ಕುತೂಹಲಕ್ಕಾಗಿ ಬಾಲಕಿ ರೇಪ್ ಮಾಡಿದ ಬಾಲಕ

ಬೆಂಗಳೂರು, ಜ. 8 : ಬೇಗೂರು ಪಟೇಲ್ ಲೇಔಟ್ ಬಳಿ ಒಂಬತ್ತು ವರ್ಷದ ಶಾಲಾ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಪ್ರಕರಣವನ್ನು ಮೂರೇ ದಿನದಲ್ಲೇ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭೇದಿಸಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಕುತೂಹಲಿ ರೇಪಿಸ್ಟ್ ನನ್ನು ಶಾಲಾ ಪರಿತ್ಯಕ್ತ 13 ವರ್ಷದ ಬಾಲಕ ಎಂದು ಗುರುತಿಸಲಾಗಿದೆ.

''ಬೇಗೂರಿನ ಖಾಸಗಿ ಶಾಲೆಯಲ್ಲಿ 2 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಮೇಲೆ ಜ. 4 ರಂದು ಮಧ್ಯಾಹ್ನ 12.30 ಸುಮಾರಿನಲ್ಲಿ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಬಾಲಕಿಯನ್ನು ಹಿಂಬಾಲಿಸಿದ್ದ ಬಾಲಕ ಮುಖಕ್ಕೆ ಬಟ್ಟೆ ಕಟ್ಟಿ ಅಪಹರಿಸಿ ನಿರ್ಜನ ಪ್ರದೇಶದಲ್ಲಿ ರೇಪ್ ಮಾಡಿದ್ದ. ಬಂಧಿತ ಬಾಲಕನ ಶಾಲಾ ವಯಸ್ಸು ದೃಢಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

8ನೇ ತರಗತಿ ನಂತರ ಶಾಲೆಗೆ ಗುಡ್ ಬೈ ಹೇಳಿ ಪುಂಡ ಪೋಕರಿಗಳ ಸಹವಾಸ ಮಾಡಿದ ಈ ಬಾಲಕನಿಗೆ ಪೋರ್ನ್ ವಿಡಿಯೋಗಳನ್ನು ನೋಡುವ ಅಭ್ಯಾಸ ಬೆಳೆದು ಬಿಟ್ಟಿತ್ತು ಎನ್ನಲಾಗಿದೆ. ಈತನ ಅಪ್ಪ ಅಮ್ಮ ಕೂಲಿ ಕೆಲಸಗಾರರಾಗಿದ್ದು ಬಾಲಕಿಯ ಮನೆ ಸಮೀಪವೇ ನೆಲೆಸಿದ್ದಾರೆ. [ಶಾಲಾ ಬಾಲಕಿ ಮೇಲೆ ಅತ್ಯಾಚಾರ]

ಕೋರಮಂಗಲ ಠಾಣೆ ಇನ್ಸ್ ಪೆಕ್ಟರ್ ಪ್ರಶಾಂತ್ ಬಾಬು, ಹುಳಿಮಾವು ಠಾಣೆ ರವಿಶಂಕರ್, ಎಲೆಕ್ಟಾನಿಕ್ ಸಿಟಿಯ ವಿ.ಬಿ.ಭಾಸ್ಕರ್, ತಿಲಕ್ ನಗರ ಸಜ್ಜದ್ ಖಾನ್ ಮತ್ತಿತರರು ತನಿಖಾ ತಂಡ ಬಾಲಕನ ಬಂಧನಕ್ಕೂ ಮುನ್ನ ಸುಮಾರು 50 ಜನರನ್ನು ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಬಾಲಕಿ ಓದುತ್ತಿರುವ ಶಾಲೆಯ ಸಿಸಿಟಿವಿಯಲ್ಲಿ ಕಂಡ ದೃಶ್ಯದಲ್ಲಿ ಈ ಬಾಲಕ ಅನುಮಾನಾಸ್ಪದವಾಗಿ ಓಡಾಡುತ್ತಿದ್ದದ್ದು ಕಂಡು ಬಂದಿದೆ. ವಿಚಾರಣೆಗೆ ಒಳಪಡಿಸಿದಾಗ ಘಟನೆ ನಡೆದ ಸ್ಥಳಕ್ಕೆ ಕರೆದೊಯ್ದಿದ್ದಾನೆ, ಅಲ್ಲಿ ರಕ್ತದ ಕಲೆಯಿಂದ ಕೂಡಿದ ಆತನ ಒಳಉಡುಪು ಸಿಕ್ಕಿದೆ. ಪೊಲೀಸರು ವೈದ್ಯಕೀಯ ಪರೀಕ್ಷೆ ನಂತರ ಈ ಬಾಲಕನೇ ಆರೋಪಿ ಎಂದು ದೃಢಪಡಿಸಿದ್ದಾರೆ.

ಗೌರೀಶ್ ಅಕ್ಕಿ ಲ್ಯಾಪ್ ಟಾಪ್ ಕಳುವು ಪ್ರಸಂಗ

ಗೌರೀಶ್ ಅಕ್ಕಿ ಲ್ಯಾಪ್ ಟಾಪ್ ಕಳುವು ಪ್ರಸಂಗ

ಚಿತ್ರ ನಿರ್ದೇಶಕ,ನಟ, ಒಂದು ಕಾಲದ ಸ್ಟಾರ್ ನಿರೂಪಕ ಗೌರೀಶ್ ಅಕ್ಕಿ ಅವರ ಕಾರಿನ ಗ್ಲಾಸ್ ಒಡೆದು ಅಲ್ಲಿಂದ ಲ್ಯಾಪ್​ಟಾಪ್​ ಕಳ್ಳತನ ಮಾಡಿದ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್​ ಬಳಿ ನಡೆದಿದೆ.

ಮಂಗಳವಾರ ಬೆಳಗ್ಗೆ ಸುಮಾರು 10 ಗಂಟೆಗೆ ಗೌರೀಶ್, ಚಿತ್ರ ನಿರ್ಮಾಪಕ ಶಶಿಕುಮಾರ್​ ಭೇಟಿಯಾಗಲು ನಂದಿನಿ ಲೇಔಟ್​ಗೆ ಹೋಗಿದ್ರು. ತಮ್ಮ ಕಾರನ್ನ ಅಯ್ಯಪ್ಪ ದೇವಸ್ಥಾನದ ಬಳಿ ನಿಲ್ಲಿಸಿ ನಿರ್ಮಾಪಕ ಶಶಿಕುಮಾರ್​ರನ್ನ ಭೇಟಿಯಾಗಿ ವಾಪಾಸು ಬರುವಷ್ಟರಲ್ಲಿ ಕಳ್ಳ ಕರಾಮತ್ತು ತೋರಿಸಿದ್ದ.

ಕಾರಿನ ಗ್ಲಾಸ್​ ಒಡೆದು ಒಳಗಿದ್ದ ಡೆಲ್​ ಲ್ಯಾಪ್​ಟಾಪ್​ ಎಗರಿಸಿಬಿಟ್ಟಿದ್ದ. ಈ ಲ್ಯಾಪ್​ಟಾಪ್​ನಲ್ಲಿ ಅವ್ರು ನಿರ್ದೇಶಿಸಲಿರುವ 'ಸಿನಿಮಾ ಮೈ ಡಾರ್ಲಿಂಗ್' ಚಿತ್ರದ ಸ್ಕ್ರಿಪ್ಟ್​ ಸೇರಿದಂತೆ ಹಲವು ಮಹತ್ವದ ದಾಖಲಾತಿಗಳಿದ್ದವು. ಕೂಡಲೇ ಗೌರೀಶ್ ಅಕ್ಕಿ ಮಹಾಲಕ್ಷ್ಮಿ ಲೇಔಟ್​ ಠಾಣೆಗೆ ದೂರು ನೀಡಿದ್ರು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಕಳವಾದ ಮೂರು ತಾಸುಗಳಲ್ಲಿ ಕಳ್ಳನನ್ನ ಬಂಧಿಸಿ, ಆತನಿಂದ ಲ್ಯಾಪ್​ಟಾಪನ್ನ ವಶಪಡಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಹಲ್ಲೆ ನಡೆಸಿ, ಜೀವ ಬೆದರಿಕೆ ನೀಡಿದ ಪ್ರಕರಣ

ಹಲ್ಲೆ ನಡೆಸಿ, ಜೀವ ಬೆದರಿಕೆ ನೀಡಿದ ಪ್ರಕರಣ

ಮಲ್ಪೆ: ಪಿರ್ಯಾದಿ ಶ್ರೀಮತಿ ಜಾಹಿರಾ ಬಾನು ಗಂಡ ನಿಸಾರ್ ಅಹಮ್ಮದ್ ವಾಸ ಮದ್ವನಗರ, ಕೊಡವೂರು ಗ್ರಾಮ ಎಂಬವರ ಮನೆಯ ಟಾಯ್ಲೆಟ್ ಪಿಟ್ ಗೆ ಸಿಮೆಂಟ್ ರಿಂಗನ್ನು ಹಾಕುವರೆ ಪಿರ್ಯಾದಿದಾರರ ಮಗ ವಾಸೀಮ್ ಅಕ್ರಂ ಹಾಗೂ ಪಿರ್ಯಾದಿದಾರರ ತಮ್ಮನವರಾದ ಮುಬೀನ್ ಸಿಕಂದರ್ ಹಾಗೂ ಕೆಲಸಗಾರರು ಕೆಲಸಮಾಡುತ್ತಿರುವ ಸಮಯ ಆರೋಪಿತ ಶಂಶುದ್ದೀನ್ ಎಂಬವರು ಪಿರ್ಯಾದಿದಾರರ ಮಗ ಹಾಗೂ ತಮ್ಮಂದಿರಿಗೆ ಅವಾಚ್ಯ ಶಬ್ದಗಳಿಂದ ಬೈದು ಅವರನ್ನು ಕೈಗಳಿಂದ ತಡೆದು ನಿಲ್ಲಿಸಿ ಕೆಲಸ ಮಾಡದಂತೆ ತಡೆದಿದ್ದು, ಆರೋಪಿಗಳಾದ ಶಂಶುದ್ದೀನ್ ಮತ್ತು ಅಬ್ದುಲ್ ಮಜೀದ್ ರವರು ಪಿರ್ಯಾದಿದಾರರಿಗೆ ಹಲ್ಲೆ ನಡೆಸಿ, ಪಿರ್ಯಾದಿದಾರರ ಮಗ ವಾಸಿಂ ಅಕ್ರಂ ನಿಗೆ ಆರೋಪಿತ ಅಬ್ದುಲ್ ಮಜೀದ್ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಲು ಬಂದಾಗ ಆತನು ತಪ್ಪಿಸಿಕೊಂಡಿದ್ದು ಆ ಸಮಯ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾನೆ ಎಂಬುದಾಗಿ ಶ್ರೀಮತಿ ಜಾಹಿರಾ ಬಾನುರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 09/2014 ಕಲಂ 341, 504, 323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವಿನೋಬನಗರ ಠಾಣೆ : ಕಳ್ಳತನ ಪ್ರಕರಣ

ವಿನೋಬನಗರ ಠಾಣೆ : ಕಳ್ಳತನ ಪ್ರಕರಣ

* ನ್ಯಾಷನಲ್ ಪಾಲಿಟೆಕ್ನಿಕ್ ನವಲೆ ಶಿವಮೊಗ್ಗ ಇಲ್ಲಿ ಯಾರೋ ಕಳ್ಳರು ಸುಮಾರು 24,299 ರೂ ಬೆಲೆ ಬಾಳುವ ಗಣಕ ಯಂತ್ರ ಹಾಗೂ ಕೇಬಲ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
* ಶಿವಮೊಗ್ಗ ಗ್ರಾಮಾಂತರ ಠಾಣೆ : ಕಳ್ಳತನ ಪ್ರಕರಣ

ಯಾರೋ ಕಳ್ಳರು ಹರಮಘಟ್ಟದ ಸಂಗಮೇಶ್ವರ ಪ್ರೌಢಶಾಲೆಯ ಅಕ್ಷರ ದಾಸೋಹದ ಕೊಠಢಡಿಯ ಬೀಗ ಮುರಿದು ಸುಮಾರು 6000/- ರೂ ಬೆಲೆ ಬಾಳು 3 ಹೆಚ್.ಪಿ. ಗ್ಯಾಸ್ ಸಿಲೇಂಡರ್ ಗಳನು ಕಳ್ಳತನ ಮಾಡಿರುತ್ತಾರೆ.

ಅಂಚೆ ಕಛೇರಿಯಲ್ಲಿ ಕಳ್ಳತನ

ಅಂಚೆ ಕಛೇರಿಯಲ್ಲಿ ಕಳ್ಳತನ

ವೇಮಗಲ್ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಭಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು, ನರಸಾಪುರ ಗ್ರಾಮದಲ್ಲಿರುವ ಅಂಚೆ ಕಛೇರಿಯಲ್ಲಿ ಸಂಭವಿಸಿರುತ್ತದೆ.

ದಿನಾಂಕ 06/01/2014 ರಂದು ರಾತ್ರಿ ಸಮಯದಲ್ಲಿ ಅಂಚೆ ಕಛೇರಿಯ ಬೀಗವನ್ನು ಮುರಿದು ಒಳ ಪ್ರವೇಶಿಸಿ, ಯಾರೋ ಕಳ್ಳರು ಕಛೇರಿಯಲ್ಲಿದ್ದ ಸುಮಾರು 5,000 ರೂ.ಗಳು ಬೆಲೆ ಬಾಳುವ ಸ್ಕ್ಯಾನರನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08152-243066 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

ಬಂಡೆಗೆ ಟ್ರ್ಯಾಕ್ಟರ್ ಡಿಕ್ಕಿ, ಒಬ್ಬರ ಸಾವು

ಬಂಡೆಗೆ ಟ್ರ್ಯಾಕ್ಟರ್ ಡಿಕ್ಕಿ, ಒಬ್ಬರ ಸಾವು

ಮೊಳಕಾಲ್ಮೂರು: ನಂ.ಎಪಿ-02/ಟಿಎ-3372/73 ನೇ ಟ್ಯ್ರಾಕ್ಟರ್ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿನ ಕಲ್ಲು ಬಂಡೆಗೆ ಡಿಕ್ಕಿ ಪಡಿಸಿದ ಪರಿಣಾಮ ಟ್ಯ್ರಾಕ್ಟರ್‍ನಲ್ಲಿದ್ದ ವ್ಯಕ್ತಿಯೊಬ್ಬ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹುಚ್ಚಂಗಿದುರ್ಗ ಗ್ರಾಮದ ಅಡವಿ ಮಾರಮ್ಮ ದೇವಸ್ಥಾನದ ಮುಂದಿನ ರಸ್ತೆಯಲ್ಲಿ ನಿನ್ನೆ ಸಂಜೆ ನಡೆದಿದೆ.

ಅಪಘಾತದಲ್ಲಿ ಆಂದ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆ, ರಾಯದುರ್ಗ ತಾಲ್ಲೂಕ್‍ನ ಮುರುಡಿ ಗ್ರಾಮದ ವಾಸಿ ಶಾತಕುಮಾರ್(25)ರವರ ಎದೆ ಕೈಕಾಲುಗಳಿಗೆ ತೀವ್ರಸ್ವರೂಪದ ಪೆಟ್ಟು ಬಿದ್ದು ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ರಾಂಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+