ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಕ್ಫ್ ಆಸ್ತಿ ಕಬಳಿಕೆ; ಹೇಳಿದಂತೆ ನಡೆದು ಕೊಳ್ಳುತ್ತಾರಾ ಸಚಿವೆ ಶಶಿಕಲಾ ಜೊಲ್ಲೆ?

|
Google Oneindia Kannada News

ಬೆಂಗಳೂರು, ಆ. 20: ವಕ್ಫ್ ಆಸ್ತಿ ಕಬಳಿಕೆ ಕುರಿತು ಬಿಜೆಪಿಯಲ್ಲಿ ಮತ್ತೆ ಬೆಳವಣಿಗೆಗಳಾಗುವ ಸಾಧ್ಯತೆಗಳು ಕಂಡು ಬಂದಿವೆ. ವಕ್ಫ್ ಆಸ್ತಿಗಳನ್ನು ಕಬಳಿಸಿರುವ ಕುರಿತು ಹಿಂದೆಯೇ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಸರ್ಕಾರಕ್ಕೆ ವರದಿ ಕೊಟ್ಟಿದ್ದಾರೆ. ಆದರೆ ವರದಿಯನ್ನು ಕೊಟ್ಟು 9 ವರ್ಷಗಳಾಗಿದ್ದರೂ ಯಾವುದೇ ರೀತಿಯ ಕ್ರಮವಾಗಿಲ್ಲ. ಅದಕ್ಕೆ ಅಂದಿನ ಸಿಎಂ ಯಡಿಯೂರಪ್ಪ ಅವರು ಕಾಂಗ್ರೆಸ್ ನಾಯಕರೊಂದಿಗೆ ಶಾಮೀಲಾಗಿರುವುದು ಕಾರಣ ಎಂದು ಅನ್ವರ್ ಮಾಣಿಪ್ಪಾಡಿ ಗಂಭೀರ ಆರೋಪ ಮಾಡಿದ್ದರು. ಈಗ ಸಿಎಂ ಬದಲಾಗಿದ್ದಾರೆ. ಇದೇ ಸಂದರ್ಭದಲ್ಲಿ ನೂತನ ಸಚಿವರು ಮಹತ್ವದ ಹೇಳಿಕೆ ಕೊಟ್ಟಿರುವುದು ಕುತೂಹಲ ಮೂಡಿಸಿದೆ.

ಇದೀಗ ರಾಜ್ಯದ ವಕ್ಫ್ ಆಸ್ತಿ ಕಬಳಿಕೆ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ, ವಕ್ಫ್ ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಆದರೆ ವಕ್ಫ್ ಆಸ್ತಿಯನ್ನು ಕರ್ನಾಟಕ ವಕ್ಫ್ ಬೋರ್ಡ್‌ಗೆ ಹಿಂದಕ್ಕೆ ಪಡೆಯಲು ಆಸ್ತಿ ಅತಿಕ್ರಮಣದ ಕುರಿತು 2012 ಮಾರ್ಚ್ 26ರಂದು ಆಗ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಸರ್ಕಾರಕ್ಕೆ ವರದಿ ಕೊಟ್ಟಿದ್ದರು. ಆದರೆ ಆ ವರದಿಯನ್ನು ಸದನದಲ್ಲಿ ಮಂಡಿಸಿ ಅಂಗೀಕಾರ ಪಡೆದಿಲ್ಲ. ಆದರೆ ವರದಿ ಬಗ್ಗೆ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡದಿರುವುದು ಕುತೂಹಲ ಮೂಡಿಸಿದೆ.

ರಾಜ್ಯದ ಮುಜರಾಯಿ ದೇವಸ್ಥಾನಗಳ ಆಸ್ತಿ ಕಬಳಿಸಿದವರಿಗೆ ಶುರುವಾಯ್ತು ಸಂಕಷ್ಟ!ರಾಜ್ಯದ ಮುಜರಾಯಿ ದೇವಸ್ಥಾನಗಳ ಆಸ್ತಿ ಕಬಳಿಸಿದವರಿಗೆ ಶುರುವಾಯ್ತು ಸಂಕಷ್ಟ!

ವಕ್ಫ್ ಆಸ್ತಿ ಮರಳಿ ಹಿಂದಕ್ಕೆ ಪಡೆಯಲಾಗುವುದು!

ವಕ್ಫ್ ಆಸ್ತಿ ಮರಳಿ ಹಿಂದಕ್ಕೆ ಪಡೆಯಲಾಗುವುದು!

ವಿಕಾಸಸೌಧದಲ್ಲಿ ವಕ್ಫ್ ಮತ್ತು ಹಜ್ ಇಲಾಖೆ ಅಧಿಕಾರಿಗಳ ಸಭೆಯನ್ನು ಮುಜರಾಯಿ, ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ನಡೆಸಿದ್ದಾರೆ. ಆ ಬಳಿಕ ಮಾತನಾಡಿರುವ ಅವರು, ರಾಜ್ಯದಲ್ಲಿ ವಕ್ಫ್ ಮಂಡಳಿಗೆ ಸಂಬಂಧಿಸಿದ 1,05,885 ಎಕರೆ ಜಮೀನು ಗುರುತಿಸಲಾಗಿದೆ. ಜೊತೆಗೆ 32,192 ವಕ್ಫ್ ಆಸ್ತಿ ನೊಂದಣಿಯಾಗಿವೆ. ಅದರೊಂದಿಗೆ ಮಂಡಳಿಗೆ ಸೇರಿರುವ 8,480 ಎಕರೆ ಒತ್ತುವರಿಯಾಗಿರುವ ಮಾಹಿತಿ ಇದೆ. ಈ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಆದಷ್ಟು ಶೀಘ್ರ ಈ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.

ಜೊತೆಗೆ ರಾಜ್ಯದ 149 ತಾಲೂಕುಗಳ ವಕ್ಫ್ ಆಸ್ತಿ ಗೆಜೆಟ್ ಹೊರಡಿಸಲಾಗಿದೆ. ವಕ್ಫ್ ಇಲಾಖೆಯಲ್ಲಿ 355 ಸಿಬ್ಬಂದಿ ಇದ್ದಾರೆ. ಇನ್ನು 84 ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಯಡಿಯೂರಪ್ಪರಿಗೆ ಅದೃಷ್ಟ ತಂದಿದ್ದ ಬಂಗಲೆ ಪಕ್ಕದ ಸರ್ಕಾರಿ ನಿವಾಸಕ್ಕೆ ಸಿಎಂ ಬೊಮ್ಮಾಯಿ ಶಿಫ್ಟ್!ಯಡಿಯೂರಪ್ಪರಿಗೆ ಅದೃಷ್ಟ ತಂದಿದ್ದ ಬಂಗಲೆ ಪಕ್ಕದ ಸರ್ಕಾರಿ ನಿವಾಸಕ್ಕೆ ಸಿಎಂ ಬೊಮ್ಮಾಯಿ ಶಿಫ್ಟ್!

ಕೇಂದ್ರಕ್ಕೆ ಪತ್ರ ಬರೆದಿದ್ದ ಬಿಜೆಪಿ ನಾಯಕ!

ಕೇಂದ್ರಕ್ಕೆ ಪತ್ರ ಬರೆದಿದ್ದ ಬಿಜೆಪಿ ನಾಯಕ!

ಇದೇ ಸಂದರ್ಭದಲ್ಲಿ ವಕ್ಪ್ ಆಸ್ತಿ ಕಬಳಿಕೆ ಕುರಿತು ಅನ್ವರ್ ಮಾನಿಪ್ಪಾಡಿ ನೀಡಿರುವ ವರದಿಯನ್ನು ಇನ್ನೂ ನೋಡಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವೆ ಶಶಿಕಲಾ ಜಿಲ್ಲೆ ಹೇಳಿದ್ದಾರೆ. ಆದರೆ ತಾವು ಮಂಡಿಸಿದ್ದ ವರದಿಯನ್ನು ಸರ್ಕಾರ ಪರಿಗಣನೆ ಮಾಡಿಲ್ಲ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಆರೋಪಿಸಿದ್ದರು. ಅದರಲ್ಲಿಯೂ ಅವರು ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಅವರ ವಿರುದ್ಧವೇ ಕೇಂದ್ರಕ್ಕೆ ದೂರು ಕೊಟ್ಟಿದ್ದರು.

ಸಂಪುಟ ಸಭೆ: ರಾಜ್ಯಕ್ಕಿಲ್ಲ ಕೊರೊನಾ ಮೂರನೇ ಅಲೆ ಆತಂಕ ಎಂಬ ತೀರ್ಮಾನಕ್ಕೆ ಬಂದ ರಾಜ್ಯ ಸರ್ಕಾರ!ಸಂಪುಟ ಸಭೆ: ರಾಜ್ಯಕ್ಕಿಲ್ಲ ಕೊರೊನಾ ಮೂರನೇ ಅಲೆ ಆತಂಕ ಎಂಬ ತೀರ್ಮಾನಕ್ಕೆ ಬಂದ ರಾಜ್ಯ ಸರ್ಕಾರ!

ಯಡಿಯೂರಪ್ಪ ವಿರುದ್ಧವೇ ಪತ್ರ ಬರೆದಿದ್ದ ಮಾಣಿಪ್ಪಾಡಿ!

ಯಡಿಯೂರಪ್ಪ ವಿರುದ್ಧವೇ ಪತ್ರ ಬರೆದಿದ್ದ ಮಾಣಿಪ್ಪಾಡಿ!

ಸುಮಾರು 4 ಲಕ್ಷ ಕೋಟಿ ರೂಪಾಯಿಗಳಿಗೂ ಹಗರಣ ಎನ್ನಲಾಗುವ ರಾಜ್ಯ ವಕ್ಫ್ ಮಂಡಳಿ ಹಗರಣ ವರದಿಯನ್ನು ಕಾಂಗ್ರೆಸ್ ನಾಯಕರ ಅನುಕೂಲಕ್ಕೆ ತಕ್ಕಂತೆ ಹತ್ತಿಕ್ಕಲು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಕುಟುಂಬ ರಾಜಿ ಮಾಡಿಕೊಂಡಿದೆ ಎಂದು ಬಿಜೆಪಿ ನಾಯಕ ಅನ್ವರ್ ಮಾಣಿಪ್ಪಾಡಿ ಅವರು ಕಳೆದ ಮೇ ತಿಂಗಳಿನಲ್ಲಿ ಗಂಭೀರ ಆರೋಪ ಮಾಡಿದ್ದರು. ವಕ್ಫ ಆಸ್ತಿ ಹಗರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಸೇರಿದಂತೆ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದಿದ್ದರು. ಹೀಗಾಗಿ ಹಗರಣದ ಬಗ್ಗೆ ನೂತನ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ವರದಿಯ ಬಗ್ಗೆ ಯಾವ ಕ್ರಮಕೈಗೊಳ್ಳುತ್ತಾರೆ ಎಂಬುದು ಮುಂದಿನ ಬೆಳವಣಿಗೆಗೆ ಕಾರಣವಾಗಲಿದೆ.

Recommended Video

ಬಸವರಾಜ್ ಬೊಮ್ಮಾಯಿ ಅವರ ಫೇವರೆಟ್ ಟಾಪ್ 3 ಹೀರೋಯಿನ್ಸ್ | Oneindia Kannada
ಕೊಟ್ಟಿರುವ ಜವಾಬ್ದಾರಿ ನಿಭಾಯಿಸುತ್ತೇನೆ

ಕೊಟ್ಟಿರುವ ಜವಾಬ್ದಾರಿ ನಿಭಾಯಿಸುತ್ತೇನೆ

ಇದೇ ಸಂದರ್ಭದಲ್ಲಿ ತಮ್ಮ ಖಾತೆ ಬದಲಾವಣೆ ಬಗ್ಗೆ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದ್ದಾರೆ. "ಖಾತೆ ಬದಲಾವಣೆಯ ಬಗ್ಗೆ ನನಗೆ ಯಾವುದೇ ಬೇಸರ ಇಲ್ಲ. ಪಕ್ಷದ ನಾಯಕರು ಯಾವ ಜವಾಬ್ದಾರಿ ವಹಿಸುತ್ತಾರೆಯೋ ಅದನ್ನು ನಿಭಾಯಿಸುತ್ತೇನೆ. ಆಧ್ಯಾತ್ಮದಲ್ಲಿ ನನಗೆ ಆಸಕ್ತಿ ಇರುವುದರಿಂದ ಮುಜರಾಯಿ ಇಲಾಖೆ ಬಗ್ಗೆ ಬೇಸರ ಇಲ್ಲ.

ಹಜ್ ಮತ್ತು ವಕ್ಫ್ ಖಾತೆ ನೀಡಿರುವುದೂ ಖುಷಿ ತಂದಿದೆ. ಎರಡೂ ಇಲಾಖೆಗಳ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಂಡು ಒಳ್ಳೆಯ ಕೆಲಸ ಮಾಡುತ್ತೇನೆ" ಹೇಳಿದ್ದಾರೆ.


ಹೀಗಾಗಿ ಶಶಿಕಲಾ ಜೊಲ್ಲೆ ಅವರ ಕಾಲದಲ್ಲಾದರೂ ವಕ್ಫ್ ಆಸ್ತಿ ಕಬಳಿಕೆ ಬೃಹತ್ ಹಗರಣದ ಕುರಿತು ತನಿಖೆ ನಡೆದು, ಆಸ್ತಿ ಮರಳಿ ವಕ್ಫ್ ಮಂಡಳಿಗೆ ಸೇರುತ್ತದೆ ಎಂಬ ಭರವಸೆಯಲ್ಲಿ ಮುಸ್ಲಿಂ ಸಮುದಾಯದ ಜನರಿದ್ದಾರೆ.

English summary
Waqf and Hajj Minister Shashikala Jolle said the state govt would take immediate steps to resolve the Waqf property encroachment cases in the state. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X