ಪಂಚಾಯಿತಿ ಫೈಟ್ : ಮಂಗಳವಾರ ಫಲಿತಾಂಶ ಪ್ರಕಟ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 22 : ಭಾರೀ ಕುತೂಹಲ ಕೆರಳಿಸಿದ್ದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದೆ. ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷಕ್ಕೆ ಜನರು ಚುನಾವಣೆಯಲ್ಲಿ ಬೆಂಬಲ ನೀಡಿದ್ದಾರೆ. ಫಲಿತಾಂಶದ ವಿವರಗಳು ಇಲ್ಲಿವೆ.

* ತಾಲೂಕು ಪಂಚಾಯಿತಿ ಫಲಿತಾಂಶ
* ಜಿಲ್ಲಾ ಪಂಚಾಯಿತಿ ಫಲಿತಾಂಶ

ಹಿಂದಿನ ಸುದ್ದಿ : ಎರಡು ಹಂತಗಳಲ್ಲಿ ನಡೆದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಫಲಿಶಾಂಶ ಮಂಗಳವಾರ ಪ್ರಕಟಗೊಳ್ಳಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನ 2 ಗಂಟೆಯ ವೇಳೆಗೆ ಫಲಿತಾಂಶದ ಚಿತ್ರಣ ಲಭ್ಯವಾಗುವ ನಿರೀಕ್ಷೆ ಇದೆ.

ಫೆ.13 ಮತ್ತು 20ರಂದು ಎರಡು ಹಂತದಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆದಿತ್ತು. ಮೊದಲ ಹಂತದಲ್ಲಿ 15 ಜಿಲ್ಲೆಗಳ 1,934 ತಾಲೂಕು ಪಂಚಾಯಿತಿ ಮತ್ತು 550 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಚುನಾವಣೆ ನೆಡೆದಿತ್ತು. [ಮೊದಲ ಹಂತದ ಚುನಾವಣೆ ವಿವರಗಳು]

election results

ಎರಡನೇ ಹಂತದಲ್ಲಿ 15 ಜಿಲ್ಲೆಗಳ 531 ಜಿಲ್ಲಾ ಪಂಚಾಯಿತಿ ಮತ್ತು 1,939 ತಾಲೂಕು ಪಂಚಾಯಿತಿಯ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. [2ನೇ ಹಂತದ ಚುನಾವಣೆ ವಿವರಗಳು]

ಒನ್ ಇಂಡಿಯಾ ಕನ್ನಡ ಬೆಳಗ್ಗೆ 8 ಗಂಟೆಯಿಂದ ಚುನಾವಣಾ ಫಲಿತಾಂಶದ ಕ್ಷಣ-ಕ್ಷಣದ ಮಾಹಿತಿಯನ್ನು ನೀಡಲಿದೆ. ವಿವರಗಳಿಗೆ / ವೆಬ್‌ಸೈಟ್‌ ಭೇಟಿ ನೀಡಿ ಅಥವ @OneindiaKannada ಟ್ವಿಟರ್ ಖಾತೆಯನ್ನು ಫಾಲೋ ಮಾಡಿ.

ದಕ್ಷಿಣ ಕನ್ನಡದಲ್ಲಿ ಸಕಲ ಸಿದ್ಧತೆ : 'ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಹಾಗೂ ಐದು ತಾಲೂಕು ಪಂಚಾಯತಿಗಳ ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ' ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದ್ದಾರೆ.

'ಜಿಲ್ಲಾ ಪಂಚಾಯತಿ ಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯದಲ್ಲಿ ನಡೆಯಲಿದೆ. ಏಕಕಾಲದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಮತ ಎಣಿಕೆ ನಡೆಯಲಿದೆ' ಎಂದು ತಿಳಿಸಿದ್ದಾರೆ.

ಮದ್ಯ ಮಾರಾಟ ನಿಷೇಧ : ಜಿಲ್ಲೆಯ ನಗರ ,ಮತ್ತು ಗ್ರಾಮೀಣ ಪ್ರದೇಶದಲ್ಲಿ ಫೆ.22ರಂದು ರಾತ್ರಿ 10 ಗಂಟೆಯಿಂದ ಫೆ. 23 ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಫಲಿತಾಂಶದ ದಿನದಂದು ವಿಜಯೋತ್ಸವ ಆಚರಣೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Taluk and Zilla panchayat election results will be announced on Tuesday 23rd Feb 2016. Follow leads, trends, party positions and results, LIVE on Oneindia Kannada.
Please Wait while comments are loading...