ಎಸ್ಸೆಸ್ಸೆಲ್ಸಿ ಪರೀಕ್ಷಾ ಕೊಠಡಿಯಲ್ಲಿ ವಾಲ್‌ ಕ್ಲಾಕ್ ಕಡ್ಡಾಯ: ರಿಸ್ಟ್ ವಾಚ್ ನಿಷೇಧ

Recommended Video

      ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೊಠಡಿಯಲ್ಲಿ ವಾಲ್‌ ಕ್ಲಾಕ್ ಕಡ್ಡಾಯ: ರಿಸ್ಟ್ ವಾಚ್ ನಿಷೇಧ | Oneindia Kannada

      ಬೆಂಗಳೂರು, ನವೆಂಬರ್ 27: ಇನ್ನುಮುಂದೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ವಾಚ್‌ ಕಟ್ಟಿ ಪರೀಕ್ಷೆಗೆ ಹೋಗುವಂತಿಲ್ಲ, ಪರೀಕ್ಷಾ ಕೇಂದ್ರಗಳಲ್ಲಿ ನಕಲು ತಡೆಗಟ್ಟುವ ನಿಟ್ಟಿನಲ್ಲಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಈ ನಿಯಮ ಜಾರಿಗೆ ತಂದಿದೆ.

      ಪರೀಕ್ಷಾ ಕೇಂದ್ರಗಳಲ್ಲ ಗೋಡೆ ಮೇಲೆ ಗಡಿಯಾರ ಹಾಕಲು ನಿರ್ಧರಿಸಿದೆ, ಇದರಿಂದಾಗಿ ವಿದ್ಯಾರ್ಥಿಗಳು ಕೈಗಡಿಯಾರ ಬಿಟ್ಟು ಪರೀಕ್ಷಾ ಕೊಠಡಿಗೆ ತೆರಳಬೇಕಿದೆ. ಇದೀಗ ಕೇವಲ ವಾಚ್ ಗಂಟೆಗಳನ್ನು ನೋಡುವುದು ಮಾತ್ರವಾಗಿರದೆ ಅದರಲ್ಲಿ ಕ್ಯಾಲ್ಕ್ಯುಲೇಟರ್, ಫೇಸ್‌ಬುಕ್, ಇಂಟರ್‌ನೆಟ್ ಎಲ್ಲವೂ ಲಭ್ಯವಿದೆ ಇದರಿಂದ ನಕಲು ಮಾಡುವವವರ ಸಂಖ್ಯೆ ಹೆಚ್ಚಾಗಿದೆ.

      ಈ ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಿಇಟಿಯಲ್ಲಿ ಇದನ್ನು ಜಾರಿಗೆ ತರಲಾಗಿತ್ತು, ಕೆಇಎ ತನ್ನ ಹಣದಿಂದಲೇ ಪರೀಕ್ಷಾ ಕೇಂದ್ರಗಳಿಗೆ ಗೋಡೆ ಗಡಿಯಾರ ಹಾಕಿಸಿತ್ತು.

      SSLC board bans wrist watch wearing in exam hall

      ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಈಗ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಮಾ.21ರಿಂದ ಏಪ್ರಿಲ್ 4ರವರೆಗೆ ನಡೆಯಲಿದೆ.

      ಪರೀಕ್ಷಾ ಸಮಯದಲ್ಲಿ ಗಡಿಯಾರ ಇಲ್ಲದಿದ್ದರೆ ನಾವು ಸಮಯದ ನಿರ್ವಹಣೆ ಮಾಡುವವುದು ಕಷ್ಟವಾಗುತ್ತದೆ, ಡಿಜಿಟಲ್ ವಾಚ್‌ಗಳನ್ನು ಬ್ಯಾನ್ ಮಾಡಲಿ, ಅನಾಲಾಗ್ ವಾಚ್ ಕಟ್ಟಿರುವವರಿಗೆ ಪ್ರವೇಶ ಕಲ್ಪಿಸಬೇಕು, ಅಲ್ಲದೆ, ಈ ಚೀಟ್ ವಾಚ್ ಗಳ ಬೆಲೆ ದುಬಾರಿಯಾಗಿರುವುದರಿಂದ ಖರೀದಿಸುವುವವರ ಸಂಖ್ಯೆ ಕಡಿಮೆ ಇದೆ ಎನ್ನುವುದು ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+