Karnataka Dam Water Level On May 22: ರಾಜ್ಯದಲ್ಲಿ ಮುಂದುವರೆದ ಮಳೆ: ಹಲವು ಆಣೆಕಟ್ಟುಗಳ ನೀರಿನ ಮಟ್ಟ ಎಷ್ಟು?
Karnataka Dam Water Level On May 22: ಇಷ್ಟು ದಿನ ಬೇಸಿಗೆಯಲ್ಲಿ ನೀರಿಲ್ಲದೆ ಒಣಗಿದ್ದ ರಾಜ್ಯದ ಹಲವು ಡ್ಯಾಮ್‌ಗಳಲ್ಲಿ ಈಗ ಜಿವಸೆಲೆ ಬಂದಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಆಗುತ್ತಿರುವ ಮಳೆಯಿಂದಾಗಿ ರಾಜ್ಯದ ಹಲವು ಜಲಾಶಯಗಳಲ್ಲಿ ದಿನೇ ದಿನೇ ನೀರಿನ ಮಟ್ಟದಲ್ಲಿ ಏರಿಕೆ ಆಗುತ್ತಿದ್ದು, ಅದರ ಪಕ್ಕದಲ್ಲಿರುವ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಇಂದು (ಮೇ 22) ರಂದು ರಾಜ್ಯದ ಪ್ರಮುಖ ಜಲಾಶಯಗಳಲ್ಲಿನ ಡ್ಯಾಂಗಳಲ್ಲಿನ ನೀರಿನ ಮಟ್ಟದ ಬಗ್ಗೆ ಅಂಕಿ ಅಂಶ ಇಲ್ಲಿದೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಆಗುತ್ತಿದ್ದು, ಜನ ಖುಷಿಯಾಗಿದ್ದಾರೆ. ಬಿಸಿಲಿನ ತಾಪಕ್ಕೆ ಕಂಗಾಲಾಗಿದ್ದ ಜನರ ಮುಖದಲ್ಲಿ ಈಗ ಹೊಸ ಉತ್ಸಾಹ ಬಂದಿದೆ. ಮೂರು ಜಿಲ್ಲೆಗಳ ಜೀವನಾಡಿ ಕೆಆರ್‌ಎಸ್ ಸೇರಿದಂತೆ, ಹಾರಂಗಿ, ಹೇಮಾವತಿ, ಆಲಮಟ್ಟಿ, ತುಂಗಭದ್ರಾ, ಮಲಪ್ರಭಾ ಡ್ಯಾಮ್‌ಗಳಲ್ಲಿ ಮೈ ತುಂಬಿಕೊಂಡಿವೆ.

ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜನರ ಜೀವನಾಡಿಯಾದ ಕೃಷ್ಣರಾಜ ಸಾಗರ (KRS) ಜಲಾಶಯ ಸೇರಿದಂತೆ ಇನ್ನುಳಿದ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಇಂದು (ಮೇ 22) ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.
1. ಕೆಆರ್‌ಎಸ್ ಜಲಾಶಯ
ಗರಿಷ್ಠ ನೀರಿನ ಮಟ್ಟ - 38.04 ಮೀಟರ್
ಇಂದಿನ ನೀರಿನ ಮಟ್ಟ - 11.23 ಟಿಎಂಸಿ
ಒಳಹರಿವು - 18.32 ಕ್ಯೂಸೆಕ್ಸ್
ಹೊರಹರಿವು - 272 ಕ್ಯೂಸೆಕ್ಸ್
2. ಹಾರಂಗಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 871.38 ಟಿಎಂಸಿ
ಇಂದಿನ ನೀರಿನ ಮಟ್ಟ - 2.96 ಟಿಎಂಸಿ
ಒಳಹರಿವು - 356 ಕ್ಯೂಸೆಕ್ಸ್
ಹೊರಹರಿವು - 200 ಕ್ಯೂಸೆಕ್ಸ್
3. ಆಲಮಟ್ಟಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 519.60 ಮೀಟರ್
ಇಂದಿನ ನೀರಿನ ಮಟ್ಟ - 24.21 ಟಿಎಂಸಿ
ಒಳಹರಿವು - 0 ಕ್ಯೂಸೆಕ್ಸ್
ಹೊರಹರಿವು - 4259 ಕ್ಯೂಸೆಕ್ಸ್
4. ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 497.71 ಟಿಎಂಸಿ
ಇಂದಿನ ನೀರಿನ ಮಟ್ಟ - 3.38 ಟಿಎಂಸಿ
ಒಳಹರಿವು - 0 ಕ್ಯೂಸೆಕ್ಸ್
ಹೊರಹರಿವು - 45 ಕ್ಯೂಸೆಕ್ಸ್
5. ಮಲಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 633.80 ಟಿಎಂಸಿ
ಇಂದಿನ ನೀರಿನ ಮಟ್ಟ - 7.14 ಟಿಎಂಸಿ
ಒಳಹರಿವು - 0 ಕ್ಯೂಸೆಕ್ಸ್
ಹೊರಹರಿವು - 1294 ಕ್ಯೂಸೆಕ್ಸ್
6. ಲಿಂಗನಮಕ್ಕಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 554.44 ಟಿಎಂಸಿ
ಇಂದಿನ ನೀರಿನ ಮಟ್ಟ - 16.10 ಟಿಎಂಸಿ
ಒಳಹರಿವು - 1832 ಕ್ಯೂಸೆಕ್ಸ್
ಹೊರಹರಿವು - 272 ಕ್ಯೂಸೆಕ್ಸ್
7. ಕಬಿನಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 696.13 ಟಿಎಂಸಿ
ಇಂದಿನ ನೀರಿನ ಮಟ್ಟ - 6.24 ಟಿಎಂಸಿ
ಒಳಹರಿವು - 841 ಕ್ಯೂಸೆಕ್ಸ್
ಹೊರಹರಿವು - 300 ಕ್ಯೂಸೆಕ್ಸ್
8. ಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 657.73 ಟಿಎಂಸಿ
ಇಂದಿನ ನೀರಿನ ಮಟ್ಟ - 13.66 ಟಿಎಂಸಿ
ಒಳಹರಿವು - 1556 ಕ್ಯೂಸೆಕ್ಸ್
ಹೊರಹರಿವು - 376 ಕ್ಯೂಸೆಕ್ಸ್
9. ಘಟಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 662,91 ಟಿಎಂಸಿ
ಇಂದಿನ ನೀರಿನ ಮಟ್ಟ - 13.11 ಟಿಎಂಸಿ
ಒಳಹರಿವು - 0 ಕ್ಯೂಸೆಕ್ಸ್
ಹೊರಹರಿವು - 145 ಕ್ಯೂಸೆಕ್ಸ್
10. ಹೇಮಾವತಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 890.58 ಟಿಎಂಸಿ
ಇಂದಿನ ನೀರಿನ ಮಟ್ಟ - 9.28 ಟಿಎಂಸಿ
ಒಳಹರಿವು - 1855 ಕ್ಯೂಸೆಕ್ಸ್
ಹೊರಹರಿವು - 250 ಕ್ಯೂಸೆಕ್ಸ್












Click it and Unblock the Notifications