ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಂಗಪ್ಪಗೆ ಎಂಎಲ್ ಸಿ ಸ್ಥಾನ: ಕೊನೆಗೂ ಯಶಸ್ವಿಯಾದ ರಾಜ್ಯ ಸರ್ಕಾರ

ಸಿ.ಎಂ. ಲಿಂಗಪ್ಪ ಅವರಿಗೆ ಕೊನೆಗೂ ಸಿಕ್ಕಿದು ವಿಧಾನ ಪರಿಷತ್ ಸದಸ್ಯತ್ವದ ಅವಕಾಶ. ಲಿಂಗಪ್ಪ ಅವರನ್ನು ಎಂಎಲ್ ಸಿ ಮಾಡುವ ಸಲುವಾಗಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೆಲ ದಿನಗಳ ಹಿಂದೆ ವಾಪಸ್ ಕಳುಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮ

|
Google Oneindia Kannada News

ಬೆಂಗಳೂರು, ಜೂನ್ 10: ಇತ್ತೀಚೆಗಷ್ಟೇ, ವಿಧಾನ ಪರಿಷತ್ತಿನ ಸ್ಥಾನಕ್ಕೆ ನಾಮಾಂಕಿತಗೊಳ್ಳುವ ಅವಕಾಶದಿಂದ ವಂಚಿತರಾಗಿದ್ದ ಸಿ.ಎಂ. ಲಿಂಗಪ್ಪ ಅವರಿಗೆ ಯಶಸ್ಸು ದೊರೆತಿದೆ. ಇತ್ತೀಚೆಗೆ, ಲಿಂಗಪ್ಪ ಅವರನ್ನು ರಾಜ್ಯ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನಗೊಳಿಸಿ ರಾಜ್ಯ ಸರ್ಕಾರ ಎರಡನೇ ಬಾರಿಗೆ ಕಳುಹಿಸಿದ್ದ ಶಿಫಾರಸಿಗೆ ರಾಜ್ಯಪಾಲರಾದ ವಜುಭಾಯಿ ವಾಲಾ ಅಂಕಿತ ಹಾಕಿದ್ದಾರೆ.

State Government gets success as Lingappa got green signal to become MLC

ವಿಧಾನ ಪರಿಷತ್ ನಲ್ಲಿ ಖಾಲಿ ಇದ್ದ ಮೂರು ಸ್ಥಾನಗಳಿಗೆ ಪಿ.ಆರ್. ರಮೇಶ್, ಮೋಹನ್‌ ಕೊಂಡಜ್ಜಿ, ಸಿ.ಎಂ. ಲಿಂಗಪ್ಪ ಅವರನ್ನು ನಾಮನಿರ್ದೇಶನ ಮಾಡುವಂತೆ ಸರ್ಕಾರ ಇತ್ತೀಚೆಗೆ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ರಮೇಶ್‌ ಮತ್ತು ಕೊಂಡಜ್ಜಿ ನಾಮನಿರ್ದೇಶನಕ್ಕೆ ಅವರು ಒಪ್ಪಿಗೆ ಸೂಚಿಸಿದ್ದ ವಜುಭಾಯಿ ವಾಲಾ, ಲಿಂಗಪ್ಪ ಅವರ ಹೆಸರನ್ನು ನಿರಾಕರಿಸಿದ್ದರು. ಶಿಕ್ಷಣ ಮತ್ತು ಸಮಾಜ ಸೇವೆ ವಿಭಾಗದಲ್ಲಿ ಲಿಂಗಪ್ಪ ಅವರನ್ನು ನಾಮನಿರ್ದೇಶನ ಮಾಡಲು ಅವಕಾಶ ಇಲ್ಲ ಎಂಬುದಾಗಿ ತಮ್ಮ ನಿಲುವನ್ನು ರಾಜ್ಯಪಾಲರು ಸಮರ್ಥಿಸಿಕೊಂಡಿದ್ದರು.

ಪರಿಷತ್ ನಾಮ ನಿರ್ದೇಶನ: ಇಬ್ಬರ ಹೆಸರು ಒಕೆ, ಲಿಂಗಪ್ಪ ಹೆಸರು ಯಾಕೆ?ಪರಿಷತ್ ನಾಮ ನಿರ್ದೇಶನ: ಇಬ್ಬರ ಹೆಸರು ಒಕೆ, ಲಿಂಗಪ್ಪ ಹೆಸರು ಯಾಕೆ?

ಹೀಗಾಗಿ, ರಾಜ್ಯ ಸರ್ಕಾರ ಎರಡನೇ ಬಾರಿಗೆ ಅದೇ ಪ್ರಸ್ತಾವನೆಯನ್ನು ರಾಜ್ಯಪಾಲರಿಗೆ ರಾಜ್ಯ ಸರ್ಕಾರ ಕಳುಹಿಸಿತ್ತು. ಈಗ ರಾಜ್ಯಪಾಲರು ಅದಕ್ಕೆ ಒಪ್ಪಿಗೆ ಸೂಚಿಸಿದ್ದು, ಲಿಂಗಪ್ಪ ಅವರ ವಿಧಾನ ಪರಿಷತ್ ಸದಸ್ಯತ್ವಕ್ಕೆ ಹಸಿರು ನಿಶಾನೆ ಸಿಕ್ಕಂತಾಗಿದೆ.

English summary
Karnataka government got success in nominating C.M. Lingappa as the Member of Legislative Council of Karnataka Assembly as Governor of Karnataka gives green signal for his nomination proposal from government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X