ಕೇರಳದಂತೆ ರಾಜ್ಯದಲ್ಲಿ ಇಲಿಜ್ವರ ಭೀತಿ ಇಲ್ಲ : ಆರೋಗ್ಯ ಇಲಾಖೆ
ಬೆಂಗಳೂರು, ಸೆಪ್ಟೆಂಬರ್ 5: ಪ್ರವಾಹ ಬಂದು ಇದೀಗ ಮೆಲ್ಲಗೆ ಚೇತರಿಸಿಕೊಳ್ಳುತ್ತಿರುವ ಕೇರಳ ರಾಜ್ಯದಲ್ಲಿ ಇಲಿಜ್ವರ ಕಾಣಿಸಿಕೊಂಡಿದ್ದು ಇದುವರೆಗೆ 43ಮಂದಿ ಬಲಿಯಾಗಿದ್ದಾರೆ. ಆದರೆ ಕರ್ನಾಟಕದಲ್ಲಿ ಇಲಿಜ್ವರದ ಭೀತಿ ಇಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಕೇರಳದಂತೆ ಕರ್ನಾಟಕದ ಕೊಡಗಿನಲ್ಲೂ ಕೂಡ ಪ್ರವಾಹ ಬಂದೊದಗಿತ್ತು, ಸಾವಿರಾರು ಎಕರೆ ಆಸ್ತಿ ಪಾಸ್ತಿ ನಾಶವಾಗಿತ್ತು, ಲಕ್ಷಾಂತರ ಮಂದಿ ನಿರಾಶ್ರಿತರಾಗಿ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿದ್ದರು. ಆದರೂ ಕರ್ನಾಟಕದಲ್ಲಿ ಇಲಿಜ್ವರ ಭೀತಿ ಇಲ್ಲ ಯಾರೂ ಕೂಡ ಭಯಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೆಪ್ಟೋಸ್ಟಿರೋಸಿಸ್ ಎಂದು ಕರೆಯಲಾಗುವ ಈ ರೋಗ ಸಾಂಕ್ರಾಮಿಕವಾಗಿದ್ದು, ಕಲುಷಿತ ನೀರು ಸೇವನೆಯಿಂದ ಬರುತ್ತದೆ. ಕೇರಳ ತ್ರಿಶೂಲ್, ಪಾಲಕ್ಕಾಡ್, ಕಲ್ಲಿಕೋಟೆ, ಮಳಪ್ಪುರಂ ಹಾಗೂ ಕಣ್ಣೂರು ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಬಿಲದಲ್ಲಿ ವಾದವಾಗಿದ್ದ ಇಲಿಗಳು ಪ್ರವಾಹ ಸಂದರ್ಭ ಹಾಗೂ ಮಳೆಗಾಲದಲ್ಲಿ ಹೊರಬಂದು ಮೂತ್ರ ಮಾಡುವುದರಿಂದ ನೀರು ಕಲುಷಿತಗೊಳ್ಳುತ್ತದೆ. ಈ ನೀರನ್ನು ಸೇವಿಸುವುದರಿಂದ ಇಲಿಜ್ವರ ಬರುವ ಸಾಧ್ಯತೆ ಇಲ್ಲ.

ಕೊಡಗು ಸೇರಿ ರಾಜ್ಯದ ವಿವಿಧ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications