SWR: ರೈಲುಗಳ ಮಾರ್ಗ ಬದಲಾವಣೆ

ಬೆಂಗಳೂರು, ಡಿಸೆಂಬರ್ 20: ಕ್ರಿಸ್‌ಮಸ್ ಹಾಗೂ ಹೊಸ ವರ್ಷಕ್ಕೆ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ವಿಶೇಷ ರೈಲು ಸೇವೆ ನೀಡಲಾಗಿದೆ. ಮತ್ತೊಂದೆಡೆ ಟ್ರ್ಯಾಕ್ ವರ್ಕ್‌ ಹಿನ್ನೆಲೆಯಲ್ಲಿ ಕೆಲವು ರೈಲುಗಳು ಮಾರ್ಗ ಬದಲಾಗಿದೆ. ಯಶವಂತಪುರದಿಂದ ಹೊರಡುವ ವೀಕ್ಲಿ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ಮಾರ್ಗ ಬದಲಾಗಿದ್ದು, ಪ್ರಯಾಣಿಕರು ಗಮನಿಸಬೇಕು ಎಂದು ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರ ಮಂಜುನಾಥ್ ಕನಮಡಿ ಅವರು ಮಾಹಿತಿ ನೀಡಿದ್ದಾರೆ.

ಗುಂಟೂರು-ಗುಂತಕಲ್ ವಿಭಾಗದಲ್ಲಿ ಡಬ್ಲಿಂಗ್ ಕಾಮಗಾರಿ ಕೈಗೊಳ್ಳಲಾಗಿದೆ. ಗುಂತಕಲ್ ವಿಭಾಗದ ಗುಂಟೂರು-ಗುಂತಕಲ್ ವಿಭಾಗದ ಬುಗ್ಗನಪಲ್ಲಿ ಸಿಮೆಂಟ್ ನಗರ ಮತ್ತು ಪಾಣ್ಯಂ ನಿಲ್ದಾಣಗಳ ನಡುವೆ ಡಬ್ಲಿಂಗ್ ಕಾಮಗಾರಿ ನಡೆಯುತ್ತಿದೆ. ಈ ಕಾರಣಗಳಿಂದ ವಿವಿಧ ರೈಲುಗಳ ಮಾರ್ಗ ಬದಲಾವಣೆಗೊಂಡಿವೆ.

SWR Few Trains Diversion due Doubling Work in Guntur to Guntakal Junction See List

ಬದಲಾವಣೆಗೊಂಡ ಮಾರ್ಗಗಳು

* ಪುರಿ-ಯಶವಂತಪುರ ಸಾಪ್ತಾಹಿಕ ಗರೀಬ್ ರಥ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 22883) ಇದೇ ಡಿಸೆಂಬರ್ 20ರಂದು ಸಂಚಾರ ಆರಂಭಿಸಲಿದೆ. ನಂದ್ಯಾಲ್, ಯರ್ರಗುಂಟ್ಲಾ, ಗೂಟಿ ಫೋರ್ಟ್ ಮತ್ತು ಅನಂತಪುರ ನಿಲ್ದಾಣಗಳ ಮೂಲಕ ಚಲಿಸುವಂತೆ ಮಾರ್ಗ ಬದಲಾಯಿಲಸಲಾಗಿದೆ.

* ಯಶವಂತಪುರ-ಪುರಿ ಸಾಪ್ತಾಹಿಕ ಗರೀಬ್ರತ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 22884) 2024ರ ಡಿಸೆಂಬರ್ 21 ರಂದು ಪ್ರಾರಂಭವಾಗುವ ಪ್ರಯಾಣವನ್ನು ಅನಂತಪುರ, ಗೂಟಿ ಫೋರ್ಟ್ ಯರ್ರಗುಂಟ್ಲಾ ಮತ್ತು ನಂದ್ಯಾಲ್ ನಿಲ್ದಾಣಗಳ ಮೂಲಕ ಕಾರ್ಯಾಚರಣೆ ಮಾಡಲಾಗುತ್ತದೆ. ರೈಲು ಧೋನೆಯಲ್ಲಿ ನಿಯಮಿತ ನಿಲುಗಡೆ ಇರುವುದಿಲ್ಲ.

* ಹೌರಾ-ಯಶವಂತಪುರ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 22831) 2024 ಡಿಸೆಂಬರ್ 25 ರಂದು ಪ್ರಾರಂಭವಾಗುವ ಪ್ರಯಾಣ ನಂದ್ಯಾಲ್, ಯರ್ರಗುಂಟ್ಲಾ, ಗೂಟಿ ಫೋರ್ಟ್ ಮತ್ತು ಅನಂತಪುರ ನಿಲ್ದಾಣಗಳ ಮೂಲಕ ಚಲಿಸುವಂತೆ ತಿರುಗಿಸಲಾಗುತ್ತದೆ. ರೈಲು ಧೋನೆ ಮತ್ತು ಗೂಟಿಯಲ್ಲಿ ಅದರ ನಿಯಮಿತ ನಿಲುಗಡೆ ಕೊಡಲಾಗುವುದಿಲ್ಲ.

* ಯಶವಂತಪುರ-ಹೌರಾ ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 22832) 2024 ಡಿಸೆಂಬರ್ 20 ರಂದು ಪ್ರಾರಂಭವಾಗುವ ಪ್ರಯಾಣವು ಅನಂತಪುರ, ಗೂಟಿ, ಯರ್ರಗುಂಟ್ಲಾ ಮತ್ತು ನಂದ್ಯಾಲ್ ನಿಲ್ದಾಣಗಳ ಮೂಲಕ ಹಾದು ಹೋಗಲಿದೆ. ರೈಲು ಗೂಟಿ ಮತ್ತು ಧೋನೆಯಲ್ಲಿ ನಿಲುಗಡೆ ನೀಡುವುದಿಲ್ಲ.

* ಭುವನೇಶ್ವರ-ಯಶವಂತಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 02811) 2024 ಡಿಸೆಂಬರ್ 21ರಂದು ಸಂಚಾರ ಆರಂಭಿಸಿ, ನಂದ್ಯಾಲ್, ಯರ್ರಗುಂಟ್ಲಾ, ಗೂಟಿ ಫೋರ್ಟ್ ಹಾಗೂ ಧರ್ಮಾವರಂ ನಿಲ್ದಾಣಗಳ ಮೂಲಕ ಚಲಿಸುತ್ತದೆ. ರೈಲು ಧೋನೆಯಲ್ಲಿ ನಿಲ್ಲುಗಡೆ ನೀಡದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

* ಯಶವಂತಪುರ- ಭುವನೇಶ್ವರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 02812) 2024 ಡಿಸೆಂಬರ್ 23 ರಂದು ಸಂಚಾರಿ ಶುರುಮಾಡಿ, ಧರ್ಮಾವರಂ, ಗೂಟಿ ಕೋಟೆ, ಯರ್ರಗುಂಟ್ಲಾ ಮತ್ತು ನಂದ್ಯಾಲ್ ನಿಲ್ದಾಣಗಳ ಮೂಲಕ ಸಾಗುತ್ತದೆ. ಈ ರೈಲು ಸಹ ಧೋನೆ ನಿಲ್ದಾಣದಲ್ಲಿ ನಿಲುಗಡೆ ಹೊಂದಿರುವುದಿಲ್ಲ ಎಂದು ನೈಋತ್ಯ ರೈಲ್ವೆ ವಲಯವು ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+