ಚಿಕ್ಕಪೇಟೆ: ಬಟ್ಟೆ ಅಂಗಡಿಯಲ್ಲಿ ಲಕ್ಷ ಲಕ್ಷ ಕದ್ದು ಸಿಕ್ಕಿಬಿದ್ರು

ಬೆಂಗಳೂರು, ಫೆ.21: ಚಿಕ್ಕಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಡಿಯಲ್ಲಿ ಕೆಲಸಕ್ಕಿದ್ದ ಬಂಗಾಳ ಮೂಲದ ಇಬ್ಬರು ನೌಕರರು ಲಕ್ಷಾಂತರ ರುಪಾಯಿ ದೋಚಿ ಪರಾರಿಯಾಗಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಉಂಡ ಮನೆಗೆ ದ್ರೋಹ ಬಗೆದ ಇವರಿಬ್ಬರನ್ನು ಬಿಹಾರ ತನಕ ಚೇಸ್ ಮಾಡಿದ ಚಿಕ್ಕಪೇಟೆ ಪೊಲೀಸರು ಬಂಧಿಸಿ ಕರೆತಂದಿದ್ದಾರೆ.

ಭಾರತ-ಬಾಂಗ್ಲಾ ದೇಶದ ಗಡಿ ಭಾಗದಲ್ಲಿರುವ ಪಶ್ಚಿಮ ಬಂಗಾಳ ರಾಜ್ಯದ ಕೂಚ್‍ಬೆಹಾರ್ ಜಿಲ್ಲೆಯ ಸಿತಾಯ್ ಎಂಬ ಕುಗ್ರಾಮದಲ್ಲಿ ಪ್ರಸನ್ ‍ಜಿತ್ ದಾಸ್(24), ಅನೀಕ್ ಕೆ.ಆರ್(23) ಎಂಬ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳ ವಶದಿಂದ 13,00,000/-ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಅಂಗಡಿ ಮಾಲೀಕ ಜಿನೇಶ್ ಅವರು ಇವರಿಬ್ಬರ ಮೇಲೆ ಭಾರಿ ನಂಬಿಕೆ ಇಟ್ಟುಕೊಂಡು ಬೀಗ ಹಾಕಿಕೊಂಡು ಬರುವಂತೆ ಕಳೆದ ವಾರ ಹೇಳಿದ್ದರು. ಇದರ ಲಾಭ ಪಡೆದ ಇಬ್ಬರು ಸುಮಾರು 19.50 ಲಕ್ಷ ರು ದೋಚಿ ಪರಾರಿಯಾಗಿದ್ದರು. ಐಷಾರಾಮಿ ಬದುಕು ನಡೆಸಲು ಈ ಕೃತ್ಯ ಎಸೆಗಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾರೆ.

ಚಿಕ್ಕಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ‍ಪೆಕ್ಟರ್ ಎಸ್.ಹಣಮಂತರಾಯ, ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ‍ಪೆಕ್ಟರ್ ಬಿ.ಯು.ಪ್ರದೀಪ್. ಬ್ಯಾಟರಾಯನಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಕೆ.ಪಿ.ಸತ್ಯನಾರಾಯಣ, ಸಬ್ ಇನ್ಸ್ ಪೆಕ್ಟರ್ ಗಳಾದ ವಿ.ಮೋಹನ್ ಕುಮಾರ್, ಹೆಚ್.ಎಂ.ಶಿವಕುಮಾರ್, ಸಿ.ಎಸ್.ಶ್ರೀರಾಮಯ್ಯ, ಎನ್.ಸಿ.ಮಲ್ಲಿಕಾರ್ಜುನ್,ನಾರಾಯಣ, ಎಎಸ್ ‍ಐ ರವಿಸಿಂಗ್ ಹಾಗೂ ಸಿಬ್ಬಂದಿಗಳಾದ ಪುರುಷೋತ್ತಮ್ ಪಿಸಿ. 2162, ಮದುಸೂಧನ್ ಪಿಸಿ. 12636, ಗೋವಿಂದರಾಜು ಪಿಸಿ. 8933, ಎಸ್.ಎಸ್. ಹನುಮಂತ, ಪಿಸಿ. 10511, ಪರಶುರಾಮ್, ಪಿಸಿ. 12640, ಮುರುಗೇಂದ್ರ ಸ್ವಾಮಿ, ಹೆಚ್ ಸಿ 1234 ಮತ್ತು ಜರ್ನಾಧನ್, ಪಿಸಿ 8340 ರವರುಗಳು ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಶಂಕರನಾರಾಯಣದಲ್ಲಿ ಹಲ್ಲೆ ಪ್ರಕರಣ

ಶಂಕರನಾರಾಯಣದಲ್ಲಿ ಹಲ್ಲೆ ಪ್ರಕರಣ

ಶಂಕರನಾರಾಯಣ: ದಿನಾಂಕ 20/02/2014 ರಂದು ಸಂಜೆ 07:45 ಗಂಟೆಗೆ ಪಿರ್ಯಾದಿದಾರರಾದ ರಾಜೇಂದ್ರ (28), ತಂದೆ:ಮುದ್ದಣ್ಣ ಶೆಟ್ಟಿ, ವಾಸ:ಮಲ್ಲಿಕಾ ನಿಲಯ, ಕಂಚಾರು, ಅಂಪಾರು ಗ್ರಾಮ, ಕುಂದಾಪುರ ತಾಲೂಕುರವರು ಕುಂದಾಪುರ ತಾಲೂಕು ಅಂಪಾರು ಗ್ರಾಮದ ಅಂಪಾರು ಪೇಟೆಯ ಬಳಿ ಇರಿಸಿದ್ದ ತನ್ನ ಬೈಕ್‌ನ್ನು ತೆಗೆದುಕೊಂಡು ಬರಲು ಹೋದಾಗ ವಸಂತ ಶೆಟ್ಟಿ ಎಂಬವರು ಹಿಂದಿನ ದ್ವೇಷದಿಂದ ರಾಜೇಂದ್ರರವರನ್ನು ಅಡ್ಡಗಟ್ಟಿ ತೆಡೆದು ನಿಲ್ಲಿಸಿ, ಏಕಾಏಕಿಯಾಗಿ ಹಲ್ಲೆ ನಡೆಸಿದ್ದು, ಅದೇ ಸಮಯ ಅಲ್ಲಿಗೆ ಬಂದ ಸಂದೀಪ ಮತ್ತು ಇನ್ನಿಬ್ಬರು ಕೂಡ ವಸಂತ ಶೆಟ್ಟಿಯೊಂದಿಗೆ ಸೇರಿ ರಾಜೇಂದ್ರರವರಿಗೆ ಕೈಯಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ.

ಈ ಬಗ್ಗೆ ರಾಜೇಂದ್ರರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 23/2014 ಕಲಂ 341, 504, 323, 506 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

ಮುಳಬಾಗಿಲು : ದೊಂಬಿ ಮತ್ತು ಹಲ್ಲೆ ಪ್ರಕರಣ

ಮುಳಬಾಗಿಲು : ದೊಂಬಿ ಮತ್ತು ಹಲ್ಲೆ ಪ್ರಕರಣ

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ದೊಂಬಿ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲ್ಲೂಕು, ಮಡಿವಾಳ ಗ್ರಾಮದಲ್ಲಿ ಸಂಭವಿಸಿರುತ್ತದೆ.

ಬಿ.ಎನ್.ಸತ್ಯನಾರಾಯಣ ಮತ್ತು ಅವರ ಕುಂಟಂಬದವರನ್ನು ಅದೇ ಗ್ರಾಮದ ವೆಂಕಟೇಶ್ ಮತ್ತು ಸೇರಿ ಅಕ್ರಮ ಗುಂಪು ಕಟ್ಟಿಕೊಂಡು ಬಂದು ಲಾಂಗ್, ಮಚ್ಚು, ದೊಣ್ಣೆಗಳನ್ನು ಹಿಡಿದುಕೊಂಡು ಬಂದು ಜಮೀನಿನ ವಿಚಾರದಲ್ಲಿ ಜಗಳ ತೆಗೆದು ಅವಾಚ್ಯ ಶಭ್ದಗಳಿಂದ ನಿಂದನೆ ಮಾಡಿ, ಪ್ರಾಣ ಬೆದರಿಕೆ ಹಾಕಿ, ಹಲ್ಲೆ ಮಾಡಿರುತ್ತಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08152-243066 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

ಮನೆ ಕಳವು ಪ್ರಕರಣ [ ಸಾಗರ ಗ್ರಾಮಾಂತರ ಠಾಣೆ]

ಮನೆ ಕಳವು ಪ್ರಕರಣ [ ಸಾಗರ ಗ್ರಾಮಾಂತರ ಠಾಣೆ]

1]. ಕಲ್ಕೋಪ್ಪ ತೆಪ್ಪಗೋಡು ಗ್ರಾಮದಲ್ಲಿ ಪಿರ್ಯಾದಿ ಬಾಳನ ಧರ್ಮಪ್ಪ ಬಿನ್ ಬಸವಣ್ಯಪ್ಪ ವಾಸ ಕಲ್ಕೋಪ್ಪ ತೆಪ್ಪಗೋಡು ಸಾಗರ ರವರು ಪಕ್ಕದ ಮನೆಯವರ ಜೋಳದ ಒಕ್ಕಲಿಗೆ ಹೊದಂತ ಸಮಯದಲ್ಲಿ ಯಾರೋ ಕಳ್ಳರು ಮನೆಯ ಹಂಚನ್ನು ತೆಗೆದು ಒಳಗೆ ಪ್ರವೇಶಿಸಿ ಪರ್ಸಿನಲ್ಲಿದ್ದ 50,000/- ನಗದು ಮತ್ತು ಬೀರುವಿನಲ್ಲಿದ್ದ ಬಂಗಾರದ ವಿವಿಧ ಒಡವೆಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವರು ಬೆಲೆ, 3,10,000/- ರೂ

2]. ಮಲ್ಲಂದೂರು ಗ್ರಾಮದಲ್ಲಿ ಪಿರ್ಯಾದಿ ಶಿವಮುರ್ತಿ ಬಿನ್ ಸೋಮಪ್ಪ ವಾಸ ದಾಸಕೊಪ್ಪ ಮಲ್ಲಂದೂರು ಸಾಗರ ರವರು ಮನೆಗೆ ಬೀಗ ಹಾಕಿಕೊಂಡು ಗದ್ದೆ ಕೆಲಸಕ್ಕೆ ಹೊದಂತ ಸಮಯದಲ್ಲಿ ಯಾರೋ ಕಳ್ಳರು ಮನೆಯ ಹಿಂದಿನಿಂದ ಬಾಗಿಲು ತೆರೆದು ಪ್ರವೇಶಿಸಿ ಮನೆಯ ಬೀರುವಿನಲ್ಲಿದ್ದ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವರು ಬೆಲೆ, 50,000/- ರೂ

ಲಾರಿ ಡಿಕ್ಕಿ, ಪೊಲೀಸ್ ಕಾನ್ಸ್‍ಟೇಬಲ್ ಸಾವು

ಲಾರಿ ಡಿಕ್ಕಿ, ಪೊಲೀಸ್ ಕಾನ್ಸ್‍ಟೇಬಲ್ ಸಾವು

ಹಿರಿಯೂರು: ರಾತ್ರಿ ಕರ್ತವ್ಯ ನಿರತ ಕಾನ್ಸ್‍ಟೇಬಲ್‍ಗೆ ನಂ: ಕೆಎ-16/ಬಿ-6770 ನೇ ಲಾರಿಯ ಚಾಲಕ ತನ್ನ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ಕಾನ್ಸ್‍ಟೇಬಲ್ ರವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಪಟ್ಟಣದ ವಾಸವಿ ಜ್ಯೂಯಲರ್ಸ್ ಮುಂಭಾಗ ಬಂಬೂ ಬಜಾರ್ ರಸ್ತೆ ತಿರುವಿನ ಎಸ್.ಹೆಚ್.19 ರಸ್ತೆಯಲ್ಲಿ ಈ ದಿನ ಬೆಳಗಿನಜಾವ ನಡೆದಿದೆ.

ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆಂಜನೇಯ ಎಂಬುವವರಿಗೆ ಅಪಘಾತ ಸಂಭವಿಸಿದ್ದು, ಆಂಜನೇಯ ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಚಾಲಕ ರಂಗಸ್ವಾಮಿ ವಿರುದ್ಧ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+