ ಆರೋಪ ಕೂಡ ಮಾಧ್ಯಮ ಪ್ರತಿನಿಧಿಗಳಿಂದ ಕೇಳಿಬಂದಿದೆ. ಹೀಗಾಗಿ ಶಕ್ತಿಸೌಧ ವಿಧಾನಸೌಧದಲ್ಲಿ ನಡೆದಿರುವ ಘಟನೆ ಚರ್ಚೆಗೆ ಗ್ರಾಸವಾಗಿದೆ. ಮಾಧ್ಯಮ ಪ್ರತಿನಿಧಿಗಳು ಸಚಿವರ ಬಳಿ ಪ್ರಶ್ನೆ ಕೇಳಲು ಹೋದಾಗ ಸಂಬಂಧ ಇಲ್ಲದವರು ತಡೆದರೆ ಹೇಗೆ? ಅನ್ನೋ ಪ್ರಶ್ನೆಯನ್ನೂ ಸೋಷಿಯಲ್ ಮೀಡಿಯಾದಲ್ಲಿ ಕೇಳಲಾಗುತ್ತಿದೆ. ಇನ್ನೊಂದ್ಕಡೆ ಈ ಘಟನೆ ಬಗ್ಗೆ ಬಿಜೆಪಿ ಕೂಡ ರಿಯಾಕ್ಷನ್ ಕೊಟ್ಟಿದೆ.

ಕಾಂಗ್ರೆಸ್ ವಿರುದ್ಧ ರೊಚ್ಚಿಗೆದ್ದ ಬಿಜೆಪಿ!
ಮಹಿಳಾ & ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಚೇರಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಮೇಲೆ ದರ್ಪ ತೋರಿಸಿರುವ ಆರೋಪ ಕೇಳಿಬಂದ ಹಿನ್ನೆಲೆ ಬಿಜೆಪಿ ಪ್ರತಿಕ್ರಿಯೆ ನೀಡಿದೆ. ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ಬಿಜೆಪಿ ಹರಿಹಾಯ್ದಿದೆ, 'ಕಾಂಗ್ರೆಸ್‌ನ ಸಂಸ್ಕಾರವೇ ಇಷ್ಟು ಎಂಬುದು ಮತ್ತೆ ಸಾಬೀತಾಗಿದೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ PMOವನ್ನು ರಾಬರ್ಟ್ ವಾದ್ರಾ ಅವರಿಗೆ ಸಮರ್ಪಿಸಿದ್ದರು. ಈಗ ಸಚಿವೆ @laxmi_hebbalkar ಕಛೇರಿ ಸಹೋದರ ಚೆನ್ನರಾಜ್ ಹಟ್ಟಿಹೊಳಿಗೆ! ವಾಸ್ತವವಾಗಿ, ಮತ ನೀಡಿದ ಜನರನ್ನು ವಂಚಿಸಿ ಭ್ರಷ್ಟಾಚಾರವನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸುವ ಫಾರ್ಮುಲಾವಿದು' ಎಂದು ಆರೋಪ ಮಾಡಿದೆ ರಾಜ್ಯ ಬಿಜೆಪಿ.
ಕಾಂಗ್ರೆಸ್‌ನ ಸಂಸ್ಕಾರವೇ ಇಷ್ಟು ಎಂಬುದು ಮತ್ತೆ ಸಾಬೀತಾಗಿದೆ.
— BJP Karnataka (@BJP4Karnataka) June 9, 2023
ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ PMOವನ್ನು ರಾಬರ್ಟ್ ವಾದ್ರಾ ಅವರಿಗೆ ಸಮರ್ಪಿಸಿದ್ದರು.
ಈಗ ಸಚಿವೆ @laxmi_hebbalkar ಕಛೇರಿ ಸಹೋದರ ಚೆನ್ನರಾಜ್ ಹಟ್ಟಿಹೊಳಿಗೆ!
ವಾಸ್ತವವಾಗಿ, ಮತ ನೀಡಿದ ಜನರನ್ನು ವಂಚಿಸಿ ಭ್ರಷ್ಟಾಚಾರವನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸುವ… pic.twitter.com/fwvZ9HpvPP
ಒಟ್ನಲ್ಲಿ ಸಚಿವರ ಕಚೇರಿಯಲ್ಲಿ ನಡೆದಿರುವ ಘಟನೆ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಈ ನಡುವೆ ಸಚಿವರ ಬಳಿ ಪ್ರಶ್ನೆ ಮಾಡಿದ್ದೇ ತಪ್ಪಾ? ಸಚಿವರನ್ನ ಪ್ರಶ್ನಿಸಿದ್ರೆ ಅವರ ಸಹೋದರ ಉತ್ತರ ಕೊಡೋದು ಯಾಕೆ? ಎಂದು ಅಲ್ಲೇ ಖಡಕ್ ಆಗಿ ಪ್ರಶ್ನೆ ಕೇಳಿದ್ದಾರೆ ಮಾಧ್ಯಮಗಳ ಪ್ರತಿನಿಧಿಗಳು. ಆದರೆ ಸಚಿವೆ ಮಾತ್ರ ಈ ಕಿರಿಕ್‌ಗೆ ತೇಪೆ ಹಾಕುವ ಕೆಲಸ ಮಾಡಿದ್ದಾರಷ್ಟೇ ಅನ್ನೋ ಆರೋಪವೂ ಕೇಳಿಬಂದಿದೆ. ಈ ಕಿರಿಕಿರಿ ಇಲ್ಲೇ ನಿಲ್ಲುತ್ತಾ? ಇನ್ನಾದರೂ ಸಚಿವರ ಸಹೋದರ ತಮ್ಮ ವ್ಯಾಪ್ತಿಯಲ್ಲಿ ಮಾತ್ರ ಕೆಲಸ ಮಾಡುತ್ತಾರಾ? ಕಾದು ನೋಡಬೇಕು.












Click it and Unblock the Notifications