SSLC Result 2025: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಬಗ್ಗೆ ಮಕ್ಕಳಲ್ಲಿ ಇರುವ ಭಯ ಗುರುತಿಸುವ ಸುಲಭ ವಿಧಾನಗಳು
ಪರೀಕ್ಷೆ ಅಂದರೆ ಯಾರಿಗೆ ತಾನೆ ಖುಷಿ ಹೇಳಿ. ಪ್ರತಿಯೊಬ್ಬ ಮಗುವಿನಲ್ಲೂ ಪರೀಕ್ಷೆ ಅಂದರೆ ಕಿಂಚಿತ್ತಾದರೂ ಭಯ ಇದ್ದೇ ಇರುತ್ತದೆ. ಪರೀಕ್ಷೆ ಬರೆಯಲು ಮಾತ್ರವಲ್ಲ, ಪರೀಕ್ಷೆಯ ಫಲಿತಾಂಶ ಬರುವವರೆಗೂ ಮಕ್ಕಳಲ್ಲಿ ಒಂದು ರೀತಿಯ ಭಯ ಕಾಡುತ್ತಿರುತ್ತದೆ. ಹಾಗಾದರೆ ಈ ಭಯವನ್ನು ಹೋಗಲಾಡಿಸುವುದು ಹೇಗೆ? ಪರೀಕ್ಷೆ ಫಲಿತಾಂಶದಿಂದ ಮಕ್ಕಳು ಹೆದರಿಕೊಳ್ಳುತ್ತಿದ್ದರೆ ಅದನ್ನು ಗುರುತಿಸುವುದು ಹೇಗೆ? ಇದರಲ್ಲಿ ಪೋಷಕರ ಪಾತ್ರ ಏನು? ಶಿಕ್ಷಕರ ಪಾತ್ರ ಏನು? ಸಮಾಜದ ಪಾತ್ರ ಏನು? ಎಲ್ಲವನ್ನೂ ವಿವರವಾಗಿ ತಿಳಿಯೋಣ.
ಇದೀಗ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿದು ಮಕ್ಕಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಪರೀಕ್ಷೆ ಆರಂಭಕ್ಕೂ ಮುನ್ನ ಇದ್ದ ಆತಂಕ ಈಗ ಫಲಿತಾಂಶ ಬರುವ ಮುನ್ನ ಮಕ್ಕಳಲ್ಲಿ ಶುರುವಾಗಿದೆ. ನಿಮ್ಮ ಮನೆಯಲ್ಲಿ ಇಂತಹ ಮಕ್ಕಳಿದ್ದರೆ ಅವರನ್ನು ಮಾನಸಿಕವಾಗಿ ಸಿದ್ಧಗೊಳಿಸುವುದು ತುಂಬಾ ಮುಖ್ಯ.

ಪೋಷಕರ ಪಾತ್ರ
ಪ್ರಮುಖವಾದ ವಿಚಾರ ಅಂದರೆ ಪೋಷಕರು ಮಕ್ಕಳಲ್ಲಿ ಪರೀಕ್ಷೆ ಬಗ್ಗೆ ಆಗಲಿ ಅಥವಾ ಫಲಿತಾಂಶದ ಬಗ್ಗೆ ಆಗಲಿ ಭಯವನ್ನು ಹುಟ್ಟಿಸಬಾರದು. ಆಮಿಷಗಳನ್ನು ಒಡ್ಡಬಾರದು. ಮಕ್ಕಳಿಗೆ ಆಟವಾಡಿದಷ್ಟೇ ಸುಲಭವಾಗಬೇಕು ಪರೀಕ್ಷೆಗಳು ಅನ್ನೋದನ್ನು ಪೋಷಕರು ನೆನಪಿನಲ್ಲಿಡಬೇಕು. ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬೆಳಸಬೇಕು. ಆಟದ ಜೊತೆಗೆ ಪಾಠಕ್ಕೂ ಮಕ್ಕಳು ಆಸಕ್ತಿ ತೋರಿಸುವಂತೆ ನೋಡಿಕೊಳ್ಳಬೇಕು. ಆಗಾಗ ಮನೆಯಲ್ಲೇ ಮಕ್ಕಳಿಗೆ ಪರೀಕ್ಷೆ ನೀಡಿ ರೂಢಿ ಮಾಡಬೇಕು. ಇದರಿಂದ ಮಕ್ಕಳು ಪರೀಕ್ಷೆಗಾಗಲಿ ಫಲಿತಾಂಶಕ್ಕಾಗಲಿ ಹೆದರಿಕೊಳ್ಳುವುದಿಲ್ಲ.
ಶಿಕ್ಷಕರ ಪಾತ್ರ
ಇನ್ನೂ ಮಕ್ಕಳು ಪರೀಕ್ಷೆ ಹಾಗೂ ಫಲಿತಾಂಶಗಳಿಗೆ ಹೆದರಿಕೊಳ್ಳದೇ ಇರುವಂತೆ ನೋಡಿಕೊಳ್ಳುವಲ್ಲಿ ಶಿಕ್ಷರ ಪಾತ್ರ ಕೂಡ ಹೆಚ್ಚಾಗಿದೆ. ಮಕ್ಕಳಿಗೆ ಪೋಷಕರನ್ನು ಬಿಟ್ಟರೆ ಶಿಕ್ಷರೇ ವಿದ್ಯಾದಾತರು. ಮಕ್ಕಳು ಪೋಷಕರೊಂದಿಗೆ ಕಾಲ ಕಳೆಯುವಷ್ಟೇ ಶಾಲೆಯಲ್ಲಿಯೂ ಶಿಕ್ಷಕರಿಂದ ಸಾಕಷ್ಟು ವಿಷಯಗಳನ್ನು ಕಲಿಯುತ್ತಾರೆ. ಹೀಗಾಗಿ ಹೆದರಿಕೊಳ್ಳುವ ಮಕ್ಕಳು, ಚೆನ್ನಾಗಿ ಓದದ ಮಕ್ಕಳನ್ನು ಗುರುತಿಸಿ ಅಂತಹ ಮಕ್ಕಳಿಗೆ ವಿಶೇಷ ಕಾಳಜಿ ನೀಡಬೇಕು. ಫಲಿತಾಂಶದಿಂದ ಹೆದರಿಕೊಳ್ಳುವ ಮಕ್ಕಳಿಗೆ ತಿಳಿ ಹೇಳಬೇಕು. ಅವರಿಗೆ ಸಣ್ಣ ಪುಟ್ಟ ಪರೀಕ್ಷೆಗಳನ್ನು ನೀಡಿ ಭಯವನ್ನು ಓಡಿಸಬೇಕು. ಆಗ ಮಾತ್ರ ಮಕ್ಕಳಿಗೆ ಪರೀಕ್ಷೆ ಹಾಗೂ ಫಲಿತಾಂಶದಿಂದ ಭಯ ದೂರವಾಗುತ್ತದೆ. ಜೊತೆಗೆ ಶಿಕ್ಷಕರು ಪಾಠವನ್ನು ಆಟದಂತೆ ಮಕ್ಕಳು ಮೆಚ್ಚಿಕೊಳ್ಳುವುದನ್ನು ಕಲಿಸಬೇಕು. ಈ ಕೆಲಸ ಶಿಕ್ಷಕರಿಗೆ ಸವಾಲೆನಿಸಬಹುದು. ಆದರೆ ಇದರಿಂದ ಮಕ್ಕಳ ಭವಿಷ್ಯ ಉತ್ತಮವಾಗುತ್ತದೆ. ಮಕ್ಕಳು ಪರೀಕ್ಷೆ ಹಾಗೂ ಫಲಿತಾಂಶ ಅಂದರೆ ಹೆದರಿಕೊಳ್ಳುವುದಿಲ್ಲ.
ಸಮಾಜದ ಪಾತ್ರ
ಇದಲ್ಲದೆ ಮಕ್ಕಳು ಪರೀಕ್ಷೆ ಹಾಗೂ ಫಲಿತಾಂಶ ಅಂದರೆ ಹೆದರಿಕೊಳ್ಳುವುದನ್ನು ತಪ್ಪಿಸುವಲ್ಲಿ ಸಮಾಜದ ಪಾತ್ರ ಕೂಡ ಮುಖ್ಯವಾಗಿದೆ. ಪದೇ ಪದೇ ಮಕ್ಕಳಿಗೆ ಫಲಿತಾಂಶದ ಬಗ್ಗೆ ಪ್ರಶ್ನೆ ಮಾಡುವುದು. ಪರೀಕ್ಷೆಯಲ್ಲಿ ನನ್ನ ಮಗನಿಗಿಂತ ನೀನು ಕಡಿಮೆ ಅಂಕ ಗಳಿಸುತ್ತೀಯಾ ಎನ್ನುವುದು. ಪರೀಕ್ಷೆ ಫಲತಾಂಶದ ಬಗ್ಗೆ ಮಕ್ಕಳಲ್ಲಿ ಭಯ ಹುಟ್ಟಿಸುವುದು ಮಾಡಬಾರದು.

ಮಕ್ಕಳು ಹೆದರಿಕೊಳ್ಳುತ್ತಿದ್ದರೆ ಅದನ್ನು ಗುರುತಿಸುವುದು ಹೇಗೆ?
ನಿಮ್ಮ ಮಕ್ಕಳು ಪರೀಕ್ಷೆ ಹಾಗೂ ಫಲಿತಾಂಶದ ಬಗ್ಗೆ ಭಯಪಡುತ್ತಿದ್ದರೆ ಅದನ್ನು ಗುರುತಿಸುವುದು ಕೂಡ ಅದೆಷ್ಟೋ ಪೋಷಕರಿಗೆ ಹಾಗೂ ಶಿಕ್ಷಕರಿಗೆ ಸಾಧ್ಯವಾಗುವುದಿಲ್ಲ. ಇದರಿಂದ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪ್ರಸಂಗಗಳು ಎದುರಾಗುತ್ತವೆ. ನಿಮ್ಮ ಮಗು ನಿಮ್ಮಿಂದ ದೂರ ಉಳಿಯುತ್ತಿದ್ದರೆ, ನಿಮ್ಮನ್ನು ಕಂಡರೆ ದೂರ ಹೋಗುತ್ತಿದ್ದರೆ, ಪರೀಕ್ಷೆ ಫಲಿತಾಂಶದ ಬಗ್ಗೆ ಮಾತನಾಡುವವರೊಂದಿಗೆ ಸೇರಿದೇ ಇದ್ದರೆ, ಶಾಲೆ ಗೈರಾಗುವುದು, ಆಟದಲ್ಲಿ ಹೆಚ್ಚು ಆಸಕ್ತಿ ತೋರುವುದು ಮಾಡಿದರೆ ಅಂಥಹ ಮಗುವಿಗೆ ಪರೀಕ್ಷೆ ಹಾಗೂ ಫಲಿತಾಂಶದ ಬಗ್ಗೆ ಭಯ ಇದೆ ಎಂದು ಅರ್ಥ.
ಹೀಗಾಗಿ ಫಲಿತಾಂಶ ಹೇಗೇ ಬರಲಿ ಅದನ್ನು ಸ್ವೀಕರಿಸುವ ಮನೋಭಾವ ಶಿಕ್ಷಕರು, ಪೋಷಕರು ಹಾಗೂ ಸಮಾಜಕ್ಕೆ ಬಂದರೆ ಮಕ್ಕಳು ಭಯ ಪಡುವುದಿಲ್ಲ. ಪರೀಕ್ಷೆ ಫಲಿತಾಂಶದ ಬಗ್ಗೆ ಮಕ್ಕಳಿಗೆ ಭಯ ಹುಟ್ಟಿಸುವುದಕ್ಕಿಂತ ಅದನ್ನು ಮಕ್ಕಳಿಗೆ ಸುಲಭ ಮಾಡುವುದು ಅತ್ಯಾವಶ್ಯಕ. ಈ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡರೆ ಮಕ್ಕಳ ಭವಿಷ್ಯವನ್ನು ಚೆನ್ನಾಗಿ ರೂಪಿಸಸಬಹುದು. ಜೊತೆಗೆ ಫಲಿತಾಂಶಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳ ಸಂಖ್ಯೆಯನ್ನೂ ಕಡಿಮೆ ಮಾಡಬಹುದು.
-
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
CTET ಫೆಬ್ರವರಿ 2026ರ ಪರೀಕ್ಷೆಯ ಫಲಿತಾಂಶ ಶೀಘ್ರದಲ್ಲೇ ಪ್ರಕಟ: ಸ್ಕೋರ್ಕಾರ್ಡ್ ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸರ್ಕಾರಿ PU ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಬರೋಬ್ಬರಿ 9,383 ರೂ. ಲಕ್ಷ ಅನುದಾನ ಮಂಜೂರು -
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
UPSC ಪೂರ್ವಭಾವಿ ಪರೀಕ್ಷೆ ಮುಗಿದ ತಕ್ಷಣವೇ ಕೀ ಉತ್ತರಗಳ ಬಿಡುಗಡೆಗೆ ಕೇಂದ್ರ ಸರ್ಕಾರದ ನಿರ್ಧಾರ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ?












Click it and Unblock the Notifications