ತಲಕಾವೇರಿ ವನ್ಯಜೀವಿ ಧಾಮ ಪರಿಸರ ಸೂಕ್ಷ್ಮ ಪ್ರದೇಶ: ಕೇಂದ್ರ ಘೋಷಣೆ

ನವದೆಹಲಿ, ಜೂನ್ 7: ಕೇಂದ್ರ ಸರಕಾರವು ತಲಕಾವೇರಿ ವನ್ಯಜೀವಿ ಧಾಮದ ಘೋಷಣೆ ಮಾಡಿದೆ. ಇನ್ನೂರಾ ಹದಿಮೂರು ಚದರ ಕಿಲೋಮೀಟರ್ ಈ ವ್ಯಾಪ್ತಿಯಲ್ಲಿ ಬರುತ್ತದೆ. ಮತ್ತು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲಾಗಿದೆ.

ಈ ಘೋಷಣೆಯಿಂದ ಭಾಗಮಂಡಲದಿಂದ ಕೇರಳದ ಪಣತ್ತೂರಿನವರೆಗಿನ ಕೇಂದ್ರ ಸರಕಾರದ ಹೆದ್ದಾರಿ ಯೋಜನೆಗೆ ತಡೆಯಾಗಲಿದೆ. ಪಶ್ಚಿಮ ಘಟ್ಟಗಳಲ್ಲಿನ ಪರಿಸರ ಸೂಕ್ಷ್ಮ ಪ್ರದೇಶಗಳ ಪ್ರಸ್ತಾವನೆಗೆ ಸಂಬಂಧಿಸಿದಂತೆ ಪರಿಸರ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.[ಮೈಸೂರು: ಕೆಆರ್ ಎಸ್ ನವೀಕರಣಕ್ಕೆ ಉತ್ಕೃಷ್ಟ ಪುನಶ್ಚೇತನ ಪ್ರಶಸ್ತಿ]

Talacauvery Sanctuary Declared an Eco-Sensitive Zone

ತಲಕಾವೇರಿ ವನ್ಯಜೀವಿ ಧಾಮ ಪಶ್ಚಿಮ ಘಟ್ಟದ ತುಂಬ ಪ್ರಮುಖವಾದ ಭಾಗ. ಈ ಧಾಮದ ಶೇ ಎಂಬತ್ತರೈದರಷ್ಟು ಒರಟಾದ ಭೂ ಭಾಗ ಹಾಗೂ ಶೇ ಮೂವತ್ತೈದರಷ್ಟು ತುಂಬ ಆಳವಾದ ಇಳಿಜಾರುಗಳಿವೆ. ವಾರ್ಷಿಕ ಆರರಿಂದ ಏಳು ಸಾವಿರ ಮಿಮೀ ಮಳೆಯಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಈ ಪ್ರದೇಶದಲ್ಲಿ ಶ್ರೀಮಂತವಾದ ಜೀವ ವೈವಿಧ್ಯವಿದೆ. ಹುಲಿ, ಏಷ್ಯಾದ ಆನೆ, ಕಾಟಿ ಸೇರಿದಂತೆ ಅನೇಕ ಅಳಿವಿನಂಚಿನ ಪ್ರಾಣಿ-ಪಕ್ಷಗಳ ಆವಾಸ ಸ್ಥಾನವಾಗಿದೆ. ಈ ವನ್ಯಜೀವಿ ಧಾಮದ ಸುತ್ತ ಅನೇಕ ರಕ್ಷಿತಾರಣ್ಯ ಕೂಡ ಇವೆ. ಅಧಿಸೂಚನೆ ಪ್ರಕಾರ ವನ್ಯಜೀವಿ ಧಾಮದ ಒಂದರಿಂದ ಹದಿನಾರು ಕಿಮೀ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದೆ.[ರಾತ್ರಿ 10 ಗಂಟೆ ಮೇಲೆ ಚಾಮುಂಡಿ ಬೆಟ್ಟಕ್ಕೆ ಕಾಲಿಟ್ಟರೆ ಕೇಸ್!]

ಆದ್ದರಿಂದ ಗಣಿಗಾರಿಕೆ ಸೇರಿದಂತೆ ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳುವಂತಿಲ್ಲ. ಯಾವುದೇ ಕಾರ್ಖಾನೆ ಸ್ಥಾಪಿಸುವಂತಿಲ್ಲ. ಈ ಬಗ್ಗೆ ಸ್ಟಾರ್ ಆಫ್ ಮೈಸೂರ್ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+