ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಕಾರ್ಯಕಾರಿಣಿಯಲ್ಲಿ ಕೈಗೊಂಡ ನಿರ್ಣಯಗಳೇನು?

By Nayana
|
Google Oneindia Kannada News

ಬೆಂಗಳೂರು, ಜೂನ್‌ 30: ರಾಜಕೀಯ ದೊಂಬರಾಟ ಬಿಟ್ಟು ರಾಜ್ಯದ ಬಗ್ಗೆ ಕಾಳಜಿ ಇದ್ದರೆ ಆಡಳಿತ ಆರಂಭಿಸಿ ಇಲ್ಲವೇ ಬಿಜೆಪಿ ಹೊರಾಟ ನಡೆಸುವುದು ಹಾಗೂ ಕೇಂದ್ರ ಸರ್ಕಾರದ ಸಾಧನೆಯ ಸಾರ್ಥಕ ನಾಲ್ಕು ವರ್ಷಗಳಿಗೆ ರಾಜ್ಯ ಬಿಜಪಿ ಅಭಿನಂದನೆ ಸಲ್ಲಿಸುವ ಎರಡು ನಿರ್ಣಯವನ್ನು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಅಂಗೀಕಾರಿಸಲಾಗಿದೆ.

ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ,ಜನಾದೇಶಕ್ಕೆ ವಿರುದ್ಧವಾಗಿ ರಚನೆಯಾದ ಜನಾದೇಶ ದಿಕ್ಕರಿಸಿದ ಅಪವಿತ್ರ ಮೈತ್ರಿ ದಿಕ್ಕರಿಸಲು ಕರೆ ನೀಡುವ ಸಂಕಲ್ಪ ತೊಟ್ಟಿದ್ದೇವೆ ಎಂದರು.

ಜನತೆ ಈಗಲೂ ಬಿಜೆಪಿ ಸರ್ಕಾರವನ್ನೇ ಬಯಸುತ್ತಾರೆ: ಯಡಿಯೂರಪ್ಪಜನತೆ ಈಗಲೂ ಬಿಜೆಪಿ ಸರ್ಕಾರವನ್ನೇ ಬಯಸುತ್ತಾರೆ: ಯಡಿಯೂರಪ್ಪ

ಬಹುಮತ ಸಾಬೀತು ನಂತರ 40 ದಿನದಲ್ಲಿ ನಡೆದ ರಾಜಕೀಯ ಮೇಲಾಟ, ಸಂಪುಟ ಸಂಕಷ್ಟ ನೋಡಿದ್ದೇವೆ,ಸರ್ಕಾರ ಇನ್ನೂ ಟೇಕ್ ಆಫ್ ಆಗಿಲ್ಲ. 37 ಶಾಸಕರಿಗೋಸ್ಕರ ಬಜೆಟ್ ಮಂಡಿಸುವ ದುಸ್ಸಾಹಸಕ್ಕೆ ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ,.ಇದು ಮೈನಾರಿಟಿ ಬಜೆಟ್, ರೈತರ,ನೇಕಾರರ,ಮೀನಗಾರರ, ಮಹಿಳಾ ಸ್ವಸಹಾಯ ಸಂಘದ ಸಾಲಮನ್ನಾ ಜೊತೆ ರೈತರ ಖಾಸಗಿ ಸಾಲ ಮನ್ನಾ ಮಾಡುವ ಹೇಳಿಕೆ ನೀಡಿದ್ದರು.ಆದರೆ ಈಗ ಬರೀ ಬೆಳೆ ಸಾಲಮನ್ನಾ ಮಾತು ಹೇಳುತ್ತಿದ್ದಾರೆ.

State Bjp executive urges coalition govt to work or quit

ನಿಜಕ್ಕೂ ಆಡಳಿತ ಆರಂಭಿಸದೇ ಇರುವ ವಾತಾವಣ ಇದೆ.ರಾಜ್ಯದಲ್ಲಿ ಮಾರಣಹೋಮ ಮಾಡಿದ‌ ಮತ್ತು ಕನ್ನಡ ವಿರೋಧ ಟಿಪ್ಪು ಹೆಸರನ್ನು ಹಜ್ ಭವನಕ್ಕೆ ಇಡುವ ಸಚಿವರ ಹೇಳಿಕೆಗೆ ಬಿಜಪಿ ವಿರೋಧ ವ್ಯಕ್ತಪಡಿಸಿದ್ದು ರಾಜಕೀಯ ದೊಂಬರಾಟ ಬಿಟ್ಟು ರಾಜ್ಯದ ಬಗ್ಗೆ ಕಾಳಜಿ ಇದ್ದರೆ ಆಡಳಿತ ಆರಂಭಿಸಿ ಇಲ್ಲವೇ ಬಿಜೆಪಿ ಹೋರಾಟ ಮಾಡಲಿದೆ ಎನ್ನುವುದು ಇಂದು ಕೈಗೊಂಡ ಮೊದಲ ನಿರ್ಣಯವಾಗಿದೆ ಎಂದರು.

ಕೇಂದ್ರ ಸರ್ಕಾರದ ಸಾಧನೆಯ ಸಾರ್ಥಕ ನಾಲ್ಕು ವರ್ಷಗಳಿಗೆ ರಾಜ್ಯ ಬಿಜೆಪಿ ಅಭಿನಂದನೆ ಸಲ್ಲಿಸುವ ಎರಡನೇ ನಿರ್ಣಯ ಅಂಗೀಕರಿಸಿದೆ.ಮೋದಿ ಸರ್ಕಾರ ಅನೇಕ‌ ಸಾಧನೆ ಮಾಡಿದೆ, ಪ್ರಪಂಚದಲ್ಲಿ‌ ದೇಶದ ಹೆಸರು ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ, ಆರ್ಥಿಕ ಸ್ಥಿತಿ ಸುಧಾರಿಸುವ ಸಲುವಾಗಿ ಎಲ್ಲಾ ಹಂತದ ಕ್ರಮಗಳನ್ನು ಕೈಗೊಂಡಿದ್ದಾರೆ.

ಅಪನಗದೀಕರಣ,ಜಿಎಸ್ ಟಿ,ಜನರ ಆರ್ಥಕ ಮಟ್ಟ ಹೆಚ್ಚು ಮಾಡಲು ಅನೇಕ ಸವಲತ್ತು ಕೊಡಲಾಗಿದೆ, ಗಡಿ ರಕ್ಷಣೆ ಮಾಡುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುದ್ದಾರೆ ರಸ್ತೆಗಳ ಅಭಿವೃದ್ಧಿ ಮಾಡಿದ್ದಾರೆ, ಹಿಂದಿನ ಸರ್ಕಾರದ ಅವಧಿಯಲ್ಲಿನ ದಿನಕ್ಕೆ 12ಕಿಮೀ ರಸ್ತೆ ನಿರ್ಮಾಣವಾಗುತ್ತಿತ್ತು.ಆದರೆ ಈಗ 27 ಕಿ.ಮೀ ಆಗುತ್ತಿದೆ. , 1.69 ಲಕ್ಷದಷ್ಟು ಗ್ರಾಮೀಣ ರಸ್ತೆಗಳು ನಿರ್ಮಾಣವಾಗಿದ್ದು ಕೇಂದ್ರದ ಸಾಧನೆ ಅಭಿನಂದನೆ ಮಾಡುವ ನಿರ್ಣಯ ಕೈಗೊಳ್ಳಲಾಯಿತು ಎಂದರು.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಉಡುಪಿಯ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಸಚೇತಕರಾಗಿ ಬೆಳಗಾವಿಯ ಮಹಾಂತೇಶ್ ಕವಟಗಿಮಠ್ ಅವರನ್ನು ಕೋರ್ ಕಮಿಟಿ ಸಭೆ ಸಲಹೆ ಹಾಗು ಮುಖಂಡರ ಅಭಿಪ್ರಾಯ ಪಡೆದು ನೇಮಿಸಲಾಗಿದೆ ಎಂದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಅವರೇ ಈ ಬಜೆಟ್ ಗೆ ವಿರೋಧಿಸಿದ್ದಾರೆ, ಬಿಜೆಪಿ ಕೂಡ ಬೆಂಬಲ ನೀಡಿಲ್ಲ, ಹಾಗಾಗಿ ಇದು ಮೈನಾರಿಟಿ ಬಜೆಟ್ ಆಗಲಿದೆ.ಹಾಗಂತ ಬಜೆಟ್ ಸೋಲಿಸುವ ಸರ್ಕಾರ ಬೀಳಿಸುವ ಕೆಲಸಕ್ಕೆ ಬಿಜೆಪಿ ಮುಂದಾಗಲ್ಲ.ಬಿಜೆಪಿ ಈ ವಿಷಯದಲ್ಲಿ ತಲೆಹಾಕಲ್ಲ,ಆದರೆ ದೇವೇಗೌಡ ಪಿಎಂ ಆದಾಗ ಕಾಂಗ್ರೆಸ್ ಬೆಂಬಲ ಹಿಂಪಡೆಯಿತು,ಈಗಲೂ ಅದು ಮರುಕಳಿಸಬಹುದು. ಬಜೆಟ್ ಬೀಳಿಸುವ ಕುರಿತು ಜುಲೈ 12 ರವರೆಗೆ ಕಾದು ನೋಡಿ ಎಂದರು.

ವಿಧಾನಸಭಾ ಚುನಾಬಣೆಯಲ್ಲಿಯೂ ಸಾಕಷ್ಟು ನಾಯಕರು ಬೇರೆ ಪಕ್ಷದಿಂದ ಬಂದಿದ್ದರು.ಈಗಲೂ ಮೋದಿ ಕೆಲಸ ಮೆಚ್ಚಿ ಮಾಜಿ ಎಂಪಿ,ಮಾಜಿ ಶಾಸಕರು ಸೇರಲಿದ್ದಾರೆ.ಹಾಲಿ ಸದದ್ಯರೂ ಬರುವುದನ್ನು ಅಲ್ಲಗಳೆಯಲ್ಲ ಎಂದರು.

English summary
State Bjp executive meeting was held at palace ground on Friday and urged state collation government to work for people or quit the office
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X