ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಶಾಲೆಯಲ್ಲಿ ವಾರದಲ್ಲಿ 2 ದಿನ ಸ್ಪೋಕನ್ ಇಂಗ್ಲೀಷ್ ತರಗತಿ!

|
Google Oneindia Kannada News

ಬೆಂಗಳೂರು, ಜುಲೈ 13: ಭಾಷೆ ಸಂವಹನದ ಮಾಧ್ಯಮ. ಮಾತೃಭಾಷೆಯಷ್ಟು ಸುಲಲಿತವಾಗಿ ಮತ್ತು ಸುಂದರ ಪದಪುಂಜಗಳನ್ನು ಜೋಡಿಸಿ ಮಾತನಾಡಲು ಬೇರೆ ಭಾಷೆಯಿಂದ ಸಾಧ್ಯವೇ ಇಲ್ಲ. ಆದರು ಕೆಲವೊಮ್ಮೆ ಸಂವಹನದ ಭಾಷೆಯಾಗಿ ಅನ್ಯ ಭಾಷೆಯಾಗಿ ಕಲಿಯುವುದು ಅನಿವಾರ್ಯವಾಗಿಬಿಡುತ್ತದೆ. ಇಂಗ್ಲೀಷ್ ಭಾಷೆ ಸಂವಹನ ಭಾಷೆಯಾಗಿ ಕಲಿಸೋಕೆ ಸರ್ಕಾರಿ ಶಾಲೆಗಳು ಸಜ್ಜಾಗುತ್ತಿವೆ

ಸರ್ಕಾರಿ ಶಾಲೆಗಳಲ್ಲಿ ಇನ್ನು ಮುಂದೆ ವಾರಕ್ಕೊಮ್ಮೆ ಅಥವಾ ಎರಡು ದಿನ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ಆಯೋಜನೆಯನ್ನು ಮಾಡಲು ಶಿಕ್ಷಣ ಇಲಾಖೆ ಸಿದ್ದವಾಗಿದೆ. ಖಾಸಗಿ ಶಾಲೆಯ ಮಕ್ಕಳಿಗಿಂತ ತಮ್ಮ ಮಕ್ಕಳು ಯಾವುದಕರಲ್ಲೂ ಕಡಿಮೆಯಿಲ್ಲ ಎಂಬಂತೆ ಮಕ್ಕಳನ್ನು ಸಿದ್ದ ಮಾಡಲು ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ನಡೆಸಲು ಸಿದ್ದವಾಗಿದೆ.

ಮಾಗಡಿ ತಾಲ್ಲೂಕಿನಲ್ಲೊಂದು ಮಾದರಿ ಶಾಲೆ: 60 ವಿದ್ಯಾರ್ಥಿಗಳಿದ್ದ ಶಾಲೆಯಲ್ಲೀಗ 430 ಮಕ್ಕಳು! ಮಾಗಡಿ ತಾಲ್ಲೂಕಿನಲ್ಲೊಂದು ಮಾದರಿ ಶಾಲೆ: 60 ವಿದ್ಯಾರ್ಥಿಗಳಿದ್ದ ಶಾಲೆಯಲ್ಲೀಗ 430 ಮಕ್ಕಳು!

ಸಮಾಜದಲ್ಲಿ ಮಾತೃಭಾಷೆಗೆ ಮೊದಲ ಸ್ಥಾನವಿದ್ದರು ಇಂಗ್ಲೀಷ್ ಬರುವುದಿಲ್ಲ ಅನ್ನೋ ಕೀಳರಿಮೆ ಮಕ್ಕಳನ್ನು ಖಿನ್ನರನ್ನಾಗಿ ಮಾಡುತ್ತದೆ. ಹಲವು ವ್ಯವಹಾರಗಳನ್ನು ನಡೆಸುವ ಸಲುವಾಗಿ ಮಕ್ಕಳಿಗೆ ಇಂಗ್ಲೀಷ್ ಭಾಷೆಯ ಸಂವಹನ ಅತ್ಯಗತ್ಯವಾಗುತ್ತದೆ. ಮಕ್ಕಳು ಬೆಳೆದು ಕಾಲೇಜು ಶಿಕ್ಷಣವನ್ನು ಪಡೆಯುವ ಸಂದರ್ಭದಲ್ಲಿಯಾಗಲೀ ಇನ್ಯಾವುದೇ ಸಂದರ್ಭದಲ್ಲಿ ಆಗಲೀ ಭಾಷೆ ಅತ್ಯಂತ ಮುಖ್ಯವಾಗುತ್ತದೆ. ಅದರಲ್ಲೂ ಇಂಗ್ಲೀಷ್ ನಲ್ಲಿ ಮಾತನಾಡುವುದು ಸ್ಟಾಂಡರ್ಡ್ ಆಗಿಬಿಟ್ಟಿದೆ. ಇದರಿಂದಾಗಿಯೇ ಸರ್ಕಾರಿ ಶಾಲೆಯ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ತರಗತಿಗಳು ಪ್ರಾರಂಭವಾಗಲಿವೆ.

ಮಕ್ಕಳು ಸುಲಲಿತ ಇಂಗ್ಲೀಷ್ ಸಂವಹನ

ಮಕ್ಕಳು ಸುಲಲಿತ ಇಂಗ್ಲೀಷ್ ಸಂವಹನ

ಕರ್ನಾಟಕ ಸರ್ಕಾರಿ ಶಾಲೆಗಳಲ್ಲಿ ಮೊದಲೆಲ್ಲಾ ಮಾತೃಭಾಷೆಯಲ್ಲೇ ಶಿಕ್ಷಣವನ್ನು ನೀಡಲಾಗುತ್ತಿತ್ತು. ಕರ್ನಾಟಕ ಪಬ್ಲಿಕ್ ಶಾಲೆಗಳು ಪ್ರಾರಂಭವಾದವು ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಪ್ರಾರಂಭವಾಯಿತು. ಆದರೂ ಕನ್ನಡ ಮಾಧ್ಯಮಕ್ಕೆ ಪಾಠ ಮಾಡುತ್ತಿದ್ದ ಶಿಕ್ಷಕರೇ ಇಂಗ್ಲೀಷ್ ಮಾಧ್ಯಮದಲ್ಲಿ ಪಾಠವನ್ನು ಮಾಡಬೇಕಾಯಿತು. ಕೆಲವು ಶಾಲೆಗಳಲ್ಲಿ ಪಾಠ ಮಾತ್ರವೇ ಇಂಗ್ಲೀಷ್‌ನಲ್ಲಿ ಇರುತ್ತಿತ್ತು. ಮಕ್ಕಳಿಗೆ ಪಾಠದ ವಿವರಣೆ, ಸಂವಹನ ಎಲ್ಲವೂ ಕನ್ನಡ ಭಾಷೆಯಲ್ಲೇ ನಡೆಯುತ್ತಿತ್ತು. ಇದರಿಂದಾಗಿ ಮಕ್ಕಳಿಗೆ ಮಾಧ್ಯಮ ಬದಲಾಯಿತೇ ವಿನಃ ಇಂಗ್ಲೀಷ್ ಸಂವಹನ ಬರಲಿಲ್ಲ. ಇದಕ್ಕಾಗಿಯೇ ಮಕ್ಕಳಲ್ಲಿ ಇಂಗ್ಲೀಷ್ ಸಂವಹನ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ವಾರದಲ್ಲಿ ಕಡೇ ಪಕ್ಷದ ಒಂದು ದಿನವಾದರೂ ಸ್ಪೋಕನ್ ಇಂಗ್ಲೀಷ್ ತರಗತಿ ನಡೆಸಲು ಯೋಜನ ಸಿದ್ಧವಾಗಿದೆ. ಮಕ್ಕಳು ಸುಲಲಿತವಾಗಿ ಮಾತೃಭಾಷೆಯಂತೆ ಮಾತನಾಡಬೇಕು ಎಂಬುದಾಗಿದೆ.

ಮೈಸೂರಿನ ಸಂಸ್ಥೆ ಮೂಲಕ ಟ್ರೈನಿಂಗ್

ಮೈಸೂರಿನ ಸಂಸ್ಥೆ ಮೂಲಕ ಟ್ರೈನಿಂಗ್

ಸರ್ಕಾರಿ ಶಾಲಾ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ತರಗತಿ ನಡೆಸಲು ಅಂತಿಮ ಹಂತದ ಸಿದ್ದತೆಯಲ್ಲಿ ಇಲಾಖೆಯಿದೆ. ಸ್ಪೋಕನ್ ಇಂಗ್ಲೀಷ್ ತರಗತಿಯನ್ನು ತೆಗೆದುಕೊಳ್ಳಲು ಮೊದಲು ಶಿಕ್ಷಕರು ಇಂಗ್ಲೀಷ್‌ನಲ್ಲಿ ಮಾತನಾಡಬಲ್ಲ ವ್ಯಾಕರಣಬದ್ದವಾಗಿ ಮಾತನಡಬಲ್ಲ ಸಾಮರ್ಥ್ಯವನ್ನು ಹೊಂದಿರಬೇಕು. ಇದಕ್ಕಾಗಿ ಶಿಕ್ಷಣ ಇಲಾಖೆ ಮತ್ತೊಂದು ದಿಟ್ಟ ಹೆಜ್ಜೆಯನ್ನಿಟ್ಟಿದೆ ಮೈಸೂರು ಮೂಲದ ರೀಜನಲ್ ಇನ್ಸ್ಟಿಟ್ಯೂಷನ್ ಆಫ್ ಇಂಗ್ಲೀಷ್ ಸಂಸ್ಥೆಯೊಂದರ ಮೂಲ ಶಿಕ್ಷಕರಿಗೆ ತರಬೇತಿಯನ್ನು ಕೊಡಿಸಿ. ಆ ಶಿಕ್ಷಕರ ಮೂಲಕ ಸ್ಪೋಕನ್ ಇಂಗ್ಲೀಷ್ ಹೇಳಿಕೊಡಲು ಶಿಕ್ಷಣ ಇಲಾಖೆ ಸಜ್ಜಾಗಿದ್ದು ಅಂತಿಮ ಹಂತದ ಸಿದ್ದತೆಯನ್ನು ನಡೆಸುತ್ತಿದ್ದಾರೆ.

ಪ್ರಾಥಮಿಕ ಮಕ್ಕಳಿಗೆ ತರಗತಿ

ಪ್ರಾಥಮಿಕ ಮಕ್ಕಳಿಗೆ ತರಗತಿ

ನಿಯಮಿತವಾಗಿರುವ ಇಂಗ್ಲೀಷ್ ಶಿಕ್ಷಕರು ಮತ್ತು ಅತಿಥಿ ಶಿಕ್ಷಕರಿಗೆ ಹೊಣೆಯನ್ನು ವಹಿಸಲಾಗುತ್ತದೆ. ಈ ಶಿಕ್ಷಕರು ಮಕ್ಕಳಿಗೆ ಸಿದ್ದಪಡಿಸಿದ ವಿಚಾರ, ಪಠ್ಯಕ್ಕೆ ಅನುಗುಣವಾಗಿ ವಾರದಲ್ಲಿ ಒಮ್ಮೆ ಅಥವಾ ಎರಡು ದಿನ ಸ್ಪೋಕನ್ ಇಂಗ್ಲೀಷ್ ತರಗತಿಯನ್ನು ತೆಗೆದುಕೊಳ್ಳಲಿದ್ದಾರೆ. ಮಕ್ಕಳ ನಿರರ್ಗಳ ಮಾತಿನ ಸಾಮರ್ಥ್ಯವನ್ನು ಹೆಚ್ಚು ಮಾಡುವುದೇ ಸ್ಪೋಕನ್ ಇಂಗ್ಲೀಷ್ ತರಗತಿಯ ಉದ್ದೇಶವಾಗಿದೆ.

ಶೀಘ್ರದಲ್ಲೇ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್

ಶೀಘ್ರದಲ್ಲೇ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್

ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಉದ್ಯೋಗ ಅರಸಿ ಸಿಲಿಕಾನ್ ಸಿಟಿಗೆ ಬಂದಾಗಲೋ ಕಂಪನಿಯ ಉದ್ಯೋವನ್ನು ಕೇಳಿ ಹೋದಾಗ ಇಂಗ್ಲೀಷ್ ಭಾಷೆ ಬರಲ್ಲ ಅನ್ನೋ ಹಿಂಜರಿಕೆ ಕಾಡುತ್ತೆ. ಇಂಥ ಹಿಂಜರಿಕೆಯನ್ನು ದೂರ ಮಾಡಲು ಮಕ್ಕಳಿಗೆ ಇಂಗ್ಲೀಷ್ ಸಂವಹನ ಅನಿವಾರ್ಯವಾಗಿ ಬೇಕೆಬೇಕು. ಶಿಕ್ಷಣ ಸಚಿವರು ಮಕ್ಕಳ ಹಿತದೃಷ್ಠಿಯಿಂದ ಮಕ್ಕಳಿಗೆ ಹೊರೆಯಾಗದಂತೆ ಸ್ಪೋಕನ್ ಇಂಗ್ಲೀಷ್ ಕಲಿಸಲು ಮುಂದಾಗಿರುವುದು ಶ್ಲಾಘನೀಯ ವಿಚಾರವಾಗಿದ್ದು. ಸರ್ಕಾರಿ ಶಾಲೆಯಲ್ಲಿ ಈ ಯೋಜನೆ ಎಷ್ಟರ ಮಟ್ಟಿಗೆ ಅನುಷ್ಠಾನವಾಗಲಿದೆ ಅನ್ನೋದಕ್ಕೆ ಕಾಲವೇ ಉತ್ತರವನ್ನು ನೀಡುತ್ತದೆ.

English summary
Karnataka education department planning to introduce spoken english classes for government school students 2 days in a Week Soon. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X