ಬೆಂಗಳೂರು ಮಾರ್ಗದ ರೈಲುಗಳ ಸಂಚಾರದಲ್ಲಿ ಬದಲಾವಣೆ, ರೈಲು ನಿಲುಗಡೆ 6 ತಿಂಗಳು ವಿಸ್ತರಣೆ, ಪಟ್ಟಿ ಇಲ್ಲಿದೆ
ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ-ಸೋಲಾಪುರ- ಹುಬ್ಬಳ್ಳಿ ದೈನಂದಿನ ಪ್ಯಾಸೆಂಜರ್ ರೈಲಿನ ನಿಲುಗಡೆ ವಿಸ್ತರಣೆ ಜೊತೆಗೆ ಪ್ರಮುಖ ಕಾಮಗಾರಿ ಕಾರಣಕ್ಕೆ ವಿವಿಧ ರೈಲುಗಳ ಸಂಚಾರ ನಿಯಂತ್ರಿಸಲಾಗುತ್ತದೆ. ಮಾರ್ಗ ಮಧ್ಯ ರೈಲುಗಳ ನಿಯಂತ್ರಣ ಮತ್ತು ಸಂಚಾರ ವಿಳಂಬ ಕುರಿತು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ. ಈ ಬದಲಾವಣೆ ಗಮನಿಸಿ ಪ್ರಯಾಣಿಕರು ಪ್ರಯಾಣ ಪ್ಲ್ಯಾನ್ ಮಾಡಿಕೊಳ್ಳಬೇಕಿದೆ.
ಲಚ್ಯಾಣ ಮತ್ತು ತಡವಾಳ ನಿಲ್ದಾಣಗಳ ಮಧ್ಯೆ ಇರುವ ಪಡನೂರ ಹಾಲ್ಟ್ ನಿಲ್ದಾಣದಲ್ಲಿ ಎಸ್ಎಸ್ಎಸ್ ಹುಬ್ಬಳ್ಳಿ-ಸೋಲಾಪುರ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ರೈಲುಗಳ (56906/56905) ನಿಲುಗಡೆಯನ್ನು ಜೂನ್ 1 ರಿಂದ ಜಾರಿಗೆ ಬರುವಂತೆ ಮುಂದಿನ ಕಾಲ (ನವೆಂಬರ್ 30ರವರೆಗೆ) ಆರು ತಿಂಗಳವರೆಗೆ ನಿಲುಗಡೆ ಅವಧಿ ವಿಸ್ತರಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ನಿಯಂತ್ರಣ, ಮರು ವೇಳಾಪಟ್ಟಿ ಮತ್ತು ಮಾರ್ಗ ಬದಲಾವಣೆ ಆಗಿದೆ. ಚನ್ನಸಂದ್ರ ಮತ್ತು ಯಲಹಂಕ ನಿಲ್ದಾಣಗಳ ನಡುವಿನ ರಾಜಕಾಲುವೆ ಸೇತುವೆ ಸಂಖ್ಯೆ 537/ಎ ನಲ್ಲಿ ಎರಡು ವೆಂಟ್ಗಳ ಆರ್ಸಿಸಿ ಬಾಕ್ಸ್ಗಳನ್ನು ಅಳವಡಿಸುವ ಎಂಜಿನಿಯರಿಂಗ್ ಕಾಮಗಾರಿಗಳು ನಡೆಯಲಿವೆ. ಹೀಗಾಗಿ ಈ ಕೆಳಗಿನ ರೈಲು ಸೇವೆಗಳಲ್ಲಿ ಒಂದಷ್ಟು ಬದಲಾವಣೆ ಆಗಿದ್ದು, ಪ್ರಯಾಣಿಕರು ಗಮನಿಸುವಂತೆ ಕೋರಲಾಗಿದೆ.
ಸಂಚಾರ ವಿಳಂಬಗೊಳ್ಳುವ ರೈಳುಗಳ ಪಟ್ಟಿ
* ನಾಂದೇಡ್ ರೈಲು ನಿಲ್ದಾಣದಿಂದ ಮೇ 28 ರಂದು ಹೊರಡುವ ನಾಂದೇಡ್-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್ಪ್ರೆಸ್ ರೈಲನ್ನು (16594) ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ. ಹೀಗಾಗಿ ಇದರ ಸಂಚಾರ ನಿಗದಿತ ಅವಧಿಗಿಂತ ತಡವಾಗಿ ಗಮ್ಯಸ್ಥಾನ ತಲುಪಲಿದೆ.
* ಸಿಎಸ್ಎಂಟಿ ಮುಂಬೈನಿಂದ ಮೇ 28ರಂದು ಹೊರಡುವ ಸಿಎಸ್ಎಂಟಿ ಮುಂಬೈ-ಕೆಎಸ್ಆರ್ ಬೆಂಗಳೂರು ಡೈಲಿ ಉದ್ಯಾನ್ ಎಕ್ಸ್ಪ್ರೆಸ್ ರೈಲು (11301) ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
* ಕೆಎಸ್ಆರ್ ಬೆಂಗಳೂರು-ನಾಂದೇಡ್ ಡೈಲಿ ಎಕ್ಸ್ಪ್ರೆಸ್ ರೈಲು (16593) ಮೇ 28 ರಂದು ಹೊರಡಲಿಕದ್ದು, ಇದು ತನ್ನ ಮೂಲ ನಿಲ್ದಾಣದಿಂದ 45 ನಿಮಿಷ ತಡವಾಗಿ ಪ್ರಯಾಣ ಆರಂಭಿಸಲಿದೆ. ಜೊತೆಗೆ ರೈಲು ಕೆಎಸ್ಆರ್ ಬೆಂಗಳೂರು ನಿಲ್ದಾಣದಲ್ಲಿ ಗ್ರಿಡ್ ಬದಲಾವಣೆಯ ಕಾರಣದಿಂದಾಗಿ ಕೆಎಸ್ಆರ್ ಬೆಂಗಳೂರು, ಯಶವಂತಪುರ, ಯಲಹಂಕ ಮಾರ್ಗವಾಗಿ ಸಂಚರಿಸಲಿದೆ. ಈ ವೇಳೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದ ನಿಲುಗಡೆ ಕೈ ಬಿಡಲಾಗಿದೆ.
ರೈಲುಗಳ ತಾತ್ಕಾಲಿಕ ಮರುವೇಳಾಪಟ್ಟಿ, ನಿಯಂತ್ರಣ
* ನಾರಾಯಣಗಢ-ಭದ್ರಕ್ 3ನೇ ರೈಲು ಮಾರ್ಗ ಕಾಮಗಾರಿ ನಡೆಯುತ್ತಿದ್ದು, ರೂಪ್ಸಾ ಯಾರ್ಡ್ನಲ್ಲಿ ನವಿಕರಣ ಕೆಲಸದ ಮುಂದುವರಿಸಲಾಗಿದೆ. ಹೀಗಾಗಿ ದಕ್ಷಿಣ ಪೂರ್ವ ರೈಲ್ವೆಯು ಈ ಕೆಳಗಿನ ರೈಲುಗಳ ತಾತ್ಕಾಲಿಕ ಮರುವೇಳಾಪಟ್ಟಿ ಪ್ರಕಟಿಸಿದ್ದು, ನಿಯಂತ್ರಣ ಸಹ ಮಾಡಲಾಗುತ್ತದೆ.
* ಮುಂದಿನ ತಿಂಗಳ ಜೂನ್ 06 ಹೊರಡುವ ಹೌರಾ-ಎಸ್ಎಂವಿಟಿ ಬೆಂಗಳೂರು ಡುರಂಟೊ ಎಕ್ಸ್ಪ್ರೆಸ್ ರೈಲು (12245) ತನ್ನ ಪ್ರಾರಂಭ ನಿಲ್ದಾಣದಿಂದ 60 ನಿಮಿಷ ತಡವಾಗಿ ಸಂಚಾರ ಶುರು ಮಾಡಲಿದೆ. ಜೂನ್ 07 ರಂದು ಅದೇ ದಿಕ್ಕಿನಲ್ಲಿ ಮರಳುವಾಗ ಹೌರಾ ರೈಲು ನಿಲ್ದಾಣದಿಂದ ಬರೋಬ್ಬರಿ ಎರಡು ಗಂಟೆ (120 ನಿಮಿಷ) ತಡವಾಗಿ ಸಂಚಾರ ಪ್ರಾರಂಭಿಸಲಿದೆ.
* ಎಸ್ಎಂವಿಟಿ ಬೆಂಗಳೂರು-ಹೌರಾ ಡುರಂಟೊ ಎಕ್ಸ್ಪ್ರೆಸ್ ರೈಲು (12246) ಜೂನ್ 05 ಮಾರ್ಗ ಮಧ್ಯೆ 120 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ. ಅದೇ ರೀತಿ ಜೂನ್ 06 ರಂದು ಹೊರಡುವ ಎಸ್ಎಂವಿಟಿ ಬೆಂಗಳೂರು-ಕಾಮಕ್ಯ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು (12551) ಮಾರ್ಗ ಮಧ್ಯೆ 180 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.













Click it and Unblock the Notifications