ಚುನಾವಣಾ ಹೊತ್ತಲ್ಲಿ ಪ್ರತಿಮೆ ಪಾಲಿಟಿಕ್ಸ್ ಜೋರು; ವಿಧಾನಸೌಧದಲ್ಲಿ ಅಮಿತ್ ಶಾರಿಂದ ಪ್ರತಿಮೆಗಳ ಅನಾವರಣ

ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ವಿಧಾನಸೌಧದಲ್ಲಿ ಎರಡು ಪ್ರತಿಮೆಗಳ ಅನಾವರಣಕ್ಕೆ ಸರ್ಕಾರ ಸಿದ್ದತೆ ನಡೆಸಿದೆ.

ಬೆಂಗಳೂರು, ಮಾರ್ಚ್9: ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಚುನಾವಣಾ ಪ್ರಚಾರದ ವೇಳೆ ಕ್ರೆಡಿಟ್ ಗಾಗಿ ರಾಜಕೀಯ ನಾಯಕರು ಆರೋಪ-ಪ್ರತ್ಯಾರೋಪ ಮಾಡುತ್ತಿದ್ದು, ಸರ್ಕಾರ ಚುನಾವಣಾ ಹೊತ್ತಲಿ ಪ್ರತಿಮೆ ಅನಾವರಣಕ್ಕೆ ಮುಂದಾಗಿದೆ.

ಹೌದು, ಈಗಾಗಲೇ ಬೆಳಗಾವಿ ಜಿಲ್ಲೆಯ ರಾಜಹಂಸಗಡದ ಶಿವಾಶಿ ಪ್ರತಿಮೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಪರಸ್ವರ ವಾಗ್ದಾಳಿಯ ಮೂಲಕ ಚುನಾವಣಾ ಹೊತ್ತಲಿ ಕ್ರೆಡಿಟ್ ಗಾಗಿ ಪ್ರಯತ್ನವನ್ನ ನಡೆಸುತ್ತಿರುವ ಬೆನ್ನಲ್ಲೇ ವಿಧಾನಸೌಧದಲ್ಲಿ ಸಮಾನತೆಯ ಹರಿಕಾರ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ ಅನಾವರಣಕ್ಕೆ ಸಿದ್ದತೆಯನ್ನ ನಡೆಸಿದೆ.

 Statue Of Basavanna And Kempegowda In Front Of Vidhana Soudha Unveiling On March 24

ಈ ಕುರಿತು ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ವಿಧಾನಸೌಧದ ಮುಂಭಾಗದಲ್ಲಿ ನಮ್ಮ ಸರ್ಕಾರ ಕೆಂಪೇಗೌಡರ, ಬಸವಣ್ಣ ಪ್ರತಿಮೆ ನಿರ್ಮಾಣ ಮಾಡುತ್ತಿದ್ದೇವೆ. ಈ ಪ್ರತಿಮೆಯನ್ನ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಮಾರ್ಚ್ 24 ರಂದು ಪ್ರತಿಮೆ ಅನಾವರಣವನ್ನು ಮಾಡಲಿದ್ದಾರೆ ಎಂದು ಹೇಳಿದರು.

ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಒಳ ಒಪ್ಪಂದದಿಂದ ನಮಗೆ ಹಿನ್ನೆಡೆಯಾಗಿತ್ತು. ಈ ಬಾರಿ ನಮ್ಮ ಗೆಲುವು ನಿಶ್ಚಿತ, ಕಾಂಗ್ರೆಸ್ 50 ಸೀಟು ದಾಟದ ಪರಿಸ್ಥಿತಿಯಲ್ಲಿದೆ. ಕಾಂಗ್ರೆಸ್‌ನವರಿಗೆ ನಾಯಕರಿಲ್ಲ
ಅವರ ಹೈಕಮಾಂಡ್ ಲಂಡ‌ನ್‌ನಲ್ಲಿ ಸೆಟಲ್ ಆಗಿದ್ದಾರೆ. ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಾನೊಂದು ತೀರ,ನೀನೊಂದು ತೀರ ಅಂತ ಇದ್ದಾರೆ. ಬಹುಶಃ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಲು ಪ್ರಯತ್ನ ಪಡುತ್ತಿರಬೇಕು ಎಂದು ವ್ಯಂಗ್ಯವಾಡಿದರು.

 Statue Of Basavanna And Kempegowda In Front Of Vidhana Soudha Unveiling On March 24

ಅನುದಾನ ತಡೆಹಿಡಿದಿದ್ದಾರೆ ಎಂದು ಶಾಸಕ ಮಂಜುನಾಥ್ ಆರೋಪ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ಕೊಟ್ಟಿದ್ರೆ ಅದನ್ನು ಅವರಿಗೆ ಕೇಳಬೇಕು. ಅನುದಾನ ತರೋದಕ್ಕೆ ಶಕ್ತಿ ಇಲ್ಲ ಅಂದ್ಮೇಲೆ ಯಾಕೆ ಶಾಸಕರಾಗಬೇಕಿತ್ತು, ನಮ್ಮ ಸರ್ಕಾರ 900 ಕೋಟಿಗಿಂತ ಹೆಚ್ಚು ಅನುದಾನ ನೀಡಿದೆ. ಕುಮಾರಸ್ವಾಮಿ ಇದ್ದಾಗ 30 ಕೋಟಿ ಅಷ್ಟೆ ರಿಲೀಸ್ ಆಗಿತ್ತು, ಕುಮಾರಸ್ವಾಮಿ ಬೊಮ್ಮನಹಳ್ಳಿ ಗೆ ಒಂದು ನಯಾಪೈಸೆ ಕೊಟ್ಡಿರಲಿಲ್ಲ.

ಬಿಜೆಪಿ ಇದ್ದ ಕ್ಷೇತ್ರದಲ್ಲಿ 10.20 ಕೋಟಿ ಮಾತ್ರ ಕೊಟ್ಟಿದ್ದರು. ಅವರೇ ತಪ್ಪು ಮಾಡಿ ನಮ್ಮ ಕಡೆ ತೋರಿಸಬಾರದು. ದಾಸರಹಳ್ಳಿ ಕ್ಷೇತ್ರಕ್ಕೆ ಮಾತ್ರ 700 ಕೋಟಿ ಕೊಟ್ಟಿದ್ರೆ, ಬೇರೆ ಕ್ಷೇತ್ರಕ್ಕೆ ಎಷ್ಟು ಕೊಟ್ಟಿದ್ದಾರೆ ದಾಖಲೆ ಕೊಡಲಿ. ಕುಮಾರಸ್ವಾಮಿಯವರು 18 ತಿಂಗಳು ಸರ್ಕಾರ ನಡೆಸೋಕೆ ಆಗಲಿಲ್ಲ. ಸರ್ಕಾರ ಇದ್ದಾಗಲೇ ಅದನ್ನು ಉಳಿಸಿಕೊಳ್ಳೋಕೆ ಆಗಿಲ್ಲ, ಈಗ ಸರ್ಕಾರ ತರುವ ಮಾತನಾಡಿದ್ರೆ ಜನ ನಂಬಲ್ಲ ಎಂದು ಹೇಳಿದರು.

ನಮ್ಮ ಪಕ್ಷದಲ್ಲಿ ಟಿಕೆಟ್ ಯಾರಿಗೆ ಅನ್ನೋದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಟಿಕೆಟ್ ಯಾರಿಗೆ ಅನ್ನೊದನ್ನ ಕುಟುಂಬ ಅಲ್ಲ ಪಕ್ಷ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+