ಶೃಂಗೇರಿ : ಶಾರದಾ ದೇಗುಲ ಸ್ವರ್ಣ ಗೋಪುರಕ್ಕೆ ಕುಂಭಾಭಿಷೇಕ

Posted By:
Subscribe to Oneindia Kannada

ಚಿಕ್ಕಮಗಳೂರು, ಫೆಬ್ರವರಿ 02: ದಕ್ಷಿಣಾಮ್ನಯ ಶ್ರೀಶಾರದಾ ಪೀಠ ಶೃಂಗೇರಿಯ ಜಗದ್ಗುರು ಭಾರತೀತೀರ್ಥ ಸ್ವಾಮೀಜಿಗಳು ಹಾಗೂ ವಿಧುಶೇಖರ ಭಾರತಿ ಸ್ವಾಮಿಜಿಗಳು ಬುಧವಾರದಂದು ಶಾರದಾ ದೇಗುಲದ ಸ್ವರ್ಣ ಗೋಪುರ ಕುಂಭಾಭಿಷೇಕ ಕಾರ್ಯವನ್ನು ನೆರವೇರಿಸಿದರು.

17 ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಾಗಿದೆ ಎಂದು ಶ್ರೀಮಠದ ಆಡಳಿತಾಧಿಕಾರಿ ವಿ.ಆರ್ ಗೌರಿ ಶಂಕರ್ ಹೇಳಿದ್ದಾರೆ.[ಶೃಂಗೇರಿ : ರಾಜಗೋಪುರ ಕುಂಭಾಭಿಷೇಕ]

ಹೆಚ್ಚಿನ ಮಾಹಿತಿ ಹಾಗೂ ಕಾರ್ಯಕ್ರಮ ನೇರ ಪ್ರಸಾರ ಹೆಚ್ಚಿನ ಮಾಹಿತಿಯನ್ನು
ಶ್ರೀಶಾರದಾಪೀಠ, ಶೃಂಗೇರಿ, ಚಿಕ್ಕಮಗಳೂರು ಜಿಲ್ಲೆ - 577 139
ದೂರವಾಣಿ : 08265- 250123, 250192
ವೆಬ್ : www.sringeri.net
ಶ್ರೀ ಶಂಕರ ಟಿವಿಯಲ್ಲಿ ಪ್ರತಿದಿನ ಸಂಜೆ ಶೃಂಗೇರಿ ಕಾರ್ಯಕ್ರಮ ನೇರ ಪ್ರಸಾರವಿರುತ್ತದೆ.

17 ದಿನಗಳ ಸಂಸ್ಕೃತಿ ಕಾರ್ಯಕ್ರಮ

17 ದಿನಗಳ ಸಂಸ್ಕೃತಿ ಕಾರ್ಯಕ್ರಮ

ಜನವರಿ 28ರಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ದೇಶದ ಹಲವೆಡೆಗಳಿಂದ ಭಕ್ತಾದಿಗಳು ಆಗಮಿಸಿದ್ದಾರೆ.

ಸ್ವರ್ಣ ಗೋಫುರ ಕುಂಭಾಭಿಶೇಕ

ಸ್ವರ್ಣ ಗೋಫುರ ಕುಂಭಾಭಿಶೇಕ

ಸ್ವರ್ಣ ಗೋಫುರ ಕುಂಭಾಭಿಶೇಕ ಕಾರ್ಯಕ್ರಮ ಬ್ರಾಹ್ಮಿ ಮುಹೂರ್ತದಲ್ಲಿ ಆರಂಭವಾಯಿತು. ಮೊದಲಿಗೆ ಮಾತೆ ಶಾರದೆಗೆ ಅಭಿಶೇಕ, ಅಲಂಕಾರಗಳನ್ನು ನೆರವೇರಿಸಲಾಯಿತು. ನಂತರ ಇಬ್ಬರು ಯತಿವರ್ಯರು ಚಿನ್ನದ ಗೋಪುರಕ್ಕೆ ಕುಂಭಾಭಿಶೇಕ ನೆರವೇರಿಸಿದರು.

ಪವಿತ್ರ ಜಲ ಬಳಕೆ

ಪವಿತ್ರ ಜಲ ಬಳಕೆ

ಗಂಗೆ, ತುಂಗೆ, ನರ್ಮದಾ, ಗೋದಾವರಿ, ಕಾವೇರಿ ಹಾಗೂ ಕೃಷ್ಣಾ ನದಿಯ ಪವಿತ್ರ ಜಲವನ್ನು ಬಳಕೆ ಮಾಡಿಕೊಂಡು ಕುಂಭಾಭಿಶೇಕ ನಡೆಸಲಾಗಿದೆ ಎಂದು ಶಾರಾದಾ ಪೀಠ ಹೇಳಿದೆ.

ಲೋಕ ಕಲ್ಯಾಣಾರ್ಥ

ಲೋಕ ಕಲ್ಯಾಣಾರ್ಥ

ಶ್ರೀಮಠದ ವ್ಯವಸ್ಥಾಪಕರಾದ ಗೌರಿಶಂಕರ್ ಅವರು ಲೋಕ ಕಲ್ಯಾಣಾರ್ಥವಾಗಿ ಸಂಕಲ್ಪ ಕೈಗೊಂಡಿರುವ ಲಕ್ಷ ಮೋದಕ ಗಣಪತಿ ಹೋಮ ಭಾನುವಾರ ನಡೆಯಲಿದೆ. ದೇಶದೆಲ್ಲೆಡೆಯಿಂದ ಬಂದಿರುವ 111 ವೈದಿಕರು 10 ಹವನ ಕುಂಡದಲ್ಲಿ ಮಹಾಗಣಪತಿಗೆ ಮೋದಕ ಅರ್ಪಿಸಲಿದ್ದಾರೆ. 111 X 1000 ಮೋದಕ ಅರ್ಪಣೆಯಾಗಲಿದೆ. ಮಧ್ಯಾಹ್ನ 12.30ಕ್ಕೆ ಭಾರತೀತೀರ್ಥಸ್ವಾಮೀಜಿಗಳ ಉಪಸ್ಥಿತಿ ಯೊಂದಿಗೆ ಪೂರ್ಣಾಹುತಿ ನೇರವೇರಲಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sri Bharati Tirtha Swami and Vidhushekhara Bharati Swami, the seers of Sharada Peetha at Sringeri,Chikkamagaluru on Wednesday performed the Swarna Gopura Kumbhabhisheka at Sharadamba temple in the town.
Please Wait while comments are loading...