ಆಪರೇಷನ್ ಕಮಲ ನಿಲ್ಲಿಸಿ: ಬಿಜೆಪಿ ಹೈಕಮಾಂಡ್‌ನಿಂದ ಸೂಚನೆ

ಬೆಂಗಳೂರು, ಫೆಬ್ರವರಿ 13: ರಾಜ್ಯದ ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿ ಹೈಕಮಾಂಡ್‌ ಪೂರ್ಣ ಬೆಂಬಲವನ್ನು ತಿಂಗಳ ಹಿಂದೆ ಯಡಿಯೂರಪ್ಪ ಅವರಿಗೆ ನೀಡಿತ್ತು. ಆದರೆ ಈಗ ಆಡಿಯೋ ಕ್ಲಿಪ್ ಹಗರಣದ ನಂತರ ಹೈಕಮಾಂಡ್ ಉಲ್ಟಾ ಹೊಡೆದಿದ್ದು ಆಪರೇಷನ್ ಕಮಲವನ್ನು ಸ್ಥಗಿತಗೊಳಿಸಿ ಎಂದಿದೆ.

ಆಪರೇಷನ್ ಕಮಲ ಆಡಿಯೋ ಕ್ಲಿಪ್ ಅನ್ನು ಕುಮಾರಸ್ವಾಮಿ ಬಿಡುಗಡೆ ಮಾಡಿದ ಬಳಿಕ ಬಿಜೆಪಿಗೆ ತೀವ್ರ ಹಿನ್ನಡೆ ಆಗಿದ್ದು, ಸ್ವತಃ ಬಿಜೆಪಿ ನಾಯಕ ಯಡಿಯೂರಪ್ಪ ಅವರೇ ಪ್ರಕರಣದ ಪ್ರಮುಖ ಆರೋಪಿ ಆಗಿರುವುದು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಹಿನ್ನಡೆ ಉಂಟು ಮಾಡಿದೆ, ಇದು ಬಿಜೆಪಿ ಹೈಕಮಾಂಡ್‌ಗೆ ಮುಜುಗರ ತಂದಿದೆ.

ಕೆಲವು ತಿಂಗಳ ಹಿಂದೆ ಆಪರೇಷನ್ ಕಮಲಕ್ಕೆ ಸ್ವತಃ ಅಮಿತ್ ಶಾ ಅವರೇ ಹಸಿರು ನಿಶಾನೆ ತೋರಿದ್ದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆದ ಸಮಯದಲ್ಲಿ ಯಡಿಯೂರಪ್ಪ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿ ಅಲ್ಲಿಂದಲೇ ತಮ್ಮ ಶಾಸಕರನ್ನು ರೆಸಾರ್ಟ್‌ಗೆ ವರ್ಗಾಯಿಸಿದ್ದರು. ಆದರೆ ಇದಾದ ಎರಡು ತಿಂಗಳ ಒಳಗಾಗಿ ಬಿಜೆಪಿ ಹೈಕಮಾಂಡ್ ಆಪರೇಷನ್ ಕಮಲದಿಂದ ಹಿಂದೆ ಸರಿಯುವಂತೆ ಹೇಳಿದೆ.

ಲೋಕಸಭೆಯಲ್ಲಿ ಆಪರೇಷನ್ ಕಮಲ ಚರ್ಚೆ

ಲೋಕಸಭೆಯಲ್ಲಿ ಆಪರೇಷನ್ ಕಮಲ ಚರ್ಚೆ

ಬಿಜೆಪಿಯ ಆಪರೇಷನ್ ಕಮಲ ಆಡಿಯೋ ಕ್ಲಿಪ್ ಪ್ರಕರಣವನ್ನು ಲೋಕಸಭೆಯಲ್ಲೂ ಸಹ ಖರ್ಗೆ ಹಾಗೂ ದೇವೇಗೌಡ ಅವರು ಪ್ರಸ್ತಾಪಿಸಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಕ್ಕೆ ವಿರೋಧ ಪಕ್ಷಗಳು ಧ್ವನಿ ಗೂಡಿಸಿದ್ದವು. ಅಲ್ಲದೆ ವಿರೋಧ ಪಕ್ಷಗಳ ಸಮಾವೇಶದ ಸಮಯದಲ್ಲೂ ಸಹ ಕರ್ನಾಟಕ ಬಿಜೆಪಿಯ ಆಪರೇಷನ್ ಕಮಲ ಪದೇ ಪದೇ ಚರ್ಚೆ ಆಗುತ್ತಿದೆ. ಇದು ಬಿಜೆಪಿ ಹೈಕಮಾಂಡ್‌ಗೆ ಮುಜುಗರ ತಂದಿದೆ.

ಆಡಿಯೋನಲ್ಲಿ ಭಾರಿ ಮೊತ್ತದ ಹಣದ ಉಲ್ಲೇಖ

ಆಡಿಯೋನಲ್ಲಿ ಭಾರಿ ಮೊತ್ತದ ಹಣದ ಉಲ್ಲೇಖ

ಆಡಿಯೋ ಕ್ಲಿಪ್‌ನಲ್ಲಿ ಭಾರಿ ಮೊತ್ತದ ಹಣದ ಉಲ್ಲೇಖಗಳು ಆಗಿರುವುದು ಸಹ ಬಿಜೆಪಿ ಹೈಕಮಾಂಡ್‌ ಹಣೆಯ ಮೇಲೆ ಗೀರು ಮೂಡಿಸಿದೆ. ಕೇಂದ್ರವು ಭ್ರಷ್ಟಾಚಾರ ಮುಕ್ತ ಭಾರತದ ಮಾತು ಮಾತನಾಡುತ್ತಿರುವ ಸಮಯದಲ್ಲಿಯೇ ಕರ್ನಾಟಕ ಬಿಜೆಪಿಯು ಭಾರಿ ಮೊತ್ತದ ಹಣದ ಬಗ್ಗೆ ಚರ್ಚೆ ಮಾಡುತ್ತಿರುವುದು ಕೇಂದ್ರದ ಭ್ರಷ್ಟಾಚಾರ ಮುಕ್ತ ಹೇಳಿಕೆಗೆ ಪೆಟ್ಟು ನೀಡಲಿದೆ ಎಂಬುದು ಬಿಜೆಪಿ ಹೈಕಮಾಂಡ್‌ನ ಚಿಂತನೆ ಆಗಿದೆ.

ಆಪರೇಷನ್ ಕಮಲ ಕೈಬಿಡಲು ಸೂಚನೆ

ಆಪರೇಷನ್ ಕಮಲ ಕೈಬಿಡಲು ಸೂಚನೆ

ಈ ಕೂಡಲೇ ಆಪರೇಷನ್ ಕಮಲ ಯತ್ನಗಳನ್ನು ಕೈಬಿಡಬೇಕು ಎಂದು ಅಮಿತ್ ಶಾ ಅವರು ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ. ಈಗಾಗಲೇ ಬಿಜೆಪಿಯು ಲೋಕಸಭೆ ಚುನಾವಣೆ ಪ್ರಚಾರವನ್ನು ಕರ್ನಾಟಕದಲ್ಲಿ ಪ್ರಾರಂಭ ಮಾಡಿದೆ. ಅಮಿತ್ ಶಾ ಸಹ ಗುರುವಾರ ಚಿಕ್ಕಬಳ್ಳಾಪುರಕ್ಕೆ ಆಗಮಿಸುತ್ತಿದ್ದಾರೆ ಇಂತಹಾ ಸಮಯದಲ್ಲಿ ಬಿಜೆಪಿ ವಿರುದ್ಧ ಆರೋಪಗಳು ಕೇಳಿ ಬರುವುದು ಅಮಿತ್ ಶಾ ಗೆ ಇಷ್ಟವಿಲ್ಲ.

ಲೋಕಸಭೆ ಚುನಾವಣೆವರೆಗೂ ಬೇಡ

ಲೋಕಸಭೆ ಚುನಾವಣೆವರೆಗೂ ಬೇಡ

ಲೋಕಸಭೆ ಚುನಾವಣೆ ಮುಗಿಯುವವರೆಗೆ ಆಪರೇಷನ್ ಕಮಲದಿಂದ ದೂರ ಉಳಿಯುವಂತೆ ಹೈಕಮಾಂಡ್ ರಾಜ್ಯ ಬಿಜೆಪಿಗೆ ಸೂಚಿಸಿದೆ. ಆಪರೇಷನ್ ಕಮಲಕ್ಕೆ ಒಳಗಾಗಿ ಮುಂಬೈನಲ್ಲಿ ಇದ್ದ ಅತೃಪ್ತ ಶಾಸಕರು ಸಹ ಇಂದು ವಾಪಸ್ಸಾಗಿದ್ದು, ಆಪರೇಷನ್ ಕಮಲ ಕೆಲವು ತಿಂಗಳುಗಳ ಕಾಲ ಮುಂದೂಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+