ಪಿಎಸ್‌ಐ ಜಗದೀಶ್ ಪತ್ನಿಗೆ ಸರ್ಕಾರಿ ಉದ್ಯೋಗ

ಬೆಂಗಳೂರು, ಫೆಬ್ರವರಿ 23 : ಬೈಕ್ ಕಳ್ಳರಿಂದ ಹತ್ಯೆಯಾದ ದೊಡ್ಡಬಳ್ಳಾಪುರ ಠಾಣೆ ಪಿಎಸ್‌ಐ ಜಗದೀಶ್ ಅವರ ಪತ್ನಿ ರಮ್ಯಾ ಅವರಿಗೆ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸೋಮವಾರ ಸಂಜೆ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಪಿಎಸ್‌ಐ ಜಗದೀಶ್ ಅವರ ಪತ್ನಿ ರಮ್ಯಾ ಅವರಿಗೆ ಅನುಕಂಪದ ಆಧಾರದ ಮೇಲೆ ಸಬ್‌ ರಿಜಿಸ್ಟ್ರಾರ್‌ ಹುದ್ದೆ ನೀಡಲು ಒಪ್ಪಿಗೆ ನೀಡಲಾಗಿದೆ. [ರಮ್ಯಾಗೆ ಸರ್ಕಾರಿ ಉದ್ಯೋಗದ ಭರವಸೆ]

jagadish

ಎಂ.ಎ.ಪದವೀಧರೆಯಾಗಿರುವ ರಮ್ಯಾ ಅವರು ನವೆಂವರ್‌ನಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಆಯೋಜಿಸಿದ್ದ ಜನತಾ ದರ್ಶನದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಕುಟುಂಬ ನಿರ್ವಹಣೆ ಕಷ್ಟವಾಗಿದೆ, ಸರ್ಕಾರಿ ಉದ್ಯೋಗ ನೀಡಿ ಎಂದು ಮನವಿ ಮಾಡಿದ್ದರು. [ಜೈಲಿಗೆ ಹೋಗುವುದು ತಪ್ಪಿಸಿಕೊಳ್ಳಲು ಜಗದೀಶ್ ಕೊಂದರು]

2012ರಲ್ಲಿ ನೆಲಮಂಗಲ ತಾಲೂಕಿನ ಮಲ್ಲಾಪುರದ ಜಗದೀಶ್ ಅವರ ಜೊತೆ ರಮ್ಯಾ ಅವರ ವಿವಾಹವಾಗಿತ್ತು. ಇಬ್ಬರು ಮಕ್ಕಳೊಂದಿಗೆ ದಂಪತಿಗಳು ಟಿ.ದಾಸರಹಳ್ಳಿಯಲ್ಲಿ ವಾಸವಾಗಿದ್ದರು. 'ಪತಿಯ ಸಾವಿನ ನಂತರ ಕುಟುಂಬದ ನಿರ್ವಹಣೆ ಹೊಣೆ ನನ್ನ ಮೇಲಿದೆ. ಯಾವುದಾದರೂ ಸರ್ಕಾರಿ ನೌಕರಿ ನೀಡುವಂತೆ' ಮುಖ್ಯಮಂತ್ರಿಗಳಿಗೆ ರಮ್ಯಾ ಅವರು ಮನವಿ ಮಾಡಿದ್ದರು. [ದೊಡ್ಡಬಳ್ಳಾಪುರ PSI ಜಗದೀಶ್ ಹತ್ಯೆ]

ಬೈಕ್ ಕಳ್ಳರು ಹತ್ಯೆ ಮಾಡಿದ್ದರು : 2015ರ ಅಕ್ಟೋಬರ್ 16ರಂದು ದೊಡ್ಡಬಳ್ಳಾಪುರ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜಗದೀಶ್ ಅವರು ನೆಲಮಂಗಲ ಬಳಿ ಬೈಕ್ ಕಳ್ಳರಾದ ಮಧು ಮತ್ತು ಹರೀಶ್ ಬಾಬು ಅವರನ್ನು ಹಿಡಿಯಲು ಹೋದಾಗ, ಡ್ರ್ಯಾಗರ್‌ನಿಂದ ಚುಚ್ಚಿ ಜಗದೀಶ್ ಅವರನ್ನು ಹತ್ಯೆ ಮಾಡಲಾಗಿತ್ತು. ನಂತರ ನಾಗ್ಪುರ ರೈಲು ನಿಲ್ದಾಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+