30 ಲಕ್ಷ ಮೌಲ್ಯದ ಸಿಗರೇಟ್ ಕದ್ದವರು ಸಿಕ್ಕಿಬಿದ್ದರು

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಏಪ್ರಿಲ್ 22 : ಐಟಿಸಿ ಕಂಪನಿಯ ಗೋಡೌನ್ ಬಾಗಿಲು ಮುರಿದು 30 ಲಕ್ಷ ರೂ. ಮೌಲ್ಯದ ಸಿಗರೇಟ್ ಬಾಕ್ಸ್‌ಗಳನ್ನು ಕದ್ದಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಏಳು ಮಂದಿ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಬಂಧಿತ ಆರೋಪಿಗಳನ್ನು ಯಾದಗಿರಿ ಜಿಲ್ಲೆಯ ಶಹಾಪುರದ ಸಿಂಗನಹಳ್ಳಿಯ ಹುಸೇನ್ ಸಾಬ್ ಪಟೇಲ್ ಹಾಗೂ ಜಪಾನಾಯ್ಕ ತಾಂಡೆಯ ಗೋವಿಂದ ಚೌಹಾಣ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಎರಡು ಬಾಕ್ಸ್ ಸಿಗರೇಟ್, 10.02 ಲಕ್ಷ ರೂ. ಲಾರಿ, ಮತ್ತು ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. [ನೀವು ಸಿಗರೇಟು ಯಾಕೆ ಬಿಡಬೇಕು, ಇಲ್ಲಿವೆ 10 ಕಾರಣಗಳು]

hubballi

2016ರ ಫೆಬ್ರವರಿ 29 ರಂದು ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ಐಟಿಸಿ ಕಂಪನಿಯ ಗೋಡೌನ್‌ಗೆ ನುಗ್ಗಿದ್ದ ಆರೋಪಿಗಳು 37 ಸಿಗರೇಟ್ ಬಾಕ್ಸ್ ಕಳ್ಳತನ ಮಾಡಿದ್ದರು. ಈ ಪ್ರಕರಣದ ತನಿಖೆಗಾಗಿ ಬೆಂಡಿಗೇರಿ ಠಾಣೆಯ ಮತ್ತು ನವನಗರ ಎಪಿಎಂಸಿ ಠಾಣೆಯ ಪೊಲೀಸರು ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿತ್ತು. [ಟೆಕ್ಕಿಗಳ ಕೈಯಿಂದ ಸಿಗರೇಟ್ ಕಿತ್ತುಕೊಂಡ ಸರ್ಕಾರ]

ಬಂಧಿತನಾಗಿರುವ ಗೋವಿಂದ ಚೌಹಾಣ್ ಗೋಡೌನ್‌ಗೆ ಚಿಪ್ಸ್ ತೆಗೆದುಕೊಂಡು ಹೋಗಲು ಬಂದ ವೇಳೆ ಅಲ್ಲಿ ಸಿಗರೇಟ್ ಬಾಕ್ಸ್‌ ಇರುವುದನ್ನು ಗಮನಿಸಿದ್ದ. ಇತರ ಸಹಚರರ ಜೊತೆ ಸೇರಿ ಕಳ್ಳತನದ ಯೋಜನೆ ರೂಪಿಸಿದ್ದ. ಈ ಮೊದಲು ಇವರು ಮುಂಬೈ ಮತ್ತು ಮಹಾರಾಷ್ಟ್ರದಲ್ಲಿಯೂ ಸಿಗರೇಟ್ ಕಳುವು ಮಾಡಿದ್ದರು ಎಂಬುದು ತನಿಖೆಯಿಂದ ಬಹಿರಂಗವಾಗಿದೆ.[ಬಿಡಿಯಾಗಿ ಸಿಗರೇಟು, ಬೀಡಿ ಮಾರಾಟ ನಿಷೇಧ ಸದ್ಯಕ್ಕಿಲ್ಲ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi police arrested two persons and recovered Rs 30 lakhs worth of cigarettes that stolen form ITC cigarettes godown in Hubballi.
Please Wait while comments are loading...