ಚೇರ್‌ಕಾರ್ ಪ್ರಯಾಣ ಉತ್ತೇಜನಕ್ಕೆ ನೈಋತ್ಯ ರೈಲ್ವೆ ಕ್ರಮ: ದರವೂ ಕಡಿತ
ಬೆಂಗಳೂರು, ಆಗಸ್ಟ್ 11: ನೈಋತ್ಯ ರೈಲ್ವೆಯು ಚೇರ್‌ಕಾರ್ ಪ್ರಯಾಣಕ್ಕೆ ಹೆಚ್ಚು ಉತ್ತೇಜನ ನೀಡುವ ದೃಷ್ಟಿಯಿಂದ ಎಸಿ-3 ಟಯರ್‌ನಿಂದ ಎಸಿ ಚೇರ್ ಕಾರ್‌ಗಳಾಗಿ ಪರಿವರ್ತಿಸಿ ಪಿಆರ್‌ಎಸ್ ದರ ಕಡಿಮೆ ಗೊಳಿಸಲು ನಿರ್ಧರಿಸಿದೆ.
ಹೆಚ್ಚೆಚ್ಚು ಪ್ರಯಾಣಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಎಸಿ-3 ಟಯರ್‌ನಿಂದ ಎಸಿ ಚೇರ್ ಕಾರ್‌ಗಳಾಗಿ ಪರವರ್ತಿಸಿ ಪಿಆರ್‌ಎಸ್ ದರ ಕಡಿತಗೊಳಿಸಲು ಇಲಾಖೆ ನಿರ್ಧರಿಸಿದೆ. ಹುಬ್ಬಳ್ಳಿ-ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್ ರೈಲಿನ ಸಂಖ್ಯೆ 165440 ಎರಡು ಬೋಗಿಗಳನ್ನು 3 ಎಸಿ ಯಿಂದ ಎಸಿ ಚೇರ್ ಕಾರ್‌ಗಳಾಗಿ ಬದಲಾಯಿಸಲಾಗಿದೆ.
ಅಲ್ಲದೆ, ಪ್ರಯಾಣ ದರವನ್ನು ಆ.4ರಿಂದ 735 ರೂ,ನಿಂದ 590 ರೂ.ಗೆ ಇಳಿಸಿದೆ. ಅದರಂತೆ ಗದಗ-ಸೊಲ್ಲಾಪುರ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್ ಎಕ್ಸ್‌ಪ್ರೆಸ್ ರೈಲಿನ ಸಂಖ್ಯೆ 11140 ಒಂದು ಬೋಗಿಯನ್ನು ಎಸಿ ಕಾರ್‌ಚೇರ್ ಆಗಿ ಬದಲಿಸಿ, ಪ್ರಯಾಣದರವನ್ನು 495ರಿಂದ 435ರೂ.ಗೆ ಇಳಿಸಿದೆ. ಅದು ಆಗಸ್ಟ್ 28ರಿಂದ ಜಾರಿಗೆ ಬರಲಿದೆ.

ಮೈಸೂರು-ಬೆಂಗಳೂರು ನಡುವಿನ ಮೈಸೂರು-ಸಾಯಿನಗರ ಶಿರಡಿ ವೀಕ್ಲಿ ಎಕ್ಸ್‌ಪ್ರೆಸ್ ರೈಲಿನ ಸಂಖ್ಯೆ 16217 ಒಂದು ಬೋಗಿಯನ್ನು ಎಸಿ ಚೇರ್‌ಕಾರ್‌ಗೆ ಬದಲಿಸಿ ಪ್ರಯಾಣದರವನ್ನು 495ರಿಂದ 260 ರೂಗಳಿಗೆ ಇಳಿಸಿದೆ. ಅದು ಡಿಸೆಂಬರ್ 3ರಿಂದ ಅನುಷ್ಠಾನಕ್ಕೆ ಬರಲಿದೆ.
ಯಶವಂತಪುರ-ಹಬ್ಬಳ್ಳಿ ಬಿಕಾನೇರ್ ಎಕ್ಸ್‌ಪ್ರೆಸ್‌ನ ಸಂಖ್ಯೆ 16587 ಒಂದು ಬೋಗಿಯನ್ನು ಬದಲಾಯಿಸಿ ದರವನ್ನು 735ರಿಂದ 590ರೂ.ಗೆ ಇಳಿಸಿದೆ. ಅದು ನವೆಂಬರ್ 30ರಿಂದ ಪ್ರಾರಂಭಗೊಳ್ಳಲಿದೆ. ಯಶವಂತಪುರ-ಧರ್ಮಾವರಂ ಸಿಕಂದರಾಬಾದ್ ಎಕ್ಸ್‌ಪ್ರೆಸ್‌ನ ಸಂಖ್ಯೆ 12736 ಒಂದು ಬೋಗಿಯನ್ನು ಬದಲಿಸಿ 345ರಿಂದ 305ಕ್ಕೆ ಸರ ಇಳಿಸಲಾಗಿದ್ದು ನವೆಂಬರ್ 22ರಿಂದ ಚಾಲನೆಗೆ ಬರಲಿದೆ.












Click it and Unblock the Notifications