SSLC Exam 2026: ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯಲು ಇಲ್ಲಿನ ತಂತ್ರ, ಸಲಹೆ ಮತ್ತು ಮಾರ್ಗದರ್ಶನ ಅನುಸರಿಸಿ
ಬೆಂಗಳೂರು: ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು (SSLC Exam 2026) 2026 ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ನಡೆಯುವ ಸಾಧ್ಯತೆ ಇದೆ. ಕರ್ನಾಟಕ ಮಾಧ್ಯಮಿಕ ಶಿಕ್ಷಣ ಪರೀಕ್ಷಾ ಮಂಡಳಿಯು (KSEAB) ಈಗಾಗಲೇ ಮಾದರಿ ಪ್ರಶ್ನೆ ಪತ್ರಿಕೆ-ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ. 10 ನೇ ತರಗತಿಗಳ ಪರೀಕ್ಷಾ ತಯಾರಿ ಹೇಗಿರಬೇಕು? ಹೆಚ್ಚು ಅಂಕಗಳನ್ನು ಗಳಿಸಲು ಏನು ಮಾಡಬೇಕು? ಏನೆಲ್ಲ ಗಮನಿಸಬೇಕು?, ನಿಮಗೆ ಬೇಕಾದ ಸಲಹೆಗಳು, ಮಾರ್ಗದರ್ಶನ ಈ ಲೇಖನದಲ್ಲಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ-2026 ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಈ ಸಲಹೆಗಳನ್ನು ಅನುಸರಿಸಬೇಕು. ಈ ವರ್ಷ ನೀವು ಸೂಕ್ತ ಪೂರ್ವ ತಯಾರಿಯೊಂದಿಗೆ ಹೆಚ್ಚು ಅಂಕ ಗಳಿಸಬಹುದು. ಅದು ಹೇಗೆ ಸಾಧ್ಯ? ಎಂಬ ಅನುಮಾನ ಇದ್ದವರು, ಆತಂಕವಿಲ್ಲದೇ ಪರೀಕ್ಷೆ ಎದರಿಸಲು ಈ ಸಲಹೆ, ಸೂಚನೆ ಪಾಲಿಸಬೇಕಿದೆ.

ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗೆ ತಯಾರಿ ಈಗಿನಿಂದ ಆರಂಭಿಸಬೇಕು. ವಿಜ್ಞಾನ, ಭಾಷೆ ಮತ್ತು ಗಣಿತವನ್ನು ಒಳಗೊಂಡಂತೆ ಎಲ್ಲ ವಿಷಯಗಳ ಮೇಲೂ ನಿಗಾವಹಿಸಬೇಕು. ಸಮರ್ಪಣಾ ಭಾವನೆ, ಪ್ರಾಮಾಣಿಕ ಪ್ರಯತ್ನ ನಿಮ್ಮದಾಗಿರಬೇಕು. ಮುಖ್ಯವಾಗಿ ಇಂದಿನಿಂದ ಪರೀಕ್ಷೆ ದಿನಗಳವರೆಗೆ ಅಭ್ಯಾಸದ ದಿನಚರಿ ಪಾಲಿಸಬೇಕು. ಇದರಿಂದ ಬೋರ್ಡ್ ಪ್ರಶ್ನೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪರೀಕ್ಷೆಗೆ ಸಂಬಂಧಿಸಿದ ನಿಮ್ಮ ಒತ್ತಡ ಸಹ ಕಡಿಮೆ ಆಗುತ್ತದೆ.
ಅಧಿಕೃತ ಪಠ್ಯಗಳ ಮೇಲೆ ಗಮನಹರಿಸಿ
ಶಿಕ್ಷಣ ಮಂಡಳಿಯಿಂದ ಅಧಿಕೃತವಾಗಿ ನೀಡಿದ ಪುಸ್ತಕಗಳ ಮೇಲೆ ಹೆಚ್ಚಿನ ಒತ್ತು ನೀಡಬೇಕು. ಇವೇ ಪುಸ್ತಕಗಳಿಂದಲೇ ನಿಮ್ಮ ಪ್ರಶ್ನೆ ಪತ್ರಿಕೆಗಳು ಸಿದ್ಧವಾಗಿರುತ್ತವೆ ಎಂಬುದನ್ನು ಮರೆಯಬಾರದು. ಇದರೊಂದಿಗೆ ಇತರ ಪೂರಕ ಪುಸ್ತಕಗಳನ್ನು ಅಭ್ಯಸಿಸಬಹುದು. ಎಸ್‌ಎಸ್‌ಎಲ್‌ಸಿ ಪಠ್ಯಕ್ರಮದ ಮೇಲೆ ಗಮನ ಕೇಂದ್ರೀಕರಿಸಿ, ಯಾವುದನ್ನು ನಿರ್ಲಕ್ಷಿಸದೇ ಪ್ರತಿ ಪ್ರಶ್ನೆಗಳು, ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ಉತ್ತರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ನಿಮ್ಮಿಂದಾಗಬೇಕು.
ಸಾಧ್ಯವಾದಷ್ಟು ನೀವು ಈ ಹಿಂದಿನ ಒಂದಷ್ಟು ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಬೇಕು. ಉತ್ತರ ಗೊತ್ತಾಗದಿದ್ದರೂ ಮೇಲಿಂದ ಮೇಲೆ ಪ್ರಯತ್ನಿಸಬೇಕು. ಇದು ಪರೀಕ್ಷೆ ಬಗೆಗಿನ ಮಾದರಿ ತಿಳಿಯಲು ಸಹಾಯವಾಗುತ್ತದೆ. ನಿಮಗೆ ಸ್ಪಷ್ಟ ಕಲ್ಪನೆ ದೊರೆಯುತ್ತದೆ. ಪ್ರಶ್ನೆಗಳಿಗೆ ಉತ್ತರಿಸುವ ನಿಮ್ಮ ವೇಗ ಹೆಚ್ಚುತ್ತದೆ. ನಿರಂತರ ಪ್ರಯತ್ನದಿಂದ ಬುದ್ಧಿ ಚುರುಕಾಗುತ್ತದೆ.
ಆರಂಭದಲ್ಲಿ ಕಷ್ಟ: ಕೊಂಚ ವಿರಾಮ ಪಡೆಯಿರಿ
ಪರೀಕ್ಷೆ ಇನ್ನೂ ದೂರವಿದೆ ಎಂದು ಯೋಚಿಸದೇ ಈಗಿನಿಂದಲೇ ಅಧ್ಯಯನ ಶುರು ಮಾಡಿ. ಆರಂಭದಲ್ಲಿ ಹೀಗೆ ಮಾಡುವುದು ಕಷ್ಟವೆನಿಸುತ್ತದೆ. ಏನೇ ಆದರೂ ನಿಮ್ಮ ಪ್ರಯತ್ನ ಬಿಡಬೇಡಿ. ಮುಂದೆ ನೀವು ಗಂಟೆಗಳ ಕಾಲ ಪುಸ್ತಕ ಹಿಡಿದು ಕೂತು ಸಾಕಾದರೆ ಕೊಂಚ ವಿರಾಮ ಪಡೆಯಿರಿ. ಅದು ನಿಮ್ಮ ಸಾಮರ್ಥ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ. ಮೆದುಳಿಗೆ ನಿಯಮಿತ ವಿಶ್ರಾಂತಿ ಅಗತ್ಯವಾಗಿರುತ್ತದೆ. ವಿರಾಮದ ಬಳಿಕವೇ ಮುಂದಿನ ಅಧ್ಯಯನ ಬಗ್ಗೆ ಪ್ಲಾನ್ ಮಾಡಿಕೊಂಡು ಅದರಂತೆ ತಪ್ಪದೇ ಅಭ್ಯಾಸ ಮುಂದುವರಿಸಿ

ತ್ವರಿತವಾಗಿ ಪಠ್ಯಕ್ರಮ ಪೂರ್ಣಗೊಳಿಸಿ
ಪರೀಕ್ಷೆಗಳಿಗೆ ಹಾಜರಾಗುವ 10ನೇ ತರಗತಿ ವಿದ್ಯಾರ್ಥಿಗಳು ಎರಡು ತಿಂಗಳ ಮೊದಲು ಪಠ್ಯಕ್ರಮವನ್ನು ಪೂರ್ಣವಾಗಿ ಓದಿ ಮುಗಿಸಿರಬೇಕು. ನಂತರ ಮನಸ್ಸು ಶಾಂತವಾಗಿರುವಂತೆ ನೋಡಿಕೊಳ್ಳಬೇಕು. ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಆತಂಕ, ಚಿಂತೆಗೆ ಒಳಗಾಗದೇ ನೀವು ಈವರೆಗೆ ಮಾಡಿರುವ ಅಧ್ಯಯನದ ಮೇಲೆ ಗಮನ ಹರಿಸಿ. ಮಾಡಿದ ಅಭ್ಯಾಸಗಳು, ಬಿಡಿಸಿದ ಪ್ರಶ್ನೆ ಪತ್ರಿಕೆಗಳು, ಉತ್ತರಗಳನ್ನು ಮನನ ಮಾಡಿಕೊಳ್ಳಬೇಕು.
ಬರೆಯುವುದನ್ನು ರೂಢಿಸಿಕೊಳ್ಳಿ
ವಿದ್ಯಾರ್ಥಿಗಳು ನಿರಂತರ ಅಭ್ಯಾಸದ ಜೊತೆಗೆ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಪಠ್ಯಕ್ರಮ ಪುನರಾವರ್ತನೆಯಾಗುತ್ತದೆ. ಯಾವುದನ್ನಾದರೂ ಮರೆತಿದ್ದರೆ ಅದು ನಿಮ್ಮ ಗಮನಕ್ಕೆ ಬರುತ್ತದೆ. ಇದು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಾತ್ರವಲ್ಲದೇ ನಂತರವು ಇದು ಸಹಕಾರಿಯಾಗುತ್ತದೆ. ಪರೀಕ್ಷೆ ಪೂರ್ವ ನಡೆಸಿದ ಅಧ್ಯಯನದ ಮೇಲೆ ನಿಮಗೆ ಎಷ್ಟು ಹಿಡಿತವಿದೆ ಎಂಬ ಸ್ಪಷ್ಟ ಕಲ್ಪನೆ ಸಿಗುತ್ತದೆ. ಮರೆತದ್ದನ್ನು ಮತ್ತೆ ನೀವು ಅಭ್ಯಸಿಸಲು ಇದು ಪ್ರೇರಣೆ ನೀಡುತ್ತದೆ.
ಅನಗತ್ಯ ಚಟುವಟಿಕೆಗಳಿಂದ ದೂರವಿರಿ
ಮೊಬೈಲ್, ಇತರ ಟಿವಿ ಕಾರ್ಯಕ್ರಮಗಳಿಗೆ ಅಂಟಿಕೊಂಡಿದ್ದರೆ ಅವುಗಳಿಂದ ಈ ಕೆಲವು ತಿಂಗಳು ಕಾಲ ದೂರವಿರಿ. ಸೋಷಿಯಲ್ ಮೀಡಿಯಾ ಮತ್ತು ಗೇಮಿಂಗ್ ವ್ಯಸನಗಳಿಂದ ದೂರ ಸರಿಯಲು ಅತ್ಯುತ್ತಮ ಪ್ರಯತ್ನ ಮಾಡಬೇಕು. ಇಲ್ಲಿಂದಲೇ ನೀವು ನಿಮ್ಮ ಮನಸ್ಸನ್ನು ನಿಯಂತ್ರಿಸುವ ಸಾಮರ್ಥ್ಯ ಅರಿವಿಗೆ ಬರುತ್ತದೆ. ಅಲ್ಲದೇ ಓದಿನ ಮಧ್ಯ ಬಿಡುವು ಪಡೆದಾಗ ಒಳ್ಳೆಯ ಸಮಯ ಕಳೆಯಲು ಪ್ಲಾನ್ ಮಾಡಿಕೊಳ್ಳಿ. ವಿಶ್ರಾಂತಿ ಸಮಯದ್ಲಲಿ ಮತ್ತೆ ಮೊಬೈಲ್, ಟಿವಿ ಹಿಂದೆ ಹೋಗುವುದನ್ನು ತಪ್ಪಿಸಿ.
ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿ
ವಿದ್ಯಾರ್ಥಿಗಳು ಕಳೆದ 10 ವರ್ಷಗಳ ಪತ್ರಿಕೆಗಳನ್ನು ಬಿಡಿಸಬೇಕು. ಇದರಿಂದ ಯಾವೆಲ್ಲ ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ಪದೇ ಪದೆ ಕೇಳಲಾಗಿದೆ. ಯಾವ ವಿಷಯದ ಮೇಲೆ ಹೆಚ್ಚು ಪ್ರಶ್ನೆಗಳು ಬರುತ್ತವೆ ಎಂದು ತಿಳಿಯುತ್ತದೆ. ಇದು ಹೆಚ್ಚು ಅಂಕ ಗಳಿಸಲು ಸಹಕಾರಿ. ಇದರೊಂದಿಗೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮಾಧ್ಯಮಿಕ ಶಿಕ್ಷಣ ಮಂಡಳಿ ಸಹ ಒದಗಿಸಿರುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಆನ್‌ಲೈನ್‌ನಲ್ಲಿ (http://www.kseab.karnataka.gov.in/) ಡೌನ್‌ಲೋಡ್ ಮಾಡಿಕೊಂಡು ಓದಿಕೊಳ್ಳಬೇಕು.
ಪ್ರತಿ ವಿಷಯಕ್ಕೂ ಸಮಯ ನಿಗದಿಪಡಿಸಿ
ವಿದ್ಯಾರ್ಥಿಗಳು SSLC ಪ್ರತಿ ವಿಷಯಕ್ಕೂ ಸಮಯವನ್ನು ನಿಗದಿಪಡಿಸಬೇಕು. ಗಣಿತ ಮತ್ತು ವಿಜ್ಞಾನದಂತೆಯೇ ಪ್ರಥಮ, ದ್ವಿತೀಯ ಭಾಷೆಗಳಿಗೂ, ಇತರ ವಿಷಯಗಳಿಗೂ ಸೂಕ್ತ ಪ್ರಾಮುಖ್ಯತೆ ನೀಡಬೇಕು. ಅವುಗಳ ಕಲಿಕೆಗೆ ಸಮಯ ನಿಗದಿಪಡಿಸಬೇಕು. ಎಲ್ಲ ವಿಷಯಗಳನ್ನು ಸಮಾನವಾಗಿ ಕಾಣಬೇಕು. ಯಾವುದನ್ನು ಮುಂದೆ ಓದಿಕೊಂಡರಾಯಿತು ಎಂದು ನಿರ್ಲಕ್ಷಿಸುವಂತಿಲ್ಲ. ಪ್ರಾಯೋಗಿಕ ಆಧಾರಿತ ವಿಷಯಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಬೇಕು. ಇದರಿಂದ ಪ್ರತಿ ವಿಷಯಗಳಲ್ಲೂ ಹೆಚ್ಚು ಅಂಕ ಪಡೆಯಲು ಸಾಧ್ಯವಾಗುತ್ತದೆ.
ವೇಳಾಪಟ್ಟಿ ಹಾಕಿಕೊಳ್ಳಿ
ಈ ಮೇಲಿನ ಎಲ್ಲವನ್ನು ನೀವು ಯಶಸ್ವಿಯಾಗಿ ಮಾಡಲು ಮೊದಲು ಅದಕ್ಕೊಂದು ವೇಳಾಪಟ್ಟಿ ಮಾಡಿಕೊಳ್ಳಬೇಕು. ಸಮಯ ವ್ಯರ್ಥವಾಗದಂತೆ ನಿರ್ವಹಿಸಬೇಕು. ನಿಮ್ಮ ಉದ್ದೇಶ ಎಲ್ಲ ವಿಷಯಗಳಲ್ಲೂ ಅಧಿಕ ಅಂಕ ಗಳಿಸುವುದೇ ಆಗಿರಬೇಕು. ಅದಕ್ಕೆ ತಕ್ಕಂತೆ ಅಭ್ಯಾಸ ಮಾಡಬೇಕಾದರೆ, ಸೂಕ್ತ ವೇಳಾಪಟ್ಟಿ ಹಾಕಿಕೊಳ್ಳಬೇಕು. ನಿಮ್ಮ ವಿಶ್ರಾಂತಿ, ಮಲಗುವುದು, ಏಳುವುದು, ಬೆಳಗ್ಗೆ ಅಭ್ಯಾಸ, ಇಲ್ಲವೇ ರಾತ್ರಿ ಅಭ್ಯಾಸ ಬಗ್ಗೆ ಪ್ಲಾನ್ ಮಾಡಿ ಸಿದ್ದಪಡಿಸಿ. ಹಂತ ಹಂತವಾಗಿ ಚಾಚೂ ತಪ್ಪದೇ ವೇಳಾಪಟ್ಟಿಯನ್ನು ಅನುಷ್ಠಾನಕ್ಕೆ ತರಬೇಕು. ಪರೀಕ್ಷೆ ಮುಗಿಯುವ ತನಕ ಇದೇ ಹಳಿ ತಪ್ಪದಂತೆ ಎಚ್ಚರವಹಿಸಿ. ಹೆಚ್ಚು ಅಂಕ ಗಳಿಸಲು ವಾಮ ಮಾರ್ಗವಿಲ್ಲ. ಸತತ ಪರಿಶ್ರಮ, ನಿರಂತರ ಅಧ್ಯಯವೇ ರಹದಾರಿ ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್












Click it and Unblock the Notifications