ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೈಂ: ಕ್ರೆಡಲ್ ಆಸ್ಪತ್ರೆ ನಿರ್ಲಕ್ಷ್ಯ, ಬಾಣಂತಿ ಸಾವು, ಇನ್ನಷ್ಟು

By Mahesh
|
Google Oneindia Kannada News

ಬೆಂಗಳೂರು, ಅ. 29: ನಗರದ ಪ್ರತಿಷ್ಠಿತ ಕ್ರೆಡಲ್ ಆಸ್ಪತ್ರೆ ಮೇಲೆ ಬನಶಂಕರಿಯ ನಿವಾಸಿಯೊಬ್ಬರು ದೊಡ್ಡ ಆರೋಪ ಮಾಡಿದ್ದಾರೆ. ನನ್ನ ಪತ್ನಿಗೆ ಹೆರಿಗೆ ನಂತರ ಕ್ರೆಡಲ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡಿಲ್ಲ ಹೀಗಾಗಿ ಆಕೆ ಸಾವನ್ನಪ್ಪಬೇಕಾಯಿತು ಎಂದು ಕೇಶವಮೂರ್ತಿ ಎಂಬುವವರು ಆರೋಪಿಸಿದ್ದಾರೆ.

26 ವರ್ಷದ ವೇದಾವತಿ ಅವರು ಎರಡು ವಾರಗಳ ಹಿಂದೆ ಪ್ರಸವ ವೇದನೆ ಕಂಡು ಬಂದಾಗ ಜಯನಗರದಲ್ಲಿರುವ ಕ್ರೆಡಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ವೇದಾವತಿ ಅವರಿಗೆ ಸುಖಪ್ರಸವವಾಗಿ ಗಂಡು ಮಗು ಜನಿಸಿತ್ತು. ಅದರೆ, ಕೇಶವಮೂರ್ತಿ ಅವರ ಸಂಭ್ರಮ ಕೆಲದಿನಗಳಲ್ಲೇ ಬದಲಾಯಿತು. ಬಾಣಂತಿಗೆ ಕ್ರೆಡಲ್ ಆಸ್ಪತ್ರೆಯವರು ಸರಿಯಾದ ಆರೈಕೆ ಮಾಡದ ಕಾರಣ ವೇದಾವತಿ ಆರೋಗ್ಯದಲ್ಲಿ ಏರುಪೇರಾಗಿದೆ.

ಕ್ರೆಡಲ್ ಆಸ್ಪತ್ರೆ ಸಹವಾಸವೇ ಸಾಕು ಎಂದು ಹೇಳಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಲ್ಲಿ ಕೂಡಾ ಚೇತರಿಕೆ ಹೊಂದದೆ ವೇದಾವತಿ ಮೃತಪಟ್ಟಿದ್ದಾರೆ. ಇದರಿಂದ ನೊಂದ ಕೇಶವಮೂರ್ತಿ ಹಾಗೂ ಅವರ ಸಂಬಂಧಿಕರು ಕ್ರೆಡಲ್ ಆಸ್ಪತ್ರೆ ನಿರ್ಲಕ್ಷ್ಯವೇ ವೇದಾವತಿ ಸಾವಿಗೆ ಕಾರಣ ಎಂದು ಆರೋಪಿ ಜೆಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಕಾದಿದ್ದು, ವರದಿ ಪರಿಶೀಲಿಸಿದ ನಂತರ ಮುಂದಿನ ಕ್ರಮ ಜರುಗಿಸಲಿದ್ದಾರೆ. ಚಿಕ್ಕಮಗಳೂರು, ದಾವಣಗೆರೆ, ತುಮಕೂರು, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ

ಕೊಲೆ ಪ್ರಕರಣ

ಕೊಲೆ ಪ್ರಕರಣ

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು, ದೊಡ್ಡನಹಳ್ಳಿಗ್ರಾಮದಲ್ಲಿ ಸಂಭವಿಸಿರುತ್ತದೆ.

ದೊಡ್ಡನಹಳ್ಳಿ ಗ್ರಾಮದ ಕೃಷ್ಣಮೂರ್ತಿಗೆ ಮದುವೆಯಾಗಿದ್ದರು ಸಹ ಅದೇ ಗ್ರಾಮದ ಒಂದು ಹೆಣ್ಣುಮಗಳನ್ನು ನಂಬಿಸಿ, ಗರ್ಭಿಣಿ ಮಾಡಿದ್ದು. ಇದರಿಂದಾಗಿ ಗ್ರಾಮಸ್ಥರು ಸೇರಿ ಕೃಷ್ಣಮೂರ್ತಿಗೆ ಆಕೆಯನ್ನು ಮದುವೆ ಮಾಡಿರುತ್ತಾರೆ. ಈಗಿರುವಲ್ಲಿ ಗ್ರಾಮಸ್ಥರ ಒತ್ತಾಯದಿಂದಾಗಿ ಮದುವೆಯಾದ ಕೃಷ್ಣಮೂರ್ತಿ ಕಳೆದ ರಾತ್ರಿ ಆಕೆಯನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ರಾತ್ರಿ 12 ಗಂಟೆಯ ನಂತರ ಆಕೆಯು ಅಪಘಾತದಿಂದ ಮೃತಪಟ್ಟಿರುವುದಾಗಿ ವಿಷಯವನ್ನು ತಿಳಿಸಿರುತ್ತಾನೆ. ಆದ್ದರಿಂದ ಕೃಷ್ಣಮೂರ್ತಿ ಮತ್ತು ಆತನಿಗೆ ಸಹಾಯ ಮಾಡಿದ ಅಶೋಕ, ತೋಟಿ ನಾರಾಯಣಸ್ವಾಮಿ, ಆಂಜಿನಪ್ಪ, ರಾಮಕೃಷ್ಣ ರವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ

ಮನುಷ್ಯ ಕಾಣೆ

ಜಯಪುರ ಪೊಲೀಸ್‌ ಠಾಣೆ ಮೊ.ಸಂ. 68/2013 - ಕಲಂ: ಮನುಷ್ಯ ಕಾಣೆ - ಪಿರ್ಯಾದುದಾರರಾದ ಶ್ರೀಮತಿಸುಮಿತ್ರ ಅಗಳಗಂಡಿ ವಾಸಿ ಇವಳ ಗಂಡನಾದ ಸುಂದರೇಶ ಬಿನ್. ಲೇ|| ಐತ, 33 ವರ್ಷ, ಕೂಲಿ ಕೆಲಸ, ವಾಸ ಗುಬ್ಬದಗದ್ದೆ, ಅಗಳಗಂಡಿ ಪೋಸ್ಟ್ ಇವರು ದಿನಾಂಕ 26-10-2013 ರಂದು ಮನೆಯಿಂದ ಹೊರಟು ತನ್ನ ತಂಗಿಯ ಮನೆಯಾದ ಹುರಳಿಹಕ್ಲುವಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಇದುವರೆಗೂ ಮನೆಗೆ ಬಾರದೇ ಕಾಣೆಯಾಗಿದ್ದು ಹುಡುಕಿಸಿಕೊಡಲು ಕೋರಿಕೊಂಡಿರುತ್ತಾರೆ.

ತುಮಕೂರು ಜಿಲ್ಲೆ

ತುಮಕೂರು ಜಿಲ್ಲೆ

ಚಿ.ನಾ.ಹಳ್ಳಿ ತಾಲ್ಲೋಕ್ ಹುಳಿಯಾರು ಹೋಬಳಿ ಬಳ್ಳೇಕಟ್ಟೆ ಗ್ರಾಮದ ವಾಸಿ ಮಂಜುನಾಥ್ ಬಿನ್ ಎಸ್.ಎಸ್. ಶಿವಣ್ಣ ನೀಡಿದ ದೂರು : ನಮ್ಮ ತಂದೆ ಎಸ್.ಎನ್. ಶಿವಣ್ಣ ಸುಮಾರು ಐದಾರು ತಿಂಗಳಿಂದ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದು ನಾವು ಆಸ್ಪತ್ರೆಗೆ ತೋರಿಸುತ್ತೇವೆ ಎಂದರೂ ಬರುತ್ತಿರಲಿಲ್ಲ, ಆದ್ದರಿಂದ ನಾನು ನನ್ನ ತಾಯಿಗೆ ನನ್ನ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಎಂತ ಹೇಳಿ ನಾನು ಕೆಲಸಕ್ಕೆ ಹೋದೆ.

ನನ್ನ ಹೆಂಡತಿ ಮತ್ತು ನನ್ನ ತಾಯಿ ತೋಟಕ್ಕೆ ಹೋಗಿದ್ದವರು ಮಧ್ಯಾಹ್ನ 3.30 ಗಂಟೆ ಸಮಯದಲ್ಲಿ ಮನೆಗೆ ಬಂದು ನಮ್ಮ ತಂದೆಗೆ ಊಟ ಕೊಡಲು ಹೋದಾಗ ನಮ್ಮ ತಂದೆ ನಮ್ಮ ಮನೆಯ ಬಲಗಡೆ ಇರುವ ರೂಂ ನಲ್ಲಿ ಹಗ್ಗದಿಂದ ತೀರಿಗೆ ನೇಣು ಹಾಕಿಕೊಂಡಿದ್ದನ್ನು ನೋಡಿ ತಕ್ಷಣ ನನಗೆ ಫೋನ್ ಮಾಡಿದರು, ನೋಡಲಾಗಿ ನಮ್ಮ ತಂದೆ ನೇಣು ಹಾಕಿಕೊಂಡು ಮೃತಪಟ್ಟಿದ್ದರು
ದಾವಣಗೆರೆ ಜಿಲ್ಲೆ

ದಾವಣಗೆರೆ ಜಿಲ್ಲೆ

ವಿದ್ಯಾನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ: 35/2013, ಕಲಂ: 174 ಸಿ.ಆರ್.ಪಿ.ಸಿ.

ಅ.27 ಪಿರ್ಯಾದಿ ಗಿರಿಜಮ್ಮ ಕೊಂ ಮಹಾದೇವಪ್ಪ ಇವರು ನೀಡಿದ ದೂರು: ಪ್ರತಿ ದಿನದಂತೆ ಮನೆ ಕೆಲಸಕ್ಕೆಂದು ಹೋಗಿದ್ದು, 1.15 ಪಿಎಂ ಗೆ ಮನೆಯಲ್ಲಿ ಪಿರ್ಯಾದಿ ಮಗಳು ಮಂಜುಳ, 14ವರ್ಷ ಇವಳು ಸೀಮೆಣ್ಣೆ ಸ್ಟೋವ್ ನಲ್ಲಿ ಅಡುಗೆ ಮಾಡಲು ಹೋದಾಗ ಸ್ಟೌವ್ ನಿಂದ ಸೀಮೆಣ್ಣೆ ಲೀಕಾಗಿ ಚೆಲ್ಲಿದ್ದು, ಮೃತಳಿಗೆ ಸ್ವಲ್ಪ ಕಣ್ಣಿನ ದೋಷ ಇದ್ದುದ್ದರಿಂದ ಇದು ಗೊತ್ತಾಗದೇ ಬೆಂಕಿ ಕಡ್ಡಿಯನ್ನು ಕೆರೆದು ಸ್ಟೌವ್ ಹಚ್ಚಲು ಹೋದಾಗ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದ ಸೀಮೆಣ್ಣೆಗೆ ಬೆಂಕಿ ತಗುಲಿ ಹತ್ತಿಕೊಂಡು ಸ್ಟೌವ ಸಿಡಿದು ಮಂಜುಳ ಮೈಗೆ ತಾಗಿ ಮೈಯಲ್ಲಾ ಸುಟ್ಟುಹೋಗಿದ್ದು, ಈ ಬಗ್ಗೆ ಚಿಕಿತ್ಸೆಗಾಗಿ ಸಿಜೆ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ 9.40 ಪಿಎಂ ಗೆ ಮೃತಪಟ್ಟಿರುತ್ತಾಳೆ ಎಂತಾ ನಿಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

English summary
Karnataka Crime news Coverage : Banashankari resident Keshavamurthy has given complaint against Cradel Hospital, Jayanagar, He alleged that his wife suffered a lot during her post pregnancy treatment at the hospital which costed her life and many more crime related news from across the state
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X