ಕಾಂಗ್ರೆಸ್ ನಾಯಕರ ಜೊತೆ ಸುಮಲತಾ ಸಭೆ, ಚಲುವರಾಯಸ್ವಾಮಿ ಹೇಳಿದ್ದೇನು?

Recommended Video

      ಕುತೂಹಲ ಕೆರಳಿಸಿದ ಸುಮಲತಾ ಹಾಗು ಕೈ ನಾಯಕರ ಸಭೆ | ಎನ್ ಚೆಲುವರಾಯಸ್ವಾಮಿ ಹೇಳಿದ್ದೇನು | Oneindia Kannada

      ಬೆಂಗಳೂರು, ಮೇ 02 : ಮಂಡ್ಯ ಲೋಜಸಭಾ ಚುನಾವಣೆ ಮುಗಿದು ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಆದರೆ, ರಾಜಕೀಯ ಮಾತ್ರ ಜಿಲ್ಲೆಯಲ್ಲಿ ಇನ್ನೂ ನಡೆಯುತ್ತಲೇ ಇದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಕಾಂಗ್ರೆಸ್ ನಾಯಕರ ಜೊತೆ ನಡೆಸಿದ ಸಭೆ ಬಗ್ಗೆ ಬಾರಿ ಚರ್ಚೆ ನಡೆಯುತ್ತಿದೆ.

      ಲೋಕಸಭಾ ಚುನಾವಣೆ ವಿಶೇಷ ಪುಟ

      30/4/2019ರಂದು ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸಭೆಯಲ್ಲಿ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು.

      ಜೆಡಿಎಸ್ ಪಕ್ಷದ ಸಾಮಾಜಿಕ ಜಾಲತಾಣದಲ್ಲಿ ಸಭೆಯ ಫೋಟೋಗಳನ್ನು ಹಾಕಿ ಟ್ರಾಲ್ ಮಾಡಲಾಗುತ್ತಿದೆ. ಮತ್ತೊಂದು ಕಡೆ ಮೇ 23ರಂದು ಪ್ರಕಟವಾಗಲಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶಕ್ಕೂ ಮೊದಲೇ ನಡೆದಿರುವ ಸಭೆ ಕುತೂಹಕ್ಕೆ ಕಾರಣವಾಗಿದೆ.

      ಮಂಡ್ಯ ಕಾಂಗ್ರೆಸ್‌-ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಹಲವು ಕಾಂಗ್ರೆಸ್ ನಾಯಕರು ಪ್ರಚಾರವನ್ನು ಕೈಗೊಂಡಿರಲಿಲ್ಲ. ಆದರೆ, ಈಗ ಈ ನಾಯಕರು ಸುಮಲತಾ ಅವರನ್ನು ಭೇಟಿ ಮಾಡಿರುವುದು ಚರ್ಚೆಯ ವಿಷಯವಾಗಿದೆ. ಈ ಸಭೆ ಬಗ್ಗೆ ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದರು.....

      ಮೀಟಿಂಗ್‌ನಿಂದ ತಳಮಳ

      ಮೀಟಿಂಗ್‌ನಿಂದ ತಳಮಳ

      ಬೆಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಚಲುವರಾಯಸ್ವಾಮಿ ಅವರು ಸಭೆ ಕುರಿತು ಸ್ಪಷ್ಟನೆ ನೀಡಿದರು. 'ನಮ್ಮ ಮೀಟಿಂಗ್‌ನಿಂದ ಯಾವುದೇ ತಳಮಳ ಉಂಟಾಗಿಲ್ಲ. ನಾವು ಚುನಾವಣೆಯಲ್ಲಿ ಸುಮಲತಾ ಅವರಿಗೆ ಬೆಂಬಲ ನೀಡಿಲ್ಲ' ಎಂದು ಹೇಳಿದರು.

      ಪೊಲೀಸ್ ಅಧಿಕಾರಿಗಳ ಕೆಲಸ

      ಪೊಲೀಸ್ ಅಧಿಕಾರಿಗಳ ಕೆಲಸ

      'ಔತಣಕೂಟಕ್ಕೆ ಹೋದಾಗ ಎಲ್ಲರೂ ಬಂದಿದ್ದರು ಸಭೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದು ಅದನ್ನು ಮಾಧ್ಯಮಗಳಿಗೆ ನೀಡಿ ವೈರಲ್ ಮಾಡಲಾಗಿದೆ. ಇದರಲ್ಲಿ ಪೊಲೀಸ್ ಅಧಿಕಾರಿಗಳ ಪಾತ್ರವಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಅವರು ಮಾತ್ರ ಪಡೆಯಲು ಸಾಧ್ಯ. ಅವರಿಗೆ ಒಳ್ಳೆಯದಾಗಲಿ' ಎಂದು ಚಲುವರಾಯಸ್ವಾಮಿ ಆರೋಪಿಸಿದರು.

      ಕುಮಾರಸ್ವಾಮಿ ಕೈವಾಡ ಇದೆಯೇ?

      ಕುಮಾರಸ್ವಾಮಿ ಕೈವಾಡ ಇದೆಯೇ?

      'ಸುಮಲತಾ ಅವರನ್ನು ಭೇಟಿಯಾಗಿದ್ದು ಹೌದು. ಆದರೆ, ಇದರ ಫೋಟೋವನ್ನು ಬೇಕೆಂದು ವೈರಲ್ ಮಾಡಿಸಲಾಗಿದೆ. ಆದರೆ, ಇದರ ಹಿಂದೆ ಕುಮಾರಸ್ವಾಮಿ ಅವರ ಕೈವಾಡ ಇದೆ ಎಂದು ನಾನು ಹೇಳುವುದಿಲ್ಲ. ಅವರು ಆಯುರ್ವೇದ ಚಿಕಿತ್ಸೆ ಪಡೆಯಲು ಹೋಗಿದ್ದಾರೆ' ಎಂದು ಚಲುವರಾಯಸ್ವಾಮಿ ಹೇಳಿದರು.

      ಪಕ್ಷ ನಿರ್ದೇಶನ ನೀಡಿತ್ತು

      ಪಕ್ಷ ನಿರ್ದೇಶನ ನೀಡಿತ್ತು

      'ಮಂಡ್ಯದ ಚುನಾವಣೆಯಲ್ಲಿ ಸುಮಲತಾ ಅವರಿಗೆ ಬೆಂಬಲ ಕೊಡಬಾರದು ಎಂದು ಪಕ್ಷ ಸ್ಪಷ್ಟವಾದ ನಿರ್ದೇಶನ ನೀಡಿತ್ತು. ನಾವು ಯಾರೂ ಅವರ ಪರವಾಗಿ ಕೆಲಸ ಮಾಡಿಲ್ಲ. ಚುನಾವಣಾ ಪ್ರಚಾರಕ್ಕೆ ಸಹ ಹೋಗಿಲ್ಲ' ಎಂದು ಚಲುವರಾಯಸ್ವಾಮಿ ಹೇಳಿದರು.

      ಸಭೆಯಲ್ಲಿ ಪಾಲ್ಗೊಂಡ ನಾಯಕರು

      ಸಭೆಯಲ್ಲಿ ಪಾಲ್ಗೊಂಡ ನಾಯಕರು

      ಸುಮಲತಾ ಅಂಬರೀಶ್ ಅವರು ಪಾಲ್ಗೊಂಡಿದ್ದ ಸಭೆಯಲ್ಲಿ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಮಳವಳ್ಳಿ ಶಿವಣ್ಣ, ರಘುವೀರ್ ಗೌಡ, ಮಾಗಡಿ ಬಾಲಕೃಷ್ಣ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. ರಾಕ್‌ಲೈನ್ ವೆಂಕಟೇಶ್ ಈ ಸಭೆ ಮತ್ತು ಔತಣಕೂಟ ಆಯೋಜನೆ ಮಾಡಿದ್ದರು ಎಂಬ ಸುದ್ದಿಗಳು ಹಬ್ಬಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+