ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾನುವಾರದ ಲಾಕ್‌ಡೌನ್ ರಾಜ್ಯಾದ್ಯಂತ ಮುಂದುವರಿಕೆ!

|
Google Oneindia Kannada News

ಬೆಂಗಳೂರು, ಜು. 21: ಕೋವಿಡ್ ನಿಯಂತ್ರಣಕ್ಕೆ ಲಾಕ್‌ಡೌನ್ ಒಂದೇ ಪರಿಹಾರವಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ರಾಜ್ಯದ ಜನತೆಯನ್ನು ಉದ್ದೇಶಿಸಿ ಮೊದಲ ಬಾರಿಗೆ ಇಂದು ಯಡಿಯೂರಪ್ಪ ಅವರು ಮಾತನಾಡಿದರು. ಹೀಗಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಕೊರೊನಾ ವೈರಸ್‌ನ್ನು ನಿಯಂತ್ರಣ ಮಾಡಬಹುದು ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿ ಆಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

Recommended Video

ಅಪ್ಪನ ಹಾದಿಯನ್ನೇ ಹಿಡಿದ ಮಗ | Oneindia Kannada

ಆದರೆ ರಾಜ್ಯಾದ್ಯಂತ ಹಾಗೂ ಬೆಂಗಳೂರಿನಲ್ಲಿ ಭಾನುವಾರದ ಲಾಕ್‌ಡೌನ್ ಹಾಗೂ ರಾತ್ರಿ ಕರ್ಫ್ಯೂ ಕುರಿತಂತೆ ಸಿಎಂ ಯಡಿಯೂರಪ್ಪ ಅವರು ತಮ್ಮ ಭಾಷಣದಲ್ಲಿ ಯಾವುದೇ ಮಾಹಿತಿ ಕೊಟ್ಟಿರಲಿಲ್ಲ. ಇದೀಗ ಆ ಬಗ್ಗೆ ಸರ್ಕಾರ ಅನ್‌ಲಾಕ್‌ 2.0 ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಆದೇಶ ಮಾಡಿದೆ.

ಬೆಂಗಳೂರಿನಲ್ಲಿ ಲಾಕ್ ಡೌನ್ ಅಂತ್ಯ; ಟ್ರಾಫಿಕ್ ಜಾಮ್ಬೆಂಗಳೂರಿನಲ್ಲಿ ಲಾಕ್ ಡೌನ್ ಅಂತ್ಯ; ಟ್ರಾಫಿಕ್ ಜಾಮ್

ಲಾಕ್‌ಡೌನ್ ತೆರವು

ಲಾಕ್‌ಡೌನ್ ತೆರವು

ಆರಂಭದಲ್ಲಿ ನಾವು ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಮಾಡಿದ್ದೇವು. ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವುದು ರಾಜ್ಯದ ಜನರ ಗಮನಕ್ಕೆ ಬಂದಿದೆ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಆದರೂ ರಾಜ್ಯಾದ್ಯಂತ ಲಾಕ್‌ಡೌನ್ ತೆರವುಗೊಳಿಸಿರುವುದಾಗಿ ಅವರು ಹೇಳಿದ್ದರು. ಜೊತೆಗೆ ಸಾಮಾನ್ಯರು, ವ್ಯಾಪಾರಸ್ಥರು ಹಾಗೂ ಇತರ ಕ್ಷೇತ್ರಗಳ ಜನತೆ ಎಂದಿನಂತೆ ತಮ್ಮ ಕೆಲಸಗಳಲ್ಲಿ ತೊಡಗಬಹುದು.

ನಾಳೆಯಿಂದ ಯಾವುದೇ ಲಾಕ್‌ಡೌನ್ ಮಾರ್ಗಸೂಚಿಗಳು ಜಾರಿಯಲ್ಲಿ ಇರುವುದಿಲ್ಲ ಎಂದು ಸಿಎಂ ಹೇಳಿದ್ದರು.

ಸಂಡೆ ಲಾಕ್‌ಡೌನ್

ಸಂಡೆ ಲಾಕ್‌ಡೌನ್

ಇಡೀ ರಾಜ್ಯಾದ್ಯಂತ ಲಾಕ್‌ಡೌನ್ ಜಾರಿಯನ್ನು ಹಿಂದಕ್ಕೆ ಪಡೆಯಲಾಗಿದೆ. ಆದರೆ ಬೆಂಗಳೂರು ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲಿ ಜಾರಿಗೆ ತಂದಿದ್ದ ಭಾನುವಾರದ ಲಾಕ್‌ಡೌನ್ ಹಾಗೂ ರಾತ್ರಿ ಕರ್ಫ್ಯೂ ಎಂದಿನಂತೆ ಇರಲಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರು ಅನ್‌ಲಾಕ್‌ ಆದೇಶದಲ್ಲಿ ತಿಳಿಸಿದ್ದಾರೆ.


ಅನ್‌ಲಾಕ್‌ ಮಾರ್ಗಸೂಚಿ ಆದೇಶದಲ್ಲಿಯೂ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ಜಾರಿಯಲ್ಲಿರುತ್ತದೆ. ಜೊತೆಗೆಬ ಈಗಾಗಲೇ ಜಾರಿಯಲ್ಲಿರುವಂತೆ ಭಾನುವಾರದ ಲಾಕ್‌ಡೌನ್ ಕೂಡ ಮುಂದುವರೆಯಲಿದೆ. ಜೊತೆಗೆ ಇನ್ನೂ ಹಲವು ಲಾಕ್‌ಡೌನ್ ನಿಯಮಗಳು ಮುಂದುವರೆದಿವೆ.

ಅನ್‌ಲಾಕ್‌ 2.0

ಅನ್‌ಲಾಕ್‌ 2.0

ಜೊತೆಗೆ ಲಾಕ್‌ಡೌನ್ ಹಿಂದಕ್ಕೆ ಪಡೆಯಲಾಗಿದ್ದರೂ ಕೂಡ ಇನ್ನು ಕೆಲವು ಲಾಕ್‌ಡೌನ್ ಮಾರ್ಗಸೂಚಿ ಮುಂದುವರೆಯಲಿದೆ. ಪಾರ್ಕ್‌ಗಳಲ್ಲಿ ಕುಳಿತುಕೊಳ್ಳುವ ಬೆಂಚ್‌ಗಳನ್ನು ಉಪಯೋಗಿಸುವುದು ಹಾಗೂ ಜಿಮ್ ಸಾಧನಗಳನ್ನು ಬಳಸುವುದು ಕೂಡ ಮುಂದುವರೆಯಲಿದೆ.


ಜೊತೆಗೆ ಜನಸಂದಣಿ ತಡೆಗಟ್ಟುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿಯೂ ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿ ಅಥವಾ ಬೇರೆ ವಿಶಾಲ ಪ್ರದೇಶಗಳಿಗೆ ಸ್ಥಳಾಂತರ ಮಾಡುವಂತೆ ಅನ್‌ಲಾಕ್‌ 2.0 ಮಾರ್ಗಸೂಚಿಯಲ್ಲಿ ಆದೇಶ ಮಾಡಲಾಗಿದೆ.

ಲಾಕ್‌ಡೌನ್ ಜಾರಿಯಲ್ಲಿದೆ

ಲಾಕ್‌ಡೌನ್ ಜಾರಿಯಲ್ಲಿದೆ

ಜೊತೆಗೆ ಅನ್‌ಲಾಕ್ 2.0 ಮಾರ್ಗಸೂಚಿಗಳು ಈ ಮೇಲಿನ ಬದಲಾವಣೆಗಳೊಂದಿಗೆ ಜಿಲ್ಲಾಡಳಿತಗಳಿಂದ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸುವವರಗೆ ಅಂದರೆ ಜುಲೈ 31, 2020ರ ವರೆಗೆ ಮುಂದುವರೆಯಲಿದೆ ಎಂದು ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷರೂ ಆಗಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರು ಆದೇಶ ಹೊರಡಿಸಿದ್ದಾರೆ.

English summary
Lockdown enforcement has been withdrawn across the entire state. But Sunday's lockdown and the night curfew, which has been implemented in other parts of the state, including Bengaluru, will remain as usual, said the government's chief secretary TM Vijaya Bhaskar in the unlock order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X