ಮಹಾರಾಷ್ಟ್ರದ ಬೆಳಗಾವಿ ಗಡಿ ವಿವಾದ ಕ್ಯಾತೆಗೆ ಸುಪ್ರಿಂ ಗರಂ

Subscribe to Oneindia Kannada

ಹೊಸದಿಲ್ಲಿ, ಆಗಸ್ಟ್ 1: ಕರ್ನಾಟಕ-ಮಹಾರಾಷ್ಟ್ರ ನಡುವಿನ ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ಮಹಾರಾಷ್ಟ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

"1956ರಲ್ಲೇ ರಾಜ್ಯಗಳ ಪುನರ್ ವಿಂಗಡಣೆ ಆಗಿದೆ. ಆದರೆ ನೀವು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಅರ್ಜಿ ಸಲ್ಲಿಸಿದ್ದು 2004ರಲ್ಲಿ. 48 ವರ್ಷ ಸುಮ್ಮನಿದ್ದು ಈಗ ಅರ್ಜಿ ಸಲ್ಲಿಸಿದ್ದೀರಿ. ಮೊದಲು ನಿಮ್ಮ ಅರ್ಜಿ ವಿಚಾರಣೆಗೆ ಅರ್ಹವೇ ಎಂಬುದನ್ನು ನೋಡಬೇಕು," ಎಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿ ಸದಸ್ಯ ಪೀಠ ಮಹಾರಾಷ್ಟ್ರ ಪರ ಹಾಜರಿದ್ದ ವಕೀಲ ರಾಜು ರಾಮಚಂದ್ರನ್ ಅವರಿನ್ನು ತರಾಟೆಗೆ ತೆಗೆದುಕೊಂಡಿದೆ.

Supreme Court postponed Belagavi border dispute hearing to Oct 10

ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಹೆಚ್ಚಾಗಿದ್ದಾರೆ ಎಂಬ ಕಾರಣ ಮುಂದೊಡ್ಡಿ ಬೆಳಗಾವಿ ಜಿಲ್ಲೆಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು 2004ರಲ್ಲಿ ಅಲ್ಲಿನ ಸರಕಾರ ಸುಪ್ರಿಂ ಕೋರ್ಟ್ ಮೊರೆ ಹೋಗಿತ್ತು.

A Six Year Old Girl Fell Into A Bore Well, Minister Gives An Irresponsible Answer | Oneindia Kannada

ಸೋಮವಾರ ವಿಚಾರಣೆ ವೇಳೆ ಕರ್ನಾಟಕ ಪರ ವಕೀಲ ಪಿಪಿ ರಾವ್ ಅನಾರೋಗ್ಯದಿಂದ ವಿಚಾರಣೆಗೆ ಗೈರಾಗಿದ್ದರಿಂದ ಸುಪ್ರಿಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 10ಕ್ಕೆ ಮುಂದೂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The hearing on the Belagavi border dispute between Karnataka and Maharashtra has been postponed to October 10 by the Supreme Court.
Please Wait while comments are loading...