ಸುಭಾಷ್ ಅಡಿ ರಿಟ್ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಜಡ್ಜ್

Posted By:
Subscribe to Oneindia Kannada

ಬೆಂಗಳೂರು, ಜನವರಿ 13 : ಉಪ ಲೋಕಾಯುಕ್ತ ಸುಭಾಷ್ ಅಡಿ ಅವರು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯಿಂದ ನ್ಯಾಯಮೂರ್ತಿ ಅಶೋಕ ಹಿಂಚಿಗೇರಿ ಅವರು ಹಿಂದೆ ಸರಿದಿದ್ದಾರೆ. ಅರ್ಜಿಯ ವಿಚಾರಣೆ ಯಾವ ನ್ಯಾಯಪೀಠಕ್ಕೆ ಬರಬೇಕೆಂಬುದನ್ನು ನಿರ್ಧರಿಸಲು ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರಿಗೆ ಕಡತಗಳನ್ನು ರವಾನಿಸಲಾಗುತ್ತದೆ.

ಕಾಂಗ್ರೆಸ್‌ನ 78ಕ್ಕೂ ಅಧಿಕ ಶಾಸಕರು ಉಪ ಲೋಕಾಯುಕ್ತ ಸುಭಾಷ್‌ ಬಿ ಅಡಿ ಅವರ ಪದಚ್ಯುತಿ ನಿರ್ಣಯನ್ನು ಸದನದಲ್ಲಿ ಮಂಡನೆ ಮಾಡಿದ್ದರು. ತಮ್ಮ ವಿರುದ್ಧ ಪದಚ್ಯುತಿ ನಿರ್ಣಯವನ್ನು ಮಂಡನೆ ಮಾಡಿರುವುದನ್ನು ಪ್ರಶ್ನಿಸಿ ಸುಭಾಷ್‌ ಬಿ ಅಡಿ ಅವರು ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. [ಉಪ ಲೋಕಾಯುಕ್ತರ ಕೆಲಸಕ್ಕೆ ಅಡ್ಡಿ ಇಲ್ಲ]

high court

ಮೊದಲು ನ್ಯಾಯಮೂರ್ತಿ ಅಶೋಕ ಹಿಂಚಿಗೇರಿ ಅವರ ಪೀಠದಲ್ಲಿಯೇ ಅರ್ಜಿಯ ವಿಚಾರಣೆ ನಡೆದಿತ್ತು. ಮಂಗಳವಾರವೂ ಹಿಂಚಿಗೇರಿ ಅವರ ಪೀಠದ ಮುಂದೆ ಅರ್ಜಿ ವಿಚಾರಣೆಗೆ ಬಂದಿತು. ಆದರೆ, ಅಡಿ ಪರ ವಕೀಲರು ಹಾಜರಿರಲಿಲ್ಲ ಎಂದು ವಿಚಾರಣೆ ಮುಂದೂಡಲಾಗಿತ್ತು. [ಲೋಕಾಯುಕ್ತ ಪದಚ್ಯುತಿ ಹೇಗೆ?]

ನಂತರ ರಿಟ್ ಅರ್ಜಿಯ ವಿಚಾರಣೆಯಿಂದ ನ್ಯಾ. ಅಶೋಕ ಹಿಂಚಿಗೇರಿ ಅವರು ಹಿಂದೆ ಸರಿದರು. ಈ ಅರ್ಜಿ ವಿಚಾರಣೆ ಯಾವ ನ್ಯಾಯಪೀಠಕ್ಕೆ ಬರಬೇಕೆಂಬುದನ್ನು ನಿರ್ಧರಿಸಲು ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರಿಗೆ ಕಡತಗಳನ್ನು ರವಾನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಕೆಲಸ ನಿರ್ವಹಣೆ ಮಾಡಬಹುದು : ಪದಚ್ಯುತಿ ಪ್ರಸ್ತಾವನೆಯ ವಿಚಾರಣೆ ನಡೆಯುತ್ತಿದ್ದರೂ ಸುಭಾಷ್‌ ಬಿ ಅಡಿ ಕಾರ್ಯನಿರ್ವಹಿಸಬಹುದು ಎಂದು ಸರ್ಕಾರ ಕೋರ್ಟ್‌ಗೆ ಹೇಳಿಕೆ ನೀಡಿದೆ. ಹಿಂದೆ ಉಪ ಲೋಕಾಯುಕ್ತರಾಗಿದ್ದ ಎಸ್‌.ಬಿ.ಮಜಗೆ ಅವರು ಸುಭಾಷ್‌ ಅಡಿ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಈ ಆರೋಪಗಳ ಆಧಾರದ ಮೇಲೆ ಅವರನ್ನು ಪದಚ್ಯುತಿಗೊಳಿಸುವ ನಿರ್ಣಯವನ್ನು ಸದನದಲ್ಲಿ ಮಂಡಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka High Court Justice Ashok B. Hinchigeri on Tuesday recused himself from hearing a petition filed by Upalokayukta Subhash B. Adi, challenging the ouster motion adopted against him from the post of upa-Lokayukta.
Please Wait while comments are loading...