ಮಂತ್ರಾಲಯದಲ್ಲಿ ರಾಯರ ಆರಾಧನೆಗೆ ವಿಧ್ಯುಕ್ತ ಚಾಲನೆ
ರಾಯಚೂರು, ಆ.11 : ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರತೀರ್ಥರ 343ನೇ ಆರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ಆ.9ರಿಂದ ಆ.15ರವರೆಗೆ ಮಂತ್ರಾಲಯದಲ್ಲಿ ಸಪ್ತ ರಾತ್ರೋತ್ಸವ ಆಚರಣೆ ನಡೆಯಲಿದೆ. ಸಪ್ತ ರಾತ್ರೋತ್ಸವಕ್ಕೆ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ಶನಿವಾರ ರಾತ್ರಿ ವಿಧ್ಯುಕ್ತ ಚಾಲನೆ ನೀಡಿದರು.
ಆ.11 ರಿಂದ ಆ.13ರವರೆಗೆ ರಾಯರ ಆರಾಧನೆ ನಡೆಯಲಿದೆ. ಮಧ್ಯಾರಾಧನೆ ದಿನವಾದ ಆ.12ರಂದು ತಿರುಪತಿಯ ದೇವಸ್ಥಾನಗಳ ಶೇಷವಸ್ತ್ರವನ್ನು ರಾಯರಿಗೆ ಸಮರ್ಪಿಸಲಾಗುತ್ತದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥರು ತಿಳಿಸಿದ್ದಾರೆ. [ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]

ಸಪ್ತ ರಾತ್ರೋತ್ಸವಕ್ಕೆ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ಶನಿವಾರ ರಾತ್ರಿ, ವಿಧ್ಯುಕ್ತ ಚಾಲನೆ ನೀಡಿದ್ದಾರೆ. ಏಳು ದಿನಗಳವರೆಗೆ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ, ಅಭಿಷೇಕ, ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು, ಜ್ಞಾನ ಯಜ್ಞ ಸೇರಿ ಇತರ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.
ಪ್ರಶಸ್ತಿ ಘೋಷಣೆ : ಈ ಬಾರಿಯ ಶ್ರೀ ರಾಘವೇಂದ್ರಾನುಗ್ರಹ ಪ್ರಶಸ್ತಿಯನ್ನು ಭಾರತ ರತ್ನ ಡಾ.ಸಿ.ಎನ್.ಆರ್.ರಾವ್ ಮತ್ತು ಪಂ.ಹರಿದಾಸ್ ಭಟ್ ಹಾಗೂ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರಿಗೆ ಪ್ರದಾನ ಮಾಡಲಾಗುತ್ತದೆ.
ಮಠಕ್ಕೆ ಆಗಮಿಸುವ ಭಕ್ತಾದಿಗಳಿಗೆ ತೊಂದರೆ ಆಗದಂತೆ ಪರಿಮಳ ಪ್ರಸಾದ ವಿತರಣೆ ಕೇಂದ್ರಗಳ ಸಂಖ್ಯೆ ಹೆಚ್ಚಿಸಲಾಗಿದೆ. ವಿವಿಧೆಡೆ ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದೆ. ಆರಾಧನೆ ಪೂರ್ಣಗೊಳ್ಳುವ ಮೊದಲು ಶ್ರೀಮಠದಿಂದ ನಿರ್ಮಿಸಿದ 100 ಕೊಠಡಿಗಳ ವಸತಿ ಸಮುಚ್ಛಯದ ಉದ್ಘಾಟನೆಯೂ ನೆರವೇರಲಿದೆ.
ಭಕ್ತರಿಗೆ ಬಿಟ್ಟಿದ್ದು : ರಾಘವೇಂದ್ರಸ್ವಾಮಿಗಳು ದೇವರಲ್ಲ ಎಂದು ಪೇಜಾವರ ಶ್ರೀಗಳು ನೀಡಿದ್ದ ಹೇಳಿಕೆಯಿಂದ ಉಂಟಾದ ವಿವಾದದ ಬಗ್ಗೆ ಚರ್ಚೆ ಅನಗತ್ಯ ಎಂದು ಹೇಳಿರುವ ಶ್ರೀ ಸುಬುಧೇಂದ್ರತೀರ್ಥರು ರಾಯರನ್ನು ಆರಾಧಿಸುವ ನಿರ್ಧಾರ ಭಕ್ತರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ. ['ಸಾಯಿಬಾಬಾ, ರಾಘವೇಂದ್ರ ಶ್ರೀಗಳು ದೇವರಲ್ಲ']












Click it and Unblock the Notifications