Cauvery Water: ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ ಮಾಡಿದ ನಾಡದ್ರೋಹದ ಕೆಲಸಗಳು: ಬಿಜೆಪಿ ವಾಗ್ದಾಳಿ
ಬೆಂಗಳೂರು, ಆಗಸ್ಟ್ 21: ರಾಜ್ಯ ಸರ್ಕಾರ ತಮಿಳುನಾಡಿಗೆ ಕೆಆರ್‌ಎಸ್‌ನಿಂದ ನೀರು ಬಿಡುಗಡೆ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯ ಬಿಜೆಪಿ ಕಿಡಿಕಾರಿದ್ದು, ಜೀವಜಲ ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ ಇದುವರೆಗೆ ಮಾಡಿದ ನಾಡದ್ರೋಹದ ಕೆಲಸಗಳು ಎಂದು ಟ್ವೀಟರ್ ಮೂಲಕ ತಿಳಿಸಿದೆ.
ಕಾವೇರಿ ನೀರಿನ ವಿವಾದದ ಬಗ್ಗೆ ಕಾವೇರಿ ನ್ಯಾಯಾಧಿಕರಣವು ಜಲಾಶಯದ ನೀರಿನ ಬಳಕೆಯ ಬಗ್ಗೆ ಈಗಾಗಲೇ ಆದೇಶ ನೀಡಿದೆ.
— BJP Karnataka (@BJP4Karnataka) August 21, 2023
ತಮಿಳುನಾಡಿನಲ್ಲಿ ಬೆಳೆಯುವ 1 ಲಕ್ಷ 80 ಸಾವಿರ ಹೆಕ್ಟೇರ್ ಕುರುವೈ ಬೆಳೆಗೆ, ಒಟ್ಟು 32 ಟಿಎಂಸಿ ನೀರು ಬಿಡಬೇಕೆಂಬ ಅಂಶ ಆದೇಶದಲ್ಲಿದೆ.
ಆದರೆ ಈ ಬಾರಿ ತಮಿಳುನಾಡಿನಲ್ಲಿ ಒಟ್ಟು 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕುರುವೈ…
ಅಧಿಕಾರದಲ್ಲಿದ್ದಾಗ ದೇಶದ ಹಿತಾಸಕ್ತಿಯನ್ನು ಬಲಿ ಕೊಟ್ಟಿದ್ದ ಕಾಂಗ್ರೆಸ್ ರೀತಿಯಲ್ಲಿಯೇ, ರಾಜ್ಯದ ಹಿತಾಸಕ್ತಿಯನ್ನು ಕಾಂಗ್ರೆಸ್ ಬಲಿ ಕೊಡುತ್ತಿದೆ. ಅಧಿಕಾರದ ಲಾಲಸೆಗಾಗಿ ದೇಶದ ಭದ್ರತೆಯ ವಿಚಾರದಲ್ಲಿ ಕಾಂಗ್ರೆಸ್ ರಾಜಿಯಾದ ಮಾದರಿಯಲ್ಲಿ, ಈಗ ಕಾಂಗ್ರೆಸ್ ರಾಜ್ಯದ ನೆಲ, ಜಲದ ವಿಷಯದಲ್ಲಿ ಯಾವುದೇ ಪ್ರತಿರೋಧ ತೋರದೆ ರಾಜಿಯಾಗುತ್ತಿದೆ ಎಂದು ಕಿಡಿಕಾರಿದೆ.

ಕಾವೇರಿ ನೀರಿನ ವಿವಾದದ ಬಗ್ಗೆ ಕಾವೇರಿ ನ್ಯಾಯಾಧಿಕರಣವು ಜಲಾಶಯದ ನೀರಿನ ಬಳಕೆಯ ಬಗ್ಗೆ ಈಗಾಗಲೇ ಆದೇಶ ನೀಡಿದೆ. ತಮಿಳುನಾಡಿನಲ್ಲಿ ಬೆಳೆಯುವ 1 ಲಕ್ಷ 80 ಸಾವಿರ ಹೆಕ್ಟೇರ್ ಕುರುವೈ ಬೆಳೆಗೆ, ಒಟ್ಟು 32 ಟಿಎಂಸಿ ನೀರು ಬಿಡಬೇಕೆಂಬ ಅಂಶ ಆದೇಶದಲ್ಲಿದೆ. ಆದರೆ ಈ ಬಾರಿ ತಮಿಳುನಾಡಿನಲ್ಲಿ ಒಟ್ಟು 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕುರುವೈ ಬೆಳೆಯನ್ನು ಬೆಳೆಯುತ್ತಿದ್ದು, ಇದಕ್ಕಾಗಿ ಈಗಾಗಲೇ ಒಟ್ಟು 60 ಟಿಎಂಸಿ ನೀರು ಬಳಕೆಯಾಗಿದೆ.
ತಮಿಳುನಾಡು ಸರ್ಕಾರ ತಮಗೆ 10 ಟಿಎಂಸಿ ನೀರು ಬಿಡಿ ಎಂದು ಪ್ರಾಧಿಕಾರದ ಮುಂದೆ ಹೇಳಿದಾಗ, ರಾಜ್ಯ ಸರ್ಕಾರದ ಅಧಿಕಾರಿಗಳು ಈ ಅಂಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ, ಅಂಕಿ ಅಂಶಗಳ ಸಮೇತ ಮಂಡಿಸಬೇಕಿತ್ತು. ಆದರೆ ಈ ಯಾವ ಅಂಶಗಳನ್ನೂ ಪ್ರಸ್ತಾಪಿಸದೆ ಮೌನಕ್ಕೆ ಶರಣಾಗಿದ್ದು ಏಕೆ..? ಎಂದು ಪ್ರಶ್ನಿಸಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಬಾರಿ ವಾಡಿಕೆಯಂತೆ ಮಳೆಯಾಗಿಲ್ಲ. ಹೀಗಾಗಿ ನಮ್ಮ ರಾಜ್ಯದ ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರು ಒದಗಿಸಲು ಸಾಧ್ಯವಿಲ್ಲ.ಇಂತಹ ಸಂದಿಗ್ಧ ಸ್ಥಿತಿಯಲ್ಲಿ, ತಮಿಳುನಾಡಿಗೆ ನೀರು ಬಿಡಲು, ರಾಜ್ಯದ ಕಾಂಗ್ರೆಸ್ ಸರ್ಕಾರ ಯಾವುದೇ ವಿರೋಧ ವ್ಯಕ್ತಪಡಿಸದೇ ಮುಂದಾಗಿರುವುದರ ಹಿಂದಿನ ಅಸಲಿ ಸತ್ಯವಾದರೂ ಏನು..? ಎಂದು ಪ್ರಶ್ನಿಸಿದ್ದಾರೆ.
ವಿಪರ್ಯಾಸವೆಂದರೆ ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಶಾಸಕರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ವೋಟು ಹಾಕಿದ ಮತದಾರನಿಗೆ ಕಾಂಗ್ರೆಸ್ ಸರ್ಕಾರ ಈಗ ಬಳುವಳಿ ಎಂಬಂತೆ ತಮಿಳುನಾಡಿಗೆ ನೀರು ಹರಿಸುತ್ತಿದೆ. ರಾಜ್ಯದ ಕಾಂಗ್ರೆಸ್ ಪಕ್ಷಕ್ಕೂ, ತಮಿಳುನಾಡಿನ ಡಿ.ಎಂ.ಕೆಗೂ ಎಂತಹ ಸಹೋದರ ಸಂಬಂಧವಿದ್ದರೂ, ಅದನ್ನು ರಾಜ್ಯದ ಜನರ ಹಿತ ಕಾಪಾಡಲು ಬಳಸಬೇಕಿತ್ತು. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಮಿತ್ರ ಡಿ.ಎಂ.ಕೆ ಪಕ್ಷವನ್ನು ಸಂತೃಪ್ತಿಗೊಳಿಸಲು ರಾಜ್ಯದ ಹಿತವನ್ನು ಬಲಿ ಕೊಡುತ್ತಿದೆ. ರೈತರ ಕನಸುಗಳಿಗೆ ಬೆಂಕಿ ಇಡುತ್ತಿದೆ. ಇದು ನಾಡದ್ರೋಹದ ಕೆಲಸ. ರಾಜ್ಯದ ನೆಲ-ಜಲದ ಹಿತವನ್ನು ಕಾಪಾಡಲು ಅರ್ಹತೆಯಿಲ್ಲದ ನಾಡದ್ರೋಹಿ ಕಾಂಗ್ರೆಸ್, ಒಂದು ನಿಮಿಷವೂ ಅಧಿಕಾರದಲ್ಲಿ ಉಳಿಯಲು ಅನರ್ಹರು ಎಂದು ಕಿಡಿಕಾರಿದೆ.

ಕಾಂಗ್ರೆಸ್‌ಗೆ ರಾಜ್ಯದ ರೈತರ ಹಿತಕ್ಕಿಂತಲೂ ಮುಖ್ಯವಾದದ್ದು ರಾಹುಲ್ ಗಾಂಧಿಗಾಗಿ ತಮಿಳುನಾಡು ಸರ್ಕಾರದ ಓಲೈ.
ತಮಿಳುನಾಡು ಸರ್ಕಾರಕ್ಕೆ ರಾಜಕೀಯ ಲಾಭ ಮಾಡಿಕೊಡಲು ಕಾವೇರಿ ನ್ಯಾಯಾಧಿಕರಣದಲ್ಲಿ ಕರ್ನಾಟಕದ ವಾದವನ್ನು ಮಂಡಿಸದೆ ಪಲಾಯನ.
ಮೇಕೆದಾಟು ಯೋಜನೆ ವಿರೋಧಿಸಿದ ಸ್ಟಾಲಿನ್ ಅವರಿಗೆ ಬೆಂಗಳೂರಿನಲ್ಲಿ I.N.D.I.A. ಹೆಸರಲ್ಲಿ ಕೆಂಪು ಹಾಸಿನ ಸ್ವಾಗತ..!
ಮೇಕೆದಾಟಿಗಾಗಿ ಪಾದಯಾತ್ರೆ ಮಾಡಿದ ಡಿ ಕೆ ಶಿವಕುಮಾರ್ ಅವರಿಂದು ತಮಿಳುನಾಡು ಸರ್ಕಾರ ಹಾಕಿದ ಗೆರೆಯನ್ನೂ ದಾಟುತ್ತಿಲ್ಲ..!
ಈಗಾಗಲೇ ಒಪ್ಪಂದಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಕಾವೇರಿ ನೀರು ತಮಿಳುನಾಡಿಗೆ ಹರಿಸಲಾಗಿದೆ...!
ಜೀವಜಲ ಕಾವೇರಿ ವಿಚಾರದಲ್ಲಿ @INCKarnataka ಇದುವರೆಗೆ ಮಾಡಿದ ನಾಡದ್ರೋಹದ ಕೆಲಸಗಳು:
— BJP Karnataka (@BJP4Karnataka) August 21, 2023
💧 ಕಾಂಗ್ರೆಸ್‌ಗೆ ರಾಜ್ಯದ ರೈತರ ಹಿತಕ್ಕಿಂತಲೂ ಮುಖ್ಯವಾದದ್ದು ರಾಹುಲ್ ಗಾಂಧಿಗಾಗಿ ತಮಿಳುನಾಡು ಸರ್ಕಾರದ ಓಲೈಕೆ.
💧 ತಮಿಳುನಾಡು ಸರ್ಕಾರಕ್ಕೆ ರಾಜಕೀಯ ಲಾಭ ಮಾಡಿಕೊಡಲು ಕಾವೇರಿ ನ್ಯಾಯಾಧಿಕರಣದಲ್ಲಿ ಕರ್ನಾಟಕದ ವಾದವನ್ನು ಮಂಡಿಸದೆ ಪಲಾಯನ.
💧…
ಇವೆಲ್ಲದರ ಪರಿಣಾಮವಾಗಿ ರಾಜ್ಯದ ಅನ್ನದಾತರ ಬದುಕು ಕಸಿದುಕೊಂಡದ್ದೂ ಅಲ್ಲದೆ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಕುಡಿಯುವ ನೀರೂ ಇಲ್ಲದಂತಾಗುವ ಅಪಾಯ ಎದುರಾಗಿದೆ ಎಂದು ರಾಜ್ಯ ಬಿಜೆಪಿ ಕಳವಳ ವ್ಯಕ್ತಪಡಿಸಿದ್ದಾರೆ.












Click it and Unblock the Notifications