SSLC ಫಲಿತಾಂಶ 2025: ಶೇ. 62.34ರಷ್ಟು ವಿದ್ಯಾರ್ಥಿಗಳು ಪಾಸ್, ದಕ್ಷಿಣ ಕನ್ನಡವೇ ನಂಬರ್ 1

ರಾಜ್ಯಾದ್ಯಂತ ಪೋಷಕರು ಹಾಗೂ ವಿದ್ಯಾರ್ಥಿಗಳ ಬಹುನಿರೀಕ್ಷಿತ 2026ರ ಎಸ್‌ಎಸ್‌ಎಲ್‌ಸಿ (SSLC) ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೇನು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಸುದ್ದಿಗೋಷ್ಟಿ ನಡೆಸಿ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ನಾವು ಕಳೆದ ವರ್ಷ ಅಂದರೆ 2025ರ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಕಡೆಗೆ ಒಮ್ಮೆ ಗಮನ ಹರಿಸೋಣ.

2025ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಒಟ್ಟಾರೆ ಶೇ. 62.34ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಹಿಂದಿನ ವರ್ಷ ಅಂದರೆ 2024ರ ಫಲಿತಾಂಶಕ್ಕೆ ಹೋಲಿಸಿದರೆ ಶೇ. 9ರಷ್ಟು ಏರಿಕೆ ಕಂಡಿದೆ. ಕೇವಲ ರೆಗ್ಯುಲರ್ ವಿದ್ಯಾರ್ಥಿಗಳ ಫಲಿತಾಂಶವನ್ನು ಮಾತ್ರ ಪರಿಗಣಿಸಿದರೆ ತೇರ್ಗಡೆ ಪ್ರಮಾಣ ಶೇ. 66.14ರಷ್ಟು ದಾಖಲಾಗಿದೆ.

SSLC Result

ಒಟ್ಟು 8,42,173 ವಿದ್ಯಾರ್ಥಿಗಳು 2025ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 5,24,984 ವಿದ್ಯಾರ್ಥಿಗಳು ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ. ಪ್ರತಿ ಬಾರಿಯಂತೆ ಕಳೆದ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಬಾಲಕರಿಗಿಂತ ಶೇ. 15ಕ್ಕೂ ಹೆಚ್ಚು ಪ್ರಮಾಣದಲ್ಲಿ ಬಾಲಕಿಯರು ಉತ್ತೀರ್ಣರಾಗಿ ತಮ್ಮ ಪಾರುಪತ್ಯ ಮುಂದುವರಿಸಿದ್ದರು.

ಜಿಲ್ಲಾವಾರು ಸಾಧನೆ: ದಕ್ಷಿಣ ಕನ್ನಡಕ್ಕೆ ಅಗ್ರಸ್ಥಾನ

ಜಿಲ್ಲಾವಾರು ಫಲಿತಾಂಶದ ಪಟ್ಟಿಯಲ್ಲಿ ಕರಾವಳಿ ಜಿಲ್ಲೆಗಳು ಅದ್ಭುತ ಸಾಧನೆ ಮಾಡಿದ್ದವು. ಶೇ. 91.12ರಷ್ಟು ವಿದ್ಯಾರ್ಥಿಗಳು ಪಾಸ್ ಆಗುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರೆ, ಶೇ. 89.96ರೊಂದಿಗೆ ಉಡುಪಿ ದ್ವಿತೀಯ ಹಾಗೂ ಶೇ. 83.19ರೊಂದಿಗೆ ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನ ಗಳಿಸಿವೆ. ಶಿವಮೊಗ್ಗ (ಶೇ. 82.29) ಮತ್ತು ಕೊಡಗು (ಶೇ. 82.21) ನಂತರದ ಸ್ಥಾನಗಳಲ್ಲಿವೆ. ಆದರೆ, ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆ ಕೇವಲ ಶೇ. 42.43ರಷ್ಟು ಫಲಿತಾಂಶದೊಂದಿಗೆ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತ್ತು.

22 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ

2025ರ ಫಲಿತಾಂಶದ ಮತ್ತೊಂದು ವಿಶೇಷವೆಂದರೆ, ರಾಜ್ಯದಾದ್ಯಂತ ಒಟ್ಟು 22 ಪ್ರತಿಭಾವಂತ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಇವರಲ್ಲಿ ಬೆಳಗಾವಿಯ ರೂಪಾ ಚನ್ನಗೌಡ ಪಾಟೀಲ್, ಉತ್ತರ ಕನ್ನಡದ ಶಗುಫ್ತಾ ಅಂಜುಮ್, ವಿಜಯಪುರದ ಅಖಿಲಾ ಅಹ್ಮದ್ ಸೇರಿದಂತೆ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳೂ ಇರುವುದು ವಿಶೇಷ. ಶಾಲಾವಾರು ಸಾಧನೆಯನ್ನು ಗಮನಿಸಿದರೆ, ಅನುದಾನರಹಿತ (ಖಾಸಗಿ) ಶಾಲೆಗಳು ಶೇ. 75.59ರಷ್ಟು ಫಲಿತಾಂಶದೊಂದಿಗೆ ಮುಂದಿದ್ದರೆ, ಸರ್ಕಾರಿ ಶಾಲೆಗಳು ಶೇ. 62.7ರಷ್ಟು ಫಲಿತಾಂಶ ದಾಖಲಿಸಿದ್ದವು.

ಇನ್ನೂ ಎಲ್ಲರೂ ಚಿತ್ತ 2026ರ ಎಸ್‌ಎಸ್‌ಎಲ್‌ಸಿ ಫಲಿತಾಂಶದತ್ತ ಇದ್ದು, ಯಾವ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲಿದೆ, ಎಷ್ಟು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಹಂಚಿಕೊಳ್ಳಲಿದ್ದಾರೆ ಎಂದು ಫಲಿತಾಂಶ ಪ್ರಕಟವಾಗುವ ತನಕ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+