ರಾಜ್ಯದ ರೈತರಿಗೆ ₹246ಗೆ ಸಿಗಬೇಕಿದ್ದ ಯೂರಿಯಾ ₹2000ಕ್ಕೆ ಮಾರಾಟ: ಯತ್ನಾಳ್
ಬೆಂಗಳೂರು, ಡಿಸೆಂಬರ್ 16: ಕರ್ನಾಟಕ ರಾಜ್ಯ ಸರ್ಕಾರವು ರೈತರ ವಿಚಾರದಲ್ಲಿ, ನೆರೆ-ಪ್ರವಾಹ ಪರಿಹಾರ ವಿತರಣೆಯಲ್ಲಿ ವಿಳಂಬ ಮಾಡಿದೆ, ಬರೀ ಕೇಂದ್ರದತ್ತ ಬೊಟ್ಟು ಮಾಡುತ್ತಿಲ್ಲ ಎಂಬೆಲ್ಲ ಆರೋಪಗಳನ್ನು ಈಗಾಗಲೇ ಎದುರಿಸಿದೆ. ಇದೀಗ ಕರ್ನಾಟಕದ ರೈತರಿಗೆ ಸಬ್ಸಿಡಿ ದರದಲ್ಲಿ ದೊರೆಯಬೇಕಿದ್ದ ಯೂರಿಯಾ ಗೊಬ್ಬರನವನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ವೈಫಲ್ಯ ಕಾರಣವೆಂದು ದೂರಲಾಗಿದೆ.
ಇದೇ ವಿಚಾರ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಎಕ್ಸ್ ಪೋಸ್ಟ್ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯೂರಿಯಾ ಗೊಬ್ಬರ ಅಕ್ರಮ ಮಾರಾಟವನ್ನು ವಿವರಿಸಿದ್ದಾರೆ. ರೈತರಿಗೆ ನೆರವಾಗಲಿ ಎಂದು ಸಬ್ಸಿಡಿಯಲ್ಲಿ 246 ರೂಪಾಯಿಗೆ ಸಿಗುತ್ತಿದ್ದ ಪ್ರಧಾನ ಮಂತ್ರಿ ಯೂರಿಯ (PM Urea) ಗೊಬ್ಬರವು 2,000 ರೂಪಾಯಿಗೆ ಕಾಳಸಂತೆಯಲ್ಲಿ ಮಾರಾಟ ಮಾರಾಟವಾಗುತ್ತಿದೆ.

ಈ ಅಕ್ರಮ ಜಾಲವನ್ನು ಕೇಂದ್ರದ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಪತ್ತೆ ಮಾಡಿದೆ. ಬೆಂಗಳೂರಿನ ಅಡಕಮಾರನಹಳ್ಳಿಯಲ್ಲಿರುವ ಗೋಡೌನ್ ನಲ್ಲಿದ್ದ ಅಪಾರ ಪ್ರಮಾಣದ ಯೂರಿಯ ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು.
ಕೃಷಿ ಇಲಾಖೆ ಗಮನಕ್ಕೆ ಬಂದಿಲ್ಲವೇ?
ಕೃಷಿ ಇಲಾಖೆಯ ಜಾಗೃತ ಕೋಶ (Vigilance Cell) ಪತ್ತೆ ಮಾಡಲಾಗದ ಅತೀ ದೊಡ್ಡ ಯೂರಿಯ ಹಗರಣವನ್ನು ಕೇಂದ್ರದ ಕಂದಾಯ ಗುಪ್ತಚರ ನಿರ್ದೇಶನಾಲಯ ಪತ್ತೆ ಮಾಡಿದೆ. ಕರ್ನಾಟಕ ರಾಜ್ಯ ಸರ್ಕಾರದ ವೈಫಲ್ಯದಿಂದ, ಕೃಷಿ ಇಲಾಖೆಯ ನಿರ್ಲಜ್ಜ ಧೋರಣೆ, ಅದಕ್ಷತೆ, ನಿಷ್ಕ್ರಿಯತೆಯಿಂದ ಬ್ಲಾಕ್ ಮಾರ್ಕೆಟ್ ಮಾಫಿಯಾ ಸದ್ದಿಲ್ಲದೇ ತನ್ನ ಜಾಲವನ್ನು ವಿಸ್ತರಿಸಿದೆ ಎಂದು ಅವರು ಆರೋಪಿಸಿದರು.
ಕಾಳಸಂತೆಯ ಮಾಫಿಯಾ ಯೂರಿಯಾದ 'ಕೃತಕ ಬೇಡಿಕೆ' ಸೃಷ್ಟಿಸುತ್ತಿದ್ದರೆ ಕೃಷಿ ಸಚಿವರು ಕೇಂದ್ರ ಸರ್ಕಾರದ ಮೇಲೆ ಬೊಟ್ಟು ತೋರಿಸುತ್ತಿದ್ದಾರೆ. ಈಗ, ಬೃಹತ್ ಪ್ರಮಾಣದ ಯೂರಿಯ ವಶವಾಗಿರುವ ಹಿನ್ನೆಲೆಯಲ್ಲಿ ಕೃಷಿ ಸಚಿವರು ಇದು ತಮ್ಮ ಇಲಾಖೆಯ ಅಸಮರ್ಥತೆಯೇ ಕಾರಣ ಎಂದು ಒಪ್ಪಿಕೊಳ್ಳಲೇಬೇಕು ಎಂದರು.
ಕೃಷಿ ಸಚಿವರು ಅಧಿಕಾರಿಗಳನ್ನು ಅಮಾನತು ಮಾಡಿ
ಯೂರಿಯ ಇಲ್ಲದೆ ಹೊಲ ಗದ್ದೆಯ ಕೆಲಸವನ್ನು ಬಿಟ್ಟು ರೈತರು ರಾತ್ರಿಯೆಲ್ಲ ಸರದಿ ಸಾಲಿನಲ್ಲಿ ಯೂರಿಯ ಪಡೆಯಬೇಕಾದ ಸ್ಥಿತಿಗೆ ಕಾರಣ ಕೃಷಿ ಇಲಾಖೆಯ ವೈಫಲ್ಯ. ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲೇ ಸ್ಪಷ್ಟೀಕರಣ ಕೊಡಬೇಕು. ಮಾತ್ರವಲ್ಲದೇ ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸದಾ ತಾನು ರೈತಪರ ಎಂದು ಹೇಳಿಕೊಳ್ಳುವ ಹಾಗೂ ಪರಿಹಾರ, ಅನುದಾನ ವಿಚಾರ ಬಂದಾಗ ಕೇಂದ್ರದತ್ತ ಬೊಟ್ಟು ಮಾಡುವ ನಾಯಕರ ಈ ಗೊಬ್ಬರ ಪ್ರಕರಣವನ್ನು ಹೇಗೆ ಸಮರ್ಥನೆ ಮಾಡಿಕೊಳ್ಳುತ್ತದೆ? ಇದರಲ್ಲಿ ಸರ್ಕಾರ ವೈಫಲತ್ಯೆ ಇದೆಯೋ? ಇಲ್ಲವೋ? ಎಂದು ಬುಧವಾರ ಸದನದಲ್ಲಿ ತಿಳಿಸುವ ನಿರೀಕ್ಷೆಗಳು ಇವೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications