ರ‍್ಯಾಂಕ್ ಪಡೆದವರೇ ಬುದ್ಧಿವಂತರು ಎಂಬ ಭ್ರಮೆ ಬೇಡ, ಫೇಲಾದರೆ ಜೀವನ ಮುಗಿದಿಲ್ಲ

ಸಾಮಾನ್ಯವಾಗಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ರ‍್ಯಾಂಕ್ ಪಡೆದವರೆಲ್ಲ ಬುದ್ಧಿವಂತರು ಎಂಬ ಭ್ರಮೆ ಇರುತ್ತದೆ. ಪರೀಕ್ಷೆಯಲ್ಲಿ ಫೇಲಾದವರಲ್ಲೂ ಬುದ್ಧಿವಂತರು ಇರಬಹುದು. ರ‍್ಯಾಂಕ್ ಪಡೆದವರಲ್ಲಿ ಬಹುತೇಕರು ಎಂಜಿನಿಯರಿಂಗ್, ಎಂಬಿಬಿಎಸ್ ಅಥವಾ ಎಂಬಿಎಗೆ ಹೋಗಲು ಬಯಸುವುದು ಸಹಜ. ಯಾರೂ ಪತ್ರಕರ್ತನಾಗುತ್ತೇನೆ ಎಂದು ಹೇಳುವುದಿಲ್ಲ. ಅಂದರೆ ರ‍್ಯಾಂಕ್ ಪಡೆದವರಲ್ಲಿ ಹೆಚ್ಚಿನವರು ಹೆಚ್ಚಿನ ಸಂಪಾದನೆ ಕಡೆ ಗಮನಕೊಡುತ್ತಾರೆ. ಅವರು ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ. ನಮ್ಮ ಶಿಕ್ಷಣ ಪದ್ಧತಿಯಲ್ಲಿ ಹೆಚ್ಚು ನೆನಪಿನ ಶಕ್ತಿ ಇರುವವರು ರ‍್ಯಾಂಕ್ ಪಡೆಯುತ್ತಾರೆ. ಅವರಿಗೆ ಹೆಚ್ಚಿನ ಅಂಕ ಪಡೆಯುವುದರಲ್ಲೇ ಮನಸ್ಸು ಕೇಂದ್ರೀಕೃತಗೊಂಡಿರುತ್ತದೆ.

ಸಾಧಾರಣವಾಗಿ ಕಡಿಮೆ ಅಂಕ ಪಡೆಯುವವನು ಬೇರೆ ಕಡೆ ಗಮನಹರಿಸುವುದು ಸಹಜ. ವೈಜ್ಞಾನಿಕ ಮನೋಭಾವ ಮತ್ತು ಜನರಲ್ ನಾಲೆಡ್ಜ್ ಮುಖ್ಯ. ನಮ್ಮ ತಂದೆತಾಯಿ ಕೂಡ ತಮ್ಮ ಮಕ್ಕಳು ಹೆಚ್ಚಿನ ಅಂಕ ಪಡೆಯಬೇಕೆಂದು ಬಯಸುತ್ತಾರೆ.ಇದರಿಂದ ಅವರಿಗೆ ಹೆಚ್ಚು ಫೀಸು ಕೊಡುವುದು ತಪ್ಪುತ್ತದೆ. ಅಲ್ಲದೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಸೀಟು ಸಿಗುತ್ತದೆ. ವಂತಿಗೆ ಶುಲ್ಕ ಕೊಡುವ ಪ್ರಶ್ನೆ ಬರುವುದಿಲ್ಲ.

SSLC Exam Result

ಆದರೆ ಹೆಚ್ಚು ಪರಿಶ್ರಮ ಬೇಕಾಗುವ ಕೆಲಸಗಳಿಗೆ ರ‍್ಯಾಂಕ್ ವಿಜೇತರು ಹೋಗುವುದಿಲ್ಲ. ರ‍್ಯಾಂಕ್‌ಗೂ ಬುದ್ಧಿವಂತಿಕೆಗೆ ಸಂಬಂಧವಿಲ್ಲ. ರ‍್ಯಾಂಕ್ ಆಯಾ ಪರೀಕ್ಷೆಗೆ ಮಾತ್ರ ಸಂಬಂಧಪಟ್ಟಿದ್ದು. ಒಂದುವೇಳೆ ಫೇಲಾದರೆ ತಂದೆತಾಯಿಗಳು ಮಕ್ಕಳಲ್ಲಿ ಉತ್ಸಾಹ ತುಂಬಬೇಕು. ಜೀವನವೇ ಮುಕ್ತಾಯವಾಯಿತು ಎಂಬ ಭ್ರಮೆ ಬೇಡ. ಪರೀಕ್ಷೆ ಒಂದು ಮಾನದಂಡ ಮಾತ್ರ. ಅದೇ ಅಂತಿಮ ಅಲ್ಲ. ಸಮಾಜದಲ್ಲಿ ಉತ್ತಮ ಸ್ಥಾನ ಪಡೆದವರೆಲ್ಲ ರ‍್ಯಾಂಕ್ ವಿಜೇತರೇನಲ್ಲ. ರ‍್ಯಾಂಕ್ ಪಡೆಯವುದು ಆಯಾ ಶಿಕ್ಷಣ ಸಂಸ್ಥೆಗೆ ಪ್ರತಿಷ್ಠೆಯ ಪ್ರಶ್ನೆ. ರ‍್ಯಾಂಕ್ ಬಂದರೆ ಹೆಚ್ಚು ಮಕ್ಕಳು ಅರ್ಜಿ ಸಲ್ಲಿಸುತ್ತಾರೆ. ಹೆಚ್ಚು ಶುಲ್ಕ ಸಂಗ್ರಹಿಸಬಹುದು. ಅದನ್ನು ಹೊರತುಪಡಿಸಿದರೆ ಉಪಯೋಗವೇನೂ ಇಲ್ಲ. ಉತ್ತಮ ವೈದ್ಯ, ಎಂಜಿನಿಯರ್ ರ‍್ಯಾಂಕ್ ವಿಜೇತರೇನೂ ಆಗಿರುವುದಿಲ್ಲ.

ಇದನ್ನೂ ಓದಿ: SSLC ಫಲಿತಾಂಶ 2025: ಶೇ. 62.34ರಷ್ಟು ವಿದ್ಯಾರ್ಥಿಗಳು ಪಾಸ್, ದಕ್ಷಿಣ ಕನ್ನಡವೇ ನಂಬರ್ 1

ನನಗೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶ ಬಂತು ಎಂದರೆ ರ‍್ಯಾಂಕ್ ವಿಜೇತರ ಬಗ್ಗೆ ಚಿಂತೆ ಇಲ್ಲ. ಪರೀಕ್ಷೆಯಲ್ಲಿ ಫೇಲಾದೆ ಎಂದು ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳ ಚಿಂತೆ. ಅವರಲ್ಲಿ ಉತ್ಸಾಹ ತುಂಬುವ ಕೆಲಸ ನಡೆಯಬೇಕು. ಪರೀಕ್ಷೆ ಫಲಿತಾಂಶ ಜೀವನವನ್ನು ನಿರ್ಧರಿಸುವುದಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಡಬೇಕು. ಅವರ ಶಿಕ್ಷಕರು ರ‍್ಯಾಂಕ್ ಮಕ್ಕಳನ್ನು ಅಭಿನಂದಿಸುವುದಕ್ಕಿಂತ ಫೇಲಾದ ಮಕ್ಕಳಲ್ಲಿ ಜೀವನೋತ್ಸಾಹ ತುಂಬುವ ಕೆಲಸ ಕೈಗೊಳ್ಳಬೇಕು. ಅದು ನಿಜವಾದ ಶಿಕ್ಷಣ. ಸರ್ಕಾರಿ ಕನ್ನಡ ಮಾಧ್ಯಮ ಶಾಲೆ ಮಕ್ಕಳು ಎಲ್ಲರೂ ಪಾಸಾದರೆ ಅದೇ ನಿಜವಾದ ಸಾಧನೆ.

ಬರಹ: ವಿಜಯಲಕ್ಷ್ಮೀ ಜಿ., ಬೆಂಗಳೂರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+